www.dgnsgreenworld.blogspot.com

Monday, September 9, 2024

ಬುದ್ಧ 2600 ವರ್ಷಗಳ ಹಿಂದೆ ಹೇಳಿದ್ದು, "ಇತರರಿಗಾಗಿ ಬದುಕುವವರು ನಿಜವಾಗಿಯೂ ಬದುಕುತ್ತಾರೆ,"

ಇತರರಿಗಾಗಿ~ 
                 ಬದುಕಿರಿ~
ಅದೇ ನಿಜವಾದ *ಯಶಸ್ಸು*

ಪ್ರೊಫೆಸರ್ ಒಬ್ಬರು ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದವೊಂದರಲ್ಲಿ  "ಯಶಸ್ಸು" ಎಂದರೇನು?  ಎಂದು ಕೇಳಿದರು.ಆಗ ಯುವತಿಯೊಬ್ಬಳು, "ಯಶಸ್ಸು" ಎಂದರೆ ಹಣ ಮಾಡುವುದು!  ಎಂದಳು.

ಆಗ ಪ್ರಾಧ್ಯಾಪಕರು "ಇಪ್ಪತ್ತು ವರ್ಷಗಳ ಹಿಂದೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?" ಎಂದು ಕೇಳಿದಾಗ  ಯಾರೂ ಉತ್ತರಿಸಲಿಲ್ಲ.
(ಏಕೆಂದರೆ ಇದು ಪ್ರತಿ ವರ್ಷ ಬದಲಾಗುತ್ತದೆ)

ಬದುಕಲು  ಹಣ ಬೇಕು, ಆದರೆ ಹಣವೇ ಬದುಕಲ್ಲವಲ್ಲ!  
ಹಾಗಾದರೆ "ಯಶಸ್ಸು" ಎಂದರೆ ಹಣ ಗಳಿಸುವುದಲ್ಲ.
   
ಮತ್ತೊಬ್ಬ ಯುವಕ ಎದ್ದುನಿಂತು ಯಶಸ್ಸು ಎಂದರೆ ಶಕ್ತಿ/ಬಲ ಎಂದನು.

ಹಾಗಿದ್ದಲ್ಲಿ ಅಲೆಕ್ಸಾಂಡರ್, ನೆಪೋಲಿಯನ್, ಮುಸೊಲಿನಿ, ಹಿಟ್ಲರ್, ಸ್ಟಾಲಿನ್, ಬಿನ್ ಲಾಡೆನ್... ಇವರೆಲ್ಲ ಬಲಿಷ್ಠರಾಗಿದ್ದು, ಜಗತ್ತನ್ನೇ ಗೆಲ್ಲಬೇಕೆಂದುಕೊಂಡವರು, ಅವರುಗಳು ಜೀವನದಲ್ಲಿ ಸುಖವಾಗಿರಬಹುದಿತ್ತು ಅಲ್ಲವೇ?  ಅವರ ಜೀವನವು ಹೇಗೆ ಸಾಗಿತು ಮತ್ತು ಕೊನೆಗೊಂಡಿತು ಎಂಬುದನ್ನು ಇತಿಹಾಸ ಹೇಳುತ್ತದೆ ಅಲ್ಲವೇ?  
ತನ್ನ ಶಕ್ತಿ ಮತ್ತು ಪಂಚ್‌ಗಳಿಂದ ಪರಾಕ್ರಮಿಗಳನ್ನು ಸೋಲಿಸಿದ ವಿಶ್ವ ಚಾಂಪಿಯನ್ ಬಾಕ್ಸರ್ ಮುಹಮ್ಮದ್ ಅಲಿ, ಕೆಲವು ವರ್ಷಗಳ ನಂತರ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ,ಮತ್ತು ಒಂದು  ಕಾಫಿಯ ಕಪ್ಪನ್ನು ಸಹ ಎತ್ತಿಕೊಳ್ಳಲು ಸಾಧ್ಯವಾಗಲಿಲ್ಲ. 
ಆದ್ದರಿಂದ "ಯಶಸ್ಸು" ಎಂದರೆ ಶಕ್ತಿ/ಬಲ ಅಂತೂ ಅಲ್ಲ.

ಮತ್ತೋರ್ವ ಯುವತಿ, "ಯಶಸ್ಸು" ಎಂದರೆ ಕೀರ್ತಿ ಮತ್ತು ಸೌಂದರ್ಯ!ಎಂದಳು.

