www.dgnsgreenworld.blogspot.com

Tuesday, January 17, 2023

ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!

ಮನೆಸುತ್ತ ಕಾಂಪೌಂಡು, ಗೇಟು ಭದ್ರ, ಒಳಗಿರುವ ಮನಸುಗಳೇ ಏಕೋ ಛಿದ್ರ ಛಿದ್ರ...! 

ಬಂಧುಗಳೇ ಬಾರದ, ಸ್ನೇಹಿತರೂ ಸೇರದ ಮನೆಗಳ ಮುಂದೆ ಸದಾ ಕಾವಲುಗಾರ...! 

 ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ, ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ...! 

 ಅಡುಗೆ ಮನೆ, ಸದಾ ಖಾಲಿ ಖಾಲಿ ಇರುತ್ತೆ. ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ...! 

 ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ... ಎತ್ತರ... ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ...ಹತ್ತಿರ...! ಸಂತೋಷ ಏನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ...! 

 ಅಂದು...ಬಿಸಿಲು, ಮಳೆ, ಚಳಿಗೆ ಮೈ ಒಗ್ಗಿತ್ತು, ಮನೆ ತಣ್ಣಗಿತ್ತು. ಒಲೆ ಹೊಗೆಯಾಡುತ್ತಿತ್ತು. ಬಿಸಿನೀರ ಹಂಡೆ ಹಬೆಯಾಡುತ್ತಿತ್ತು...! 

 ಕಣಜದ ತುಂಬಾ... ದವಸ ಧಾನ್ಯ ತುಂಬಿತ್ತು. ಬಂಧುಬಳಗದ ನಡುವೆ ಅನುಬಂಧವಿತ್ತು 

 ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು...! 
 ಮನೆ ಚಿಕ್ಕದಾದ್ರೂ, ಮನಸು ಚೊಕ್ಕವಾಗಿತ್ತು...! 

 ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...ನಲಿವಿತ್ತು, ಒಲವಿತ್ತು, ಸಂತಸದ ಸೆಲೆಯಿತ್ತು...! 

 ಮುಖ್ಯ ಬಾಗಿಲು ಚಿಕ್ಕದಿತ್ತು, ತಲೆಬಾಗಬೇಕಿತ್ತು.

ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು 

 ಮಾಡು ಚಿಕ್ಕದಿತ್ತು, ಬದುಕು ದೊಡ್ಡದಿತ್ತು. ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು.ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು...! 

 ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ. ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು.ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು. 

 ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು...ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ...! 

 ಕೆಲಸಕ್ಕೆ ಶ್ರದ್ಧೆ, ದೇವರ ಮೇಲೆ ನಂಬಿಕೆಯಿತ್ತು...! 
 ಸಾವಿಗೂ ಸಹ ಮನೆಯೇ ಸಾಕ್ಷಿ ಯಾಗುತ್ತಿತ್ತು...!

 ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು.ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು....! 

 ನೆಂಟರು ಬಂದರೆ, ಹಬ್ಬದ ಸಡಗರವಿತ್ತು. ಕೆಲವು ಸಾವುಗಳ ಸೂತಕವೂ ಇತ್ತು. ಸತ್ತ ಹಿರಿಯರ ನೆನಪು ಅಚ್ಚಳಿಯದೇ ಉಳಿದಿತ್ತು...! 

 ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕ ವೂ ಇತ್ತು...! ಬದುಕಿನ ಸಾಧಕ ಭಾದಕ ಗಳೆಲ್ಲವೂ ಇತ್ತು...! 

 ಇಂದು...? ಮನೆ ರಾಜನಿಲ್ಲದ ಅರಮನೆಯಂತೆ, ಸಕಲ ಸವಲತ್ತು ಗಳಿರುವ ದರ್ಬಾರಿನಂತೆ,ನೆರೆ ಮನೆಯ ಹಂಗಿಲ್ಲದ ಸೆರೆಮನೆ ಯಂತೆ. ಆದ್ರೂ ಮನೆಮಂದಿಗೆಲ್ಲ ಬಹಳ  ದುಡ್ಡಿನದೇ ಚಿಂತೆ ಚಿಂತೆ..! 

 ಬೇಕಾಗಿದ್ದಕ್ಕಿಂತ, ಬೇಕೆನಿಸಿದ್ದೇ ತುಂಬಿದೆ, ದೊಡ್ಡದಿದೆ, ಶ್ರೀಮಂತವಾಗಿದೆ, ಸಜ್ಜಾಗಿದೆ. ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ...! 

