www.dgnsgreenworld.blogspot.com

Friday, August 15, 2025

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ ?

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ?

​ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಬದುಕುವುದರಿಂದ ಮಾನವನು ತನ್ನ ಅಸ್ತಿತ್ವವನ್ನೇ ಅಪಾಯಕ್ಕೆ ಒಡ್ಡುವ ಸಾಧ್ಯತೆ ಇದೆ. ಇದು ಕೇವಲ ಭಾವನಾತ್ಮಕ ವಿಷಯವಲ್ಲ, ಬದಲಾಗಿ ವೈಜ್ಞಾನಿಕ ಸತ್ಯ.

  • ದೈಹಿಕ ಮತ್ತು ಮಾನಸಿಕ ಆರೋಗ್ಯ: ಪ್ರಕೃತಿಯೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಪ್ರಕೃತಿಯಲ್ಲಿ ಸಮಯ ಕಳೆಯುವುದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ನಾವು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾದಾಗ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ, ಅದು ಸ್ಥೂಲಕಾಯ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
  • ಮಾನವೀಯ ಮೌಲ್ಯಗಳು: ಪ್ರಕೃತಿ ನಮಗೆ ತಾಳ್ಮೆ, ಹೊಂದಾಣಿಕೆ ಮತ್ತು ಸಹಜೀವನದ ಪಾಠಗಳನ್ನು ಕಲಿಸುತ್ತದೆ. ತಂತ್ರಜ್ಞಾನದ ಅತಿಯಾದ ಬಳಕೆಯು ನಮ್ಮನ್ನು ಪ್ರಕೃತಿಯಿಂದ ದೂರ ಮಾಡಿ, ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುವಂತೆ ಮಾಡಬಹುದು.

​ತಂತ್ರಜ್ಞಾನದ ಅತಿಯಾದ ಅವಲಂಬನೆ

​ನಿಯಮಿತವಿಲ್ಲದ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅತಿಯಾಗಿ ಅವಲಂಬಿತರಾಗುವುದು ಮನುಷ್ಯನ ಸಾಮರ್ಥ್ಯಗಳನ್ನು ಕುಗ್ಗಿಸಬಹುದು.

  • ದೈಹಿಕ ಸಾಮರ್ಥ್ಯ ಕುಸಿತ: ಯಂತ್ರಗಳು ಎಲ್ಲ ಕೆಲಸಗಳನ್ನು ಮಾಡಿದಾಗ ಮನುಷ್ಯನ ದೈಹಿಕ ಶ್ರಮ ಕಡಿಮೆಯಾಗಿ ದೈಹಿಕ ಸಾಮರ್ಥ್ಯ ಕಡಿಮೆಯಾಗಬಹುದು.
  • ಮಾನಸಿಕ ಸಾಮರ್ಥ್ಯ ಕುಸಿತ: AI ಯಂತ್ರಗಳು ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದಾಗ, ಮನುಷ್ಯನ ಚಿಂತನಾ ಸಾಮರ್ಥ್ಯ, ವಿಮರ್ಶಾತ್ಮಕ ಯೋಚನೆ ಮತ್ತು ಸೃಜನಶೀಲತೆ ಕುಗ್ಗಬಹುದು. ಇದು ಭವಿಷ್ಯದಲ್ಲಿ ಮಾನವನನ್ನು ಮತ್ತಷ್ಟು ದುರ್ಬಲನನ್ನಾಗಿ ಮಾಡಬಹುದು.
  • ಪರಿಸರ ನಾಶ: ತಂತ್ರಜ್ಞಾನವನ್ನು ಬೆಳೆಸಲು ಮತ್ತು ಬಳಸಲು ಬೇಕಾದ ಸಂಪನ್ಮೂಲಗಳನ್ನು ಪ್ರಕೃತಿಯಿಂದ ಪಡೆಯಲಾಗುತ್ತದೆ. ತಂತ್ರಜ್ಞಾನದ ಪ್ರಗತಿಯ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ ಮತ್ತು ಇದು ಮನುಕುಲದ ವಿನಾಶಕ್ಕೆ ಕಾರಣವಾಗಬಹುದು ಎಂಬ ಆತಂಕ ಇದೆ.

​ತಂತ್ರಜ್ಞಾನ ಮತ್ತು ಪ್ರಕೃತಿಯ ನಡುವೆ ಸಮತೋಲನ

​ಇದಕ್ಕೆ ಪರಿಹಾರ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದಲ್ಲ, ಬದಲಾಗಿ ಪ್ರಕೃತಿಯ ಜೊತೆಗಿನ ಸಮತೋಲಿತ ಜೀವನ. ತಂತ್ರಜ್ಞಾನವನ್ನು ಮಾನವನ ಜೀವನವನ್ನು ಸುಧಾರಿಸಲು ಬಳಸಬೇಕು, ಆದರೆ ಅದು ಪ್ರಕೃತಿ ಮತ್ತು ನಮ್ಮ ಸಾಮರ್ಥ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು.

  • ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ: ತಂತ್ರಜ್ಞಾನದ ಬಳಕೆಯ ಬಗ್ಗೆ ನೈತಿಕ ಮತ್ತು ಸಾಮಾಜಿಕ ನಿಯಮಗಳನ್ನು ರೂಪಿಸುವುದು ಮುಖ್ಯ. ಪರಿಸರಕ್ಕೆ ಹಾನಿಯಾಗದ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸುವಂತಹ ನೀತಿಗಳನ್ನು ಅನುಸರಿಸಬೇಕು.
  • ಪ್ರಕೃತಿಯೊಂದಿಗೆ ಬದುಕುವುದು: ನಾವೆಲ್ಲರೂ ಪ್ರಕೃತಿಯನ್ನು ಗೌರವಿಸಬೇಕು ಮತ್ತು ಅದರೊಂದಿಗೆ ಸಾಮರಸ್ಯದಿಂದ ಬದುಕಲು ಕಲಿಯಬೇಕು. ನಗರಗಳಲ್ಲಿ ಹಸಿರು ವಲಯಗಳನ್ನು ಹೆಚ್ಚಿಸುವುದು, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು, ಮತ್ತು ನಮ್ಮ ಮಕ್ಕಳನ್ನು ಪ್ರಕೃತಿಯ ಮಹತ್ವದ ಬಗ್ಗೆ ಶಿಕ್ಷಣ ನೀಡುವುದು ಬಹಳ ಮುಖ್ಯ.

​ಮನುಷ್ಯ ಪ್ರಕೃತಿಯಿಂದ ದೂರವಾಗುತ್ತಾ ವಿಜ್ಞಾನ ತಂತ್ರಜ್ಞಾನದ ಕಡೆಗೆ ಒಲವು ತೋರುತ್ತ ತನ್ನ ಪರಿಮಿತಿಯನ್ನು ಮೀರಿ ವರ್ತಿಸುತ್ತಿರುವುದು ಭವಿಷ್ಯದ ಬಗ್ಗೆ ಗಂಭೀರ ಎಚ್ಚರಿಕೆಯನ್ನು ನೀಡುತ್ತವೆ. ಮನುಕುಲದ ಭವಿಷ್ಯವು ತಂತ್ರಜ್ಞಾನ ಮತ್ತು ಪ್ರಕೃತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. 

"ಮನುಷ್ಯ ಏನೇ ಸಾಧಿಸಿದರು ಅದು ನಶಿಸಿ ಹೋಗುತ್ತದೆ ಪ್ರಕೃತಿಯೇ ಸತ್ಯ"

ವಂದನೆಗಳೊಂದಿಗೆ

ನಂಜುಂಡಸ್ವಾಮಿ.

Thursday, July 31, 2025

ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.

ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)

ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲ ದಿದ್ದರೂ ಏನೂ ತೊಂದರೆ ಆಗಲ್ಲ)

ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)

ವಯಸ್ಸು 50 ಆದಾಗ 
*"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)

ವಯಸ್ಸು 60 ಆದಾಗ *"ಎತ್ತರದ ಸ್ಥಾನ", "ಕೆಳಗಿನ ಸ್ಥಾನ" ಒಂದೇ.* (ಅಧಿಕಾರಿಯು ನಿವೃತ್ತಿಗೊಂಡ ಮೇಲೆ ಪೇದೆ ಆಗಿದ್ದವನೂ ಗೌರವ ಕೊಡಲಾರ)

ವಯಸ್ಸು 70 ಆದಾಗ *"ದೊಡ್ಡ ಮನೆ" ಮತ್ತು "ಸಣ್ಣ ಮನೆ" ಒಂದೇ.* (ಸಂದು ನೋವು, ಚಲಿಸಲು ಕಷ್ಟ, ಇದ್ದವರಿಗೆ ಸ್ವಲ್ಪ ಜಾಗ ಕೂರಲು ಸಿಕ್ಕರೆ ಸಾಕು)

ವಯಸ್ಸು 80 ಆದಾಗ *"ಹಣ ಇರುವುದು" ಮತ್ತು "ಹಣ ಇಲ್ಲದಿರುವುದು" ಒಂದೇ.* (ನಿಮಗೆ ಹಣ ಖರ್ಚು  ಮಾಡಬೇಕೆನ್ನಿಸಿದರೂ ಎಲ್ಲಿ ಖರ್ಚು ಮಾಡಬೇಕೆಂದು ತಿಳಿಯುವುದಿಲ್ಲ)

ವಯಸ್ಸು 90 ಆದಾಗ *"ನಿದ್ದೆ ಮಾಡೋದು" ಹಾಗೂ "ಎಚ್ಚರದಿಂದಿರುವುದು" ಎರಡೂ ಒಂದೇ.* (ಎದ್ದ ಮೇಲೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ)

ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.

*ದೀರ್ಘಾವಧಿಯ ಜೀವನ ನೋಡಿದರೆ ನಾವೆಲ್ಲಾ ಒಂದೇ. ಆದ್ದರಿಂದ ಎಲ್ಲಾ ಒತ್ತಡ / ಆತಂಕ ಗಳನ್ನು ಮರೆತು ಜೀವನವನ್ನು ಆನಂದಿಸಿರಿ.*

Saturday, July 26, 2025

*ಒಣಕೊಬ್ಬರಿ ಅದ್ಬುತ ಅಮೃತ* ಎಂದು ಕರೆದರು ತಪ್ಪಾಗುವುದಿಲ್ಲ. ಅಷ್ಟು ಪೋಷಕಾಂಶಗಳನ್ನು ಹೊಂದಿದೆ. ಸರ್ವರಿಗೂ ಆರೋಗ್ಯ ದೊರಕಲಿ ಉಪಯೋಗಿಸಿ.