ಹಾಗಾದರೆ ಕೇಟ್ ,ಮಾಸ್, ಸೋಫಿಯಾ ಲಾರೆನ್, ಮರ್ಲಿನ್ ಮನ್ರೋ...ರಂತಹ ಲೌಕಿಕ ಸುಂದರಿಯರ ಬದುಕು ಎಷ್ಟು ನೋವಿನಿಂದ ಕೂಡಿತ್ತು ಎಂಬುದು ಹಲವರಿಗೆ ತಿಳಿದಿಲ್ಲ.!
ಭಾರತದ ಮಟ್ಟಿಗೆ ಹೇಳುವುದಾದರೆ ಪರ್ವೀನ್ ಬಾಬಿ ಎಂಬ ಹಿಂದಿ ನಾಯಕಿ ಇದ್ದಳು.  ಅಮಿತಾಬ್ ಬಚ್ಚನ್ ಸೇರಿದಂತೆ ಹಿಂದಿ ಚಿತ್ರರಂಗದ ಪ್ರತಿಯೊಬ್ಬರೂ ಆಕೆಯನ್ನು ಮದುವೆಯಾಗಲು ಪರದಾಡುತ್ತಿದ್ದರು, ಅಷ್ಟು ಸುಂದರಿ.  ಡ್ಯಾನಿ, ಕಬೀರ್ ಬೇಡಿ ಮತ್ತು ಮಹೇಶ್ ಭಟ್ ಅವರೊಂದಿಗಿನ ಅವಳ ಪ್ರಣಯ ಮತ್ತು ಮದುವೆಗಳು ವಿಫಲವಾದವು,ಮತ್ತು ನಂಬಿದವರೇ ಅವಳನ್ನು ಮೋಸಗೊಳಿಸಿದಾಗ ಕುಡಿತದ ಚಟಕ್ಕೆ ಬಿದ್ದು, ಒಂದು ಹಂತದಲ್ಲಿ ಅವಳ ಕಾಲಿಗೆ ಹುಣ್ಣಾದಾಗ, ಅದು ದೇಹಕ್ಕೆಲ್ಲ ವ್ಯಾಪಿಸಿತು. ಯಾವ ದೇಹಕ್ಕೆ ಅದೆಷ್ಟು ಗಂಡಸರು ಹುಚ್ಚೆದ್ದು ಕುಣಿಯುತ್ತಿದ್ದರೋ, ಅದೇ ದೇಹ ಅವಳಿಗೆ ವಿಚಿತ್ರ ಕಾಯಿಲೆಯೊಂದು  ಬಂದು
ದುರ್ವಾಸನೆ ಬೀರುತ್ತಿತ್ತೆಂದು ಜನ ಆಕೆಯನ್ನು ಹಗ್ಗದಿಂದ ಕಟ್ಟಿ, ಮುಂಬೈನ ಬೀದಿಗಳಲ್ಲಿ ಎಳೆದೊಯ್ದು ಆಕೆಯ ಮನೆಗೆ ಕರೆದೊಯ್ದರು.ಕೊನೆಗೆ, ಆಕೆಯ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ದೂರು ನೀಡಿದಾಗ, ಕಾರ್ಪೊರೇಷನ್ನವರು ಬಂದು 3 ದಿನಗಳ ನಂತರ ಆಕೆಯನ್ನು ಶವವಾಗಿ ಕಂಡು ಹೂತುಹಾಕಿದರು.  
ಹಾಗಾಗಿ  ಸೌಂದರ್ಯ ಮತ್ತು ಖ್ಯಾತಿ/ಕೀರ್ತಿ *ಯಶಸ್ಸು* ಎನಿಸದು ಎಂದರು ಪ್ರೊಫೆಸರ್ .

 ಆಗ ಇನ್ನೊಬ್ಬರು "ಅಧಿಕಾರ,ಪದವಿ" ಗಳೇ ಯಶಸ್ಸು ಎಂದರು.

