www.dgnsgreenworld.blogspot.com

Friday, December 27, 2019

ಬಿಟ್ಟು ಬಿಡಿ ಅವಳನ್ನು ಅವಳದೇ ಸಮಯ ಅನುಭವಿಸಲು.

SAVE NATURE, HEALTHY, WEALTHY & WISE. dgnsgreenworld Family

ಬಿಟ್ಟು ಬಿಡಿ ಅವಳನ್ನು
ಅವಳದೇ ಸಮಯ ಅನುಭವಿಸಲು.

ಮುಂಜಾನೆಯೇ ಎದ್ದು ಕಸಗೂಡಿಸಿ
ಒದ್ದೆಯಾದ ನೆಲದಲ್ಲಿ ರಂಗೋಲಿಯ ಬಿಡಿಸಿ

ಮಗಳ ಜಡೆಯ ಹೆಣೆದು‌‌ ಮಗನ ಕ್ರಾಪು ತೆಗೆದು
ಕೂಗುವ ಗಂಡನ ನಿಭಾಯಿಸಿ

ಉಸ್ಸೆಂದು ತುಸು ಬೆಚ್ಚಗಿನ ಚಹಾ ಕುಡಿಯಲು ಕುಳಿತಾಗ
ಬಿಟ್ಟು ಬಿಡಿ ಅವಳನು
ಅವಳದೇ ಸಮಯ ಅನುಭವಿಸಲು.

ಅಪರೂಪಕ್ಕೆ ಮನೆಮಂದಿಯೆಲ್ಲಾ
ಹೊರಗೆ ಊಟಕ್ಕೆ ಹೋದಾಗ
ತನ್ನ ಆಸೆಯ ಅದುಮಿಟ್ಟು
ನಿಮ್ಮ ಅಭಿರುಚಿಯ ತಿನಿಸುಗಳನ್ನು ತಯಾರಿಸಿ
ತನ್ನ ಇಷ್ಟದ ತಿಂಡಿಯನ್ನೇ ಮರೆತ
ಅವಳನ್ನು ಬಿಟ್ಟು ಬಿಡಿ ಅವಳದೇ ನೆಚ್ಚಿನ ಖಾದ್ಯ ಆರಿಸಲು.

ಸಂಬಂಧಿಕರ ಮದುವೆ ಮುಂಜಿಗಳಿಗೆ
ಸೀರೆಗೊಪ್ಪುವ ರವಿಕೆ ತೊಟ್ಟು ಸಿದ್ಧವಾಗುತ್ತಿರುವಾಗ
ನಿಮಗೆ ಒಪ್ಪುವ ದಿರಿಸು
ಮಕ್ಕಳು ಇಷ್ಟಪಡುವ ಉಡುಪು
ಅನುದಿನವು ಒಗೆದು ಇಸ್ತ್ರಿ ಮಾಡಿ
ನಿಮ್ಮನ್ನು ಮಕ್ಕಳನ್ನು ಕಳೆಗಟ್ಟುವಂತೆ ಮಾಡಿದ
ಬಿಟ್ಟುಬಿಡಿ ಅವಳನ್ನು ಅವಳ
ಇಷ್ಟದ ಬಟ್ಟೆಗಳ ಧರಿಸಲು

ಬೆಳೆಗ್ಗೆಯಿಂದ ಬಿಡುವಿಲ್ಲದ ಕೆಲಸದಲಿ
ಮೈಮನಗಳೆಲ್ಲಾ ಆಯಾಸದಿಂದ ಬಳಲಿರಲು
ಸಿಕ್ಕ ಅಲ್ಪ ಸಮಯದಲ್ಲೇ ತನ್ನ ನೆಚ್ಚಿನ ಧಾರವಾಹಿ ನೋಡಲೆಂದು ಅವಳು ಕುಳಿತಾಗ

ನಿಮ್ಮ ಮನರಂಜನೆಯ ಕಾರ್ಯಕ್ರಮಗಳಲಿ
ನೀವು ಮೈಮರೆತು ಕುಳಿತಿರಲು
ಸದ್ದಿಲ್ಲದೆ ರಾತ್ರಿ ಊಟ ತಯಾರಿಸಲು
ಕಣ್ಮರೆಯಾಗುವ ಅವಳನು
ಬಿಟ್ಟುಬಿಡಿ ಅವಳದೇ ಪ್ರಪಂಚದಲಿ ವಿಹರಿಸಲು

ಯಾವುದೋ ಒಂದು ದಿನ ಏಳುವುದು ತಡವಾಗಿ
ನಿಮಗೆ ತಿಂಡಿಯ ಕೊಡುವುದು ವಿಳಂಬವಾದರೆ
ತರೇವಾರಿ ಭಕ್ಷಗಳ ತಯಾರಿಸಿ
ಬಗೆಬಗೆಯ ಜನರ ಸಮ್ಮಾಳಿಸಿ
ಹಸಿದ ಹೊಟ್ಟೆಯ ತುಂಬಿಸಿದ ಆ ಮಾತೆಯನು
ಬಿಟ್ಟುಬಿಡಿ ಒಂದು ದಿನವಾದರೂ ಅವಳ ಸಮಯಕ್ಕೆ ಏಳಲು.

ಬಿಟ್ಟು ಬಿಡಿ ಅವಳನು ಜೀವಿಸಲು
ಕಳೆಯಲಿ ಸಮಯವ
ದಿಟ್ಟಿಸುತ ಕಿಟಕಿಯಲಿ
ನಡುವೆ ಗುಟುಕರಿಸುತ ಬಿಸಿ ಕಾಫಿಯ

ಜೀವನವಿಡೀ ತನ್ನ ಬಹುಪಾಲು ಸಮಯವ
ಕುಟುಂಬಕ್ಕೆ ಧಾರೆಯೆರೆದು
ಪೊರೆದ ಆ ಮಹಾತ್ಯಾಗಿಗೆ
ತನ್ನದೇ ಕೆಲವು ಕ್ಷಣಗಳನು
ತನಗಾಗಿ ಅನುಭವಿಸಲು
ಬಿಟ್ಟು ಬಿಡಿ.....‌. ಬಿಟ್ಟು ಬಿಡಿ.....‌‌..

ವಂದೆಗಳೊಂದಿಗೆ.
            

