www.dgnsgreenworld.blogspot.com

Sunday, November 28, 2021

*NETWORK MARKETING INDUSTRY'S 2025 ಕ್ಕೆ ಎಷ್ಟು ಅವಶ್ಯಕತೆ ಇದೆ...??*

*NETWORK MARKETING INDUSTRY'S 2025 ಕ್ಕೆ ಎಷ್ಟು ಅವಶ್ಯಕತೆ ಇದೆ...??*

2000 ಇಸವಿಯಲ್ಲಿ ಡಾ.A.P.J. ಅಬ್ದುಲ್ ಕಲಾಂ ಜಿ ನಮ್ಮ ದೇಶ ಮುಂದುವರಿದ ರಾಷ್ಟ್ರ ಆಗಬೇಕು ಅಂದರೆ..? ಪ್ರತಿಯೊಬ್ಬ ಭಾರತೀಯರು ಗೌರ್ನಮೆಂಟ್ ಗೆ ಟ್ಯಾಕ್ಸ್ ಕಟ್ಟಬೇಕು, ಆಗ ನಮ್ಮ ದೇಶ ಮುಂದುವರಿದ ರಾಷ್ಟ್ರ ಆಗುತ್ತೆ  ಅಂತ ಹೇಳಿದ್ದರು, 2025 ಕ್ಕೆ ನಮ್ಮ ದೇಶ ಮುಂದುವರಿದ ರಾಷ್ಟ್ರ ಆಗುತ್ತೆ ಯಾವ  ಇಂಡಸ್ಟ್ರಿಯಿಂದ ಅಂದರೆ  ನೆಟ್ವರ್ಕ್ ಮಾರ್ಕೆಟಿಂಗ್ ಇಂಡಸ್ಟ್ರಿಯಿಂದ ಮಾತ್ರ ಸಾಧ್ಯ ಅಂತ ಹೇಳಿದ್ದರು, ಇವತ್ತು  40% ಜನಕ್ಕೆ ಉದ್ಯೋಗ ಇಲ್ಲ, 2025 ಕ್ಕೆ 60% ಜನಕ್ಕೆ ಉದ್ಯೋಗ ಇರಲ್ಲ, ಆಗಾ ಒಂದೇ ಒಂದು ಇಂಡಸ್ಟ್ರಿ  Welcome ಕೋರುತ್ತೆ ಅದೇ ನೆಟ್ವರ್ಕ್ ಮಾರ್ಕೆಟಿಂಗ್, 60% youth ಗೆ 2025 ಕ್ಕೆ ಜಾಬ್ ಸಿಗದೆ ಅಲೆದಾಡುವ ಪರಿಸ್ಥಿತಿ ಬರುತ್ತದೆ, ಏಕೆಂದರೆ 2025 ಕ್ಕೆ ಮನುಷ್ಯ ಮಾಡುವ ಕೆಲಸವನ್ನು ರೋಬೋಸ್ ಮಾಡುತ್ತವೆ, ಎಲ್ಲಾ ಉದ್ಯಮದಲ್ಲೂ ರೋಬೋಸ್ ಗಳ ಆವಳಿ ಜಾಸ್ತಿ ಆಗುತ್ತೆ, 
 ನೆಟ್ವರ್ಕ್ ಮಾರ್ಕೆಟಿಂಗ್ ಇದು ಒಂದು ಹೊಸ ಆವಿಷ್ಕಾರ , ಬದಲಾವಣೆಯ, ಸಮಯ ಯಾಕಂದರೆ? ಆನ್ಲೈನ್ ಅಂದರೆ ಜನ ನಂಬುತ್ತಿರಲಿಲ್ಲ, ಈಗ ಊಟ ಬೇಕು ಅಂದ್ರು ಆನ್ಲೈನ್ ಲ್ಲೆ ಬುಕ್ ಮಾಡ್ತಿದ್ದೀವಿ, ATM ಅಂದ್ರೆ ಜನ ನಂಬುತ್ತೀರಲಿಲ್ಲ, ಈಗ ಒಂದು ಅಜ್ಜಿ ಹತ್ರ ATM Card ಇದೆ, ATM Card ಬಳಸೋರ್ ಸಂಖ್ಯೆನು ಕಡಿಮೆ ಆಗ್ತಿದೆ, ಯಾಕೆಂದರೆ..? ನೆಟ್ ಬ್ಯಾಂಕಿಂಗ್ ಜಾಸ್ತಿ ಬಳಸುತ್ತಿದ್ದಾರೆ,  ಪಾನೀಪೂರಿ ತಿಂದಮೇಲೆ 10 ರೂ ಚೇಂಜ್ ಇಲ್ಲ ಅಂದರೆ No Problem "ಫೋನ್ ಪೆ, ಗೂಗಲ್ ಪೆ" ಕಳ್ಸಿ ಸರ್ ಅಂತಾರೆ, 100 ರೂಪಾಯಿ , 500ರೂಪಾಯಿ, 1000 ರೂಪಾಯಿ , ಬೇಕು ಅಂದ್ರೆ ಬ್ಯಾಂಕ್ ನಲ್ಲಿ ಪಾಸ್ ಬುಕ್ ಇಡಿದುಕೊಂಡು ಚಲನ್ ನಲ್ಲಿ ಬರೆದು ಟೋಕನ್ ಕಾಯಿನ್ ಇಡಿದುಕೊಂಡು ಕ್ಯೂ ನಿಂತಿದ್ದಂತ ಜನ, ಇವತ್ತು 1 ಸೆಕೆಂಡ್ ಸಾಕು "ಫೋನ್ ಪೆ, ಗೂಗಲ್ ಪೆ"  ನಲ್ಲಿ ಬೇರೆಯವರಿಗೆ ಕಳಿಸಬಹುದು, ಈಗ 2035 ಕ್ಕೆ Advance Technology ಬರ್ತಿದೆ digital india concept ಮೂಖಾಂತರ Bit Coins Technology, Cash(Less) Transaction , Banking Sectors ಯಾವುದು ಇರಲ್ಲ, Workers  ಯಾರು ಇರಲ್ಲ, governament ಯಿಂದ  App ಬಿಡ್ತರೆ, ನಿಮ್ಮ ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್ , ಅಡ್ರೆಸ್ ಪ್ರೂಫ್, ನಿಮ್ಮ App ನಲ್ಲಿ Upload ಮಾಡ್ಬೇಕು,  ನೀವು ಏನಾದ್ರು ಶಾಪಿಂಗ್ ಮಾಡುದ್ರೆ ಯಾರಿಗಾದ್ರು 50Rs.ಕೊಡಬೇಕು ಅಂದರೆ Just Transfer  ಅಷ್ಟೇ, ನೀವು ಏನೇ Transaction ಮಾಡುದ್ರು IT Department ಗೆ Update ಆಗ್ತಿರುತ್ತೆ..   Block Money ಯಾರೆಲ್ಲ ಇಟ್ಟಿದರೆ, ಪೈಪ್ ಒಳಗೆ, ಮಂಚದ ಕೆಳಗೆ, ಸೋಫಾ ಒಳಗೆ, ಮುಚ್ಚಿಟ್ಟಿದ್ದಾರೆ... 2035 ಕ್ಕೆ ಬೆಂಕಿ ಅಚ್ಚಬೇಕಾಗುತ್ತೆ, digital india(ಕ್ಯಾಶ್ ಲೆಸ್)  ಈ ಎಲ್ಲಾ Technology ನ ನಾವು ಹೇಗೆ ನಂಬಿದ್ದಿವೋ ಹಾಗೆ ನೆಟ್ವರ್ಕ್ ಮಾರ್ಕೆಟಿಂಗ್ ನು ಕೂಡ ನೀವೂ ನಂಬಲೇಬೇಕು, ಇವತ್ತು ಜನಗಳನ್ನ ಹುಡುಕಿಕೊಂಡು ಹೋಗಿ ತಿಳಿಸುತ್ತಿದ್ದೀವಿ.. 2025 ಕ್ಕೆ ಅವರೇ ಹುಡುಕಿಕೊಂಡು ಬಂದು ಅವತ್ತು ಏನೋ ಹೇಳ್ತಿದ್ರಲ್ಲ ಹೇಳಿ, ನಂಗೆ ಜಾಬ್ ಇಲ್ಲ ಅಂತ ಕೇಳಿಕೊಂಡು ಬರೋದಿನ ಬಂದೆ ಬರುತ್ತೆ, wait And see.....