 ಶುಭ ಕಾರ್ಯಗಳು, ಸಂತೋಷ ಕೂಟಗಳು, ಮನೆಬಿಟ್ಟು, ಹೋಟೆಲ್ಲುಗಳ ಸೇರಿಕೊಂಡಿವೆ. ಬಂಧುತ್ವ ಮಿತೃತ್ವಗಳು ಬಂಧನದಲ್ಲಿವೆ...! 

 ನೆಂಟರಿಷ್ಟರು ಮನೆಗೆ ಬಂದರೆ, ಬರೀ ನಕ್ಕೂ ನಗದೇ... ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆ ಮಕ್ಕಳು. 

 ಸ್ನೇಹ,ಸಂಬಂಧಗಳಲ್ಲೂ ತೋರಿಕೆ, ತಾತ್ಸಾರ, ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ...! 

 ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ. ಆಗಲಿ ಮನೆ ಮನಗಳೂ ನಂದಗೋಕುಲ...! 

ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ...! ಕಲಿಯಲಿ ಎಲ್ಲರು ಸಂತಸದಿ, ಒಟ್ಟಾಗಿ ನಗುವ ಕಲೆ...! 

 ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!

Saturday, January 14, 2023

*"ಚಕ್ರವರ್ತಿ ಅಶೋಕ"ನ ಜನ್ಮ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಏಕೆ ಆಚರಿಸುವುದಿಲ್ಲ??*

[ *"ಚಕ್ರವರ್ತಿ ಅಶೋಕ"ನ ಜನ್ಮ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಏಕೆ ಆಚರಿಸುವುದಿಲ್ಲ??*

 ಸಾಕಷ್ಟು ಯೋಚಿಸಿದರೂ "ಉತ್ತರ" ಸಿಕ್ಕಿಲ್ಲ!  ನೀವು ಈ "ಪ್ರಶ್ನೆಗಳನ್ನು" ಸಹ ಪರಿಗಣಿಸಿ!🤔🤔🤔

 ಚಕ್ರವರ್ತಿ ಅಶೋಕ
 *ತಂದೆಯ ಹೆಸರು - ಬಿಂದುಸರ್ ಗುಪ್ತಾ*
 ತಾಯಿಯ ಹೆಸರು - ಸುಭದ್ರಾಣಿ

 "ಚಕ್ರವರ್ತಿ" ಯಾರ ಹೆಸರಿನೊಂದಿಗೆ ಪ್ರಪಂಚದಾದ್ಯಂತದ ಇತಿಹಾಸಕಾರರು "ಶ್ರೇಷ್ಠ" ಎಂಬ ಪದವನ್ನು ಹಾಕುತ್ತಾರೆ

 ಯಾರ - "ಚಕ್ರವರ್ತಿಯ" ರಾಜ ಚಿಹ್ನೆ "ಅಶೋಕ ಚಕ್ರ" ಭಾರತೀಯರು ತಮ್ಮ ಧ್ವಜದಲ್ಲಿ ಹಾಕಿದರು.

 ರಾಯಲ್ ಚಿಹ್ನೆ "ಚಾರ್ಮುಖಿ ಸಿಂಹ" ವನ್ನು ಭಾರತ ಸರ್ಕಾರವು "ರಾಷ್ಟ್ರೀಯ ಚಿಹ್ನೆ" ಮತ್ತು "ಸತ್ಯಮೇವ್ ಜಯತೆ" ಎಂದು ಪರಿಗಣಿಸಿ ನಡೆಸುತ್ತಿರುವ "ಚಕ್ರವರ್ತಿ" ಯನ್ನು ಅಳವಡಿಸಿಕೊಳ್ಳಲಾಗಿದೆ.

 ಚಕ್ರವರ್ತಿ ಅಶೋಕನ ಹೆಸರಿನ ಸೈನ್ಯದ ಅತ್ಯುನ್ನತ ಯುದ್ಧ ಗೌರವವು "ಅಶೋಕ ಚಕ್ರ" ಆಗಿರುವ ದೇಶವಾಗಿದೆ.