Thursday, December 26, 2019

ಅಸಂಬದ್ಧತೆಗಿಂತ ನಮ್ಮ ಜೀವನದಲ್ಲಿ ಶಾಂತಿಯೇ ದೊಡ್ಡದು

SAVE NATURE, HEALTHY, WEALTHY & WISE. dgnsgreenworld Family

ಜೀವನದಲ್ಲಿ ತುಂಬಾ ನೋವು, ಬೇಸರವಾದಾಗ ಬುದ್ಧನ ಈ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು!!
ಮನುಷ್ಯನು ತನ್ನ ಜೀವನದಲ್ಲಿ ಎಷ್ಟು ಒಳ್ಳೆಯವರಾಗಿದ್ದರೂ ಕೂಡ ಅವನಿಗೆ ಜನರು ಈ ಸಮಾಜದಲ್ಲಿ ಯಾವುದಾದರೂ ಒಂದು ವಿಷಯವನ್ನು ಇಟ್ಟುಕೊಂಡು ಅವನನ್ನು ಅಲ್ಲಗೆಳೆಯುತ್ತಾರೆ. ಆಗ ಅವನಿಗೆ ಅನಿಸುತ್ತದೆ ನಾನು ಜೀವನದಲ್ಲಿ ಇಷ್ಟು ಒಳ್ಳೆಯವನಾಗಿ ಯಾಕೆ ಇರಬೇಕು ಅಂತ. ಕೆಲವೊಮ್ಮೆ ಅವನಲ್ಲಿರುವ ಹುಮ್ಮಸ್ಸು ಕಡಿಮೆಯಾಗಿಬಿಡುತ್ತದೆ ಇಂಥ ಜನರ ನಡುವೆ ಹೇಗೆ ಇರೋದು ಅಂತ. ಆದರೆ ಸ್ನೇಹಿತರೇ ಜನರ ವರ್ತನೆಯಿಂದ ನೀವು ಎಂದಿಗೂ ಕೂಡ ಮನಸ್ಸನ್ನು ಬದಲಾಯಿಸಕೊಳ್ಬೇಡಿ. ನೀವು ಒಳ್ಳೆಯವರು ಅಥವಾ ನೀವು ಏನು ಅಂತ ನಿಮಗೆ ತಿಳಿದಿದ್ದರೆ ಸಾಕು.

ಹಾಗಾದರೆ ಮನುಷ್ಯನಿಗೆ ಬೇಸರವಾದಾಗ ಅಥವಾ ಅವನಲ್ಲಿರುವ ತಹ ಉತ್ಸಾಹ ಹುಮ್ಮಸ್ಸು ಕಡಿಮೆಯಾದಾಗ ಏನು ಮಾಡಬೇಕು ಅಂತ ಅನಿಸುತ್ತಾ ಇದ್ದರೆ ಬುದ್ಧನ ಈ ಮಾತುಗಳನ್ನು ನೆನಪಿಸಿಕೊಳ್ಳಿ. ಆಗ ನಿಮ್ಮಲ್ಲಿರುವ ಚೈತನ್ಯ ಹುಮ್ಮಸ್ಸು ಇನ್ನೂ ಹೆಚ್ಚುತ್ತದೆ. ಹಾಗಾದರೆ ಬುದ್ಧ ಹೇಳಿರುವಂತಹ ಆ ಮಾತುಗಳನ್ನು ತಿಳಿದುಕೊಳ್ಳೋಣ. ಸ್ನೇಹಿತರೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಇಷ್ಟವಾಗಿ ಇದ್ದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ.

* ಬುದ್ಧ ಹೇಳಿರುವುದು ಏನೆಂದರೆ ಮನುಷ್ಯರು ಒಳ್ಳೆಯವರಾಗಿ ಇರಬೇಕು. ಆದರೆ ಅದನ್ನು ಯಾವತ್ತಿಗೂ ಸಾಬೀತು ಮಾಡಿ ತೋರಿಸಲು ಹೋಗಬಾರದು.

*ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವನೇ ಅವನ ಬಾಳಿನ ಚಾಲಕ ನಾಗಿರಬೇಕು. ಆ ಒಂದು ಅಧಿಕಾರವನ್ನು ಬೇರೆಯವರ ಕೈಗೆ ಕೊಡಬಾರದು. ಹಾಗೆ ಮಾಡಿದಲ್ಲಿ ನಿಮ್ಮ ಜೀವನದ ದಾರಿಯೂ ಕೂಡಾ ತಪ್ಪಿ ಬಿಡುತ್ತದೆ. ಆಗ ಅದು ಸೂತ್ರವಿಲ್ಲದ ಗಾಳಿ ಪಟದ ಹಾಗೆ ಆಗಿ ಬಿಡುತ್ತದೆ ಆ ವ್ಯಕ್ತಿಯ ಜೀವನ.

* ನಮ್ಮ ಜೀವನದಲ್ಲಿ ನಾವು ಯಾರಿಗೂ ಕೂಡಾ ಕ್ಷಮೆ ಕೇಳಲು ಹೋಗಬಾರದು. ಯಾಕೆ ಅಂದರೆ ಅವರುಗಳೇ ನಮ್ಮ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಮೇಲೆ ನಾವೇಕೆ ಕ್ಷಮೆ ಕೇಳಬೇಕು. ಒಂದು ವೇಳೆ ತಪ್ಪು ನಮ್ಮದಿದ್ದರೆ ಮಾತ್ರ ಕ್ಷಮೆ ಕೇಳುವುದು ಉತ್ತಮ. ಅದಲ್ಲದೆ ಯಾವತ್ತಿಗೂ ಕೂಡ ನಮ್ಮ ತಪ್ಪಿಲ್ಲದಿದ್ದರೆ ಯಾರಿಗೂ ಕ್ಷಮೆ ಕೇಳಬಾರದು.

* ವ್ಯಕ್ತಿಯೊಬ್ಬ ಒಂಟಿಯಾಗಿ ಇದ್ದರೆ ಅವನ ಹಾಗೆ ಯಾರೂ ಇಲ್ಲ ಎಂದು ಅದರ ಅರ್ಥ ಅಲ್ಲ. ಅವನುಗೆ ಎಷ್ಟೇ ಕಷ್ಟ ಬಂದರೂ ಕೂಡ ಒಬ್ಬನೇ ನಿಭಾಯಿಸುವ ಶಕ್ತಿ ಅವನಿಗಿದೆ ಎಂದು ಅರ್ಥ.

* ಮನುಷ್ಯನು ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಂಡಿರಬೇಕು. ಅದು ನಮ್ಮ ಖಾಸಗಿ ಜೀವನದ ವಿಷಯವೇ ಇರಲಿ ಅಥವಾ ಮತ್ತೊಬ್ಬರ ಜೀವನದ ವಿಷಯವೇ ಆಗಲಿ ಎಲ್ಲಾ ಸಂದರ್ಭದಲ್ಲಿ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಳ್ಳಬೇಕು.

* ಮನುಷ್ಯ ಜೀವನದಲ್ಲಿ ಹಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾನೆ. ಆದರೆ ಅದೇ ಹಣ ಮನುಷ್ಯನು ನಂಬಿಕೆಗೆ ಅರ್ಹವೋ ಅಲ್ಲವೋ ಎಂಬುದನ್ನು ಪರೀಕ್ಷಿಸುತ್ತದೆ ಮತ್ತು ಮನುಷ್ಯನ ಸ್ವಭಾವವನ್ನು ಕೂಡ ಈ ಒಂದು ಹಣ ಪರಿಕ್ಷಿಸಬಲ್ಲದು.