*ಒಣಕೊಬ್ಬರಿ  ಅದ್ಬುತ ಅಮೃತ*
   ಎಂದು ಕರೆದರು ತಪ್ಪಾಗುವುದಿಲ್ಲ. ಅಷ್ಟು ಪೋಷಕಾಂಶಗಳನ್ನು ಹೊಂದಿದೆ ಈ ಒಣಕೊಬ್ಬರಿ. ತುಂಬಾ ಜನರಿಗೆ ತುಂಬಾನೇ ಇಷ್ಟ. ಮನೆಯಲ್ಲಿ ಹಿರಿಯರು ಇದ್ದರೆ ಅವರು ಕೂಡ ಮಕ್ಕಳಿಗೆ ಒಣ ಕೊಬ್ಬರಿಯನ್ನು ತಿನ್ನಲು ಸಲಹೆ ಮಾಡುತ್ತಾರೆ. ಒಣ ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್, ನಾರಿನಾಂಶ, ಕಾಪರ್, ಸೆಲೆನಿಯಂ ಎನ್ನುವ ಪೋಷಕಾಂಶಗಳಿವೆ.

‌ಹಾಗಿದ್ರೆ ಯಾವ ರೀತಿಯಲ್ಲಿ ಒಣಕೊಬ್ಬರಿಯನ್ನು ಸೇವಿಸಿದರೆ ಒಳ್ಳೆಯದು ಎಂದು ನೋಡುವುದಾದರೆ 20 ರಿಂದ 25 ಗ್ರಾಂ ನಷ್ಟು ಪ್ರತಿ ದಿನ ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಇದನ್ನು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಚಿಕ್ಕ ತುಂಡು ಒಣಕೊಬ್ಬರಿಯನ್ನು ನೀವು ಸೇವಿಸಬಹುದು.

‌ಒಣಕೊಬ್ಬರಿ ಪ್ರತಿನಿತ್ಯ ಸೇವಿಸುವುದರಿಂದ ಸಿಗುವ ಲಾಭಗಳೇನು ಹಾಗೂ ಯಾವ ರೀತಿಯ ರೋಗಗಳಿಗೆ ಒಣಕೊಬ್ಬರಿ ಸೇವನೆ ಒಳ್ಳೆಯದು ಎಂಬುದನ್ನು ನೋಡುವುದಾದರೆ. ಒಣಕೊಬ್ಬರಿ ಸೇವಿಸುವುದರಿಂದ ನಮ್ಮ ದೇಹದ ಮೂಳೆಗಳು ಬಲಶಾಲಿಯಾಗುತ್ತದೆ. ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮೂಳೆಗಳ ಅಂಗಾಂಶ ಅಂದರೆ ಟಿಶುಗಳಲ್ಲಿ ಕಣಜ ಅಂಶಗಳು ಹೆಚ್ಚಾಗಿ ಇರುತ್ತದೆ. ಇದು ಕಡಿಮೆಯಾದರೆ ದೇಹದ ಯಾವುದೇ ಭಾಗಕ್ಕೂ ಇದು ತೊಂದರೆ ನೀಡಬಹುದು.

‌ಒಣ ಕೊಬ್ಬರಿಯ ಸೇವನೆಯಿಂದ ಈ ಮೂಳೆಗಳಲ್ಲಿನ ಖನಿಜಾಂಶ ಅಂದ್ರೆ ಮಿನರಲ್ಗಳ ಕಡಿಮೆಯನ್ನು ಪೂರ್ಣಗೊಳಿಸಿ ಕೊಳ್ಳಬಹುದು. ಒಣ ಕೊಬ್ಬರಿಯಿಂದ ದೊರೆಯುವ ಈ ಮಿನರಲ್ ದೇಹಕ್ಕೆ ಬೇಗನೆ ಸೇರಿಬಿಡುತ್ತದೆ. ಇದರಿಂದಾಗಿ ಆರ್ಥರೈಟಿಸ್ ನಂತಹ ತೊಂದರೆಯಿಂದ ಪಾರಾಗಬಹುದು. ಇನ್ನು ಕೆಲವರ ಗಂಟಲುಗಳಲ್ಲಿ ಕಟಕಟ ಶಬ್ದವಾಗುತ್ತಿರುತ್ತದೆ. ಇದು ಮೂಳೆಗಳಲ್ಲಿರುವ ಲೂಬ್ರಿಕೇನ್ಟ್ ನ ಕೊರತೆಯಿಂದ ಆಗುತ್ತದೆ. ಇಂಥವರು ಒಣಕೊಬ್ಬರಿಯ ಸೇವನೆ ಮಾಡಬೇಕು. ಒಣಕೊಬ್ಬರಿಯಲ್ಲಿ ನೈಸರ್ಗಿಕವಾದ ಎಣ್ಣೆ ಹಾಗೂ ಖನಿಜ ಇರುವುದರಿಂದ ಇದು ಮೂಳೆಗಳನ್ನು ಬಲಶಾಲಿಯಾಗಿಸಿ ಈ ಸಮಸ್ಯೆಯೂ ಸರಿಹೋಗುತ್ತದೆ.

‌ಮೆದುಳು ಚುರುಕಾಗಿರುತ್ತದೆ. ಒಣ ಕೊಬ್ಬರಿ ಸೇವನೆಯಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಇದರಿಂದ ಮೆದುಳಿನ ಫಂಕ್ಷನ್ ಇಂಪ್ರೂವ್ ಆಗುತ್ತದೆ. ನಿಮಗೆ ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಹಾಗೂ ಮೆದುಳು ಚುರುಕಾಗಿ ಇರಬೇಕು ಅಂದರೆ ತಪ್ಪದೇ ನೀವು ಒಣ ಕೊಬ್ಬರಿಯನ್ನು ಸೇವಿಸಲೇಬೇಕು. ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಯೂ ಕೂಡ ಒಣಕೊಬ್ಬರಿ ಒಳ್ಳೆಯ ಔಷಧಿ. ಇದನ್ನು ಮೂಲವ್ಯಾಧಿ ಇರುವವರು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಸರಿಹೋಗುತ್ತದೆ. ಒಣ ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಕೂಡ ಸರಿಪಡಿಸುತ್ತದೆ.

ರಕ್ತಹೀನತೆಯ ಸಮಸ್ಯೆಯನ್ನು ಗುಣಪಡಿಸುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರಕ್ತಹೀನತೆಯ ಸಮಸ್ಯೆ ಹೆಚ್ಚಾದರೆ ಶರೀರದಲ್ಲಿ ಶಕ್ತಿಯಿರುವುದಿಲ್ಲ, ತಲೆಸುತ್ತು, ಮೊದಲಾದ ತೊಂದರೆ ಎದುರಾಗುತ್ತದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಒಣಕೊಬ್ಬರಿಯ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು ಏಕೆಂದರೆ ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿದೆ ಆದ್ದರಿಂದ ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡಲು ಒಣಕೊಬ್ಬರಿಯ ಸೇವನೆಯನ್ನು ತಪ್ಪದೇ ಮಾಡಿ.

‌ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಒಣಕೊಬ್ಬರಿಯನ್ನು ಹೀಗೆ ಬಳಸಿದರೆ ಸಂಪೂರ್ಣವಾಗಿ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ತುರಿದ ಕೊಬ್ಬರಿ 20 ರಿಂದ 25 ಗ್ರಾಂ ತೆಗೆದುಕೊಳ್ಳಿ 20 ರಿಂದ 25 ಗ್ರಾಂ ನಷ್ಟು ಕಲ್ಲು ಸಕ್ಕರೆ ತೆಗೆದುಕೊಳ್ಳಿ. ಇವೆರಡನ್ನು ಸೂರ್ಯ ಉದಯಿಸುವುದಕ್ಕಿಂತ ಮೊದಲು ಸೇವಿಸಿ. ಜಗಿದು ಜಗಿದು ಸೇವಿಸಬೇಕು. ಈ ರೀತಿಯಾಗಿ ನೀವು ಪ್ರತಿನಿತ್ಯ ಸೇವಿಸಿದರೆ ಸ್ವಲ್ಪ ದಿನದಲ್ಲೇ ಎಷ್ಟೇ ಹಳೆಯದಾದ ತಲೆನೋವಿದ್ದರು ಹಾಗೂ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.

‌ಥೈರಾಡ್ ಸಮಸ್ಯೆ ಇರುವವರು ಒಣಕೊಬ್ಬರಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ದೇಹದಲ್ಲಿ #ಸೆಲೆನಿಯಂ ಕೊರತೆಯಿಂದ ಉಂಟಾಗುತ್ತದೆ. ಒಣ ಕೊಬ್ಬರಿಯಲ್ಲಿ ಸೆಲೆನಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ.ನಿಮಗೆ ಹೈಪರ್ ಥೈರಾಯ್ಡ್ ಇರಲಿ ಅಥವಾ ಹೈಪೋ ಥೈರಾಯ್ಡ್ ಇರಲಿ ನೀವು ತಪ್ಪದೆ ಒಣಕೊಬ್ಬರಿ ಸೇವಿಸಿ. ಇದು ನಿಮ್ಮ ಥೈರಾಯ್ಡ್ ಹಾರ್ಮೋನನ್ನು ಸರಿಯಾಗಿ ಇಡುತ್ತದೆ.

‌ಇನ್ನು ಒಣಕೊಬ್ಬರಿ ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದರಲ್ಲಿರುವ ಫೈಬರ್ ಹೃದಯವನ್ನು ಆರೋಗ್ಯವಾಗಿಡುತ್ತದೆ. ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ನಿತ್ಯವೂ ತಪ್ಪದೆ ಒಣಕೊಬ್ಬರಿಯನ್ನು ಸೇವನೆ ಮಾಡುವುದು ಉತ್ತಮ.

‌ನಿದ್ರಾಹೀನತೆಯ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಒಣಕೊಬ್ಬರಿಗಿದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.
Follow the ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ channel on WhatsApp: https://whatsapp.com/channel/0029Va9NI077oQhTDb24n21I
‌ಒಣಕೊಬ್ಬರಿಯನ್ನು ಸೇವಿಸುವುದರಿಂದ ಅಜೀರ್ಣತೆಯ ಸಮಸ್ಯೆಯೂ ಕೂಡ ಸರಿ ಹೋಗುತ್ತದೆ. ಇನ್ನು ಒಣ ಕೊಬ್ಬರಿಯನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು. ಇದು ರಕ್ತದಲ್ಲಿ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೊಬ್ಬರಿಯ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯೂ ಬೇಗನೆ ಕಡಿಮೆಯಾಗುತ್ತದೆ. ಒಣಕೊಬ್ಬರಿ ಒಂದು ಒಳ್ಳೆಯ ಆಯಂಟಿ ಬಯಾಟಿಕ್ ತರ ಕೆಲಸ ಮಾಡುತ್ತದೆ. ಇದರಿಂದಾಗಿ ಯಾವುದೇ ರೀತಿಯ ಅಲರ್ಜಿ ಅಥವಾ ಯಾವುದೇ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಸೇರಲು ಸಾಧ್ಯ ಇಲ್ಲ.