ಡೆಲ್ಲಿ ಯೂನಿವರ್ಸಿಟಿ ನಲ್ಲಿ ಕೋರ್ಸ್ ಲಾಂಚ್ ಹಾಗಿದೆ, *MBA in Networking* 

*Master of Networking* 

*Bachelor of Networking* 
  
ಬಗ್ಗೆ ಕೋರ್ಸ್ ಲಾಂಚ್ ಆಗಿದೆ , 

ಈಗ ಬಂದ್ರೆ ಆಧಾರ್ ಕಾರ್ಡ್ , 2025 ಕ್ಕೆ ಬಂದ್ರೆ ಡೈರೆಕ್ಟ್ ಮಾರ್ಕೆಟಿಂಗ್ ಕೋರ್ಸ್ ಮಾಡ್ಕೊಂಡು ಪಾಸ್ ಆಗಿ ಸರ್ಟಿಫಿಕೇಟ್ ಹಿಡಿದುಕೊಂಡು 
ನೆಟ್ವರ್ಕ್ ಮಾರ್ಕೆಟಿಂಗ್ ಮಾಡಬೇಕಾಗುತ್ತದೆ... ನೀವು ಈಗ ನಂಬಲಿಲ್ಲ ಅಂದ್ರೇ, ಮುಂದೆ ಜಗತ್ತೇ ನಂಬೋ ಹಾಗೆ ಮಾಡುತ್ತೆ....,,,,,,

Monday, November 22, 2021

*"ಮಧ್ಯವಯಸ್ಸಿನ ಅನುಭವ"*

*"ಮಧ್ಯವಯಸ್ಸಿನ ಅನುಭವ"*

ಹೌದು, ಬದಲಾಗಿದ್ದೇನೆ. ನನ್ನ ಬದುಕಿನಲ್ಲಿ ಬಂದ ಎಲ್ಲರನ್ನೂ ಪ್ರೀತಿಸಿದ ಅವಧಿ ಮುಗಿದಾಯ್ತು, ಈಗ ನನ್ನನ್ನು ಪ್ರೀತಿಸುವ ಸರಧಿ ಬಂದಿದೆ

ಹೌದು , ಬದಲಾಗಿದ್ದೇನೆ..ಇಡೀ ಜಗತ್ತನ್ನು ನನ್ನ ಭುಜದ ಮೇಲೆ ಹೊರಲು ನಾನೇನು ಅಟ್ಲಾಸ್ ನಕ್ಷೆಯಲ್ಲ,,, ನನಗೂ ಮಿತಿಯಿದೆ

ಹೌದು ಬದಲಾಗಿದ್ದೇನೆ,, ತರಕಾರಿ, ಹಣ್ಣುಗಳನ್ನು ಚೌಕಾಸಿ ಮಾಡಿ ಕೊಳ್ಳುವುದನ್ನು ನಿಲ್ಲಿಸಿದ್ದೇನೆ...ಅದರಿಂದ ನನ್ನ ಕಿಸಿಯೇನು ಬರಿದಾಗುವುದಿಲ್ಲ,ಒಬ್ಬ ಬಡವ್ಯಾಪಾರಿಯ ಮಗಳ ಶಾಲಾ ಫೀಸ್ ತುಂಬಲು ಸಹಾಯವಾಗಬಹುದು