* ಈ ಜಗತ್ತಿನಲ್ಲಿ ಎಲ್ಲರೂ ಕೂಡ ಒಂದಲ್ಲಾ ಒಂದು ತರಹದ ಮುಖವಾಡವನ್ನು ಹಾಕಿಕೊಂಡಿರುವವರು. ಆದ್ದರಿಂದ ಮನುಷ್ಯನು ತನ್ನ ಹುಷಾರಿನಲ್ಲಿ ಅವನು ಇದ್ದರೆ ಒಳ್ಳೆಯದು. ಎಲ್ಲರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಆಪ್ತರು ಎಂದು ನಂಬಿ ಮೋಸ ಹೋಗುವುದು ಹೆಚ್ಚಾಗಿದೆ. ಆದ್ದರಿಂದ ಮುಖವಾಡವನ್ನು ಹಾಕಿಕೊಂಡು ನಡೆಸುತ್ತಿರುವ ಈ ಬದುಕನ್ನು ಎಂದಿಗೂ ಕೂಡ ನಂಬಲು ಹೋಗಬಾರದು.

* ಮಕ್ಕಳಿಗೆ ಶಿಕ್ಷಣವನ್ನು ಎಂದಿಗೂ ಕೂಡ ಅವರು ಶ್ರೀಮಂತರಾಗಬೇಕು ಎಂದು ಕೊಡಿಸಬೇಡಿ. ಅವರಿಗೆ ಖುಷಿಯಾಗಿರುವುದು ಹೇಗೆ ಎಂಬುದನ್ನು ತಿಳಿಸಿಕೊಡಿ. ಆಗ ಅವರು ದೊಡ್ಡವರಾದಾಗ ವಸ್ತುವಿನ ಬೆಲೆ ತಿಳಿಯುವುದರ ಬದಲು ಆ ವಸ್ತುವಿನ ಮಹತ್ವವನ್ನು ತಿಳಿದುಕೊಳ್ಳುತ್ತಾರೆ.

* ಮನುಷ್ಯನ ಜೀವನದಲ್ಲಿ ಅವನು ಎಷ್ಟು ಕೆಟ್ಟ ಜನರ ಸಹವಾಸವನ್ನು ಮಾಡುವುದಿಲ್ಲವೋ ಅವನಿಗೆ ಅಷ್ಟು ಒಳ್ಳೆಯದಾಗುತ್ತದೆ.

* ಈ ಸಮಾಜದಲ್ಲಿ ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೀರಿಸಿಕೊಳ್ಳಲು ಯೋಚಿಸುತ್ತಾರೆ. ಆದರೆ ಬಲಶಾಲಿ ವ್ಯಕ್ತಿಗಳು ಅದನ್ನು ಕ್ಷಮಿಸಿ ಬಿಡುತ್ತಾರೆ ಮತ್ತು ಬುದ್ಧಿವಂತ ವ್ಯಕ್ತಿಗಳು ಅದನ್ನು ನಿರ್ಲಕ್ಷಿಸುತ್ತಾರೆ.

* ಮನುಷ್ಯ ತನ್ನ ಜೀವನದಲ್ಲಿ ಸಂತೋಷದಿಂದ ಇರಬೇಕೆಂದರೆ ತನ್ನ ಹಿಂದಿನ ದಿನಗಳನ್ನು ನೆನೆದು ದುಃಖಿಸದೇ ಮತ್ತು ಮುಂದಿನ ದಿನಗಳ ಬಗ್ಗೆ ಯೋಚಿಸಬಾರದು. ಇಂದಿನ ದಿನವನ್ನು ಖುಷಿಯಿಂದ ಕಳೆಯುವುದನ್ನು ಕಲಿತುಕೊಳ್ಳಬೇಕು.

* ಮನುಷ್ಯನ ಜೀವನದಲ್ಲಿ ಅವನ ಖುಷಿಗೆ ಅವನೇ ಕಾರಣೀಕರ್ತರಾಗಬೇಕು. ಆ ಖುಷಿಗೆ ಬೇರೆಯವರು ಕಾರಣೀಕರ್ತರಾಗಬಾರದು. ಅಂದರೆ ಅರ್ಥ ತಾನು ಖುಷಿಯಾಗಿರಬೇಕು. ಅಂದರೆ ಅದಕ್ಕೆ ಕಾರಣ ನಾವೇ ಆಗಿರಬೇಕು ನಮಗೆ ಬೇರೆಯವರು ಬಂದು ಖುಷಿ ಪಡಿಸಬೇಕು ಅಂತ ಕುಳಿತುಕೊಂಡರೆ ಅದು ತಪ್ಪಾಗುತ್ತದೆ.

* ಮನುಷ್ಯನು ತನ್ನ ಜೀವನದಲ್ಲಿ ಸತ್ಯ ಹೇಳುವವರನ್ನು ನಂಬಬೇಕು. ಆ ಸತ್ಯ ಎಷ್ಟೇ ಕಹಿಯಾಗಿದ್ದರೂ ಪರವಾಗಿಲ್ಲ ಅದನ್ನು ನಾವು ಸ್ವೀಕರಿಸುವಂತೆ ಇರಬೇಕು.

* ಮನುಷ್ಯನು ಜೀವನದಲ್ಲಿ ಎಂದಿಗೂ ಕೂಡ ಗಿಳಿಯಂತೆ ಇರಬಾರದು. ಯಾವಾಗಲೂ ಹದ್ದಿನಂತೆ ಇರಬೇಕು. ಯಾಕೆ ಅಂದರೆ ಗಿಳಿಯೂ ತುಂಬಾನೇ ಮಾತನಾಡುತ್ತದೆ. ಯಾವುದೇ ರೀತಿಯ ಕೆಲಸ ಮಾಡಿ ತೋರಿಸುವುದಿಲ್ಲ. ಆದರೆ ಹದ್ದು ಮಾತನ್ನು ಕಡಿಮೆ ಮಾಡಿ, ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತದೆ ಅದಕ್ಕೆ ಅದು ಬಾನೆತ್ತರಕ್ಕೆ ಹಾರುವ ಶಕ್ತಿ ಹದ್ದಿಗೆ ಇದೆ.

* ಜೀವನದಲ್ಲಿ ಬದಲಾವಣೆ ಎಂಬುದು ಅನಿವಾರ್ಯ ಅಂದಾಗ ಒಳ್ಳೆಯ ರೀತಿಯಲ್ಲಿ ಬದಲಾವಣೆ ಆಗಬೇಕು. ನೀವು ಏನನ್ನಾದರೂ ಒಂದು ಒಳ್ಳೆಯದನ್ನು ತ್ಯಾಗ ಮಾಡುತ್ತಿದ್ದೀರಾ ಅಂದರೆ ನಿಮಗೆ ಅಲ್ಲೊಂದು ಉತ್ತಮವಾದದ್ದು ಸಿಕ್ಕೇ ಸಿಗುತ್ತದೆ.

* ಈ ಭೂಮಿ ಮೇಲೆ ಯಾರೊಂದಿಗೂ ಕೂಡ ಅತಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಹೋಗಬಾರದು. ಯಾಕೆ ಅಂದರೆ ಬಾಂಧವ್ಯವೂ ಹೆಚ್ಚಾದಾಗ ನಿರೀಕ್ಷೆಗಳು ಹೆಚ್ಚಾಗುತ್ತದೆ. ನಿರೀಕ್ಷೆಗಳು ಹೆಚ್ಚಾದಾಗ ನೋವು ಆಗುವುದು ಕೂಡ ಹೆಚ್ಚಾಗುತ್ತದೆ.