‌ಒಣ ಕೊಬ್ಬರಿ ನಮ್ಮ ಕಣ್ಣುಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇನ್ನು ಇದರಿಂದ ಹಲವಾರು ಲಾಭಗಳು ದೊರೆಯುತ್ತದೆ. ಇದರ ಸೇವನೆಯ ನಂತರ ಸ್ವಲ್ಪ ದಿನಗಳಲ್ಲಿಯೇ ನಿಮ್ಮ ದೇಹದಲ್ಲಿ ಒಳ್ಳೆಯ ವ್ಯತ್ಯಾಸ ಕಂಡುಬರುತ್ತದೆ. ನಮಗೆ ಯಾವುದೇ ರೋಗ ಇರಲಿ ಇಲ್ಲದಿರಲಿ ಇಂತಹ ಅದ್ಭುತವಾದ ಆಹಾರವನ್ನು ನಮ್ಮ ಪ್ರತಿನಿತ್ಯ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಮ್ಮ ದೇಹವು ಆರೋಗ್ಯವಾಗಿರುತ್ತದೆ.

‌ ಸಾಮಾನ್ಯವಾಗಿ ಆಹಾರ ಪದ್ಧತಿ, ಸರಳ ಜೀವನ ಶೈಲಿ ಸರಿಯಾಗಿದ್ದರೆ, ಯಾವುದೇ ರೋಗವು ನಮ್ಮ ಹತ್ತಿರವೂ ಸುಳಿಯುವುದಿಲ್ಲ.
ಸರ್ವಜನ ಸುಖಿನೋ ಭವಂತು 
ವಂದನೆಗಳೊಂದಿಗೆ. 
ನಂಜುಂಡಸ್ವಾಮಿ 🙏💐

Thursday, July 24, 2025

*ಆರು ವರ್ಷಗಳ ಅಂತ್ಯದ ವೇಳೆಗೆ ಜಗತ್ತಿನ 45% ಹುಡುಗಿಯರು ಕನ್ಯೆಯರಾಗಿಯೇ ಉಳಿಯುತ್ತಾರೆ*

,
 *ಆರು ವರ್ಷಗಳ ಅಂತ್ಯದ ವೇಳೆಗೆ ಜಗತ್ತಿನ 45% ಹುಡುಗಿಯರು ಕನ್ಯೆಯರಾಗಿಯೇ ಉಳಿಯುತ್ತಾರೆ*

 ಫೆಬ್ರವರಿ 1, 2025 ರ ಲೋಕಮತ್ ಪತ್ರಿಕೆಯಲ್ಲಿ ಪ್ರಕಟವಾದ ಅಂತರರಾಷ್ಟ್ರೀಯ ಸಮೀಕ್ಷಾ ವರದಿ.  ಮಾರ್ಗನ್ ಸ್ಟ್ಯಾನ್ಲಿ ಎಂಬ ಸಂಸ್ಥೆಯು ಹುಡುಗಿಯರ ವಿವಾಹದ ಕುರಿತಾದ ತನ್ನ ಅಂತರರಾಷ್ಟ್ರೀಯ ಸಮೀಕ್ಷಾ ವರದಿಯಲ್ಲಿ ಆರು ವರ್ಷಗಳ ಅಂತ್ಯದ ವೇಳೆಗೆ, ವಿಶ್ವದ 45% ಹುಡುಗಿಯರು ಅವಿವಾಹಿತರಾಗಿಯೇ ಉಳಿಯುತ್ತಾರೆ ಎಂದು ಹೇಳಿದೆ.

  *ಕಾರಣ:*
  ೧. ಪ್ರಸ್ತುತ ಉನ್ನತ ಶಿಕ್ಷಣ ಪಡೆದ ಹುಡುಗಿಯರ ಶೇಕಡಾವಾರು ಹೆಚ್ಚಾಗಿದೆ.

  ೨. ಹುಡುಗಿಯರು ತಮ್ಮ ವೃತ್ತಿಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.

 ೩. ಅವರ ಪ್ರಗತಿ ಅವರಿಗೆ ಮುಖ್ಯವಾಗಿದೆ.

 ೪. ಅವಳು ಯಾರನ್ನೂ ಅವಲಂಬಿಸಲು ಬಯಸುವುದಿಲ್ಲ. 

 ೫. ಅವರಿಗೆ ಸ್ವಾತಂತ್ರ್ಯ ಬೇಕು, ಯಾರಿಗೂ ಬದ್ಧವಾಗಿರಲು ಇಷ್ಟವಿಲ್ಲ.

 ೬. ಅವಳು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ🤔 ಮತ್ತು ತನ್ನ ಇಚ್ಛೆಯಂತೆ ತನ್ನ ಜೀವನವನ್ನು ನಡೆಸಲು ಬಯಸುತ್ತಾಳೆ.

 ೭. ಅವಳು ಮದುವೆಯ ಬಂಧಗಳಲ್ಲಿ ಬಂಧಿಸಲ್ಪಡಲು ಬಯಸುವುದಿಲ್ಲ. 

 ೮. ಇಂದು ಹುಡುಗಿಯರು ಅನೇಕ ದೊಡ್ಡ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರಿಗೆ ದೊಡ್ಡ ಪ್ಯಾಕೇಜ್‌ಗಳೂ ಸಿಗುತ್ತವೆ.

 ೯. ಇಂದು ಹುಡುಗಿಯರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಿದ್ದಾರೆ ಮತ್ತು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ, ಆದರೆ ಮದುವೆಯ ವಯಸ್ಸನ್ನು ದಾಟಿದ ನಂತರವೂ ಅವರು ಮದುವೆಯಾಗಿಲ್ಲ. 

 ೧೦.ಓದುವಾಗ, ನಂತರ ಉದ್ಯೋಗ ಪಡೆಯುವಾಗ ಮತ್ತು ನಂತರ ಸಂಬಂಧವನ್ನು ಹುಡುಕುವಾಗ ಹುಡುಗಿಯರ ವಯಸ್ಸು ಹೆಚ್ಚುತ್ತಿದೆ.

 ೧೧.ಹೆಚ್ಚಿನ ವಿದ್ಯಾವಂತ ಹುಡುಗಿಯರು ವಯಸ್ಸಾದಂತೆ ಸಮಾನವಾದ ವಿವಾಹ ಪ್ರಸ್ತಾಪಗಳನ್ನು ಕಂಡುಹಿಡಿಯುವುದು ಕಷ್ಟಕರವಾಗುತ್ತದೆ.

 ೧೨.ಹುಡುಗಿಯರು ದೊಡ್ಡವರಾದ ನಂತರ ಮದುವೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

 ೧೩ .ಮದುವೆಯಾಗುವುದು ಮತ್ತು ಮಗುವನ್ನು ಹೊಂದುವುದು ತನ್ನ ಪ್ರಗತಿಗೆ ಒಂದು ಅಡಚಣೆ ಎಂದು ಅವಳು ಪರಿಗಣಿಸುತ್ತಾಳೆ.  

  *ಈ ಬಿಕ್ಕಟ್ಟನ್ನು ತಪ್ಪಿಸಲು, ಹುಡುಗಿಯರು  ಮತ್ತು ಹುಡುಗರು 23 ರಿಂದ 25 ವರ್ಷ ವಯಸ್ಸಿನೊಳಗೆ ಮದುವೆಯಾಗುವಂತೆ ಸಮಾಜದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡಬೇಕು ಇಲ್ಲವಾದಲ್ಲಿ ಭವಿಷ್ಯದಲ್ಲಿ ಕುಟುಂಬ ವ್ಯವಸ್ಥೆ ನಶಿಸಿ ಹೋಗುತ್ತದೆ,ಮಕ್ಕಳೇ ಅಪರೂಪ ಆಗುತ್ತಾರೆ*.
ವಂದನೆಗಳೊಂದಿಗೆ 
ನಂಜುಂಡಸ್ವಾಮಿ.

*ತುಳಸಿ ದಳವೊಂದಕ್ಕೆ ತೂಗಿದ ಕೃಷ್ಣ..!*

*ತುಳಸಿ ದಳವೊಂದಕ್ಕೆ ತೂಗಿದ ಕೃಷ್ಣ..!* 
👇👇
ಒಮ್ಮೆ ಸತ್ಯಭಾಮೆಯು ನಾರದರನ್ನು ಕುರಿತು “ಮಹರ್ಷಿಗಳೇ, ಜನ್ಮಜನ್ಮಾಂತರಕ್ಕೂ ಶ್ರೀಕೃಷ್ಣನೇ ನನಗೆ ಗಂಡನಾಗಬೇಕೆಂಬ ಹಂಬಲವಿದೆ; ಅದು ಈಡೇರಲು ಏನಾದರೂ ದಾರಿಯಿದೆಯೆ” ಎಂದು ಕೇಳಿದಳು. ಅದಕ್ಕೆ ನಾರದರು, 
    “ಓಹೋ, ಇದೆ ತಾಯೆ, ನೀನು ಪುಣ್ಯಕವೆಂಬ ವ್ರತವನ್ನಾಚರಿಸಿ, ಅದರ ಮುಕ್ತಾಯದಲ್ಲಿ ಶ್ರೀಕೃಷ್ಣನನ್ನು ಯಾರಾದರೂ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟುಬಿಡು. ಆಗ ನಿನ್ನ ಹಂಬಲಕ್ಕೆ ಬೆಂಬಲ ದೊರಕುತ್ತದೆ” ಎಂದರು.
           ಸರಿ ಆ, ವ್ರತ ನಡೆದೆ ಹೋಯಿತು. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ನಾರದರಿಗೆ ಪತಿದೇವರನ್ನು ದಾನಮಾಡಿದ್ದೂ ಆಗಿ ಹೋಯಿತು. ಆಗ ಶ್ರೀಕೃಷ್ಣನು ನಾರದರನ್ನು ಕುರಿತು,
      “ಈಗ ನಾನು ಏನು ಮಾಡಬೇಕು ಸ್ವಾಮಿ” ಎಂದು ಕೇಳಿದನು. ಅದಕ್ಕೆ ನಾರದರು,
 “ಏನು ಮಾಡಬೇಕು ಎನ್ನುತ್ತೀಯಲ್ಲಪ್ಪಾ, ಇನ್ನು ಅರಮನೆಯಲ್ಲಿ ಇರು ವಂತಿಲ್ಲ, ಹಿಡಿದುಕೋ ಈ ತಂಬೂರಿ, ನಡೆ ಹಾಡುತ್ತ ನನ್ನ ಹಿಂದೆ, ನೀನಿನ್ನು ನನ್ನ ಅನುಚರನಲ್ಲವೆ”? ಎಂದರು.
     ಆಗ ಸತ್ಯಭಾಮೆಗೆ ಸಿಡಿಲೆರಗಿದಂತಾಯಿತು, ದಿಕ್ಕು ತೋರದಾಯಿತು.
     “ಇದೆಂತಹ ಕೆಲಸ ಮಾಡಿಬಿಟ್ಟೆ” ಎಂದು ತನ್ನ ತಪ್ಪಿನ ಅರಿವಾಯಿತು. “ಈಗ ನೀವೇ ಏನಾದರೂ ಮಾರ್ಗವನ್ನು ತೋರಿಸಿ ನಾರದರೇ, ಸ್ವಾಮಿಯನ್ನು ಕಳೆದುಕೊಳ್ಳಲುಂಟೇ” ಎಂದು ಅಂಗಲಾಚಿದಳು. 
    ಆಗ ನಾರದರು “ನಾನೇನೋ ಕೃಷ್ಣನನ್ನು ನಿನಗೇ ಮರಳಿಸಿಬಿಡುತ್ತೇನೆ. ಆದರೆ ದಾನವಾಗಿ ಕೊಟ್ಟುದನ್ನು ಮರಳಿ ಪಡೆದರೆ ‘ದತ್ತಾಪಹಾರ’ ಎಂಬ ದೋಷ ನಿನಗೆ ಅಂಟಿಕೊಳ್ಳುತ್ತದೆಯಲ್ಲ, ಅದಕ್ಕೇನು ಮಾಡುತ್ತೀಯೆ ತಾಯೆ” ಎಂದರು. “ಅದಕ್ಕೂ ನೀವೇ ಏನಾದರೂ ಪರಿಹಾರ ಸೂಚಿಸಬೇಕು ನಾರದರೆ” ಎಂದು ಸತ್ಯಭಾಮೆ ಅವರಿಗೆ ಶರಣಾದಳು
      ಆಗ ನಾರದರು “ತಾಯೆ, ತುಲಾಭಾರದ ಮೂಲಕ ಕೃಷ್ಣನ ತೂಕಕ್ಕೆ ಸಮನಾಗುವ ನಿನ್ನ ಆಭರಣಗಳನ್ನು ತೂಗಿಸಿ ನನಗೆ ದಾನಮಾಡು, ನಾನು ನಿನಗೆ ಕೃಷ್ಣನನ್ನು ಹಿಂದಕ್ಕೆ ಕೊಡುತ್ತೇನೆ. ಆಗ ದೋಷವೆಲ್ಲ ಪರಿಹಾರವಾಗುತ್ತದೆ” ಎಂದು ಸಲಹೆ ಕೊಟ್ಟರು.