ಹೌದು ಬದಲಾಗಿದ್ದೇನೆ,,,ಒಬ್ಬ ಟ್ಯಾಕ್ಸಿ ಚಾಲಕನ ಹತ್ತಿರ ಚಿಲ್ಲರೆ ಕೇಳುವುದನ್ನು ನಿಲ್ಲಿಸಿದ್ದೇನೆ, ಅವನು ಬದುಕು ನನಗಿಂತ ಸಂಕಷ್ಟದಲ್ಲಿರಬಹುದು

ಹೌದು, ಬದಲಾಗಿದ್ದೇನೆ,,ಇತರರು ತಪ್ಪು ಮಾಡಬಹುದು, ಹಾಗೆಂದ ಮಾತ್ರಕ್ಕೆ ಅವರನ್ನು ತಿದ್ದುತ್ತಾ ಕೂರುವುದು ನನ್ನ ಕೆಲಸವಲ್ಲ ಎಂದು ಅರ್ಥವಾಗಿದೆ, ಎಲ್ಲರಲ್ಲೂ ಪರಿಪೂರ್ಣತೆ ಹುಡುಕುತ್ತಾ ಕುಳಿತುಕೊಳ್ಳುವ ಬದಲು ನೆಮ್ಮದಿಯತ್ತ ಮೊರೆ ಹೋಗುತ್ತೇನೆ..ನೆಮ್ಮದಿಯೆಂದರೆ ಪರಿಪೂರ್ಣತೆಗೂ ಮಿಗಿಲು

ಹೌದು, ಬದಲಾಗಿದ್ದೇನೆ,,, ಈಗ ಮೊದಲಿಗಿಂತ ಹೆಚ್ಚಾಗಿ ಒಳ್ಳೆಯದನ್ನು ಪ್ರಶಂಸಿಸಲು ಕಲಿತಿದ್ದೇನೆ. ಅದು ನನ್ನೆದುರಿನ ವ್ಯಕ್ತಿಯ ಚೈತನ್ಯವನ್ನು ಮಾತ್ರವಲ್ಲ, ನನ್ನ ಜೀವನೋತ್ಸಾಹವನ್ನು ಪುಷ್ಠಿಗೊಳಿಸುತ್ತದೆ

ಹೌದು, ಬದಲಾಗಿದ್ದೇನೆ,,, ನನ್ನ ಅಂಗಿ ಚೂರು ಅರಿದಿದ್ದರೆ ಅಥವಾ ಕಲೆಯಾಗಿದ್ದರೆ ಅದರ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ..ಅದೇನೆ ಆಗಲಿ ನನ್ನ ವ್ಯಕ್ತಿತ್ವ ಹೊರನೋಟಕ್ಕಿಂತ ಮಿಗಿಲು

ಹೌದು, ಬದಲಾಗಿದ್ದೇನೆ...ನನ್ನನ್ನು ಗೌರವಿಸದವರಿಂದ ಬಹುದೂರ ಉಳಿದುಬಿಡುತ್ತೇನೆ...ನನಗೆ ನನ್ನ ಮೌಲ್ಯದ ಅರಿವುಳ್ಳಷ್ಟು ಅವರಿಗೆ ಎಲ್ಲಿ ಇರಬೇಕು ಅಲ್ಲವೇ...

ಹೌದು, ಬದಲಾಗಿದ್ದೇನೆ..ನನ್ನನ್ನು ಹತ್ತಿಕ್ಕಲು ಬರುವವರ ಮುಂದೆ ಪ್ರಶಾಂತವಾಗಿ ವರ್ತಿಸುತ್ತೇನೆ...ಅವರೇ ಮುಂದೆ ಹೋಗಲಿ...ಅಷ್ಟಕ್ಕೂ ನಾನ್ಯಾವ ಓಟದ ಸ್ಪರ್ಧಿಯಲ್ಲ

ಹೌದು, ಬದಲಾಗಿದ್ದೇನೆ...ನನ್ನದೇ ಭಾವನೆಗಳಿಂದ ನಾನು ಕಸಿವಿಸಿಗೊಳ್ಳುವುದನ್ನು ನಿಲ್ಲಿಸಿದ್ದೇನೆ. ಅಷ್ಟಕ್ಕೂ ಅವುಗಳಿಂದಲೇ ನಾನು ಮನುಷ್ಯನೆನ್ನಿಸಿಕೊಂಡಿರುವುದು...

ಹೌದು, ನಾನು ಬದಲಾಗಿದ್ದೇನೆ...ಸಂಬಂಧಗಳೊಂದಿಗೆ ರಾಜಿಯಾಗುವುದನ್ನು ಕಲಿತಿದ್ದೇನೆ..ಅಷ್ಟಕ್ಕೂ ಸಂಬಂಧಗಳಿಗಿಂತ ನನ್ನ ಅಹಂಕಾರ ದೊಡ್ಡದೇನಲ್ಲ

ಹೌದು, ಬದಲಾಗಿದ್ದೇನೆ..ಈ ಕ್ಷಣದಲ್ಲಿ ಬದುಕುವುದು ಕಲಿತಿದ್ದೇನೆ...ಯಾರಿಗೆ ಗೊತ್ತು? ಈ ಕ್ಷಣವೇ ನನ್ನ ಬದುಕಿನ ಅಂತಿಮ ಕ್ಷಣವಾಗಿರಬಹುದು

ಹೌದು..ಬದಲಾಗಿದ್ದೇನೆ..

ನನಗೆ ಸಂತೋಷ ಕೊಡುವುದನ್ನು ನಾನು ಮಾಡುತ್ತೇನೆ...ಇದು ನನ್ನ ಸಂತೋಷದ ಸರಧಿ...ಅದಕ್ಕೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ...ಸಂತೋಷಕ್ಕೆ ನ್ಯಾಯ ಒದಗಿಸುವುದೆಂದರೆ, ನನಗೆ ನಾನು ನ್ಯಾಯ ಒದಗಿಸುವುದು ಎಂದರ್ಥ...