 ಚಕ್ರವರ್ತಿ ಮೊದಲು ಅಥವಾ ನಂತರ ಅಂತಹ ರಾಜ ಅಥವಾ ಚಕ್ರವರ್ತಿ ಇರಲಿಲ್ಲ"... "ಅಖಂಡ ಭಾರತ" (ಇಂದಿನ ನೇಪಾಳ, ಬಾಂಗ್ಲಾದೇಶ, ಇಡೀ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ) ವಿಶಾಲವಾದ ಪ್ರದೇಶವನ್ನು ಏಕಾಂಗಿಯಾಗಿ ಆಳಿದವರು.

 ಅಶೋಕ ಚಕ್ರವರ್ತಿಯ ಕಾಲದಲ್ಲಿ "23 ವಿಶ್ವವಿದ್ಯಾನಿಲಯಗಳು" ಸ್ಥಾಪಿತವಾದವು.ಇದರಲ್ಲಿ ತಕ್ಷಶಿಲಾ, ನಳಂದ, ವಿಕ್ರಮಶಿಲಾ, ಕಂದಹಾರ್ ಇತ್ಯಾದಿ ವಿಶ್ವವಿದ್ಯಾನಿಲಯಗಳು ಪ್ರಮುಖವಾಗಿದ್ದವು.ಈ ವಿಶ್ವವಿದ್ಯಾಲಯಗಳಲ್ಲಿ ವಿದೇಶದಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬರುತ್ತಿದ್ದರು.

 ಜಿಸ್-"ಚಕ್ರವರ್ತಿಯ" ಆಳ್ವಿಕೆಯನ್ನು ಪ್ರಪಂಚದ ಬುದ್ಧಿಜೀವಿಗಳು ಮತ್ತು ಇತಿಹಾಸಕಾರರು ಭಾರತೀಯ ಇತಿಹಾಸದ ಅತ್ಯಂತ "ಸುವರ್ಣ ಅವಧಿ" ಎಂದು ಪರಿಗಣಿಸಿದ್ದಾರೆ.

 "ಚಕ್ರವರ್ತಿ" ಭಾರತದ ಆಳ್ವಿಕೆಯಲ್ಲಿ "ವಿಶ್ವ ಗುರು" ಆಗಿತ್ತು. ಇದು "ಚಿನ್ನದ ಹಕ್ಕಿ" ಆಗಿತ್ತು. ಸಾರ್ವಜನಿಕರು ಸಂತೋಷ ಮತ್ತು ತಾರತಮ್ಯ ಮುಕ್ತರಾಗಿದ್ದರು.

 ಇವರ ಆಳ್ವಿಕೆಯಲ್ಲಿ, ಅತ್ಯಂತ ಪ್ರಸಿದ್ಧ ಹೆದ್ದಾರಿ "ಗ್ರೇಡ್ ಟ್ರಂಕ್ ರೋಡ್" ನಂತಹ ಅನೇಕ ಹೆದ್ದಾರಿಗಳನ್ನು ನಿರ್ಮಿಸಲಾಯಿತು. 2,000 ಕಿಲೋಮೀಟರ್ಗಳ ಸಂಪೂರ್ಣ "ರಸ್ತೆ" ಯ ಎರಡೂ ಬದಿಗಳಲ್ಲಿ ಮರಗಳನ್ನು ನೆಡಲಾಯಿತು. "ಸಾರೈಸ್" ನಿರ್ಮಿಸಲಾಯಿತು.
 ಮನುಷ್ಯರು ಮನುಷ್ಯರೇ.., ಪ್ರಾಣಿಗಳಿಗೂ ಮೊಟ್ಟಮೊದಲ ಬಾರಿಗೆ "ವೈದ್ಯಕೀಯ ಮನೆಗಳು" (ಆಸ್ಪತ್ರೆಗಳು) ತೆರೆಯಲಾಯಿತು, ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸಲಾಯಿತು.

 ಅಂತಹ *"ಮಹಾ ಚಕ್ರವರ್ತಿ ಅಶೋಕ್"* ಅವರ ಜನ್ಮದಿನವನ್ನು ಅವರ ಸ್ವಂತ ದೇಶ ಭಾರತದಲ್ಲಿ ಏಕೆ ಆಚರಿಸುವುದಿಲ್ಲ ??  ಅಥವಾ ಯಾವುದೇ ರಜೆ ಘೋಷಿಸಿಲ್ಲವೇ?