* ಅತಿಯಾದ ಯೋಚನೆ ಮಾಡುವುದೇ ನಮ್ಮ ಜೀವನದಲ್ಲಿ ಹೆಚ್ಚು ದುಃಖವನ್ನು ತಂದೊಡ್ಡುವುದು. ಆದ್ದರಿಂದ ಅತಿಯಾದ ಯೋಚನೆ ಮಾಡುವುದು ಬಿಟ್ಟು ಬಿಡಬೇಕು.

* ಅಸಂಬದ್ಧತೆಗಿಂತ ನಮ್ಮ ಜೀವನದಲ್ಲಿ ಶಾಂತಿಯೇ ದೊಡ್ಡದು.

ಇದು ಬುದ್ಧ ನಮಗೆಲ್ಲ ಹೇಳಿರುವಂತಹ ಕೆಲವೊಂದು ಮಾತುಗಳು. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಜಕ್ಕೂ ನೆಮ್ಮದಿಯ ಜೀವನ ಸಾಗಿಸಬಹುದು.

Wednesday, December 25, 2019

ಅಂದಿನ ಮನೆಗಳು ಇಂದಿನಂತಿರಲಿಲ್ಲ ,,,,,

SAVE NATURE, HEALTHY, WEALTHY & WISE. dgnsgreenworld Family

ಅಂದಿನ ಮನೆಗಳು ಇಂದಿನಂತಿರಲಿಲ್ಲ
ಈಗಿನ ಮನೆಗಳೇಕೋ ಮೊದಲಿದ್ದಂತಿಲ್ಲ
ಮನೆಸುತ್ತ ಕಾಂಪೌಂಡು ಗೇಟು ಭದ್ರ
ಒಳಗಿರುವ ಮನಸುಗಳೇ ಏಕೋ ಛಿದ್ರ
ಬಂಧುಗಳೇ ಬಾರದ ಸ್ನೇಹಿತರೂ ಸೇರದ
ಮನೆಗಳ ಮುಂದೆ ಸದಾ ಕಾವಲುಗಾರ!

ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ
ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ!
ಅಡುಗೆ ಮನೆ ಸದಾ ಖಾಲಿ ಖಾಲಿ ಇರುತ್ತೆ
ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ
ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ
ಯಾಕೋ ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ
ಸಂತೋಷವೇನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ

ಅಂದು...ಬಿಸಿಲು ಚಳಿ ಮಳೆಗೆ ಮೈ ಒಗ್ಗಿತ್ತು
ಮನೆ ತಣ್ಣಗಿತ್ತು ಒಲೆ ಹೊಗೆಯಾಡುತ್ತಿತ್ತು
ಬಿಸಿನೀರ ಹಂಡೆ ಹಬೆಯಾಡುತ್ತಿತ್ತು.
ಕಣಜದ ತುಂಬಾ ದವಸ ಧಾನ್ಯವಿತ್ತು
ಬಂಧುಬಳಗದ ನಡುವೆ ಅನುಬಂಧವಿತ್ತು
ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು
ಮನೆ ಚಿಕ್ಕದಾದ್ರೂ ಮನಸು ಚೊಕ್ಕವಾಗಿತ್ತು

ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...
ನಲಿವಿತ್ತು ಒಲವಿತ್ತು ಸಂತಸದ ಸೆಲೆಯಿತ್ತು
ತಾಯಿಬಾಗಿಲು ಚಿಕ್ಕದಿತ್ತು ತಲೆಬಾಗಬೇಕಿತ್ತು
ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು
ಮಾಡು ಚಿಕ್ಕದಿತ್ತು ಬದುಕು ದೊಡ್ಡದಿತ್ತು
ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು
ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು

ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ
ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು
ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು
ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು
ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ
ಕೆಲಸಕ್ಕೆ ಶ್ರದ್ಧೆ ದೇವರ ಮೇಲೆ ನಂಬಿಕೆಯಿತ್ತು
ಸಾವಿಗೂ ಸಹ ಮನೆಯೇ ಸಾಕ್ಷಿಯಾಗುತ್ತಿತ್ತು

ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು
ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು
ನೆಂಟರು ಬಂದರೆ ಹಬ್ಬದ ಸಡಗರವಿತ್ತು
ಕೆಲವು ಸಾವುಗಳ ಸೂತಕವೂ ಇತ್ತು
ಸತ್ತ ಹಿರಿಯರ ನೆನಪು ಅಚ್ಚಳಿಯದುಳಿದಿತ್ತು
ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕವೂ ಇತ್ತು
ಬದುಕಿನ ಸಾಧಕ ಭಾದಕಗಳೆಲ್ಲವೂ ಇತ್ತು

ಇಂದು ಮನೆ ರಾಜನಿಲ್ಲದ ಅರಮನೆಯಂತೆ
ಸಕಲ ಸವಲತ್ತುಗಳಿರುವ ದರ್ಬಾರಿನಂತೆ
ನೆರೆಮನೆಯ ಹಂಗಿಲ್ಲದ ಸೆರೆಮನೆಯಂತೆ
ಆದ್ರೂ ಮನೆಮಂದಿಗೆ ದುಡ್ಡಿನದೇ ಚಿಂತೆ!
ಬೇಕಾಗಿದ್ದದ್ದಕ್ಕಿಂತ ಬೇಕೆನಿಸಿದ್ದೇ ತುಂಬಿದೆ
ದೊಡ್ಡದಿದೆ ಶ್ರೀಮಂತವಾಗಿದೆ ಸಜ್ಜಾಗಿದೆ
ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ

ಶುಭಕಾರ್ಯಗಳು ಸಂತೋಷಕೂಟಗಳು
ಮನೆಬಿಟ್ಟು ಹೋಟೆಲ್ಲು ಸೇರಿಕೊಂಡಿವೆ
ಬಂಧುತ್ವ ಮಿತೃತ್ವಗಳು ಬಂಧನದಲ್ಲಿವೆ
ನೆಂಟರಿಷ್ಟರು ಮನೆಗೆ ಬಂದರೆ ಬರೀ ನಕ್ಕು
ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆಮಕ್ಕಳು
ಸ್ನೇಹಸಂಬಂಧಗಳಲ್ಲೂ ತೋರಿಕೆ ತಾತ್ಸಾರ
ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ

ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ
ಆಗಲಿ ಮನೆ ಮನೆಗಳೂ ನಂದಗೋಕುಲ
ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ
ಕಲಿಯಲೆಲ್ಲ ಸಂತಸದಿ ಒಟ್ಟಾಗಿ ನಗುವ ಕಲೆ
ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು
ಶ್ರೀಮಂತಿಕೆಗಿಂತ ಹೃದಯವಂತಿಕೆ ಮೇಲು