      ಸತ್ಯಭಾಮೆಗೆ ಹೋದಜೀವ ಬಂದಂತಾಯಿತು. ಲಗುಬಗೆಯಿಂದ ಕೃಷ್ಣನನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಕೂರಿಸಿ, ತನ್ನ ಆಭರಣಗಳನ್ನೆಲ್ಲ ತಂದು  ಇನ್ನೊಂದು ತಟ್ಟೆಗೆ ಅಡಕಿದಳು. ಅವಳ ಆಭರಣವೆಲ್ಲ ಬರಿದಾಯಿತೇ ಹೊರತು, ಕೃಷ್ಣನ ತೂಕಕ್ಕೆ ಅದು ಸಮನಾಗಲಿಲ್ಲ. “ಈಗ ನೀವೇ ಏನಾದರೂ ಮಾಡಬೇಕು ನಾರದರೇ” ಎಂದು ಸತ್ಯಭಾಮೆಯು ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟಳು. ಆಗ ನಾರದರು,
      “ರುಕ್ಮಿಣಿಯನ್ನೊಮ್ಮೆ ಕೇಳಿ ನೋಡು ತಾಯೆ, ಅವಳ ಆಭರಣಗಳನ್ನೂ ತೂಗಿಸು” ಎಂದರು. ಸತ್ಯಭಾಮೆಗೆ ಅದು ಇಷ್ಟವಿಲ್ಲದಿದ್ದರೂ ಪತಿದೇವರನ್ನು ಕಳೆದುಕೊಳ್ಳಬೇಕಲ್ಲಾ ಎಂಬ ಸಂಕಟದಿಂದ ಅಸಹಾಯಕಳಾಗಿ “ನೀನೂ ಬಾ ರುಕ್ಮಿಣಿ, ಸಹಾಯ ಮಾಡು” ಎಂದಳು.
      ಆಗ ರುಕ್ಮಿಣಿಯು “ಹದಿನಾಲ್ಕು ಲೋಕಗಳ ಸಂಪತ್ತನ್ನೆಲ್ಲ ತಂದು ಸುರಿದರೂ ಈ ಸ್ವಾಮಿಗೆ ಸಮನಾಗಿ ಅದು ತೂಗಬಲ್ಲದೇ? ಅಕ್ಕ, ಜಗತ್ತಿಗೆಲ್ಲ ಸೇರಿದ ಅವನನ್ನು ನಾನೇ ಕಟ್ಟಿ ಹಾಕಿಕೊಳ್ಳುತ್ತೇನೆಂದರೆ, ಅದು ನಡೆಯುವುದುಂಟೆ? ಅಕ್ಕ, ಅದೆಲ್ಲ ಈಗ ಬೇಡ” ಎನ್ನುತ್ತ ರುಕ್ಮಿಣಿಯು ಒಂದು ತುಳಸಿ ದಳದ ಮೇಲೆ ‘ಶ್ರೀಕೃಷ್ಣ’ ಎಂದು ಬರೆದು, ಸತ್ಯಭಾಮೆಯ ತಟ್ಟೆಯೊಳಕ್ಕೆ ಹಾಕುತ್ತ “ದೇವ ದೇವೋತ್ತಮನೆ, ದೇವತಾ ಸಾರ್ವಭೌಮ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೇ ನನಗೆ ನಿನ್ನ ಮೇಲೆ ಭಕ್ತಿ ನನ್ನ ಹೃದಯದಲ್ಲೇನಾದರೂ ಇದ್ದರೆ, ನೀನು ಸಮನಾಗಿ ತೂಗಿಬಿಡು ಸ್ವಾಮಿ” ಎಂದು ನಮಸ್ಕರಿಸಿದಳು. ಒಂದು ಕೃಷ್ಣನಾಮವೇ ಸಾಕಾಗಿ, ತಕ್ಕಡಿ ಸಮನಾಗಿ ತೂಗಿಬಿಟ್ಟಿತು, , ಆಗಲೇ ಸತ್ಯಭಾಮೆಯ ಗರ್ವವು ಇಳಿಯಿತು ಭಗವಂತನನ್ನು ಸಿರಿ ಸಂಪತ್ತಿನಿಂದ ತೂಗಲು ಎಂದು ಸಾಧ್ಯವಿಲ್ಲ ನಿಜ ಭಕ್ತಿಗೆ ಅವನು ಒಲಿಯುತ್ತಾನೆ ಎಂಬ ನಿಜ ವಾಸ್ತವ ಸತ್ಯಭಾಮೆಗೆ ಅಂದು ಅರ್ಥವಾಯಿತು.

_ಸನಾತನ ಆಧ್ಯಾತ್ಮಿಕ ಮಾಹಿತಿಗಾಗಿ,_  
ವಂದನೆಗಳೊಂದಿಗೆ.
 ನಂಜುಂಡಸ್ವಾಮಿ.

Thursday, July 3, 2025

*ಲಿಪಿಡ್ ಪ್ರೊಫೈಲ್ ಎಂದರೇನು?*

*ಲಿಪಿಡ್ ಪ್ರೊಫೈಲ್ ಎಂದರೇನು?*
ಪ್ರಸಿದ್ಧ ವೈದ್ಯರೊಬ್ಬರು ಲಿಪಿಡ್ ಪ್ರೊಫೈಲ್ ಅನ್ನು ಬಹಳ ಚೆನ್ನಾಗಿ ವಿವರಿಸಿದರು ಮತ್ತು ಅದನ್ನು ವಿಶಿಷ್ಟ ರೀತಿಯಲ್ಲಿ ವಿವರಿಸುವ ಸುಂದರವಾದ ಕಥೆಯನ್ನು ಹಂಚಿಕೊಂಡರು.

ನಮ್ಮ ದೇಹವು ಒಂದು ಸಣ್ಣ ಪಟ್ಟಣ ಎಂದು ಕಲ್ಪಿಸಿಕೊಳ್ಳಿ. ಈ ಪಟ್ಟಣದ ಅತಿದೊಡ್ಡ ತೊಂದರೆ ಕೊಡುವವನು - *ಕೊಲೆಸ್ಟ್ರಾಲ್*.

ಅವನಿಗೆ ಕೆಲವು ಸಹಚರರು ಇದ್ದಾರೆ. ಅಪರಾಧದಲ್ಲಿ ಅವನ ಮುಖ್ಯ ಪಾಲುದಾರ - *ಟ್ರೈಗ್ಲಿಸರೈಡ್*.

ಅವರ ಕೆಲಸ ಬೀದಿಗಳಲ್ಲಿ ಅಲೆದಾಡುವುದು, ಅವ್ಯವಸ್ಥೆ ಸೃಷ್ಟಿಸುವುದು ಮತ್ತು ರಸ್ತೆಗಳನ್ನು ನಿರ್ಬಂಧಿಸುವುದು.

*ಹೃದಯ* ಈ ಪಟ್ಟಣದ ನಗರ ಕೇಂದ್ರವಾಗಿದೆ. ಎಲ್ಲಾ ರಸ್ತೆಗಳು ಹೃದಯಕ್ಕೆ ಕಾರಣವಾಗುತ್ತವೆ.

ಈ ತೊಂದರೆ ಕೊಡುವವರು ಹೆಚ್ಚಾಗಲು ಪ್ರಾರಂಭಿಸಿದಾಗ, ಏನಾಗುತ್ತದೆ ಎಂದು ನೀವು ಊಹಿಸಬಹುದು. ಅವರು ಹೃದಯದ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ.

ಆದರೆ ನಮ್ಮ ದೇಹ-ಪಟ್ಟಣದಲ್ಲಿಯೂ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ - *HDL*

ಒಳ್ಳೆಯ ಪೊಲೀಸ್ ಈ ತೊಂದರೆ ಕೊಡುವವರನ್ನು ಹಿಡಿದು ಜೈಲಿಗೆ ಹಾಕುತ್ತಾನೆ *(ಯಕೃತ್ತು)*.

ನಂತರ ಯಕೃತ್ತು ಅವರನ್ನು ದೇಹದಿಂದ ತೆಗೆದುಹಾಕುತ್ತದೆ - ನಮ್ಮ ಒಳಚರಂಡಿ ವ್ಯವಸ್ಥೆಯ ಮೂಲಕ.

ಆದರೆ ಅಧಿಕಾರಕ್ಕಾಗಿ ಹಸಿದ ಒಬ್ಬ ಕೆಟ್ಟ ಪೊಲೀಸ್ - *LDL* ಕೂಡ ಇದ್ದಾನೆ.

LDL ಈ ದುಷ್ಕರ್ಮಿಗಳನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಹೋಗಿ ಮತ್ತೆ ಬೀದಿಗೆ ಬಿಡುತ್ತದೆ.

ಒಳ್ಳೆಯ ಪೊಲೀಸ್ *HDL* ಕಡಿಮೆಯಾದಾಗ, ಇಡೀ ಪಟ್ಟಣವೇ ಹಾಳಾಗುತ್ತದೆ.

ಅಂತಹ ಪಟ್ಟಣದಲ್ಲಿ ಯಾರು ವಾಸಿಸಲು ಬಯಸುತ್ತಾರೆ?

ನೀವು ಈ ದುಷ್ಕರ್ಮಿಗಳನ್ನು ಕಡಿಮೆ ಮಾಡಲು ಮತ್ತು ಉತ್ತಮ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲು ಬಯಸುವಿರಾ?