 ಈ ಜನ್ಮದಿನಾಚರಣೆಯನ್ನು ಆಚರಿಸಬೇಕಾದ ಪ್ರಜೆಗಳು ತಮ್ಮ ಇತಿಹಾಸವನ್ನು ಮರೆತಿದ್ದಾರೆ, ಬಲ್ಲವರಿಗೆ ಏಕೆ ಆಚರಿಸಬಾರದು ಎಂದು ತಿಳಿದಿಲ್ಲ.
[ ಅಂತಹ *"ಮಹಾ ಚಕ್ರವರ್ತಿ ಅಶೋಕ್"* ಅವರ ಜನ್ಮದಿನವನ್ನು ಅವರ ಸ್ವಂತ ದೇಶ ಭಾರತದಲ್ಲಿ ಏಕೆ ಆಚರಿಸುವುದಿಲ್ಲ ??  ಅಥವಾ ಯಾವುದೇ ರಜೆ ಘೋಷಿಸಿಲ್ಲವೇ?

 ಈ ಜನ್ಮದಿನಾಚರಣೆಯನ್ನು ಆಚರಿಸಬೇಕಾದ ಪ್ರಜೆಗಳು ತಮ್ಮ ಇತಿಹಾಸವನ್ನು ಮರೆತಿರುವುದು ಬೇಸರದ ಸಂಗತಿಯಾಗಿದೆ, ತಿಳಿದವರು ಏಕೆ ಆಚರಿಸಲು ಬಯಸುವುದಿಲ್ಲ ಎಂದು ತಿಳಿದಿಲ್ಲವೇ?

 *"ಗೆದ್ದವನು ಚಂದ್ರಗುಪ್ತ"* ಎನ್ನುವ ಬದಲು *"ಗೆದ್ದವನು ಅಲೆಕ್ಸಾಂಡರ್"* ಅದು ಹೇಗೆ ಆಯಿತು??
 ಚಂದ್ರಗುಪ್ತ ಮೌರ್ಯನ ಪ್ರಭಾವವನ್ನು ನೋಡಿದ ನಂತರವೇ ಅಲೆಕ್ಸಾಂಡರ್ನ ಸೈನ್ಯವು ಯುದ್ಧಕ್ಕೆ ನಿರಾಕರಿಸಿತು ಎಂದು ಎಲ್ಲರಿಗೂ ತಿಳಿದಿದೆ.  ನೈತಿಕತೆಯು ಕೆಟ್ಟದಾಗಿ ಮುರಿದುಹೋಯಿತು ಮತ್ತು ಅಲೆಕ್ಸಾಂಡರ್ "ಹಿಂತಿರುಗಬೇಕಾಯಿತು".

 *ಈ "ಐತಿಹಾಸಿಕ ಪ್ರಮಾದ"ವನ್ನು ಸರಿಪಡಿಸಲು ನಾವೆಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ.🙏 🏻*

 

Thursday, January 12, 2023

ನಮ್ಮ ದೇಶದ ಘನತೆಯನ್ನ ವಿಶ್ವಕ್ಕೆ ತಿಳಿಸಿದ ಮಹಾತ್ಮ ಜನಿಸಿದ ಪುಣ್ಯದಿನ ಇಂದು...

ಯಾವ ವ್ಯಕ್ತಿಯ ಹೆಸರು ಕೇಳಿದರೆ ಯುವ ಶಕ್ತಿಯಲ್ಲಿ ರೋಮಾಂಚನವಾಗುತ್ತೋ ಆ ವ್ಯಕ್ತಿಯ ಹುಟ್ಟುಹಬ್ಬ ಇಂದು...

ನಮ್ಮ ದೇಶದ ಘನತೆಯನ್ನ ವಿಶ್ವಕ್ಕೆ ತಿಳಿಸಿದ ಮಹಾತ್ಮ ಜನಿಸಿದ ಪುಣ್ಯದಿನ ಇಂದು...

'ಓ ಧೀರನೆ! ನಿನ್ನೆಲ್ಲ ಶಕ್ತಿ ಸಾಮರ್ಥ್ಯ ಗಳನ್ನು ಒಗ್ಗೂಡಿಸಿಕೊಂಡು ಕಗ್ಗತ್ತಲೆಯಂತ ಪರಿಸ್ಥಿತಿಯಲ್ಲಿ ಎದೆಗೆಡದೆ ಮುನ್ನಡೆ' ಎಂದು ಯುವಜನತೆಯನ್ನ ಬಡಿದೆಬ್ಬಿಸಿದ ಚಿರಯುವಕನ ಹುಟ್ಟುಹಬ್ಬ ಇಂದು...