ವಂದನೆಗಳೊಂದಿಗೆ

Friday, December 13, 2019

*ಸ್ನೇಹಿತರೇ, ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ,*

SAVE NATURE, HEALTHY, WEALTHY & WISE. dgnsgreenworld Family

*ಕೃಷ್ಣ ಮತ್ತು ಸುದಾಮ ಒಂದು ದಿನ ವನ ಸಂಚಾರಕ್ಕೆ ಹೋಗಿ ದಾರಿ ತಪ್ಪಿಸಿಕೊಂಡರು. ಹಸಿವು-ಬಾಯಾರಿಕೆಯಿಂದ ಒಂದು  ಮರದ ಕೆಳಗೆ ಬಂದು ನಿಂತರು. ಆ ಹಣ್ಣಿನ ಮರದಲ್ಲಿ ಒಂದು ಹಣ್ಣು ನೇತಾಡುತ್ತಿತ್ತು. ಕೃಷ್ಣ ಗಿಡ ಹತ್ತಿ ಕೈಯಿಂದ ಹಣ್ಣುನ್ನು ಹರಿದನು. ಕೃಷ್ಣನು ಆ ಹಣ್ಣನ್ನು ಆರು ತುಂಡುಗಳನ್ನು ಮಾಡಿದನು ಮತ್ತು ಅವನ ಅಭ್ಯಾಸದ ಪ್ರಕಾರ ಮೊದಲ ತುಂಡನ್ನು ಸುದಾಮನಿಗೆ ಕೊಟ್ಟನು. ಸುದಾಮ ಹಣ್ಣು ತಿಂದು, ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು ಎಂದನು. ಎರಡನೇ ತುಣುಕು ಕೂಡ ಸುದಾಮನಿಗೆ ಸಿಕ್ಕಿತು. ಹೀಗೆ ಸುದಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ. ಅದೇ ರೀತಿ, ಸುದಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು. ಸುದಾಮ ಕೊನೆಯ ತುಣುಕು ಕೇಳಿದಾಗ, ಕೃಷ್ಣ ಇದು ಮಿತಿ ಮೀರಿದೆ,*
*ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ*
*ಎಂದು ಕೋಪದಿಂದ  ಕೃಷ್ಣನು ಹಣ್ಣಿನ ತುಂಡನ್ನು ಬಾಯಿಗೆ ಹಾಕಿದನು.*

*ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು ಕೃಷ್ಣ,*

*ನಿನಗೆ ಹುಚ್ಚು ಇಲ್ಲ, ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ತಿಂದೀ?*

*ಅದಕ್ಕೆ ಸುದಾಮನ  ಉತ್ತರ:-*

*ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರ ಸಲ ತುಂಬಾ ಸಿಹಿ ಹಣ್ಣುಗಳನ್ನು ನಾನು ತಿಂದಿದ್ದೇನೆ. ಈಗ ಒಂದು ಸಲ  ಕಹಿ ಹಣ್ಣನ್ನು ನೀಡಿದಾಕ್ಷಣ ನಾನು ನಿನ್ನನ್ನು ದೂರುವುದು ನ್ಯಾಯವಾ? ಅದಕ್ಕೆ ನಿನಗೆ ಕಹಿ ಅನುಭವ ಆಗಬಾರದೆಂದು ಎಲ್ಲಾ ತುಣುಕುಗಳನ್ನು ನಾನೇ ತಿನ್ನಲು ಬಯಸಿದೆ.*

*ಸ್ನೇಹಿತರೇ, ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ,*
*ಒಂದು ಅಂತಹ ಸಂಬಂಧವನ್ನು ಗಟ್ಟಿಗೊಳಿಸಿ.*

*ಜೀವನದ ಯಾವುದೇ ಹಂತದಲ್ಲಿ ಮಿತ್ರನಿಂದ ಕಹಿ ಅನುಭವ ಆದರೆ ಆ ಕ್ಷಣವನ್ನು ಮರೆತು ಮುಂದೆ ಸಾಗಿ.*

 *ಒಳ್ಳೆಯ ದಿನಗಳಲ್ಲಿ ದುರಹಂಕಾರಕ್ಕಿಂತ ವಿನಯವನ್ನು ರೂಡಿಸಿಕೊಳ್ಳೋಣ ಮತ್ತು ಕೆಟ್ಟ ಸಮಯಗಳಲ್ಲಿ ತಾಳ್ಮೆಯಿಂದ ಬದುಕುವುದು ಸೂಕ್ತ
ವಂದನೆಗಳೊಂದಿಗೆ


Thursday, December 12, 2019

*ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವರ ಕೊಂಕು ಮಾತಿಗೆ ಕೊರಗುವುದೇಕೆ,?

SAVE NATURE, HEALTHY, WEALTHY & WISE. dgnsgreenworld Family
*ನಮಸ್ತೆ*

*ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವರ ಕೊಂಕು ಮಾತಿಗೆ ಕೊರಗುವುದೇಕೆ,ಯಾರನ್ನು ನಂಬಿ ಬಂದಿಲ್ಲಾ ಎನ್ನವುದೇ ಸತ್ಯವಾದರೆ ಯಾರಾದರೂ ನಮ್ಮೊಂದಿಗೆ ಇರುತ್ತಾರೆನ್ನುವ  ನಿರೀಕ್ಷೆಯೇ ಸುಳ್ಳು.ಯಾರಾದರೂ ಇರುತ್ತಾರೆಂದರೆ ಅದು ನಾವು ಮತ್ತು ನಮ್ಮ ಆತ್ಮ ವಿಶ್ವಾಸ ಮಾತ್ರ.

ವಂದನೆಗಳೊಂದಿಗೆ

ಐಸ್‌ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !* ಬದುಕು?

SAVE NATURE, HEALTHY, WEALTHY & WISE. dgnsgreenworld Family

.             😊😊😊😊😊

*ಐಸ್‌ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !*

*"ನಮ್ಮ ಜೀವನ ಸಹ ಹಾಗೇ" ಎಂಜಾಯ್ ಮಾಡಿದರು ಕರಗುತ್ತದೆ, ಮಾಡದಿದ್ದರೂ ಕರಗುತ್ತದೆ.*

*ಸ್ವರ್ಗ, ನರಕ ....ಅವು ಇದ್ದಾವೋ ಇಲ್ಲವೊ ಗೊತ್ತಿಲ್ಲ. ನಾವು ಮತ್ತೆ ಹುಟ್ಟುತ್ತೀವೋ ಇಲ್ಲವೋ ಅದೂ ಗೊತ್ತಿಲ್ಲ .....!!*

*ಕುಡಿಯೋನು "ಮೂರ್ಖನಲ್ಲ, ಕುಡಿಯದವನು ಪವಿತ್ರನಲ್ಲ.*

*ಇಲ್ಲ್ಯಾರು ನೂರುವರ್ಷ ಬದುಕುವ ಭರವಸೆಯೇನು ಇಲ್ಲ.... ಅವರವರ ಲೆಕ್ಕಾಚಾರ ಅವರದು.*

 *"FINAL JUDGMENT IS"* 👇🏻

*ಹೊತ್ತೊತ್ತಿಗೆ ಊಟಮಾಡಿ‌, ಹೊತ್ತಿಗೆ ಸರಿಯಾಗಿ ನಿದ್ದೆಮಾಡಿ, ಸರಿಯಾದ ಕೆಲಸ ಮಾಡಿ, ಯಾವುದಕ್ಕೂ ತಲೆಕೆಡಿಸ್ಕೊಬೇಡಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ,*

        😊 *ಖುಷಿಯಾಗಿರಿ😊*
😊 *ಬೇರೆಯವರಿಗೂ ಖುಷಿಕೊಡಿ*😊
*ಜೀವನ ಆನಂದಮಯವಾಗಿರಲಿ 🌹😊
ವಂದನೆಗಳೊಂದಿಗೆ.