ಧನ್ಯವಾದಗಳು 🙏

Tuesday, November 16, 2021

*ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️*

*ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️*

*ಆಗ :* ಕೊಳ, ಬಾವಿಯ  ನೀರನ್ನು ಸೇದಿ ನೇರವಾಗಿ ಕುಡಿದು ನೂರು ವರ್ಷ ಬದುಕುತ್ತಿದ್ದರು. 
*ಈಗ :* ಶುದ್ಧೀಕರಿಸಿದ RO ನೀರು‌ ಕುಡಿದರೂ 40 ವರ್ಷಕ್ಕೇ ರೋಗಗಳು.
*ಆಗ :* ಗಾಣದಿಂದ ತೆಗೆದ‌ ಎಣ್ಣೆಯನ್ನು ಉಪಯೋಗಿಸಿದರೂ ಮುದುಕರಾಗುವವರೆಗೂ ಶ್ರಮವಹಿಸಿ ದುಡಿಯುತ್ತಿದ್ದರು. 
*ಈಗ :* ಡಬಲ್ ಫಿಲ್ಟರ್ಡ್ ಎಣ್ಣೆಯನ್ನು ಉಪಯೋಗಿಸಿದರೂ ಹೃದಯಾಘಾತದಿಂದ ಆಸ್ಪತ್ರೆಗೆ ಸೇರೋದು ತಪ್ತಿಲ್ಲ.
*ಆಗ :* RAW SALT ಬಳಸಿ ಸಹ ಚೆನ್ನಾಗಿ ಬದುಕುತ್ತಿದ್ದರು. 
*ಈಗ :* ಅಯೋಡಿನ್ ಉಪ್ಪು ಬಳಸಿದರೂ ಬಿಪಿಯಂತ ಸಮಸ್ಯೆಗಳು.
*ಆಗ :* ಇದ್ದಿಲು, ಇಟ್ಟಿಗೆ, ಬೇವಿನ ಕಡ್ಡಿ ಉಪಯೋಗಿಸಿ 80 ವರ್ಷದವರೆಗೂ ಅಗಿದು ತಿನ್ನೋ ಗಟ್ಟಿ ಹಲ್ಲುಗಳು.  
*ಈಗ :* ಸೂಪರ್ ಬ್ರಾಂಡ್ ಟೂತ್ ಪೇಸ್ಟ್ ಗಳನ್ನು ಉಪಯೋಗಿಸಿದರೂ ಸಹ ಡೆನ್ಟಿಸ್ಟ್ ಗಳ ಹತ್ತಿರ ಸಾಲು ಸಾಲು.
*ಆಗ :* ನಾಡಿ ಹಿಡಿದು ರೋಗವೇನೆಂದು ತಿಳಿದುಕೊಳ್ಳುತ್ತಿದ್ದರು. 
*ಈಗ :* ಅಲ್ಟ್ರಾ ಸೌಂಡ್, CT ಸ್ಕ್ಯಾನ್, ಬ್ರೈನ್ ಮ್ಯಾಪಿಂಗ್, ಡಿಜಿಟಲ್ ಎಕ್ಸ್ ರೇ ಗಳಿಂದಾಗ್ಯೂ ಸಹ ರೋಗವೇನೆಂದು ತಿಳಿಯುತ್ತಿಲ್ಲ.
*ಆಗ :* 10 ಮಕ್ಕಳನ್ನು ಹೆತ್ತು, ವೃದ್ಧಾಪ್ಯದಲ್ಲಿಯೂ ಹೊಲದ ಕೆಲಸಕ್ಕೆ ಹೋಗುವಷ್ಟು ಗಟ್ಟಿಮುಟ್ಟು. *ಈಗ :* ಮೊದಲ ತಿಂಗಳಿನಿಂದಲೇ ಡಾಕ್ಟರ್ ಚೆಕಪ್ ಗಳೆಲ್ಲಾ ಇದ್ದಾಗ್ಯೂ ಸಿಜೇರಿಯನ್ ಮತ್ತು ಒಂದು ಹೆರಿಗೆಗೆ ಸುಸ್ತೊ ಸುಸ್ತು.
*ಆಗ :* ವರ್ಷವಿಡೀ ಸಿಹಿಗಳನ್ನು ತಿನ್ನುತ್ತಾ ಉಲ್ಲಾಸದ ಜೀವನ... 
*ಈಗ :* ಸಿಹಿಯ ಹೆಸರು ತೆಗೆದರೇ ಸಾಕು, ಮಧುಮೇಹವೇ ಬಂದಂತ ನಿರುತ್ಸಾಹ ಜೀವನ...
*ಆಗ :* ಕೀಲುನೋವು ಇಲ್ಲದ ವೃದ್ಧರು. 
*ಈಗ :* ಯೌವನದಲ್ಲಿಯೇ ಮೊಣಕಾಲು, ಸೊಂಟ, ಮೈ ಕೈ ನೋವುಗಳು.
*ಆಗ :* ಕತ್ತಲೆಯಲ್ಲಿರುತ್ತಾ, ಕಡಿಮೆ ಬೆಳಕಿನಲ್ಲಿ ಓದಿದರೂ ಹತ್ತಿರ ಬಾರದ ಕಣ್ಣಿನ ಸಮಸ್ಯೆಗಳು. 
*ಈಗ :* ಚಿಕ್ಕ ಮಕ್ಕಳೂ ಕನ್ನಡಕಧಾರಿಗಳು.

