*ಮದುವೆಯಾಗಿದ್ದರೆ ಮರೆಯದೇ ಓದಿ.*
ಜೀವನವು ನಮಗಿರುವುದು ಒಂದು ಬಾರಿ ಮಾತ್ರ. ಬಂದು ಹೋಗುವ ಈ ಬದುಕಿನಲ್ಲಿ ಆರೂ ಸಂಗಡ ಬಾಹೋರಿಲ್ಲ. ಸತ್ಯವೇ. ಆದರೆ?!?. ಬನ್ನಿ ಮನವಿಟ್ಟು ಓದಿರಿ.
ಒಂದುದಿನ, ದೊಡ್ಡವರಿಗೆ ಏರ್ಪಡಿಸಿದ್ದ ಮನೋಶಾಸ್ತ್ರ ತರಗತಿಯಲ್ಲಿ ಮನಶಾಸ್ತ್ರ ಶಿಕ್ಷಕ 'ಇವತ್ತು ಒಂದು ಆಟ ಆಡೋಣ' ಎನ್ನುತ್ತಾನೆ.
'ಯಾವ ಆಟ?' ಎಂದು ಪ್ರಶ್ನಿಸಿದಾಗ, ವಿದ್ಯಾರ್ಥಿನಿಯೊಬ್ಬಳಿಗೆ ಬರಲು ಹೇಳುತ್ತಾನೆ.
ಹೇಮಾ ಎಂಬ ಹೆಣ್ಣುಮಗಳು ಎದ್ದು ಬರುತ್ತಾಳೆ.
ಹೇಮಾ ನೀನು
ನಿನ್ನ ಜೀವನದಲ್ಲಿ ತುಂಬಾ ಮುಖ್ಯ ಅನಿಸುವ 30 ಜನರ ಹೆಸರುಗಳನ್ನು ಬೋರ್ಡ್ ಮೇಲೆ ಬರೆಯಬೇಕು ಎಂದರು ಶಿಕ್ಷಕರು.
ಹೇಮಾ 30 ಹೆಸರು ಬರೆದಳು. ಅದರಲ್ಲಿ ಆಕೆಯ ಕುಟುಂಬದ ಸದಸ್ಯರು, ಸಂಬಂಧಿಕರು, ಗೆಳೆಯ-ಗೆಳತಿಯರು, ಸಹೋದ್ಯೋಗಿಗಳು ಹಾಗೂ ನೆರೆಹೊರೆಯವರ ಹೆಸರುಗಳಿದ್ದವು.
'ಇವುಗಳ ಪೈಕಿ ಯಾವುದಾದರೂ ಐದನ್ನು ಅಳಿಸು'
ಆಕೆ ತನ್ನ ಸಹೋದ್ಯೋಗಿಗಳ ಹೆಸರು ಅಳಿಸಿದಳು.
ಅತಿಮುಖ್ಯ ಅನಿಸದ ಇನೈದು ಹೆಸರುಗಳನ್ನು ಅಳಿಸು'.
ತನ್ನ ನೆರೆಹೊರೆಯವರ ಹೆಸರುಗಳನ್ನು ಅಳಿಸಿದಳು ಹೇಮಾ.
ಹೀಗೆ ಅಳಿಸುವ ಕೆಲಸ ಮುಂದುವರೆದು, ಕೊನೆಗೆ ಕೇವಲ ನಾಲ್ಕು ಹೆಸರುಗಳು ಮಾತ್ರ ಬೋರ್ಡ್ ಮೇಲೆ ಉಳಿದವು. ಅವು, ಹೇಮಾಳ ತಂದೆತಾಯಿ, ಗಂಡ ಮತ್ತು ಮಗನದಾಗಿತ್ತು.
ಇಷ್ಟೊತ್ತಿಗೆ ಇಡೀ ಕ್ಲಾಸು ಸ್ತಬ್ದವಾಗಿತ್ತು. ಏಕೆಂದರೆ, ಈ ಅಳಿಸುವ ಆಟ ಕೇವಲ ಹೇಮಾಳೊಬ್ಬಳಿಗೇ ಸಂಬಂಧಿಸಿದ್ದಲ್ಲ ಎಂಬುದು ಅಲ್ಲಿರುವ ಎಲ್ಲರಿಗೂ ಬಹುತೇಕ ಸ್ಪಷ್ಟವಾಗಿತ್ತು.
ಈಗ, ಶಿಕ್ಷಕ ಇವುಗಳೊಳಗೆ ಅತೀ ಪ್ರಮುಖವೆನಿಸದ ಇನ್ನೆರಡು ಹೆಸರು ಅಳಿಸಲು ಹೇಳಿದ.
ಇದು ನಿಜಕ್ಕೂ ಸವಾಲಿನದಾಗಿತ್ತು. ಅತ್ಯಂತ ಕಷ್ಟದಿಂದ ಹೇಮಾ ತನ್ನ ತಂದೆ ತಾಯಿಗಳ ಹೆಸರುಗಳನ್ನು ಅಳಿಸಿದಳು.