*ನಡೆಯಲು* ಪ್ರಾರಂಭಿಸಿ!

ಪ್ರತಿ ಹೆಜ್ಜೆಯೊಂದಿಗೆ *HDL* ಹೆಚ್ಚಾಗುತ್ತದೆ ಮತ್ತು *ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್* ಮತ್ತು *LDL* ನಂತಹ ದುಷ್ಕರ್ಮಿಗಳು ಕಡಿಮೆಯಾಗುತ್ತವೆ.

ನಿಮ್ಮ ದೇಹವು (ಪಟ್ಟಣ) ಮತ್ತೆ ಜೀವಂತವಾಗುತ್ತದೆ.

ನಿಮ್ಮ ಹೃದಯ - ನಗರ ಕೇಂದ್ರ - ದುಷ್ಕರ್ಮಿಗಳ ಅಡಚಣೆಯಿಂದ *(ಹೃದಯ ಬ್ಲಾಕ್)* ರಕ್ಷಿಸಲ್ಪಡುತ್ತದೆ.

ಮತ್ತು ಹೃದಯ ಆರೋಗ್ಯಕರವಾಗಿದ್ದಾಗ, ನೀವು ಸಹ ಆರೋಗ್ಯವಾಗಿರುತ್ತೀರಿ.

ಆದ್ದರಿಂದ ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ - ನಡೆಯಲು ಪ್ರಾರಂಭಿಸಿ!

*ಆರೋಗ್ಯವಾಗಿರಿ...* ಮತ್ತು *ನಿಮ್ಮ ಆರೋಗ್ಯವನ್ನು ಬಯಸುತ್ತೇನೆ*
*ಈ ಲೇಖನವು HDL (ಉತ್ತಮ ಕೊಲೆಸ್ಟ್ರಾಲ್) ಅನ್ನು ಹೆಚ್ಚಿಸಲು ಮತ್ತು LDL (ಕೆಟ್ಟ ಕೊಲೆಸ್ಟ್ರಾಲ್) ಅನ್ನು ಕಡಿಮೆ ಮಾಡಲು ಅಂದರೆ ನಡೆಯಲು ಉತ್ತಮ ಮಾರ್ಗವನ್ನು ನಿಮಗೆ ಹೇಳುತ್ತದೆ.*
ಪ್ರತಿ ಹೆಜ್ಜೆಯೂ HDL ಅನ್ನು ಹೆಚ್ಚಿಸುತ್ತದೆ. ಆದ್ದರಿಂದ - *ಬನ್ನಿ, ಮುಂದುವರಿಯಿರಿ ಮತ್ತು ಚಲಿಸುತ್ತಲೇ ಇರಿ.*

*ಹಿರಿಯ ನಾಗರಿಕರ ವಾರದ ಶುಭಾಶಯಗಳು*

ಈ ವಿಷಯಗಳನ್ನು ಕಡಿಮೆ ಮಾಡಿ:-

1. ಉಪ್ಪು

2. ಸಕ್ಕರೆ

3. ಬಿಳುಪುಗೊಳಿಸಿದ ಸಂಸ್ಕರಿಸಿದ ಹಿಟ್ಟು

4. ಡೈರಿ ಉತ್ಪನ್ನಗಳು

5. ಸಂಸ್ಕರಿಸಿದ ಆಹಾರಗಳು

*ಪ್ರತಿದಿನ ಈ ವಸ್ತುಗಳನ್ನು ಸೇವಿಸಿ:-*

1. ತರಕಾರಿಗಳು

2. ದ್ವಿದಳ ಧಾನ್ಯಗಳು

3. ಬೀನ್ಸ್

4. ಬೀಜಗಳು

5. ತಣ್ಣನೆಯ ಒತ್ತಿದ ಎಣ್ಣೆಗಳು

6. ಹಣ್ಣುಗಳು

*ಮರೆಯಲು ಪ್ರಯತ್ನಿಸಬೇಕಾದ ಮೂರು ವಿಷಯಗಳು:*

1. ನಿಮ್ಮ ವಯಸ್ಸು

2. ನಿಮ್ಮ ಹಿಂದಿನದು

3. ನಿಮ್ಮ ಕುಂದುಕೊರತೆಗಳು

*ಅಳವಡಿಸಿಕೊಳ್ಳಬೇಕಾದ ನಾಲ್ಕು ಪ್ರಮುಖ ವಿಷಯಗಳು:*

1. ನಿಮ್ಮ ಕುಟುಂಬ

2. ನಿಮ್ಮ ಸ್ನೇಹಿತರು

3. ಸಕಾರಾತ್ಮಕ ಚಿಂತನೆ

4. ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಸ್ವಾಗತಿಸುವುದು

*ಅಳವಡಿಸಿಕೊಳ್ಳಬೇಕಾದ ಮೂರು ಮೂಲಭೂತ ವಿಷಯಗಳು:*

1. ಯಾವಾಗಲೂ ನಗುತ್ತಿರಿ

2. ನಿಮ್ಮ ಸ್ವಂತ ವೇಗದಲ್ಲಿ ನಿಯಮಿತ ದೈಹಿಕ ಚಟುವಟಿಕೆಯನ್ನು ಮಾಡಿ

3. ನಿಮ್ಮ ತೂಕವನ್ನು ಪರಿಶೀಲಿಸಿ ಮತ್ತು ನಿಯಂತ್ರಿಸಿ

*ನೀವು ಅಳವಡಿಸಿಕೊಳ್ಳಬೇಕಾದ ಆರು ಅಗತ್ಯ ಜೀವನಶೈಲಿ ಅಭ್ಯಾಸಗಳು:*
1. ನೀರು ಕುಡಿಯಲು ಬಾಯಾರಿಕೆಯಾಗುವವರೆಗೆ ಕಾಯಬೇಡಿ. 2. ವಿಶ್ರಾಂತಿ ಪಡೆಯಲು ನೀವು ದಣಿದ ತನಕ ಕಾಯಬೇಡಿ.

3. ವೈದ್ಯಕೀಯ ಪರೀಕ್ಷೆಗಳಿಗಾಗಿ ನೀವು ಅನಾರೋಗ್ಯಕ್ಕೆ ಒಳಗಾಗುವವರೆಗೂ ಕಾಯಬೇಡಿ.

4. ಪವಾಡಗಳಿಗಾಗಿ ಕಾಯಬೇಡಿ, ದೇವರಲ್ಲಿ ನಂಬಿಕೆ ಇರಿಸಿ.

5. ನಿಮ್ಮಲ್ಲಿ ಎಂದಿಗೂ ನಂಬಿಕೆಯನ್ನು ಕಳೆದುಕೊಳ್ಳಬೇಡಿ.

6. ಸಕಾರಾತ್ಮಕವಾಗಿರಿ ಮತ್ತು ಯಾವಾಗಲೂ ಉತ್ತಮ ನಾಳೆಗಾಗಿ ಆಶಿಸಿ.

ಈ ವಯಸ್ಸಿನ *(45-80 ವರ್ಷಗಳು)* ಸ್ನೇಹಿತರನ್ನು ನೀವು ಹೊಂದಿದ್ದರೆ ದಯವಿಟ್ಟು ಇದನ್ನು ಅವರಿಗೆ ಕಳುಹಿಸಿ.

*ಹಿರಿಯ ನಾಗರಿಕರ ವಾರದ ಶುಭಾಶಯಗಳು!* 

ನಿಮಗೆ ತಿಳಿದಿರುವ ಎಲ್ಲಾ ಒಳ್ಳೆಯ ಹಿರಿಯ ನಾಗರಿಕರಿಗೆ ಇದನ್ನು ಕಳುಹಿಸಿ.

ದೇವರು ನಿಮ್ಮನ್ನು ಬಹಳಷ್ಟು ಆಶೀರ್ವದಿಸಲಿ.
ವಂದನೆಗಳೊಂದಿಗೆ.
 ನಂಜುಂಡಸ್ವಾಮಿ

Sunday, May 25, 2025

29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .

29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .

Friday, May 16, 2025

🚩🙏*****ಎಲ್ಲರೂ ತಿಳಿಯಬೇಕಾದ ಆದ್ಯಾತ್ಮ ವಿಷಯ***** ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ

🚩🙏*****ಎಲ್ಲರೂ ತಿಳಿಯಬೇಕಾದ ಆದ್ಯಾತ್ಮ ವಿಷಯ*****                    ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
ದಿಕ್ಕುಗಳು: 
1. ಪೂರ್ವ /ಮೂಡಣ
2. ದಕ್ಷಿಣ.  /ತೆಂಕಣ
3. ಪಶ್ಚಿಮ /ಪಡುವಣ
4. ಉತ್ತರ /ಬಡಗಣ