ಹಾಗಿದ್ರೆ ಒಂದು ಪ್ರಶ್ನೆ -  *ಇಷ್ಟಕ್ಕೂ ನಮ್ಮದು ವಿಜ್ಞಾನ ಯುಗವೇ ⁉️ ಅಥವಾ ಅಜ್ಞಾನ ಯುಗವೇ ⁉️*
(ಸಂಗ್ರಹ)
🌷🌷🌷🌷🌷

Monday, November 15, 2021

💰ಬಿಟ್ ಕಾಯಿನ್ ಎಂದರೇನು?*

*💰ಬಿಟ್ ಕಾಯಿನ್ ಎಂದರೇನು?*
ಬಿಟ್ ಕಾಯಿನ್ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿದೆ. ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾರಿ ಹಗರಣ ನಡೆದಿದೆ ಎಂದು ರಾಜಕೀಯ ಪಕ್ಷಗಳು ದಿನ ನಿತ್ಯ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಆದರೆ ಬಿಟ್ ಕಾಯಿನ್ ಎಂದರೇನು ಎಂಬುದು ಶ್ರೀಸಾಮಾನ್ಯನಿಗೆ ತಿಳಿದಿಲ್ಲವೆಂಬುದು ಮಾತ್ರ ಸರಳ ಸತ್ಯ. 

ಬಿಟ್ ಕಾಯಿನ್ ಎಂಬುದೊಂದು 'ವಿದ್ಯುನ್ಮಾನ ಹಣ (digital currency).' ಬಿಟ್ ಕಾಯಿನ್   ಕೊಳ್ಳುವ, ಮಾರುವ ಮತ್ತು ಹಣವನ್ನು ಸಂಗ್ರಹಿಸಿಡುವ (investment) ಸಾಧನವೆಂದು ಈಗಾಗಲೇ ಪ್ರಪಂಚಾದ್ಯಂತ ಮಾನ್ಯತೆ ಪಡೆದಿದೆ. ಬಿಟ್ ಕಾಯಿನಿನ ವ್ಯವಹಾರವನ್ನು 'ಗುಪ್ತ ಲಿಪಿ ಶಾಸ್ತ್ರ (Cryptography),' ಎಂಬ ತಂತ್ರಜ್ಞಾನದ ಮುಖಾಂತರ ನಡೆಸಲಾಗುತ್ತದೆ.  
 
ಚಾಲ್ತಿಯಲ್ಲಿರುವ ಹಲವಾರು ವಿದ್ಯುನ್ಮಾನ ಹಣಗಳಲ್ಲಿ, ಬಿಟ್ ಕಾಯಿನ್ ಮುಂಚೂಣಿಯಲ್ಲಿದೆ.  ಲಿಟೆಕಾಯ್ನ್, ಪೀರ್ ಕಾಯಿನ್, ನೋವ ಕಾಯಿನ್ ಮುಂತಾದ ಬೇರೆ ಬೇರೆ  ವಿದ್ಯುನ್ಮಾನ ಹಣಗಳೂ ಚಲಾವಣೆಯಲ್ಲಿ ಇವೆ. 

ಬಿಟ್ ಕಾಯಿನಿನ ಸೃಷ್ಟಿಯಲ್ಲೇ ನಿಗೂಢತೆ ಇದೆ. ಯಾರಿಗೂ ಪರಿಚಯವಿರದ  'ಸತೋಷಿ  ನಕಾಮೋಟೋ' ಎಂಬ ವ್ಯಕ್ತಿ, ೨೦೦೯ರಲ್ಲಿ ಬಿಟ್ ಕಾಯಿನನ್ನು ಕಂಡು ಹಿಡಿದನು ಎಂದು ಹೇಳಲಾಗುತ್ತಿದೆ. ಜನವರಿ ೨೦೧೧ರಂದು, ಅಮೆರಿಕಾದ ಡಾಲರ್ ೧ ರಸ್ಟು ಬೆಲೆಯಿದ್ದ ಒಂದು ಬಿಟ್ ಕಾಯಿನಿನ ಬೆಲೆ, ೨೦೧೭ರ ಹೊತ್ತಿಗೆ ಡಾ. ೧೮,೦೦೦ಕ್ಕೇರಿ, ವಿಶ್ವದೆಲ್ಲರ ಹುಬ್ಬೇರುವಂತೆ ಮಾಡಿದ್ದು ಈಗ ಇತಿಹಾಸ. ಅದರ ಬೆಲೆ ಈಗ ಸುಮಾರು ಡಾ. ೭೫,೦೦೦ದಷ್ಟಿದೆ (ಅಂದರೆ ರು. ೫೨ ಲಕ್ಷ) ಎನ್ನುವುದು ಸೋಜಿಗದ ಸಂಗತಿ.   

'ವಿದ್ಯುನ್ಮಾನ ಹಣ' ಎಂದರೇನು?
 ಸಾವಿರಾರು ವರುಷಗಳ ಹಿಂದೆ, ಕವಡೆ(seashells)ಗಳನ್ನೂ ಹಣವೆಂದು ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಅಂದಿನ ಜನರುಗಳು ಕವಡೆಗಳನ್ನು(ಅಂದರೆ ಹಣವನ್ನು) ಗಳಿಸಲು ಸರಕುಗಳನ್ನು ಮಾರಾಟ ಮಾಡಬೇಕಿತ್ತು ಅಥವಾ ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಕಿತ್ತು. ಮತ್ತೆ ಕೆಲವು ಸಾಹಸಿಗಳು ಸಮುದ್ರದ ನಡುವೆ ಸಾಗಿ, ಕವಡೆಗಳನ್ನೇ ನೇರವಾಗಿ ಸಂಗ್ರಹಿಸಿ ಹಣವಂತರಾಗುತ್ತಿದ್ದರು. ಇದೇ ಅಂದಿನ ದಿನಗಳಲ್ಲಿ 'ಕವಡೆಗಳ ಗಣಿಗಾರಿಕೆ (mining seashells)' ಎನ್ನಿಸಿಕೊಳ್ಳುತ್ತಿತ್ತು. 