ಉಳಿದಿದ್ದು ಗಂಡ ಮತ್ತು ಮಗನ ಹೆಸರುಗಳು ಮಾತ್ರ.
'ದಯವಿಟ್ಟು ಹೇಮಾ, ಇನ್ನೊಂದು ಹೆಸರನ್ನು ಅಳಿಸು, ಇಲ್ಲಿಗೆ ಆಟವನ್ನು ಮುಗಿಸೋಣ ಎಂದರು.
ನಿಸ್ತೇಜಳಾದಳು ಹೇಮಾ. ಕೈಗಳು ನಡುಗಲಾರಂಭಿಸಿದವು. ಕಣ್ಣುಗಳು ತುಂಬಿ ಬಂದವು. ಅಳುತ್ತಲೇ ಆಕೆ ತನ್ನ ಮಗನ ಹೆಸರನ್ನು ಅಳಿಸಿದಳು. ನಂತರ ಜೋರಾಗಿ ಅತ್ತುಬಿಟ್ಟಳು.
ಹೇಮಾಳನ್ನು ಆಕೆಯ ಆಸನದಲ್ಲಿ ಕುಳಿತುಕೊಳ್ಳಲು ಹೇಳಿದ ಶಿಕ್ಷಕ ತರಗತಿಯನುದ್ದೇಶಿಸಿ ಕೇಳಿದ:
'ನಿನ್ನ ಗಂಡನ ಹೆಸರನ್ನಷ್ಟೇ ಏಕೆ ಉಳಿಸಿಕೊಂಡೆ?!.ತಂದೆ ತಾಯಿ ನಿನಗೆ ಜನ್ಮವಿತ್ತು, ಸಾಕಿ ಸಲಹಿದವರು. ಇನ್ನು ಒಬ್ಬ ಮಗನಿಗೆ ನೀನೇ ಜನ್ಮವಿತ್ತಿದ್ದೀ. ಅವರ್ಯಾರೂ ನಿನಗೆ ಮತ್ತೆ ಸಿಗುವವರಲ್ಲ. ಆದರೆ, ಬೇಕೆಂದರೆ ಬೇರೊಬ್ಬನನ್ನು ನೀನು ಗಂಡನನ್ನಾಗಿ ಮಾಡಿಕೊಳ್ಳುವ ಅವಕಾಶ ಇದ್ದೇ ಇದೆ'.
ಇಡೀ ತರಗತಿ ಉಸಿರು ಬಿಡದೇ ಹೇಮಾಳ ಉತ್ತರಕ್ಕಾಗಿ ಕಾಯುತ್ತಿತ್ತು.
ಹೇಮಾ ಶಾಂತಳಾಗಿ, ನಿಧಾನವಾಗಿ ಉತ್ತರಿಸಿದಳು:
ಒಂದಿಲ್ಲೊಂದು ದಿನ ತಂದೆತಾಯಿ ನನ್ನನ್ನು ಬಿಟ್ಟು ಹೋಗುವರು.ಹೋಗಬೇಕಾಗುವುದು.
ಮಗನು ಕೂಡಾ ದೊಡ್ಡವನಾದ ಮೇಲೆ ತನ್ನ ಓದು, ತನ್ನ ಕೆಲಸ, ತನ್ನ ಸಂಸಾರದ ಹೊಣೆಗಾರಿಕೆ, ಅಥವಾ ಇತರ ಕಾರಣಗಳಿಗಾಗಿ ನನ್ನನ್ನು ಬಿಟ್ಟು ಹೋಗಬಹುದು.
'ಆದರೆ, ಗಂಡ ಜೀವನದುದ್ದಕ್ಕೂ ನನ್ನ ಜೊತೆಗೇ ಇರುವವನು'.ಒಮ್ಮೆ ವಿವಾಹಿತಳಾದ ಹೆಣ್ಣು ಸರ್ವಸ್ವವನ್ನೂ ಅರ್ಪಿಸಿದ ಮೇಲೆ ಅನ್ಯ ವಿಷಯಗಳನ್ನು ಅಪೇಕ್ಷಿಸಳು.
ಇಡೀ ತರಗತಿ ಎದ್ದು ನಿಂತು ಚಪ್ಪಾಳೆ ತಟ್ಟಿತು.
ಇದೇ ಜೀವನದ ಸತ್ಯ. ಆದ್ದರಿಂದ, ನಿಮ್ಮ ಸಂಗಾತಿಯೇ ಮುಖ್ಯ. ಇದು ಹೆಂಡತಿಯರಿಗಷ್ಟೇ ಅಲ್ಲ, ಗಂಡಂದಿರಿಗೂ ಅನ್ವಯಿಸುತ್ತದೆ.
ವಂದನೆಗಳೊಂದಿಗೆ .
No comments:
Post a Comment
welcome to dgnsgreenworld Family