ಮೂಲೆಗಳು: 
1. ಆಗ್ನೇಯ 
2. ನೈರುತ್ಯ 
3. ವಾಯುವ್ಯ 
4. ಈಶಾನ್ಯ 

ವೇದಗಳು: 
1. ಋಗ್ವೇದ 
2. ಯಜುರ್ವೇದ 
3. ಸಾಮವೇದ 
4. ಅಥರ್ವಣ ವೇದ 

ಪುರುಷಾರ್ಥಗಳು: 
1. ಧರ್ಮ 
2. ಅರ್ಥ 
3. ಕಾಮ 
4. ಮೋಕ್ಷ 

ಪಂಚಭೂತಗಳು: 
1. ಗಾಳಿ 
2. ನೀರು 
3. ಭೂಮಿ 
4. ಆಕಾಶ 
5. ಅಗ್ನಿ 

ಪಂಚೇಂದ್ರಿಯಗಳು: 
1. ಕಣ್ಣು 
2. ಮೂಗು 
3. ಕಿವಿ 
4. ನಾಲಿಗೆ 
5. ಚರ್ಮ 

ಲಲಿತ ಕಲೆಗಳು: 
1. ಕವಿತ್ವ 
2. ಚಿತ್ರಲೇಖನ 
3. ನಾಟ್ಯ 
4. ಸಂಗೀತ 
5. ಶಿಲ್ಪ ಕಲೆ 

ಪಂಚಗಂಗೆಯರು: 
1. ಗಂಗಾ 
2. ಕೃಷ್ನಾ
3. ಗೋದಾವರಿ 
4. ಕಾವೇರಿ 
5. ತುಂಗಭದ್ರಾ 

ದೇವತಾ ವೃಕ್ಷಗಳು: 
1. ಮಂದಾರ 
2. ಪಾರಿಜಾತ 
3. ಕಲ್ಪವೃಕ್ಷ 
4. ಸಂತಾನ 
5. ಹರಿ ಚಂದನ 

ಪಂಚೋಪಚಾರಗಳು: 
1. ಸ್ನಾನ 
2. ಪೂಜೆ 
3. ನೈವೇದ್ಯ 
4. ಪ್ರದಕ್ಷಿಣೆ 
5. ನಮಸ್ಕಾರ 

ಪಂಚಾಮೃತಗಳು: 
1. ಹಸುವಿನ ಹಾಲು 
2. ಮೊಸರು 
3. ತುಪ್ಪ 
4. ಸಕ್ಕರೆ 
5. ಜೇನುತುಪ್ಪ 

ಪಂಚಲೋಹಗಳು: 
1. ಚಿನ್ನ 
2. ಬೆಳ್ಳಿ 
3. ತಾಮ್ರ 
4. ಸೀಸ 
5. ತವರ 

ಪಂಚರಾಮರು: 
1. ಅಮರಾವತಿ 
2. ಭೀಮವರಂ 
3. ಪಾಲಕೊಲ್ಲು 
4. ಸಾಮರ್ಲಕೋಟ
5. ದ್ರಾಕ್ಷಾರಾಮಂ 

ಷಡ್ರುಚಿಗಳು:
1. ಸಿಹಿ 
2. ಹುಳಿ 
3. ಕಹಿ 
4. ಒಗರು 
5. ಕಾರ 
6. ಉಪ್ಪು 

ಅರಿಷಡ್ವರ್ಗಗಳು:
1. ಕಾಮ 
2. ಕ್ರೋಧ 
3. ಲೋಭ 
4. ಮೋಹ 
5. ಮದ
6. ಮತ್ಸರ 

ಋತುಗಳು:
1. ವಸಂತ 
2. ಗ್ರೀಷ್ಮ 
3. ವರ್ಷ 
4. ಶರತ್ 
5. ಹೇಮಂತ 
6. ಶಿಶಿರ 

ಸಪ್ತ ಋಷಿಗಳು:
1. ಕಾಶ್ಯಪ 
2. ಗೌತಮ 
3. ಅತ್ರಿ 
4. ವಿಶ್ವಾಮಿತ್ರ 
5. ಭಾರದ್ವಾಜ 
6. ವಸಿಷ್ಠ 

ತಿರುಪತಿಯಲ್ಲಿನ ಸಪ್ತಗಿರಿಗಳು: 
1. ಶೇಷಾದ್ರಿ 
2. ನೀಲಾದ್ರಿ 
3. ಗರುಡಾದ್ರಿ
4. ಅಂಜನಾದ್ರಿ 
5. ವೃಷಭಾದ್ರಿ
6. ನಾರಾಯಣದ್ರಿ 
7. ವೇಂಕಟಾದ್ರಿ 

ಸಪ್ತ ವ್ಯಸನಗಳು:
1. ಜೂಜು 
2. ಮದ್ಯಪಾನ 
3. ಕಳ್ಳತನ 
4. ಬೇಟೆ 
5. ವ್ಯಭಿಚಾರ 
6. ದುಂದು ಖರ್ಚು 
7. ಕಠಿಣ ಮಾತು 

ಸಪ್ತ ನದಿಗಳು: 
1. ಗಂಗಾ 
2. ಯಮುನಾ 
3. ಸರಸ್ವತಿ 
4. ಗೋದಾವರಿ 
5. ಸಿಂಧು 
6. ನರ್ಮದಾ 
7. ಕಾವೇರಿ 

ನವಧಾನ್ಯಗಳು: 
1. ಗೋಧಿ 
2. ಭತ್ತ/ನೆಲ್ಲು 
3. ಹೆಸರು 
4. ಕಡಲೆ 
5. ತೊಗರಿ 
6. ನವಣೆ 
7. ಉದ್ದು 
8. ಹುರಳಿ 
9. ಅಲಸಂದೆ 

ನವರತ್ನಗಳು: 
1. ಮುತ್ತು
2. ಹವಳ
3. ಗೋಮೇಧಿಕ
4. ವಜ್ರ 
5. ಕೆಂಪು 
6. ನೀಲಿ 
7. ಕನಕ ಪುಷ್ಯ ರಾಗ 
8. ಪಚ್ಚೆ/ಮರಕತ
9. ವೈಡೂರ್ಯ

ನವ ಧಾತುಗಳು: 
1. ಚಿನ್ನ
2. ಬೆಳ್ಳಿ 
3. ಹಿತ್ತಾಳೆ 
4. ತಾಮ್ರ 
5. ಕಬ್ಬಿಣ 
6. ಕಂಚು 
7. ಸೀಸ
8. ತವರ 
9. ಕಾಂತ ಲೋಹ

ನವರಸಗಳು: 

1. ಹಾಸ್ಯ 
2. ಶೃಂಗಾರ 
3. ಕರುಣ 
4. ಶಾಂತ 
5. ರೌದ್ರ 
6. ಭಯಾನಕ 
7. ಬೀಭತ್ಸ
8. ಅದ್ಭುತ 
9. ವೀರ 

ನವದುರ್ಗೆಯರು: 
1. ಶೈಲ ಪುತ್ರಿ 
2. ಬ್ರಹ್ಮಚಾರಿಣಿ
3. ಚಂದ್ರ ಘಂಟ 
4. ಕೂಷ್ಮಾಂಡ 
5. ಸ್ಕಂದ ಮಾತೆ 
6. ಕಾತ್ಯಾಯನಿ
7. ಕಾಳರಾತ್ರಿ 
8. ಮಹಾಗೌರಿ
9. ಸಿದ್ಧಿದಾತ್ರಿ

ದಶ ಸಂಸ್ಕಾರಗಳು: 
1. ವಿವಾಹ 
2. ಗರ್ಭದಾನ
3. ಪುಂಸವನ
4. ಸೀಮಂತ
5. ಜಾತಕ ಕರ್ಮ 
6. ನಾಮಕರಣ 
7. ಅನ್ನಪ್ರಾಶನ
8. ಚೂಡಕರ್ಮ
9. ಉಪನಯನ 
10. ಸಮವರ್ತನ 

ದಶಾವತಾರಗಳು - ಕ್ಷೇತ್ರಗಳು 
1. ಶ್ರೀಮತ್ಸ್ಯಾವತಾರ ಕ್ಷೇತ್ರ - ನಾಗಲಾಪುರಂ ತಿರುಪತಿ ಜಿಲ್ಲೆ, ಆಂಧ್ರ ಪ್ರದೇಶ. 
2. ಶ್ರೀ ಕೂರ್ಮ ಕ್ಷೇತ್ರ - ಶ್ರೀ ಕೂರ್ಮಮ್, ಶ್ರೀಕಾಕುಳಂ ಜಿಲ್ಲೆ, ಆಂಧ್ರ ಪ್ರದೇಶ.
3. ಶ್ರೀ ಆದಿ ವರಾಹ ಕ್ಷೇತ್ರ - ತಿರುಮಲ, ತಿರುಪತಿ ಜಿಲ್ಲೆ, ಆಂಧ್ರಪ್ರದೇಶ.
4. ಶ್ರೀ ನರಸಿಂಹ ಕ್ಷೇತ್ರ - ಅಹೋಬಿಲಂ, ನಂದ್ಯಾಲ ಜಿಲ್ಲೆ, ಆಂಧ್ರಪ್ರದೇಶ.
5. ಶ್ರೀ ವಾಮನ ಕ್ಷೇತ್ರ - ತಿರುಕ್ಕೋಯಿಲೂರು ಕಳ್ಳಕುರಿಚಿ ಜಿಲ್ಲೆ ತಮಿಳುನಾಡು.
6. ಶ್ರೀ ಪರಶುರಾಮ ಕ್ಷೇತ್ರ - ಜನಪಾವ ಪರ್ವತ, ಇಂದೋರ್ ಜಿಲ್ಲೆ, ಮಧ್ಯ ಪ್ರದೇಶ.
7. ಶ್ರೀರಾಮ ಕ್ಷೇತ್ರ -  ಅಯೋಧ್ಯ, ಉತ್ತರ ಪ್ರದೇಶ.
8. ಶ್ರೀ ಬಲರಾಮ ಕ್ಷೇತ್ರ - ಗೋಕುಲಂ, ಮಥುರಾ ಜಿಲ್ಲೆ, ಉತ್ತರಪ್ರದೇಶ. 
9. ಶ್ರೀ ಕೃಷ್ಣ ಕ್ಷೇತ್ರ - ಮಥುರಾ ಉತ್ತರಪ್ರದೇಶ.
10. ಶ್ರೀ ಕಲ್ಕಿ ಕ್ಷೇತ್ರ - ಶಂಭಲ (ಅವತಾರವೆತ್ತುವ ಕ್ಷೇತ್ರ).

ಶ್ರೀ ವೆಂಕಟೇಶ್ವರ ಸ್ವಾಮಿ ಕಲಿಯುಗದೈವ -  ತಿರುಮಲ ಕಲಿಯುಗ ಕ್ಷೇತ್ರ.

*ಸೃಷ್ಟಿಯಲ್ಲಿ ಏಕೈಕ ಮತ್ತ್ಯಾವತಾರ ಕ್ಷೇತ್ರ ನಾಗಲಾಪುರ ಕ್ಷೇತ್ರವನ್ನು ದರ್ಶಿಸಿ, ಸೇವಿಸಿ*

ಜ್ಯೋತಿರ್ಲಿಂಗಗಳು: 
1. ಹಿಮಾಲಯ ಪರ್ವತ - ಕೇದಾರೇಶ್ವರ ಲಿಂಗ 
2. ಕಾಶಿ - ಕಾಶಿ ವಿಶ್ವೇಶ್ವರ 
3. ಮಧ್ಯಪ್ರದೇಶ - ಮಹಾಕಾಳೇಶ್ವರ ಲಿಂಗ, ಓಂಕಾರೇಶ್ವರ ಲಿಂಗ 
4. ಗುಜರಾತ್ - ಸೋಮನಾಥಲಿಂಗ, ನಾಗೇಶ್ವರ ಲಿಂಗ. 
5. ಮಹಾರಾಷ್ಟ್ರ - ಭೀಮಶಂಕರ, ತ್ರಯಂಬಕೇಶ್ವರ, ಘೃಷ್ಣೆಶ್ವರ, ವೈದ್ಯನಾಥೇಶ್ವರ.
6. ಆಂಧ್ರ ಪ್ರದೇಶ - ಮಲ್ಲಿಕಾರ್ಜುನ ಲಿಂಗ (ಶ್ರೀಶೈಲಂ )
7. ತಮಿಳುನಾಡು - ರಾಮಲಿಂಗೇಶ್ವರ

ವಾರಗಳು: 
1. ಭಾನು 
2. ಸೋಮ 
3. ಮಂಗಳ 
4. ಬುಧ 
5. ಗುರು 
6. ಶುಕ್ರ 
7. ಶನಿ 

ಚಂದ್ರಮಾನ ತಿಂಗಳುಗಳು: 
1. ಚೈತ್ರ 
2. ವೈಶಾಖ 
3. ಜೇಷ್ಠ 
4. ಆಷಾಢ 
5. ಶ್ರಾವಣ 
6. ಭಾದ್ರಪದ 
7. ಆಶ್ವಯುಜ 
8. ಕಾರ್ತೀಕ 
9. ಮಾರ್ಗಶಿರ 
10. ಪುಷ್ಯ
11. ಮಾಘ
12. ಫಾಲ್ಗುಣ