'ನಾವು ದುರ್ಬಲರು ಎಂದು ಹೇಳಿಕೊಳ್ಳದಿರಿ! ಎಲ್ಲವನ್ನೂ, ಏನನ್ನು ಬೇಕಾದರೂ ಸಾಧಿಸಬಲ್ಲಿರಿ' ಎಂದು ಯಾವಾಗಲೂ ನಮಗೆ ಸ್ಫೂರ್ತಿ ತುಂಬುವ ಆ ಮಹಾನಾಯಕನ ಹುಟ್ಟಹಬ್ಬ ಇಂದು...

'ಆಗಿದ್ದು ಆಗಿಹೋಯಿತು! ಅದರ ಬಗ್ಗೆಯೇ ಯೋಚಿಸುತ್ತ ಕೂರಬೇಡ! ಮುಂದಿನ ಪರಿಣಾಮ ಎದುರಿಸಲು ಸಿದ್ಧನಾಗು! ನೀನು ಸಾಧಿಸುವುದು ಬಹಳಷ್ಟಿದೆ!' ಎಂದ ಧೀರ ಸನ್ಯಾಸಿಯ ಹುಟ್ಟುಹಬ್ಬ ಇಂದು...

'ನೀನು ನಿನಗಿಷ್ಟವಾದ ಯಾವ ವಸ್ತುವಿನ ಮೇಲೆ ಬೇಕಾದರು ಧ್ಯಾನ ಮಾಡು! ನಾನು ಮಾತ್ರ ಸಿಂಹದ ಹೃದಯದ ಮೇಲೆ ಧ್ಯಾನ ಮಾಡುವವನು! ನನಗದು ಶಕ್ತಿ ನೀಡುತ್ತದೆ! 
ಎಂದ ಯುಗಪುರುಷನ ಹುಟ್ಟುಹಬ್ಬ ಇಂದು...

'ಏಳಿ! ಎದ್ದೇಳಿ! ! ಗುರಿಮುಟ್ಟುವ ತನಕ ನಿಲ್ಲದಿರಿ!! ಎಂದು ಸದಾ ನಮ್ಮನ್ನು ಬಡಿದೆಬ್ಬಿಸುವ ಗುರುವಿನ ಹುಟ್ಟುಹಬ್ಬ ಇಂದು..

  ಪ್ರಿಯ ಅಮೆರಿಕಾದ ಸಹೋದರ ಸಹೋದರಿಯರೆ" ಎಂಬ ಪದಪುಂಜಗಳ ಮೂಲಕ ಇಡೀ ಅಮೇರಿಕಾವನ್ನು ನತಮಸ್ತಕಗೊಳಿಸಿದ ಸಿಡಿಲಸಂತ ಆತ. 

ಭಾರತೀಯರೆಂದರೆ ಹಾವಾಡಿಗರು ಎಂದು ನಂಬಿದ್ದ ಜಗದ ಜನರ ಕಣ್ತೆರೆಸಿ, ಭಾರತದ ಹಿರಿಮೆ ಮತ್ತು ಹಿಂದೂತ್ವದ ಗರಿಮೆಯನ್ನು ಜಗತ್ತಿಗೆ ಸಾರಿದ ವೀರ ಸಂನ್ಯಾಸಿ ಆತ.

" ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ " ಎಂಬ ಪ್ರಖರ ಸಂದೇಶದಿಂದ ಅಂಧಕಾರದಲ್ಲಿ ಮುಳುಗಿದ್ದ  ಭಾರತದ ಯುವಜನತೆಯನ್ನು ಬೆಳಕಿನಲ್ಲಿ ಪ್ರಜ್ವಲಿಸುವಂತೆ ಮಾಡಿದ ಯುಗಪುರುಷ ಆತ. 

ತಿಲಕ್,  ಸುಭಾಷ್ ಚಂದ್ರ ಬೋಸ್, ಅರವಿಂದ ಘೋಷ್ ರಂತ ಮಹಾನ್ ವ್ಯಕ್ತಿಗಳಿಗೆ ಪ್ರೇರಣಾ ಪುರುಷ ಆತ. 

