www.dgnsgreenworld.blogspot.com

Thursday, October 3, 2024

*ಜೀವನದಲ್ಲಿ ದುಃಖಕ್ಕೆ ಯಾರು ಕಾರಣ?*

*ಜೀವನದಲ್ಲಿ ದುಃಖಕ್ಕೆ ಯಾರು  ಕಾರಣ?*

ದೇವರೇ?                         ಅಲ್ಲ 
ಗ್ರಹ -ನಕ್ಷತ್ರಗಳೇ?             ಅಲ್ಲ 
ಭಾಗ್ಯವೇ?                        ಅಲ್ಲ 
ಸಂಬಂಧಿಗಳೇ?                ಅಲ್ಲ 
ನೆರೆಹೊರೆಯವರೇ?          ಅಲ್ಲ 
ಸರಕಾರವೇ?                    ಅಲ್ಲ 

ನಮ್ಮ ದುಃಖಗಳಿಗೆ ನಾವೇ 
ಸ್ವಯಂ ಜವಾಬ್ದಾರರು 

ತಲೆನೋವು, ಬಿ ಪಿ ಮುಂತಾದವುಗಳಿಗೆ 
ಕಾರಣ -ಅನಗತ್ಯ ವಿಚಾರಗಳು 

ಹೊಟ್ಟೆನೋವು, ಮತ್ತಿತರ ತೊಂದರೆಗಳಿಗೆ ಕಾರಣ -ತಿನ್ನಬಾರದ್ದನ್ನು ತಿನ್ನುವುದು  

ಸಾಲ ಹೆಚ್ಚಲು ಕಾರಣ, -ಅವಶ್ಯಕತೆ ಮೀರಿ ಖರ್ಚು ಮಾಡುವುದು 

ಕೋರ್ಟ್ ಸುತ್ತುವಿಕೆ ಕಾರಣ
-ಪ್ರತಿಷ್ಠೆ, ಅಹಂಕಾರಗಳು 

ದುರ್ಬಲ /ದಪ್ಪ /ರೋಗಮಯ 
ಶರೀರಕ್ಕೆ ಕಾರಣ -ತಪ್ಪು ಜೀವನ ಶೈಲಿ 

ಅನಗತ್ಯ ವಿವಾದಗಳಿಗೆ ಕಾರಣ -ಹೆಚ್ಚು ಮತ್ತು ವ್ಯರ್ಥ ಮಾತನಾಡುವಿಕೆ 

ಮೇಲಿನ ಕಾರಣಗಳಲ್ಲದೇ ಇನ್ನೂ ನೂರಾರು ಕಾರಣಗಳಿರಬಹುದು. ನಾವು ದೋಷವನ್ನು ಇನ್ನೊಬ್ಬರ ಮೇಲೆ ಹೊರಿಸುತ್ತೇವೆ. ಕಷ್ಟಗಳ ಕಾರಣವನ್ನು ಸೂಕ್ಷ್ಮ ವಾಗಿ ಪರಿಶೀಲಿಸಿದರೆ ಅವುಗಳ ಹಿಂದೆ ನಮ್ಮ ಮೂರ್ಖತೆಯೇ ಅಡಗಿರುತ್ತದೆ. 
ದೂರು -ದುಮ್ಮಾನಗಳನ್ನು ಉಸಿರು ಇರುವ ತನಕ ಮಾಡಬಹುದಷ್ಟೆ 

ಕೊನೆಯಲ್ಲಿ ಉಳಿಯುವುದು 
ಪಶ್ಚಾತಾಪ ಮಾತ್ರ 

ಧರ್ಮಮಯ ಬದುಕು 
ಜೀವನಕೆ ಬೆಳಕು 

ಪ್ರಾಮಾಣಿಕವಾಗಿರಿ 
ಸಂತೋಷವಾಗಿರಿ 
ನಗುನಗುತ್ತಾ ಇರಿ... ಮುದ್ದು ಮಕ್ಕಳ ತರಹ

No comments:

Post a Comment

welcome to dgnsgreenworld Family

29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .

29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .

Green World