ಈಗ ನಾವು ಕಂಪ್ಯೂಟರ್ ಯುಗದಲ್ಲಿದ್ದೇವೆ. ಕಂಪ್ಯೂಟರ್ ಒಗಟು (puzzles)ಗಳು ಮತ್ತು ಆಟಗಳಿಗೆ ಪರಿಹಾರ(solution)ವನ್ನು ಕಂಡು ಹಿಡಿಯುವುದರಲ್ಲೇ ದಿನವಿಡೀ ಮಗ್ನರಾಗಿ, ಪರಿಹಾರ ದೊರಕಿದಾಗ ಗೆಲುವಿನ ನಗೆ ಬೀರುವ ನಮ್ಮ ಯುವಕರನ್ನು ನಾವೀಗ ನೋಡುತ್ತಿದ್ದೇವೆ. ಆ ಗೆಲುವಿನ ಅಂಕಗಳನ್ನು ದಾಖಲಿಸಿಡುವ ಕಂಪ್ಯೂಟರ್ ಜಾಲತಾಣಗಳು ಇಲ್ಲದಿಲ್ಲ. ಈ ರೀತಿಯ ಪ್ರಕ್ರಿಯೆಯೇ ವಿದ್ಯುನ್ಮಾನ ಹಣಗಳ ಮೂಲವೆಂದು ಹೇಳಬಹುದು. 

ಬಿಟ್ ಕಾಯಿನಿನಂತಹ ವಿದ್ಯುನ್ಮಾನ ಹಣದ ಪ್ರವರ್ತಕರು(promoters), ಗುಪ್ತಲಿಪಿ ಶಾಸ್ತ್ರ(Cryptography) ತಂತ್ರ ಜ್ಞಾನವನ್ನು ಬಳಸಿ, ಅತ್ಯಂತ ಕ್ಲಿಷ್ಟ ಒಗಟು(puzzles)ಗಳನ್ನು ಸೃಷ್ಟಿಸುತ್ತಾರೆ. ಅಪಾರವಾದ ಬುದ್ಧಿಶಕ್ತಿ ಮತ್ತು ಕಷ್ಟಸಹಿಷ್ಣುತೆಯುಳ್ಳ ತಂತ್ರಜ್ಞರು, ಅತ್ಯಾಧುನಿಕ ಯಂತ್ರ (sophisticated hardware)ಗಳನ್ನು ಬಳಸಿ ಅಂತಹ ಒಗಟುಗಳಿಗೆ ಪರಿಹಾರವನ್ನು ಕಂಡುಹಿಡಿಯಬಲ್ಲರು. ಅಂತಹ ಪರಿಹಾರದ ಅಂಕಗಳಿಗೆ ಈಗ 'ವಿದ್ಯುನ್ಮಾನ ಹಣ(cryptocurrency)'ವೆಂಬ ಮಾನ್ಯತೆ ದೊರೆತು, ವಿನಿಮಯದ ಮಾಧ್ಯಮವಾಗಿ ಬೆಳೆದು ನಿಂತಿದೆ.  ಅಂತಹ ಪರಿಹಾರಗಳು 'ಬ್ಲಾಕ್ ಚೈನ್ (block chain)'ನ ವಿನ್ಯಾಸದಲ್ಲಿದ್ದು, ಅದು ಒಂದು ನಿರ್ಧಿಷ್ಟ ಸಂಖ್ಯೆಯ ವಿದ್ಯುನ್ಮಾನದ ಅಂಕಗಳನ್ನು, ಅಂದರೆ 'ವಿದ್ಯುನ್ಮಾನ ಹಣ/ನಾಣ್ಯ(cryptocurrency)'ವನ್ನು  ಹೊಂದಿರುತ್ತದೆ. ಈ ಶೋಧನೆಯನ್ನೇ 'ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency)' ಎನ್ನುತ್ತಾರೆ. ಬಿಟ್ ಕಾಯಿನಿನ ಬ್ಲಾಕ್ ಚೈನಿನಲ್ಲಿ ೨೧ ದಶ ಲಕ್ಷ ಬಿಟ್ ಕಾಯಿನ್ಗಳಿದ್ದು, ಅವುಗಳ ಪೈಕಿ ಸುಮಾರು ೧೭ ದಶ ಲಕ್ಷ ಬಿಟ್ ಕಾಯಿನ್ಗಳು  ಮಾತ್ರ ಶೋಧಕರ ಕೈವಶವಾಗಿದ್ದು, ಗಣಿಗಾರಿಕೆ ಮುಂದುವರೆದಿರುತ್ತದೆ. ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency) ಕಷ್ಟದಾಯಕವಾಗಿದ್ದು, ಆ ಪ್ರಕ್ರಿಯೆಗೆ ಅಪಾರವಾದ ಹಣ ಮತ್ತು ವಿದ್ಯುಚ್ಛಕ್ತಿಯ ವ್ಯಯವಾಗುವುದಂತೂ ಖಂಡಿತ. 

ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency)ಯನ್ನು ಶ್ರೀಸಾಮಾನ್ಯರು ಮಾಡಲಾರರು. ಅಂತಹ ವಿದ್ಯುನ್ಮಾನ ಹಣವನ್ನು, ಅವುಗಳನ್ನು ಹೊಂದಿರುವವರಿಂದ, ಅದರ ಬೆಲೆಯನ್ನು ತೆತ್ತು, ಶ್ರೀಸಾಮಾನ್ಯರು ಖರೀದಿಸಬೇಕಾಗುತ್ತದೆ. ಈ ರೀತಿಯ ವ್ಯವಹಾರ ಕುದುರಿ ವಿದ್ಯುನ್ಮಾನ ಹಣಕ್ಕೆ ಭಾರಿ ಬೇಡಿಕೆಯುಂಟಾಗಿದೆ. 