Tuesday, December 3, 2019

ಶ್ರೀಕೃಷ್ಣ ಪರಮಾತ್ಮನು ಕರ್ಣನಿಗೆ ಹೇಳಿದ ಮೈ ಜುಮ್ಮೆನ್ನುವ ಇದೊಂದು ಮಾತನ್ನು ಕೇಳಿ,,,?

SAVE NATURE, HEALTHY, WEALTHY & WISE. dgnsgreenworld Family
*ಶ್ರೀಕೃಷ್ಣ* *ಪರಮಾತ್ಮನು* *ಕರ್ಣನಿಗೆ* *ಹೇಳಿದ* *ಮೈ* *ಜುಮ್ಮೆನ್ನುವ* *ಇದೊಂದು* *ಮಾತು* *ಕೇಳಿ* *ಸಾಕು* *!*
ಕಷ್ಟ ಯಾರ ಜೀವನದಲ್ಲಿ‌ ಇಲ್ಲ ಹೇಳಿ... ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ,  ಕೃಷ್ಣ ಕರ್ಣನಿಗೆ ಹೇಳಿದ ಈ ಅದ್ಭುತ ಮಾತುಗಳನ್ನು ಕೇಳಿ.

ಅಂದು ಕರ್ಣ ಕೃಷ್ಣನಿಗೆ ಹೇಳಿದ.  “ನನ್ನ ಬದುಕೇ ಒಂದು ಅಗ್ನಿಕುಂಡ. ಮುಳ್ಳಿನ ಬೇಲಿ. ನಾನು ಹುಟ್ಟಿದೆನೇನೋ ಸರಿ, ಆದರೆ ಎಂಥ ಹುಟ್ಟು! ಹುಟ್ಟಿಸಿದ ಕುಂತಿ ನವಜಾತ ಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು. ಹುಟ್ಟಿ ಕಣ್ಣು ಬಿಡುವುದಕ್ಕೂ ಮುನ್ನ ನಾನು ವಿಶಾಲ ನೀರಿನ ನಡು ಭಾಗದಲ್ಲಿ ತೇಲುತ್ತಿದ್ದೆ! ಹೇಳು, ಅಕ್ರಮ ಸಂತಾನವಾಗಿ, ತಾಯಿಯ ಕುತೂಹಲದ ಪರೀಕ್ಷೆಗಾಗಿ ಹುಟ್ಟಿದ್ದು ನನ್ನ ತಪ್ಪೇ?

“ಹುಟ್ಟಿ ಬಡಬಗ್ಗರ ಹಟ್ಟಿಯಲ್ಲಿ ಬೆಳೆದೆ. ಬಿಲ್ವಿದ್ಯೆ ಕಲಿಯಬೇಕೆಂದು ದ್ರೋಣಾಚಾರ್ಯರ ಬಳಿ ಬಂದಾಗ ನನ್ನನ್ನು ಇದಿರುಗೊಂಡಿದ್ದೇನು? ನಿರಾಸೆ! ನೀನು ಕ್ಷತ್ರಿಯನಲ್ಲ ! ಕೀಳುಜಾತಿಯಲ್ಲಿ ಹುಟ್ಟಿದ ಸೂತಪುತ್ರ! ದೂರವಿರು! ಎಂಬ ಮನ ನೋಯಿಸುವ ಮಾತುಗಳು! ಸರಿ, ಪರಶುರಾಮರು ಅಸ್ತ್ರಶಸ್ತ್ರಗಳ ವಿದ್ಯೆಯನ್ನೇನೋ ಕಲಿಸಿದರು. ಆದರೆ ನಾನು ಕ್ಷತ್ರಿಯ ಎಂಬುದು ಗೊತ್ತಾಗುತ್ತಲೇ.... ಶಾಪ ಕೊಟ್ಟೇ ಬಿಟ್ಟರು.

ಅಗತ್ಯ ಬಿದ್ದಾಗ ನಿನಗೆ ಅಸ್ತ್ರಗಳು ಕೈ ಕೊಡಲಿ! ಅಬ್ಬಾ... ಅದೆಂಥ ಉಗ್ರ ಶಾಪ! ಅಗತ್ಯ ಸಂದರ್ಭದಲ್ಲಿ ಮಾತ್ರ ವಿದ್ಯೆ ಕೈ ಕೊಡುವುದಾದರೆ, ಅಂಥ ವಿದ್ಯೆಯನ್ನಾದರೂ ನಾನು ಯಾಕೆ ಸಂಪಾದಿಸಬೇಕಿತ್ತು? ಹಣದ ಅವಶ್ಯಕತೆ ಬಿದ್ದಾಗ ಒಂದೇ ಒಂದು ದಮ್ಮಡಿಯೂ ಉಳಿಯದಂತೆ, ಆಗಿ ಹೋಗಲಿ ಎಂಬಂಥ ಶಾಪವಲ್ಲವೇ  ಅದು?

ನನ್ನ ಬದುಕಿನ ದುರಂತಗಳ ಸರಮಾಲೆ ಇನ್ನೂ  ಮುಗಿಯಲಿಲ್ಲ ಕೃಷ್ಣ. ದ್ರೌಪದಿಯ ಸ್ವಯಂವರದಲ್ಲಿ, ಅದೆಂಥ ಕಡು ಅವಮಾನವನ್ನು ನಾನಂದು ನುಂಗಬೇಕಾಗಿ ಬಂತೆಂಬುದು ಎಲ್ಲರಿಗೆ ಗೊತ್ತಿದೆ. ಕೌರವ -  ಪಾಂಡವರ ನಡುವೆ ಯುದ್ಧವೇರ್ಪಟ್ಟಾಗ ಕುಂತಿ, ನನ್ನ ತಾಯಿ ಬಂದಳು. ತೊಟ್ಟ ಅಸ್ತ್ರವನ್ನು ಮತ್ತೆ ತೊಡೆನೆಂಬ ಮಾತು ಪಡೆದು ಹೋದಳು. ಮಾತಿನುದ್ದಕ್ಕೂ ಪಾಂಡವರನ್ನು ರಕ್ಷಿಸುವ ಹೊಣೆಯನ್ನು ನನ್ನ ಮೇಲೆ ಹೊರಿಸಿದಳೇ ಹೊರತು ಒಮ್ಮೆಯಾದರೂ, ಬಾಯಿಯ ಮಾತಿಗಾದರೂ ಯುದ್ಧದಲ್ಲಿ ಗೆದ್ದು ಬಾ ಎಂದು ಸ್ವಂತ ತಾಯಿ ಹರಸಲಿಲ್ಲ.