ಸ್ವಾಮಿ ವಿವೇಕಾನಂದರ ಹೆಸರು ಕೇಳಿದೊಡೆ ಮನ ಪುಳಕಿತಗೊಳ್ಳುತ್ತದೆ. ಸ್ಪೂರ್ತಿಯ ಚಿಲುಮೆ ಉಕ್ಕಿ ಹರಿಯುತ್ತದೆ. ದೇಶದ ಬಾಳ್ವೆಯನ್ನು ಬೆಳಗಲು ಅವರಿತರಿಸಿದ ಯುಗಪುರುಷ ಆತ. 

ಸ್ವಾಮೀಜಿ ನಿಮಗೆ ಕೋಟಿ ಕೋಟಿ ನಮನಗಳು. 

ಸರ್ವರಿಗೂ ವಿವೇಕಾನಂದರ ಜಯಂತಿ ಮತ್ತು ಯುವದಿನದ ಶುಭಾಶಯಗಳು.😍🚩🇮🇳🇮🇳
ಜೈ ಹಿಂದ್ 🇮🇳
ಜೈ ಜವಾನ್ ಜೈ ಕಿಸಾನ್ 🇮🇳
ವಂದೇ ಮಾತರಂ ❣🇮🇳

Monday, January 9, 2023

ಒಬ್ಬಳು ಮಹಿಳೆ ಒಂದು ಬಸ್ ಸ್ಟಾಂಡ್ ನಲ್ಲಿ ಒಬ್ಬ ಪುರುಷ ನ ಬಳಿ ಹೋಗಿ ಕೇಳುತ್ತಾಳೆ ,

ಒಬ್ಬಳು ಮಹಿಳೆ ಒಂದು ಬಸ್ ಸ್ಟಾಂಡ್ ನಲ್ಲಿ ಒಬ್ಬ ಪುರುಷ ನ ಬಳಿ ಹೋಗಿ ಕೇಳುತ್ತಾಳೆ ,

ಎಕ್ಸ್ ಕ್ಯೂಸ್ ಮೀ ಸರ್ ,ನಾನೊಂದು ಚಿಕ್ಕ ಸರ್ವೇ ಮಾಡುತ್ತಿದ್ದೇನೆ ,ನಿಮ್ಮ ಬಳಿ ಒಂದು ಪ್ರಶ್ನೆ ಕೇಳಬಹುದಾ ...???

ಪುರುಷ :- ಆಯಿತು ,ಕೇಳಿ ಮೇಡಂ ,

ಮಹಿಳೆ :- ನೀವು ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಒಬ್ಬಳು ಮಹಿಳೆ ಬಸ್ ಹಿಡಿತಾಳೆ ,ಸೀಟ್ ಎಲ್ಲಾ ತುಂಬಿರುತ್ತದೆ ,ನೀವು ಆ ಮಹಿಳೆಗೆ ನಿಮ್ಮ ಸೀಟ್ ಬಿಟ್ಟು ಕೊಡುತ್ತೀರಾ ,,,???

ಪುರುಷ :- ಇಲ್ಲಾ ಮೇಡಂ .

ಮಹಿಳೆ :- ಒಂದು ವೇಳೆ ಗರ್ಭಿಣಿ ಮಹಿಳೆ ಆಗಿದ್ರೆ , ನೀವು ನಿಮ್ಮ ಸೀಟ್ ಬಿಟ್ಟು ಕೊಡುತ್ತೀರಾ ...???

ಪುರುಷ :- ಇಲ್ಲಾ ಮೇಡಂ ,

ಮಹಿಳೆ :- ಇರ್ಲಿ ,ಒಂದು ವೇಳೆ ಮುದುಕಿ ಒಬ್ಬರು ಬಸ್ ನಲ್ಲಿ ನಿಂತು ಕೊಂಡಿದ್ದರೆ ನೀವು ಸೀಟ್ ಬಿಟ್ಟು ಕೊಡುತ್ತೀರಾ ..???

ಪುರುಷ :- ಇಲ್ಲಾ ಮೇಡಂ ,

ಮಹಿಳೆ :-ನೀನೊಬ್ಬ  ಸ್ವಾರ್ಥಿ  ವ್ಯಕ್ತಿ ,ನಿನಗೆ  ಮೂಲಭೂತ  ನೈತಿಕತೇ ಎಂಬುದೇ  ಇಲ್ಲ , ನೀನು  ಯಾರು ...???