ಹಾಗಾದರೆ ಈ ದೇಶವನ್ನು ಆಳಿದ ಎಲ್ಲಾ ಪ್ರಧಾನಿಗಳ ಹೆಸರನ್ನು ಕಾಗದದ ಮೇಲೆ ಬರೆಯಿರಿ!" ಎಂದರು ಪ್ರೊಫೆಸರ್ .          ಆದರೆ 50ರಲ್ಲಿ 39 ಮಂದಿಗೆ ಎಲ್ಲ  ಪ್ರದಾನಿಗಳ ಹೆಸರನ್ನು ಬರೆಯಲಾಗಲಿಲ್ಲ.
ಆದ್ದರಿಂದ  ಅಧಿಕಾರ,ಪದವಿಗಳೂ "ಯಶಸ್ಸು" ಅಲ್ಲ ಎಂದಾಯಿತು. 
ಕೆಲವು ಕ್ಷಣ ನೀರವ ಮೌನ ಆವರಿಸಿತು,,,,,,
ಎಲ್ಲರೂ ಉತ್ತರಿಸದೆ ಸುಮ್ಮನಿರುವಾಗ, ಪ್ರೊಫೆಸರ್
"ನಿಮಗೆ ನಿಮ್ಮ ಅಜ್ಜ,ಅಜ್ಜಿಯ ಹೆಸರುಗಳು ಗೊತ್ತಾ?" ಎಂದರು.

 ಎಲ್ಲರೂ ‘ಗೊತ್ತು’ ಎಂದರು.

ಅವರ ತಾತ ಅಜ್ಜಿಯರ ಹೆಸರು ನಿಮಗೆ ತಿಳಿದಿದೆಯೇ?"  ಎಂದು ಕೇಳಿದಾಗ ಐದು ಜನ ಮಾತ್ರ "ನನಗೆ ಗೊತ್ತು" ಎಂದರು.
ಆಗ ಪ್ರೊಫೆಸರ್ ಮುಂದುವರೆದು
ಅವರ ತಾತ ಅಜ್ಜಿಯರ ಹೆಸರು ನಿಮಗೆ ತಿಳಿದಿದೆಯೇ?" ಎಂದರು.
ಅವರು ‘ಗೊತ್ತಿಲ್ಲ’ ಎಂದರು.

 ಆಗ ಪ್ರೊಫೆಸರ್ ಕೇಳಿದರು, "ಶ್ರೀರಾಮ, ಶ್ರೀಕೃಷ್ಣ, ಬುದ್ಧ, ಆದಿಶಂಕರ, ಎಲ್ಲರೂ...?"

"ಒಹ್ ನಮಗೆ ಗೊತ್ತು!" ಎಂದು ಎಲ್ಲರೂ ಒಕ್ಕೊರಲಿನಿಂದ  ಉತ್ತರಿಸಿದರು.

ನಿಮ್ಮ ಸ್ವಂತ ತಾತ ಅಜ್ಜಿಯರು ನಿಮಗೆ ನೆನಪಿರುವುದಿಲ್ಲ, ಆದರೆ ನೀವು ಎಂದಿಗೂ ಭೇಟಿಯಾಗದ ಈ ಎಲ್ಲ ಜನರನ್ನು ಹೇಗೆ ನೆನಪಿಟ್ಟುಕೊಂಡಿರುವಿರಿ????"  

ಪ್ರೊಫೆಸರ್ ನೀಡಿದ  ಉಪನ್ಯಾಸದಿಂದ ತುಂಬಾ ಪ್ರಭಾವಿತರಾದ ಒಬ್ಬ ವಿದ್ಯಾರ್ಥಿ  ಹೇಳಿದ ಉತ್ತರ: “ಸರ್, ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ_ ಇಂದಿಗೂ ರಾಮ, ಕೃಷ್ಣ, ಬುದ್ಧನ ಹೆಸರುಗಳು ನೆನಪಾಗುತ್ತವೆ...  ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಮಾತ್ರ ಬದುಕುವವರನ್ನು ಜಗತ್ತು ಮರೆತುಬಿಡುತ್ತದೆ, ಆದರೆ ಇತರರಿಗಾಗಿ ಬದುಕುವವರನ್ನು ಜಗತ್ತು ಯಾವಾಗಲೂ ನೆನಪಿಸಿಕೊಳ್ಳುತ್ತದೆ.  
ಇದೇ ನಿಜವಾದ ಯಶಸ್ಸು! ”

ಅದನ್ನೇ ಬುದ್ಧ 2600 ವರ್ಷಗಳ ಹಿಂದೆ ಹೇಳಿದ್ದು, "ಇತರರಿಗಾಗಿ ಬದುಕುವವರು ನಿಜವಾಗಿಯೂ ಬದುಕುತ್ತಾರೆ,"

ವಂದನೆಗಳೊಂದಿಗೆ 
 ಇತಿ 
 ನಂಜುಂಡಸ್ವಾಮಿ 

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World