ಇನ್ನೊಬ್ಬ.... ಇಂದ್ರ! ನನ್ನ ಕರ್ಣ ಕವಚ ಕುಂಡಲಗಳನ್ನು ಕದಿಯುವುದಕ್ಕೆಂದೇ ಬಂದ. ಇಷ್ಟೆಲ್ಲ ದೌರ್ಭಾಗ್ಯಗಳ ಮಧ್ಯೆ, ನನ್ನನ್ನು ಕೊನೆಯವರೆಗೆ, ಕೈಹಿಡಿದದ್ದು ದುರ್ಯೋಧನ ಮಾತ್ರ. ಹಾಗಿರುವಾಗ ಆತನನ್ನು ನಾನು ಹೇಗೆ ಮುರಿಯಲಿ ಕೃಷ್ಣ? ಅವನ ಪರವಾಗಿ ನಿಲ್ಲುವುದು ಅಧರ್ಮ ಹೇಗಾದೀತು.... ನೀನೇ  ಹೇಳು".

ಆಗ ಕರ್ಣನಿಗೆ ಕೃಷ್ಣ ನಗುತ್ತಾ ಹೇಳಿದ.

"ನೀನು ನದಿ ತೀರದಲ್ಲಿ ಹುಟ್ಟಿದೆ, ನದಿಯ ಪಾಲಾದೆ.... ಅಲ್ಲವೇ? ನಾನು ಹುಟ್ಟಿದ್ದು ಎಲ್ಲಿ ಎಂದು ಕೇಳು! ಸೆರೆಮನೆಯಲ್ಲಿ! ಇಂಥ ಜನ್ಮವನ್ನು ಯಾರಾದರೂ ಬಯಸಲು ಸಾಧ್ಯವೇ?
ಹುಟ್ಟಿದ ಮರುಕ್ಷಣವೇ ನಾನು ನನ್ನ ತಾಯಿಯಿಂದ ಬೇರೆಯಾದೆ. ನನ್ನ ತಂದೆ ನನ್ನನ್ನು ದೂರದೊಂದು ಹಳ್ಳಿಗೆ, ಬಿಟ್ಟು ಬಂದರು. ಹೋಗುವ ದಾರಿಯುದ್ದಕ್ಕೂ ಮಳೆ -  ಗಾಳಿ ಹಾಗೂ ಸಿಡಿಲು. ಅಂದು ಸಾವು ನನ್ನ ಕಣ್ಮುಂದೆ ಇತ್ತು.

ನೀನಾದರೋ ಚಿಕ್ಕವನಿದ್ದಾಗಿನಿಂದ ಕತ್ತಿ, ರಥ, ಕುದುರೆ, ಬಿಲ್ಲುಬಾಣಗಳಿತ್ಯಾದಿಯನ್ನು ನೋಡಿಕೊಂಡು ಬಂದವನು ಕರ್ಣ. ಆದರೆ, ನನ್ನ ಬಾಲ್ಯದಲ್ಲಿ ಏನಿತ್ತು? ಹಸು, ಕೊಟ್ಟಿಗೆ, ಸೆಗಣಿ, ಗಂಜಲ! ಹಸು ಮೇಯಿಸುತ್ತ, ಸೆಗಣಿ ಬಾಚುತ್ತ, ಇದೇ ಜೀವನವೆಂದು ಬಗೆದ ಜನರೊಂದಿಗೆ ಬಾಳುತ್ತಿದ್ದವನು ನಾನು. ಅಷ್ಟರ ಮೇಲೂ, ಅನಿಷ್ಟಕ್ಕೆಲ್ಲ ನಾನೇ ಕಾರಣ ಎಂದು ಜನ ನನ್ನನ್ನು ಬೆಟ್ಟು ಮಾಡುತ್ತಿದ್ದರು. ನನ್ನನ್ನು ಕೊಲ್ಲಲು ಅದೆಷ್ಟು ಪ್ರಯತ್ನಗಳಾದವು ಹೇಳು, ರಾಕ್ಷಸರು ಅದೆಷ್ಟೆಲ್ಲ ಬಗೆಯಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು.

ನಾನೂ ಓದಬೇಕು, ವಿದ್ಯೆ ಸಂಪಾದಿಸಬೇಕು ಎಂದು ನಿರ್ಧರಿಸಿ ಗುರುಕುಲ ಸೇರುವ ಹೊತ್ತಿಗೆ, ನನಗೆ ಹದಿನಾರು ವರ್ಷಗಳಾಗಿ ಬಿಟ್ಟಿದ್ದವು. ಬಾಕಿ ಹುಡುಗರು ಅದಾಗಲೇ ತಮ್ಮ ಜ್ಞಾನಾರ್ಜನೆಯನ್ನು  ಮುಗಿಸಿ, ಆಶ್ರಮದಿಂದ ಹೊರಬರುವ ಹೊತ್ತಿನಲ್ಲಿ, ನಾನು ವಿದ್ಯಾರ್ಥಿಯಾಗಿ ಸೇರಿದ್ದೆ. ಇನ್ನು ಗೃಹಸ್ಥ ಜೀವನ ಹೇಗಿತ್ತೆಂದು ಕೇಳುತ್ತೀಯಾ? ಅದಿನ್ನೊಂದು ಕಥೆ....

ಮದುವೆಯಾದವರನ್ನು ನಾನು ಮನಃಪೂರ್ವಕ ಪ್ರೀತಿಸಿರಲಿಲ್ಲ. ಯಾರನ್ನು ನಿಜವಾಗಿ ಪ್ರೀತಿಸಿದ್ದೆನೋ.....ಅವರನ್ನೂ  ಮದುವೆಯಾಗಲಿಲ್ಲ. ದೈತ್ಯನೊಬ್ಬ ಕೂಡಿ ಹಾಕಿದ್ದ ಹೆಂಗಸರನ್ನು ಬಿಡಿಸಿದ್ದರಿಂದ ಅವರೆಲ್ಲರಿಗೂ ನಾನು ಪತಿಯಾದೆ. ಬಯಸದೇ ಬಂದ ಜವಾಬ್ದಾರಿಯದು. ಜರಾಸಂಧನಿಂದ ಜೀವ ಉಳಿಸಲಿಕ್ಕಾಗಿ, ನಾನು ಊರಿನೆಲ್ಲರನ್ನೂ ಹೊರಡಿಸಿಕೊಂಡು ಮಥುರೆಯಿಂದ ದ್ವಾರಕೆಗೆ ಹೋಗಬೇಕಾಯಿತು. ಹೊಸ ಪರಿಸರ, ಹೊಸ ಜನ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬಹುದಿತ್ತು ಎಂದರೆ ನಾವು ಅಲ್ಲಿಯೇ ಇರಬೇಕಾಗಿ ಬಂತು.