ಪುರುಷ :- ಬಸ್ ಡ್ರೈವರ್ ,

      😆😆😆😆😆

Sunday, January 8, 2023

*ಕೋರ್ಟ್ ಅಲ್ಲಿ ಅಂದು ಆ ಡೈವೋರ್ಸ್ ಗಲಾಟೆಯ ಕೊನೆಯ ತೀರ್ಪು, ಸಣ್ಣಕತೆ.

*ಸಣ್ಣಕತೆ: 

*ಕೋರ್ಟ್ ಅಲ್ಲಿ ಅಂದು ಆ ಡೈವೋರ್ಸ್ ಗಲಾಟೆಯ ಕೊನೆಯ  ತೀರ್ಪು ಬರುವುದರಲ್ಲಿತ್ತು.. ತೀರ್ಪು ಅವಳ ಪರವೇ ಬರುವುದರಲ್ಲಿತ್ತು.ಅಷ್ಟೊಂದು ಸುಂದರವಾಗಿ ವಾದ ಮಂಡಿಸಿದ್ದರು ಅವಳ ಪರ ವಕೀಲರು.. ಆಕೆ ಮತ್ತೆ ಮತ್ತೆ ಹೇಳುತ್ತಿದ್ದಳು..🥱🥱*
*"ನೋಡಿ ಮಹಾ ಸ್ವಾಮಿ 12 ವರ್ಷದ ದಾಂಪತ್ಯ ಜೀವನ ದಿಂದ ರೋಸಿ ಹೋಗಿದ್ದೇನೆ. ಆತನ ಗೊರಕೆಯ ಶಬ್ದಕ್ಕೆ ತತ್ತರಿಸಿ ಹೋಗಿದ್ದೇನೆ🥱, ರಾತ್ರಿ ಆದರೆ ಹೆದರಿಕೆ ಶುರು ಆಗುತ್ತಿದೆ🥱, ಅಷ್ಟೊಂದು ಭಯಾನಕ ಗೊರಕೆ ಆತನದು. ಅದಕ್ಕೆ ಮಾಡಬೇಕಾದ್ದು ಎಲ್ಲಾ ಮಾಡಾಗಿದೆ,ಮೊದಲು ಗೊರಕೆಯ ಪ್ಲಾಸ್ಟರ್ ಹಾಕಿದೆ, ಅವನ ಮೂಗಿಗೆ, ಬಾಯಿಗೆ ತಲೆಗೆ ಪ್ಲಾಸ್ಟರ್, ಟವೆಲ್ ಎಲ್ಲ ಕಟ್ಟಿ ಆಯಿತು, ಹತ್ತಿ ಇಟ್ಟು ಆಯಿತು 😔, ಎಲ್ಲಾ ದೇವರಿಗೆ ಹರಕೆ ಆಯಿತು, ಊರಲ್ಲಿದ್ದ ಎಲ್ಲಾ ನಾಟಿ ಔಷದ ಆಯಿತು🥱, ಇನ್ನು ನನ್ನಿಂದ ಸಾಧ್ಯವಿಲ್ಲ ರಾತ್ರಿ ನಿದ್ದೆ ಇಲ್ಲದೇ ಹುಚ್ಚಿಯಂತಾಗಿದ್ದೇನೆ ದಯವಿಟ್ಟು ಅವನಿಂದ ಮುಕ್ತಿ ದೊರಕಿಸಿ ಸ್ವಾಮಿ ಆಕೆ ಗೋಗರೆದು ಕೇಳಿಕಕೊಂಡಿದ್ದಳು..🥱🥱*
*ನ್ಯಾಯಾದೀಶರು ಕುಟುಂಬ ವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದರು, ತಂದೆ ಕೋರ್ಟ್ ನ ಇನ್ನೊಂದು ಕಟಕಟೆ ಯಲ್ಲಿ ನಿಂತಿದ್ದರೆ.. ಅಲ್ಲೇ ಬೆಂಚ್ ಅಲ್ಲಿ ಕುಳಿತ 9 ವರ್ಷದ ಹಾಗು 6 ವರ್ಷದ ಹೆಣ್ಣುಮಕ್ಕಳಿ ಬ್ಬರು ತಂದೆ ಯ ಮುಖವನ್ನೇ ಸಪ್ಪೆ ಮೊರೆ ಹಾಕಿ ನೋಡುತಿದ್ದರು😔.. ತಂದೆಯೂ ಅದೇ ಮಕ್ಕಳನ್ನು ನೋಡುತಿದ್ದ ಮಕ್ಕಳ ಕಣ್ಣುಗಳು ಅದಾಗಲೇ ಮಂಜಾಗಿದ್ದವು.😔😔*