ರಾಶಿಗಳು: 
1. ಮೇಷ 
2. ವೃಷಭ 
3. ಮಿಥುನ 
4. ಕರ್ಕಾಟಕ 
5. ಸಿಂಹ 
6. ಕನ್ಯಾ 
7. ತುಲಾ 
8. ವೃಶ್ಚಿಕ 
9. ಧನಸ್ಸು 
10. ಮಕರ 
11. ಕುಂಭ 
12. ಮೀನ

ತಿಥಿಗಳು: 

1. ಪಾಡ್ಯ 
2. ಬಿದಿಗೆ 
3. ತದಿಗೆ 
4. ಚೌತಿ 
5. ಪಂಚಮಿ 
6. ಷಷ್ಠಿ 
7. ಸಪ್ತಮಿ 
8. ಅಷ್ಟಮಿ 
9. ನವಮಿ 
10. ದಶಮಿ 
11. ಏಕಾದಶಿ 
12. ದ್ವಾದಶಿ 
13. ತ್ರಯೋದಶಿ 
14. ಚತುರ್ದಶಿ 
15. ಅಮಾವಾಸ್ಯೆ/ಹುಣ್ಣಿಮೆ

ನಕ್ಷತ್ರಗಳು: 
1. ಅಶ್ವಿನಿ 
2. ಭರಣಿ 
3. ಕೃತಿಕಾ 
4. ರೋಹಿಣಿ 
5. ಮೃಗಶಿರ 
6. ಆರುದ್ರ 
7. ಪುನರ್ವಸು 
8. ಪುಷ್ಯ 
9. ಆಶ್ಲೇಷ 
10. ಮಖ 
11. ಪುಬ್ಬಾ
12. ಉತ್ತರ 
13. ಹಸ್ತ 
14. ಚಿತ್ತಾ 
15. ಸ್ವಾತಿ 
16. ವಿಶಾಖ 
17. ಅನುರಾಧ 
18. ಜೇಷ್ಠ 
19. ಮೂಲ 
20. ಪೂರ್ವಾಷಾಢ 
21. ಉತ್ತರಾಷಾಢ 
22. ಶ್ರವಣ 
23. ಧನಿಷ್ಠ
24. ಶತಭಿಷಾ 
25. ಪೂರ್ವಾಭಾದ್ರ 
26. ಉತ್ತರಾಭಾದ್ರ 
27. ರೇವತಿ

ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
(ಸಂಗ್ರಹ)

Wednesday, May 14, 2025

ರವಿ ಕುಮಾರ್ ಹರವೇ

"ಸಾವಿರ ಮೈಲಿಗಳ ಪ್ರಯಾಣ ಕೂಡ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ". ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಸಾಧಿಸುವ ಛಲವಿರಬೇಕು ಅಷ್ಟೇ, ಸಾಧನೆ ಹಾದಿಯಲ್ಲಿ ನೋವು ನಲಿವು, ಕಷ್ಟ ಸುಖ, ಸುಖ-ದುಃಖ, ಸೋಲು ಗೆಲುವು, ಕಹಿ ಸಿಹಿ, ಎಲ್ಲವೂ ಸರ್ವಸಾಮಾನ್ಯವಾಗಿ ಸಾಧನೆಯು ಉದ್ದಕ್ಕೂ ಉದ್ಭವಿಸುತ್ತವೆ, ಪ್ರತಿಯೊಬ್ಬ ಸರ್ವ ಶ್ರೇಷ್ಠ ಸಾಧಕರೂ ಈ ಎಲ್ಲಾ ಮೆಟ್ಟಿಲುಗಳನ್ನು ಮೆಟ್ಟಿ ಸಾಧನೆಗೈದಿರುತ್ತಾರೆ, ಅದಕ್ಕೆ ಸನ್ಮಾನ್ಯ, ಡಿ, ವಿ, ಗುಂಡಪ್ಪನವರು ಹೇಳುತ್ತಾರೆ, 
"ಯಶಸ್ಸು ಎಂಬುದು ಕಂಡ ಕಂಡಲ್ಲಿ ಬೆಳೆಯುವ ಕಾಡು ಕುಸುಮವಲ್ಲ ಎಡಬಿಡದ ಕಾಯಕದಿಂದ ಒಡಮೂಡಿ ಬರುವ ಮಂದಾರ ಪುಷ್ಪ"ಎಂದು.
ಸಾಧನೆ ಹಾದಿಯಲ್ಲಿ ಬರುವ ಪ್ರತಿ ಸಂದರ್ಭಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ, ನಾವು ಮಾಡುವ ಪ್ರತಿ ಕೆಲಸದಲ್ಲೂ ಭಗವಂತನ ಅನುಗ್ರಹ ಇರುತ್ತದೆ, ನಾವು ಏನನ್ನು ಬಯಸುತ್ತೇವೆಯೋ ಅದನ್ನು ನಮಗೆ ಈ ನಿಸರ್ಗ ಕೊಡುತ್ತದೆ, ನೇರ ಮಾರುಕಟ್ಟೆಯಲ್ಲಿ ನಿಮ್ಮ ಸುದೀರ್ಘ ಅನುಭವ ಯಶಸ್ಸಿಗೆ ಮೆಟ್ಟಲಾಗಿ ನಿಲ್ಲುತ್ತದೆ, ನಿಮ್ಮ ಅನುಭವ ನಮ್ಮಂತ ಎಷ್ಟೋ ಜನರ ಜ್ಞಾನಾರ್ಜನೆಗೆ ಸಹಕಾರವಾಗಲಿ, ಭಗವಂತ ಆ ಅದ್ಭುತ ಶಕ್ತಿಯನ್ನು ತಮಗೆ ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತೇವೆ.ನಿಮ್ಮ ಆಶಾಭಾವನೆಯ ಸಂದೇಶವನ್ನು ಓದಿ ಬಹಳ ಸಂತೋಷವಾಯಿತು.
 ದೇವರು ತಮಗೆ ಆಯಸ್ಸು, ಆರೋಗ್ಯ, ಐಶ್ವರ್ಯ ಸಕಲವನ್ನು ಅನುಗ್ರಹಿಸಲಿ ನಿಮ್ಮಿಂದ ಸರ್ವರಿಗೂ ಒಳಿತಾಗಲೆಂದು ಬಯಸುತ್ತೇವೆ. ವಂದನೆಗಳೊಂದಿಗೆ 🙏💐

Wednesday, April 16, 2025

ಗೋಮಾತೇ :

Brutality of cow killing !!!

    ಗೋಮಾತೇ :  
ಕಸಾಯಿಖಾನೆಗೆ  ನನ್ನನ್ನು  ಹಾಕಲಾಗುತ್ತದೆ ಮತ್ತು  4 ದಿನಗಳ ವರೆಗೂ ನನ್ನ ಹೊಟ್ಟೆಗೆ  ಏನೂ  ಕೊಡುವುದಿಲ್ಲ! 
 ಯಾಕೆಂದರೆ....ನನ್ನ  ರಕ್ತ ದಲ್ಲಿನ  ಹಿಮೋಗ್ಲೋಬಿನ್  ಕರಗಿ ಮಾಂಸ ದಲ್ಲಿ  ಆಂಟಿ ಕೊಳ್ಳಲಿ  ಎಂದು!
ನಂತರ  ನನ್ನನ್ನು  ಎಳೆದು ಕೊಂಡು ತರಲಾಗುತ್ತದೆ  ಎಕೆಂದರೆ....ನಾ  ಮೂರ್ಚೆ  ಹೋಗಿರುತ್ತೇನೇ.
ನನ್ನ  ಮೇಲೆ  200 digree Celsius  ನ  ಕುದಿಯುವ ನೀರುನ್ನು  ಸುರಿಯಲಾಗುತ್ತದೆ ......ನನ್ನಲ್ಲಿ  ಹಾಹಾಕಾರ  ಉಂಟಾಗುತ್ತದೆ .
ಆಗ ನನ್ನ  ಹಾಲು ಕುಡಿಯುವ  ನಿಮ್ಮನ್ನು (ಮನುಷ್ಯ)ನೆನೆಯುತ್ತೇನೆ !
ನಂತರ  ನನ್ನನ್ನು  ಕಠೋರವಾಗಿ  ದೊಣ್ಣೆ ಯಿಂದ  ಹೊಡೆಯ ಲಾಗುವುದು ....ಯಾಕೆಂದರೆ  ನನ್ನ  ಚರ್ಮ ಸುಲಭವಾಗಿ  ಬಿಡಿಸಿ ಕೊಳ್ಳಲಿ  ಎಂದು!
ನನ್ನ  ಎರಡು  ಕಾಲುಗಳನ್ನು ಕಟ್ಟಿ  ಉಲ್ಟಾ ನೇತು ಹಾಕುತ್ತಾರೆ ನಂತರ  ನನ್ನ  ಶರೀರದಿಂದ ಚರ್ಮವನ್ನು  ತೆಗೆದು ಹಾಕುತ್ತಾರೆ .
ಕೇಳಿ  ಭೂಮಿ ಮೇಲಿನ  ಜೀವಿಗಳೇ.......
ಈಗಲೂ  ನನ್ನ ಪ್ರಾಣ ಹೋಗಿರುವುದಿಲ್ಲ!!
ನಾನು ಕಾತರದ ಕಣ್ಣುಗಳಿಂದ ನೋಡುವೆ ಈ ಕಸಾಯಿಖಾನೆಯವರಲ್ಲಿ  ಮನುಷ್ಯತ್ವ ಜನ್ಮತಳೆಯುತ್ತದೆನೋ ಎಂದು! ಇಂತಹ  ಸಮಯದಲ್ಲೂ  ನನ್ನಿಂದ  ಪೋಷಣೆ ಗೊ0ಡ ಯಾರಾದರೂ ಮನುಷ್ಯ ನನ್ನನ್ನು  ಕಾಪಾಡುವುದಿಲ್ಲ...
ನನ್ನ ಚರ್ಮದ ಮೇಲೆ  ಆಸೆ ಇಟ್ಟುಕೊಂಡ ವರೆ....ದುಷ್ಟ ಕಸಾಯಿಖಾನೆಯವ ನನ್ನ ಜೀವವಿರು ವಾಗಲೇ ನನ್ನ  ಚರ್ಮ ತೆಗೆದು ಬಿಡುತ್ತಾರೆ.....ನಾನು ನರಳಿ ನರಳಿ ಹಂಬಲಿಸಿ ಪ್ರಾಣ ಬಿಡುತ್ತೇನೆ. 

ಇಂತಹ  ಪಾವನ ಪವಿತ್ರ ಭಾರತ ಭೂಮಿಯ ಮೇಲೆ ನನ್ನನ್ನು ಕಾಪಾಡಲು ಪಾಲನೆ ಮಾಡಲು  ಯಾವುದೇ ಧರ್ಮ  ಕಾನೂನು ಇಲ್ಲವೇ......
ನಿಮ್ಮಿಂದಾದ  ಕ್ರೂರವಾದ  ಅತ್ಯಾಚಾರವನ್ನು  ಸಹಿಸಿಯು ಕೂಡ  ನಾನು  ನಿಮಗೆ  'ಶಾಪ ' ವನ್ನು  ಕೊಡಲಾಗದು ..................
ಎಕೆಂದರೆ........ನಾನು ನಿನ್ನ  ತಾಯಿಯಲ್ಲ ವೇ....