ಅಲ್ಲಿ ನಾವು ಬಿಡಾರ ಹೂಡಿ, ಹೊಸ ನಗರವನ್ನು ಕಟ್ಟಿಕೊಳ್ಳಬೇಕಾಗಿತ್ತು. ಮಥುರೆಯಿಂದ ಹೊರಟಾಗ ನಾನು ಕೇಳಿದ ಮಾತುಗಳಾದರೂ ಎಂಥಾದ್ದು! ಹೇಡಿ ಎಂದರು. ರಟ್ಟೆಯಲ್ಲಿ ಬಲವಿಲ್ಲದೆ ಓಡಿ ಹೋಗುತ್ತಿದ್ದಾನೆ ಎಂದರು. ಎಲ್ಲ ಗೇಲಿ - ಅಪಮಾನಗಳನ್ನೂ ಸ್ಥಿತಪ್ರಜ್ಞನಾಗಿ ನಾನು ಸಹಿಸಿಕೊಳ್ಳಬೇಕಾಯಿತು.

ಕರ್ಣ! ಕುರುಕ್ಷೇತ್ರದಲ್ಲಿ, ನೀನು ಗೆದ್ದದ್ದೇ ಆದರೆ ದುರ್ಯೋಧನನ ಪ್ರೀತಿಗೆ ನೀನು ಸಂಪೂರ್ಣವಾಗಿ, ಪಾತ್ರನಾಗುತ್ತಿದ್ದೆ.  ಪ್ರೀತಿಯಿಂದ ಅರ್ಧ ರಾಜ್ಯವನ್ನು ನಿನಗೆ ಬಿಟ್ಟು ಕೊಟ್ಟಾನೇನೋ ಅಥವಾ ಸಿಂಹಾಸನದ ಪಕ್ಕದಲ್ಲೇ ಮತ್ತೂಂದನ್ನಿಟ್ಟು ನಿನ್ನನ್ನು ಕುಳ್ಳಿರಿಸಿಯಾನೋ ಏನೋ.... ಜಯದಿಂದ ಲಭಿಸುವ ಎಲ್ಲ ಭೋಗ ಭಾಗ್ಯಗಳಿಗೂ ನೀನು ವಾರಸುದಾರನಾಗಿರುತ್ತಿದ್ದೆ.

ಆದರೆ ನನಗೆ? ಈ ಯುದ್ಧ ಗೆಲ್ಲಿಸಿಕೊಟ್ಟರೆ.... ನನಗೇನು ಸಿಗುತ್ತದೆ ಎಂದು ಭಾವಿಸಿದ್ದಿ? ಅಣ್ಣತಮ್ಮಂದಿರು ಹೇಳುತ್ತಾರೆ – ನಮಗೆ ಬೇಡ ಇತ್ತು. ಆದರೂ ಆ ಕುಟಿಲ ಈ ಯುದ್ಧ ಮಾಡಿಸಿದ! ಲಕ್ಷಾಂತರ ಜನರ ಸಾವಿಗೆ ಕಾರಣನಾದ. ದಾಯಾದಿಗಳೇ ಪರಸ್ಪರ ಕೊಂದುಕೊಳ್ಳುವ ಹಾಗೆ ಮಾಡಿದ. ಅಣ್ಣತಮ್ಮಂದಿರು ಎದುರೆದುರು ನಿಂತು ಸೆಣಸುವಂತೆ ಮಾಡಿದ.

ಗಾಂಧಾರಿಯ ಶಾಪವನ್ನು ನಾನು ಗಾಳಿಗೆ ತೂರಿ ಬಿಡಲಾಗಲಿಲ್ಲ.
ಸಹನೆಯಿಂದ ಅನುಭವಿಸಬೇಕಾಯಿತು.
ಕರ್ಣ!

ಪ್ರತಿಯೊಬ್ಬನಿಗೂ ಜೀವನದಲ್ಲಿ ಒಂದಿಲ್ಲೊಂದು ಸವಾಲು ಇದ್ದೇ  ಇರುತ್ತದೆ. ನಿನಗೆ ನಿನ್ನ ಜೀವನ ಅಗ್ನಿಕುಂಡ ಅನ್ನಿಸಿದರೆ ನನ್ನದನ್ನು ನೋಡು. ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ. ಯಾರಿಗೂ ಸುಲಭ ಗ್ರಾಹ್ಯವೂ ಅಲ್ಲ. ಜೀವನದಲ್ಲಿ ಏನೇ ಏರುಪೇರುಗಳು ಬಂದರೂ, ಆ ಎಲ್ಲ ಸಂದರ್ಭಗಳಲ್ಲಿ ನೀನು ಏನನ್ನೇ ಮಾಡಿದರೂ ಯಾವುದು ಸರಿ ಎಂಬುದು ನಿನ್ನ ಒಳ ಮನಸ್ಸಿಗೆ ಗೊತ್ತಿರುತ್ತದೆ. ಅದನ್ನೇ ಧರ್ಮ ಎನ್ನುವುದು. ಆತ್ಮಸಾಕ್ಷಿ ಯಾವುದನ್ನು ನುಡಿಯುತ್ತದೋ, ಅದೇ ಧರ್ಮ. ಆತ್ಮಸಾಕ್ಷಿ ಸತ್ತ ದಿನ ನಾವು ಧರ್ಮದಿಂದ ವಿಮುಖರಾದೆವು, ಅಧರ್ಮಿಗಳಾದೆವು ಎಂದೇ ಅರ್ಥ.

ನಾವು ಎಷ್ಟು ಅನ್ಯಾಯಕ್ಕೊಳಗಾದರೂ ಎಷ್ಟೊಂದು ಅಪಮಾನವನ್ನು ನುಂಗಬೇಕಾಗಿ ಬಂದರೂ.... ಎಷ್ಟೊಂದು ಸಲ ಕೆಳಗೆ ಬಿದ್ದರೂ.... ಮೀಸೆ ಮಣ್ಣಾದರೂ.... ಮುಖ್ಯವಾಗುವುದು ಯಾವುದು ಗೊತ್ತಾ? ನಾವು ಆ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಿದೆವು ಎನ್ನುವುದು.

ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು, ದುಃಖಗಳು, ಅವಮಾನಗಳು ಬಂದವೆನ್ನುವುದು ನಾವು ತಪ್ಪು ಮಾಡಲು ನಮಗೆ ಸಿಗುವ ಪರವಾನಗಿಯಲ್ಲ. ಜೀವನದಲ್ಲಿ, ನಮ್ಮ ಬದುಕು ನಿರ್ಧಾರವಾಗುವುದು ನಾವು ಯಾವ ಚಪ್ಪಲಿಯನ್ನು ತೊಡುತ್ತೇವೆ ಎಂಬುದರಿಂದ ಅಲ್ಲ... ಯಾವ ದಾರಿಯಲ್ಲಿ ನಮ್ಮ ಹೆಜ್ಜೆಗಳನ್ನು ಇಡುತ್ತೇವೆ ಎಂಬುವುದರಿಂದ. ಅದನ್ನು
ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು".
ವಂದನೆಗಳೊಂದಿಗೆ.

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World