*ನ್ಯಾಯಾದೀಶ ರು ಹೇಳಿದರು ಆ ಮಹಿಳೆಗೆ...."ಗಂಡನ ಮೂಗಿಗೆ ಪ್ಲಾಸ್ಟರ್ ಹಾಕಿದಿರಿ, ಹತ್ತಿ ಇಟ್ಟಿರಿ, ಬಾಯಿಗೆ ಪ್ಲಾಸ್ಟರ್ ಹಾಕಿದಿರಿ, ಟವೆಲ್ ಸುತ್ತಿದಿರಿ, ಇದೆಲ್ಲ ಓಕೆ ಅಮ್ಮ ಆ ಪುಣ್ಯಾತ್ಮ ನಿಮ್ಮೆಲ್ಲ ಟಾರ್ಚರ್ ಅನ್ನು ಸಹಿಸಿ ಕೊಂಡ😔. ಆದರೆ ಅದೇ ಹತ್ತಿಯನ್ನು, ಟವೆಲ್ ಅನ್ನು ನಿಮ್ಮ ಕಿವಿಗೆ ಸುತ್ತಿ ಮಲಗ ಬಹುದಿತ್ತಲ್ಲ ಯಾಕೆ ಹಾಗೇ ಮಾಡಿಲ್ಲ?... ಎಂದಾಗ ಮಹಿಳೆ ಮೌನ ವಾಗಿದ್ದಳು...👌🥱*
*ಮತ್ತೆ ನ್ಯಾಯಾದೀಶರು ಹೇಳಿದರು.. "ನೋಡಮ್ಮ..ಮೊದಲು ನಾವು ನಮ್ಮನ್ನು ಬದಲಾಯಿಸಿ ಕೊಳ್ಳಲು ಪ್ರಯತ್ನಿಸಬೇಕು, ಆಮೇಲೆ ಬೇರೆಯವರನ್ನು ಬದಲಾಯಿಸೋಣ, ಇದು ನೆನಪಿರಲಿ👌👌".. ಎನ್ನುತ್ತಾ ಡೈವೋರ್ಸ್ ಪ್ರಕರಣ ವನ್ನು ಅಲ್ಲಿಗೆ ವಜಾ ಗೊಳಿಸಿದ್ದರು..👌👌*

*ಮಹಿಳೆಯ ಮುಖ ಚಿಕ್ಕದಾಗಿತ್ತು, ಗಂಡ ಮಕ್ಕಳ ಮುಖ ಅರಳಿತ್ತು, ಹೆಣ್ಣುಮಕ್ಕಳಂತು ಖುಷಿ ಇಂದ ಓಡೋಡಿ ಬಂದು ಅಪ್ಪನನ್ನು ತಬ್ಬಿಕೊಂಡರು... ಅಪ್ಪ ಮಕ್ಕಳ ಕಣ್ಣುಗಳು ಅದಾಗಲೇ ಒದ್ದೆ ಯಾಗಿದ್ದವು 😔😔😔.*

*ಅದೆಷ್ಟು ಅದ್ಭುತ ಸತ್ಯ ನೋಡಿ.. ನಾವು ಅವ ಸರಿ ಇಲ್ಲ, ಇವ ಸರಿ ಇಲ್ಲ, ಸಮಾಜ ಸರಿ ಇಲ್ಲ, ಕುಟುಂಬ ಸರಿ ಇಲ್ಲ ಎಂದು ಬೇರೆಯವರ ತಪ್ಪನ್ನಷ್ಟೇ ಹುಡುಕುತ್ತೇವೆಯೇ ಹೊರತು, ನಮ್ಮ ತಪ್ಪನ್ನು ಮರೆತಿರುತ್ತೇವೆ. ಯಾಕೆ ನಾವು ಬದಲಾಗಬಾರದು?, ಇಂದೇ ಪ್ರಯತ್ನಿಸೋಣ ಬದಲಾಗಲು.. ಮತ್ತೆ ಮತ್ತೆ ನಮ್ಮನ್ನು ನಾವೇ ಪ್ರಶ್ನಿಸೋಣ,*

ವಂದನೆಗಳೊಂದಿಗೆ.

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World