*'ಅಹಂ'* ತಿಳಿಸಿತು ಅಲ್ಪ ಮಾನವ ನೀನೆಂದು.
*'ಅವಕಾಶ'* ತಿಳಿಸಿತು ಇಂಥಹ ಸಂದರ್ಭ ಮರಳಿ ಬಾರದೆಂದು.
*'ಆರೋಗ್ಯ'* ತಿಳಿಸಿತು ಅಯೋಗ್ಯ ನನ್ನನ್ನು ಮರೆಯದಿರೆಂದು.
*'ಒಂಟಿತನ'* ತಿಳಿಸಿತು ಕುಟುಂಬದ ಮೌಲ್ಯವೇನೆಂದು.
*'ಕಷ್ಟ'* ತಿಳಿಸಿತು ನೈಜ ಬದುಕು ಯಾವುದೆಂದು.
*'ಗರ್ವ'* ತಿಳಿಸಿತು ಬದುಕಿನ ಮರ್ಮ ಅರಿಯೆಂದು.
*'ಬಾಂಧವ್ಯ'* ತಿಳಿಸಿತು ಭಾವನೆಗಳ ಬೆಲೆ ಏನೆಂದು.
*'ಪ್ರೀತಿ-ವಿಶ್ವಾಸ'* ತಿಳಿಸಿತು ಇದೇ ನಿಜವಾದ ಬದುಕೆಂದು.
*'ಮಾರ್ಗದರ್ಶನ'* ತಿಳಿಸಿತು ನಿಜವಾದ ಬದುಕಿನ ದಾರಿಯಾವುದೆಂದು.
*'ಸ್ನೇಹ'* ತಿಳಿಸಿತು ಭಯ ಪಡಬೇಡ ಎಲ್ಲದಕ್ಕೂ ನಾನಿದ್ದೇನೆಂದು.
*'ಸಮಯ'* ತಿಳಿಸಿತು ಮತ್ತೆ ನಾನು ಸಿಗುವುದಿಲ್ಲ ವೆಂದು.
*'ಸಹಪಾಠಿ'* ಗಳು ತಿಳಿಸಿದರು ನಮ್ಮ ನಿಜ ಸಾಮರ್ಥ್ಯ ವೇನೆಂದು.
*'ಸೊಕ್ಕು'* ತಿಳಿಸಿತು ಸುಟ್ಟು ಹೋಗ್ತಿಯಾ ಎಚ್ವರವೆಂದು.
*'ಹಣ'* ತಿಳಿಸಿತು ಉಳಿತಾಯದ ಮೌಲ್ಯವೇನೆಂದು.
*'ಹಸಿವು'* ತಿಳಿಸಿತು ತುತ್ತಿನ ಮೌಲ್ಯವೇನೆಂದು.
ನನ್ನ ಮನಸ್ಸು ಹೇಳಿತು ಯಾರು ನಿಷ್ಕಲ್ಮಶ ಪ್ರೀತಿ, ಪ್ರಾಮಾಣಿಕತೆ, ಮತ್ತು ಆತ್ಮಸಾಕ್ಷಿಯಾಗಿ ಜೀವನ ನಡೆಸುವರೋ ಅದುವೇ ನಿಜವಾದ ಬದುಕು ಇದನ್ನು ಬಿಟ್ಟು ಬೇರೇನೂ ಇಲ್ಲವೆಂದು.
*ನಮ್ಮ ಆತ್ಮಸಾಕ್ಷಿ ಒಪ್ಪುವಂತೆ ನಾವು ಬದುಕಿದರೆ ಅದುವೇ ನಿಜವಾದ ಸಹಜ ಜೀವನ.
No comments:
Post a Comment
welcome to dgnsgreenworld Family