ಬ್ಲಾಕ್ ಚೈನ್ (block chain) ಎಂದರೇನು?
ವಿದ್ಯುನ್ಮಾನ ಹಣ, ನಾಣ್ಯದ ಅಥವಾ ನೋಟಿನ ರೂಪದಲ್ಲಿರುವುದಿಲ್ಲ. ಅವುಗಳು ಇ-ಚೀಲ(e-wallet)ದಲ್ಲಿ ವಿದ್ಯುನ್ಮಾನ(electronic) ರೂಪದಲ್ಲಿರುತ್ತವೆ. ವಿದ್ಯುನ್ಮಾನ ಹಣವನ್ನು ಹೊಂದಿರುವವರ ವಿವರಗಳ ದಾಖಲೆಯನ್ನು ಗುಪ್ತವಾಗಿ ಇಟ್ಟಿರುವ ವಿದ್ಯುನ್ಮಾನ ಸಾಧನವನ್ನೇ ಬ್ಲಾಕ್ ಚೈನ್(block chain) ಎನ್ನುತ್ತಾರೆ. ವಿದ್ಯುನ್ಮಾನ ಹಣದ ಮಾರಾಟ,  ಖರೀದಿ ಮತ್ತು ಸಂಗ್ರಹದ ವಿವರಗಳು  ಬ್ಲಾಕ್ ಚೈನಿನಲ್ಲಿ ಅಡಕವಾಗಿದ್ದು, ಅದನ್ನು ಹೊಂದಿದವರ ಹೆಸರುಗಳು ಯಾರಿಗೂ ತಿಳಿದಿರುವುದಿಲ್ಲ. ವಿದ್ಯುನ್ಮಾನ ಹಣದ ಬಳಕೆ ಅತ್ಯಂತ ಕ್ಲಿಷ್ಟವಾದ ಗುಪ್ತಪದ(password)ದ ಬಳಕೆಯಿಂದ ಮಾತ್ರ ಸಾಧ್ಯ. ಅಂತಹ ಕ್ಲಿಷ್ಟಕರವಾದ  ಗುಪ್ತಪದವನ್ನು ಮರೆತು/ಕಳೆದುಕೊಂಡು, ಕೋಟ್ಯಂತರ ರೂಪಾಯಿಗಳಷ್ಟರ ಹಣವನ್ನು ಕಳೆದುಕೊಂಡವರಿಲ್ಲದಿಲ್ಲ. ಗುಪ್ತಪದಗಳ ಗುಟ್ಟನ್ನು ಬೇಧಿಸಿ, ಕೋಟ್ಯಂತರ ಬೆಲೆಯ ವಿದ್ಯುನ್ಮಾನ ಹಣವನ್ನು ಲಪಟಾಯಿಸಿದ ಖದೀಮರೂ ಇಲ್ಲದಿಲ್ಲ!

ವಿದ್ಯುನ್ಮಾನ ಹಣದ ನಿಯಂತ್ರಣ ಸಾಧ್ಯವೇ?
ವಿದ್ಯುನ್ಮಾನ ಹಣವೆಂಬುದು ಪ್ರಪಂಚದ ಯಾವುದೇ ಸರಕಾರದ ನಿಯಂತ್ರಣಕ್ಕೂ ಒಳಪಟ್ಟಿಲ್ಲ. ಹಾಗಾಗಿ ಯಾವ ಸರಕಾರವೂ ವಿದ್ಯುನ್ಮಾನ ಹಣದ ಬೆಲೆಗೆ ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ!  ಅದರ ಪ್ರವತಕರು ಮತ್ತು ದಾಖಲೆಗಳ ವಿವರಗಳೇ ನಿಗೂಢ. ವಿದ್ಯುನ್ಮಾನ ಹಣದ ದಾಖಲೆಗಳ ಜಾಲತಾಣವೇ ಕುಸಿದು (crashing of cryptocurrency sites) ಬಿದ್ದರೆ, ಹೂಡಿಕೆದಾರರೆಲ್ಲರೂ ಮುಗ್ಗರಿಸಿ ಬಿದ್ದಂತೆಯೇ ಸರಿ. ಒಮ್ಮಲೇ ಬಲಿಷ್ಠ ಸರಕಾರಗಳು ಮುಂದಾಗಿ, ವಿದ್ಯುನ್ಮಾನ ಹಣದ ಮೇಲೆ ನಿಯಂತ್ರಣ ಸ್ಥಾಪಿಸಬಲ್ಲ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.  ಖದೀಮರಿಂದ ಲಪಟಾಯಿಸಲ್ಪಡುವ(swindling by hackers) ಸಾಧ್ಯತೆಯೂ ಸೇರಿದಂತೆ, ವಿದ್ಯುನ್ಮಾನ ಹಣದ ವ್ಯವಹಾರದಲ್ಲಿ ಭಾರಿ ಅಪಾಯ ಅಡಗಿದೆ ಎಂಬುದು ನಾವೆಲ್ಲರೂ ಅರಿಯಬೇಕಾದ ಸತ್ಯ. ಆದರೂ ವಿದ್ಯುನ್ಮಾನ ಹಣದ ವ್ಯವಹಾರಗಳಿಗೆ, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಹಲವಾರು ಐರೋಪ್ಯ ರಾಷ್ಟ್ರಗಳೂ ಮಾನ್ಯತೆ ನೀಡಿವೆ. ಇತ್ತೀಚಿಗೆ ನಮ್ಮ ದೇಶ ಭಾರತದಲ್ಲೂ ವಿದ್ಯುನ್ಮಾನ ಹಣದ ವ್ಯವಹಾರ ಭಾರಿ ಪ್ರಮಾಣದಲ್ಲೇ ನಡೆಯುತ್ತಿದ್ದು, ಅದು ನಮ್ಮ ಸರಕಾರಕ್ಕೂ ತಿಳಿದಿದೆ. 