ನೀವು  ಗೋಮಾತೇಯನ್ನು ಪ್ರೀತಿಸುವವರಾದರೇ ...
ಮತ್ತು  ಗೋಮಾತೆಯ ಹಾಲನ್ನು ಕೂಡಿದವರೇ ಆಗಿದ್ದರೆ......ಈ message ನ್ನು  share  ಮಾಡಿ  ಸ್ವಲ್ಪ ವಾದರೂ ಹಾಲಿನ ಋಣವನ್ನಾದರೂ  ಕಮ್ಮಿ ಮಾಡಿ ಕೊಳ್ಳಿ. 
ಹಿಂದೂಗಳೆಲ್ಲರ  ಒಂದೇ  ಕೂಗು....
ಇನ್ನು ಗೋಹತ್ಯೆ ಯನ್ನು  ಸಹಿಸಲಾಗದು..!

ಗೋಮಾತೆಯ ಈ ಪೀಡನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು 2 ನಿಮಿಷ ಸಮಯ ಕೊಟ್ಟು ಸ್ನೇಹಿತ ಬಂಧು ಗಳಿಗೆಲ್ಲ share  ಮಾಡಿ. 

ಗೋಮಾತೆಗೆ  ಜಯವಾಗಲಿ !......
ಜೈ  ಶ್ರೀ ಕೃಷ್ಣ!.....
ಜೈ ಶ್ರೀರಾಮ್!....
 please save cows 
and value  your humanity .

*ದೇವರು ನಮಗೆ ಏನು ಕೊಟ್ಟಿದ್ದಾರೆ.

*ದೇವರು ನಮಗೆ ಏನು ಕೊಟ್ಟಿದ್ದಾನೆ ಎನ್ನುವುದು ಮುಖ್ಯವಲ್ಲ. ಕೊಟ್ಟಿರುವುದನ್ನು ನಾವು ಹೇಗೆ ಬಳಸಿಕೊಂಡಿದ್ದೇವೆ ಎನ್ನುವುದೇ ಮುಖ್ಯ*

*ಶುಭೋದಯ*
ವಂದನೆಗಳೊಂದಿಗೆ 
ನಂಜುಂಡಸ್ವಾಮಿ

Wednesday, March 12, 2025

*ಬೇಸಿಗೆಯಲ್ಲಿ ಮೋಸಂಬಿ ರಸ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ, ಪ್ರಯೋಜನಗಳನ್ನು ತಿಳಿದು ನೀವು ವಿಸ್ಮಿತರಾಗುತ್ತೀರಿ.

*Health is wealth and Most Important Information*
*ಬೇಸಿಗೆಯಲ್ಲಿ ಮೋಸಂಬಿ ರಸ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ, ಪ್ರಯೋಜನಗಳನ್ನು ತಿಳಿದು ನೀವು ವಿಸ್ಮಿತರಾಗುತ್ತೀರಿ.

HEALTH is Wealth 
ಈಗ ಬೇಸಿಗೆ ಶುರುವಾಗಿದೆ. ಹೀಗಾಗಿ ಜನರಿಗೆ ಬಿಸಿಲಿನ ಸಮಸ್ಯೆ ಕಾಡಲಿದೆ. ಹವಾಮಾನ ಬದಲಾವಣೆಯು ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಆದ್ದರಿಂದ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇವುಗಳ ಪೈಕಿ ಒಂದು ಉತ್ತಮ ಪರಿಹಾರವೆಂದರೆ ಮೋಸಂಬಿ ರಸ.

*ಈ ದಿನಗಳಲ್ಲಿ ನಿಯಮಿತವಾಗಿ ಮೋಸಂಬಿ ರಸವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ...* 

1) ಮೋಸಂಬಿ ರಸ ದೇಹವನ್ನು ತಂಪಾಗಿಸುತ್ತದೆ. ಮೊಸಂಬಿಯಲ್ಲಿ ವಿಟಮಿನ್ ಎ, ಬಿ, ಸಿ ಕಂಡುಬರುತ್ತದೆ. ಮೋಸಂಬಿ ಮಕ್ಕಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

2) ಮೋಸಂಬಿ ಸೌಂದರ್ಯ ವರ್ಧಕವಾಗಿದೆ. ಮೋಸಂಬಿ ಪೌಷ್ಟಿಕ, ಸಿಹಿ, ರುಚಿಕರ, ರುಚಿಕರ, ಜೀರ್ಣಕಾರಿ, ದೀಪಕ, ಹೃದಯ ಉತ್ತೇಜಕ, ವೀರ್ಯವರ್ಧಕ ಮತ್ತು ರಕ್ತ ಸುಧಾರಕ ಗುಣಗಳನ್ನು ಹೊಂದಿದೆ. 

3) ಮೋಸಂಬಿ ರಸವನ್ನು ವಿವಿಧ ತಂಪು ಪಾನೀಯಗಳನ್ನು ತಯಾರಿಸಲು, ಆಹಾರಕ್ಕೆ ಪರಿಮಳ ಮತ್ತು ಸುವಾಸನೆಯನ್ನು ಸೇರಿಸಲು ಬಳಸಲಾಗುತ್ತದೆ. 

4) ಮೋಸಂಬಿ ರಸವು ವಿಶೇಷವಾಗಿ ದುರ್ಬಲ, ರೋಗಿಗಳು, ವೃದ್ಧರು ಮತ್ತು ಮಕ್ಕಳಿಗೆ ಉತ್ತೇಜನಕಾರಿಯಾಗಿದೆ. 

5) ತಾಜಾ ಮೋಸಂಬಿಯ ಸಿಪ್ಪೆ ಮುಖದ ಮೇಲಿನ ಮೊಡವೆ ಮತ್ತು ಮೊಡವೆಗಳನ್ನು ಹೋಗಲಾಡಿಸಲು ಇದು ಉಪಯುಕ್ತವಾಗಿದೆ. ಮೋಸಂಬಿ ಸಿಪ್ಪೆ ವಾತಹಾರಕವಾಗಿದೆ.

6) ಮೋಸಂಬಿ ರಸವು ಉತ್ತಮ ಜೀರ್ಣಕ್ರಿಯೆಗೆ ಸಹ ಪ್ರಯೋಜನಕಾರಿಯಾಗಿದೆ. ಮೋಸಂಬಿ ರಸವು ಅದರ ಪರಿಮಳ ಮತ್ತು ಆಮ್ಲದ ಕಾರಣದಿಂದಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

7) ಮೋಸಂಬಿ ರಸವನ್ನು ಪ್ರತಿದಿನ ಸೇವಿಸುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಮೋಸಂಬಿ ರಸವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಅನೇಕ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.

8) ಮೋಸಂಬಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಹಾಗಾಗಿ ಇದು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಜೇನುತುಪ್ಪದೊಂದಿಗೆ ಮೋಸಂಬಿ ರಸಪಾನವು ತೂಕ ನಷ್ಟಕ್ಕೆ ಸಹಾಯಕವಾಗಿದೆ. 

9) ಮೋಸಂಬಿ ರಸವು ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕೆಲವು ಹನಿ ಮೋಸಂಬಿ ರಸವನ್ನು ನೀರಿನಲ್ಲಿ ಹಾಕಿ ನಿಮ್ಮ ಕಣ್ಣುಗಳನ್ನು ತೊಳೆದರೆ ಯಾವುದೇ ಸೋಂಕಿನಿಂದ ನಿಮಗೆ ಪರಿಹಾರ ಸಿಗುತ್ತದೆ. 

10) ಮೋಸಂಬಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ ಮತ್ತು ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಮೋಸಂಬಿ ಜ್ಯೂಸ್ ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆ. ಇದರಿಂದ ಚರ್ಮದ ಕಾಂತಿ ಕೂಡ ಹೊಳೆಯುತ್ತದೆ. 

11) ಮೋಸಂಬಿ ರಸವನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಬೆವರಿನ ದುರ್ವಾಸನೆಯ ಸಮಸ್ಯೆ ದೂರವಾಗುತ್ತದೆ

*ನೆನಪಿಡಿ:* 
ಮೋಸಂಬಿರಸ ಕುಡಿಯುವುದಕ್ಕಿಂತ ಇಡಿ ಮೋಸಂಬಿಯ ತಿರುಳನ್ನು ತಿನ್ನುವುದು ಇನ್ನೂ ಹೆಚ್ಚಿನ ಲಾಭಗಳನ್ನು ನೀಡುತ್ತದೆ. ಆದ್ದರಿಂದ, ಮೋಸಂಬಿ ಅಥವಾ ಇತರ ಹಣ್ಣುಗಳ ರಸವನ್ನು ಮಾತ್ರ ಕುಡಿಯುವ ಬದಲು ಹಣ್ಣುಗಳನ್ನು ತಿನ್ನಿ. ಹಣ್ಣು ಹಾಗು ತರಕಾರಿಗಳನ್ನು ಕುಡಿಯುವುದಕ್ಕಿಂತ ತಿನ್ನುವುದೇ ಲೇಸು.

ವಂದನೆಗಳೊಂದಿಗೆ .

Tuesday, March 4, 2025

*ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಅನುಗ್ರಹ ಪ್ರಾಪ್ತಿ ?*

*ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಅನುಗ್ರಹ ಪ್ರಾಪ್ತಿ  ?*

ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗಿಯೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ.

*ರವಿಯ ಅನುಗ್ರಹ*  : ಬೆಳಗಿನ ಜಾವ ಬೇಗನೆ ಎದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ 'ಡಿ' ಮತ್ತು 'ಇ' ಪ್ರೊಟೀನ್ ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ. 

*ಚಂದ್ರನ ಅನುಗ್ರಹ*  : ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ.

*ಕುಜನ ಅನುಗ್ರಹ*  : ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ 'ಅನ್ನಂ ಬ್ರಹ್ಮ' ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು. 

*ಬುಧನ ಅನುಗ್ರಹ*  : ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು. 

*ಗುರುವಿನ ಅನುಗ್ರಹ*  : ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. 'ಕೋಶ ಓದಬೇಕು ಲೋಕ ಸುತ್ತಬೇಕು' ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು. ಗುರು ಹಿರಿಯರಿಗೆ ಗೌರವ ಕೊಡುವುದು ಅತ್ಯಂತ ಮುಖ್ಯ.

*ಶುಕ್ರನ ಅನುಗ್ರಹ*  : ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು. 

*ಶನಿಯ ಅನುಗ್ರಹ* : ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು. 

*ರಾಹುವಿನ ಅನುಗ್ರಹ*  : ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ. 

*ಕೇತುವಿನ ಅನುಗ್ರಹ*  : ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೋಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು.
ವಂದನೆಗಳೊಂದಿಗೆ

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ ?

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ? ​ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿಯನ್ನು ಸಂಪೂರ್ಣವಾಗಿ ...

Green World