*"ಮಧ್ಯವಯಸ್ಸಿನ ಅನುಭವ"*
ಹೌದು, ಬದಲಾಗಿದ್ದೇನೆ. ನನ್ನ ಬದುಕಿನಲ್ಲಿ ಬಂದ ಎಲ್ಲರನ್ನೂ ಪ್ರೀತಿಸಿದ ಅವಧಿ ಮುಗಿದಾಯ್ತು, ಈಗ ನನ್ನನ್ನು ಪ್ರೀತಿಸುವ ಸರಧಿ ಬಂದಿದೆ
ಹೌದು , ಬದಲಾಗಿದ್ದೇನೆ..ಇಡೀ ಜಗತ್ತನ್ನು ನನ್ನ ಭುಜದ ಮೇಲೆ ಹೊರಲು ನಾನೇನು ಅಟ್ಲಾಸ್ ನಕ್ಷೆಯಲ್ಲ,,, ನನಗೂ ಮಿತಿಯಿದೆ
ಹೌದು ಬದಲಾಗಿದ್ದೇನೆ,, ತರಕಾರಿ, ಹಣ್ಣುಗಳನ್ನು ಚೌಕಾಸಿ ಮಾಡಿ ಕೊಳ್ಳುವುದನ್ನು ನಿಲ್ಲಿಸಿದ್ದೇನೆ...ಅದರಿಂದ ನನ್ನ ಕಿಸಿಯೇನು ಬರಿದಾಗುವುದಿಲ್ಲ,ಒಬ್ಬ ಬಡವ್ಯಾಪಾರಿಯ ಮಗಳ ಶಾಲಾ ಫೀಸ್ ತುಂಬಲು ಸಹಾಯವಾಗಬಹುದು
ಹೌದು ಬದಲಾಗಿದ್ದೇನೆ,,,ಒಬ್ಬ ಟ್ಯಾಕ್ಸಿ ಚಾಲಕನ ಹತ್ತಿರ ಚಿಲ್ಲರೆ ಕೇಳುವುದನ್ನು ನಿಲ್ಲಿಸಿದ್ದೇನೆ, ಅವನು ಬದುಕು ನನಗಿಂತ ಸಂಕಷ್ಟದಲ್ಲಿರಬಹುದು
ಹೌದು, ಬದಲಾಗಿದ್ದೇನೆ,,ಇತರರು ತಪ್ಪು ಮಾಡಬಹುದು, ಹಾಗೆಂದ ಮಾತ್ರಕ್ಕೆ ಅವರನ್ನು ತಿದ್ದುತ್ತಾ ಕೂರುವುದು ನನ್ನ ಕೆಲಸವಲ್ಲ ಎಂದು ಅರ್ಥವಾಗಿದೆ, ಎಲ್ಲರಲ್ಲೂ ಪರಿಪೂರ್ಣತೆ ಹುಡುಕುತ್ತಾ ಕುಳಿತುಕೊಳ್ಳುವ ಬದಲು ನೆಮ್ಮದಿಯತ್ತ ಮೊರೆ ಹೋಗುತ್ತೇನೆ..ನೆಮ್ಮದಿಯೆಂದರೆ ಪರಿಪೂರ್ಣತೆಗೂ ಮಿಗಿಲು
ಹೌದು, ಬದಲಾಗಿದ್ದೇನೆ,,, ಈಗ ಮೊದಲಿಗಿಂತ ಹೆಚ್ಚಾಗಿ ಒಳ್ಳೆಯದನ್ನು ಪ್ರಶಂಸಿಸಲು ಕಲಿತಿದ್ದೇನೆ. ಅದು ನನ್ನೆದುರಿನ ವ್ಯಕ್ತಿಯ ಚೈತನ್ಯವನ್ನು ಮಾತ್ರವಲ್ಲ, ನನ್ನ ಜೀವನೋತ್ಸಾಹವನ್ನು ಪುಷ್ಠಿಗೊಳಿಸುತ್ತದೆ
ಹೌದು, ಬದಲಾಗಿದ್ದೇನೆ,,, ನನ್ನ ಅಂಗಿ ಚೂರು ಅರಿದಿದ್ದರೆ ಅಥವಾ ಕಲೆಯಾಗಿದ್ದರೆ ಅದರ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ..ಅದೇನೆ ಆಗಲಿ ನನ್ನ ವ್ಯಕ್ತಿತ್ವ ಹೊರನೋಟಕ್ಕಿಂತ ಮಿಗಿಲು
ಹೌದು, ಬದಲಾಗಿದ್ದೇನೆ...ನನ್ನನ್ನು ಗೌರವಿಸದವರಿಂದ ಬಹುದೂರ ಉಳಿದುಬಿಡುತ್ತೇನೆ...ನನಗೆ ನನ್ನ ಮೌಲ್ಯದ ಅರಿವುಳ್ಳಷ್ಟು ಅವರಿಗೆ ಎಲ್ಲಿ ಇರಬೇಕು ಅಲ್ಲವೇ...
ಹೌದು, ಬದಲಾಗಿದ್ದೇನೆ..ನನ್ನನ್ನು ಹತ್ತಿಕ್ಕಲು ಬರುವವರ ಮುಂದೆ ಪ್ರಶಾಂತವಾಗಿ ವರ್ತಿಸುತ್ತೇನೆ...ಅವರೇ ಮುಂದೆ ಹೋಗಲಿ...ಅಷ್ಟಕ್ಕೂ ನಾನ್ಯಾವ ಓಟದ ಸ್ಪರ್ಧಿಯಲ್ಲ
ಹೌದು, ಬದಲಾಗಿದ್ದೇನೆ...ನನ್ನದೇ ಭಾವನೆಗಳಿಂದ ನಾನು ಕಸಿವಿಸಿಗೊಳ್ಳುವುದನ್ನು ನಿಲ್ಲಿಸಿದ್ದೇನೆ. ಅಷ್ಟಕ್ಕೂ ಅವುಗಳಿಂದಲೇ ನಾನು ಮನುಷ್ಯನೆನ್ನಿಸಿಕೊಂಡಿರುವುದು...
ಹೌದು, ನಾನು ಬದಲಾಗಿದ್ದೇನೆ...ಸಂಬಂಧಗಳೊಂದಿಗೆ ರಾಜಿಯಾಗುವುದನ್ನು ಕಲಿತಿದ್ದೇನೆ..ಅಷ್ಟಕ್ಕೂ ಸಂಬಂಧಗಳಿಗಿಂತ ನನ್ನ ಅಹಂಕಾರ ದೊಡ್ಡದೇನಲ್ಲ
ಹೌದು, ಬದಲಾಗಿದ್ದೇನೆ..ಈ ಕ್ಷಣದಲ್ಲಿ ಬದುಕುವುದು ಕಲಿತಿದ್ದೇನೆ...ಯಾರಿಗೆ ಗೊತ್ತು? ಈ ಕ್ಷಣವೇ ನನ್ನ ಬದುಕಿನ ಅಂತಿಮ ಕ್ಷಣವಾಗಿರಬಹುದು
ಹೌದು..ಬದಲಾಗಿದ್ದೇನೆ..
ನನಗೆ ಸಂತೋಷ ಕೊಡುವುದನ್ನು ನಾನು ಮಾಡುತ್ತೇನೆ...ಇದು ನನ್ನ ಸಂತೋಷದ ಸರಧಿ...ಅದಕ್ಕೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ...ಸಂತೋಷಕ್ಕೆ ನ್ಯಾಯ ಒದಗಿಸುವುದೆಂದರೆ, ನನಗೆ ನಾನು ನ್ಯಾಯ ಒದಗಿಸುವುದು ಎಂದರ್ಥ...
ಧನ್ಯವಾದಗಳು 🙏
No comments:
Post a Comment
welcome to dgnsgreenworld Family