ಮುಂದೇನು?
ತಂತ್ರಜ್ಞಾನ(technology)ವೆಂಬುದು ದಿಢೀರನೆ ಭಾರಿ ಬದಲಾವಣೆ(disruption)ಗಳನ್ನುತಂದೊಡ್ಡಬಲ್ಲದು. ಒಂದೂ ಟ್ಯಾಕ್ಸಿಯನ್ನು ಹೊಂದಿರದ ಉಬರ್(uber)ನಂತಹ ಸಂಸ್ಥೆಗಳು, ಇಂದು  ಕೋಟ್ಯಂತರ ಟ್ಯಾಕ್ಸಿಗಳನ್ನು ನಿಯಂತ್ರಿಸುತ್ತಿವೆ. 'ಇ-ಮೇಲ್ ತಂತ್ರಜ್ಞಾನವು ಪೋಸ್ಟ್ ಆಫೀಸಗಳನ್ನು ಅನಗತ್ಯಗೊಳಿಸಿದಂತೆ,  ವಿದ್ಯುನ್ಮಾನ ಹಣವೆಂಬುದು ಬ್ಯಾಂಕ್ಗಳನ್ನು ಮುಂದೆ ಅನಗತ್ಯಗೊಳಿಸಬಹುದು' ಎಂಬುದು ತಂತ್ರಜ್ಞರ ಭವಿಷ್ಯವಾಣಿಯಾಗಿದೆ. 

ಬದಲಾವಣೆಗಳಿಗೆ ಹೊಂದಿಕೊಂಡು ಮುನ್ನಡೆಯುವುದೇ ಜೀವನ. ವಿದ್ಯುನ್ಮಾನ ಹಣದ ಬಳಕೆ ನಿಯಂತ್ರಣದ ಹಾಗು ಕಾನೂನಿನ ಚೌಕಟ್ಟುಗಳಿಗೆ ಒಳಪಡಲಿ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನು ಶ್ರೀಸಾಮಾನ್ಯರು ಮುಂದಿಡುತ್ತಾ ಸಾಗಲಿ ಎಂದು ಆಶಿಸೋಣ.

Monday, November 8, 2021

*ಸಕ್ಕರೆ ಒಂದು ಪ್ರಕಾರದ ವಿಷ.* ಇದು ಅನೇಕ ಪ್ರಕಾರದ ರೋಗ, ರುಜಿನಗಳನ್ನು ನಿಮಾ೯ಣ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುತ್ತಾರೆ.

1. *ಸಕ್ಕರೆ ಒಂದು ಪ್ರಕಾರದ ವಿಷ.* ಇದು ಅನೇಕ ಪ್ರಕಾರದ ರೋಗ, ರುಜಿನಗಳನ್ನು ನಿಮಾ೯ಣ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುತ್ತಾರೆ. 
ಇದು ಹೇಗೆ, ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ. 
2. ಸಕ್ಕರೆ ತಯಾರಿಸುವ ಪ್ರಕ್ರಿಯೆ (process) ಯಲ್ಲಿ ಸವಾ೯ಧಿಕ ಪ್ಪಮಾಣದಲ್ಲಿ ಗಂಧಕ (sulphur) ಉಪಯೋಗಿಸುತ್ತಾರೆ. 
ಗಂಧಕ ಎಂದರೇನು? 
3. ಇದು ಬಾಂಬ್ ತಯಾರಿಸಲು ಅಥವಾ ಸಿಡಿಮದ್ದು, ಪಟಾಕಿ ತಯಾರಿಸಲು ಉಪಯೋಗಿಸುವ ರಾಸಾಯನಿಕ ಪದಾಥ೯ (chemical). ಈ ಗಂಧಕ ಅತ್ಯಂತ ಜಡ ಪದಾಥ೯. ಇದು ಒಮ್ಮೆ ಶರೀರದೊಳಗೆ ಹೋದರೆ, ಶರೀರದಿಂದ ಹೊರಬೀಳುವುದಿಲ್ಲ. 
4. ಸಕ್ಕರೆಯಿಂದಾಗಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಹೆಚ್ಚುವುದರಿಂದ ಹ್ರದಯಾಗಾತ (stroke) ಆಗುತ್ತದೆ. 
5. ದೇಹದಲ್ಲಿ ತೂಕ ಹೆಚ್ಚಲು ಕಾರಣಕೂಡ ಸಕ್ಕರೆ. 
6. ದೇಹದಲ್ಲಿ ರಕ್ತದೊತ್ತಡಕ್ಕೆ (B. P.) ಕಾರಣ ಸಕ್ಕರೆ. 
7. ಸಕ್ಕರೆಯಿಂದಾಗಿ ಮೆದುಳಿಗೆ ಸ್ಟ್ರೋಕ್ ಹೊಡೆಯುತ್ತದೆ. 
8. ಸಕ್ಕರಯಿಂದಾಗಿ ಪಚನ ಶಕ್ತಿ ಕುಂದುತ್ತದೆ. 
9. ಸಕ್ಕರೆ ತಯಾರಿಸುವಾಗ 23 ಹಾನಿಕಾರಕ ರಸಾಯನಗಳ ಉಪಯೋಗ ಆಗುತ್ತದೆ. 
10. ಸಕ್ಕರೆಯು cancer ಕಾರಕ. Cancerನ ಜೀವಾಣುಗಳು ಸಕ್ಕರೆ ಇಲ್ಲದೆ ಇರಲಾರವು ಎಂದು ಪ್ರಖ್ಯಾತ ತಜ್ಞರು ಕಂಡುಕೊಂಡಿದ್ದಾರೆ. 
11. ಮನುಶ್ಯನಿಗೆ ಡಯಾಬಿಟೀಸ್ ಕಾಯಿಲೆಗೆ ಕಾರಣವೇ ಸಕ್ಕರೆ. 
12. ಎಸಿಡಿಟಿ, ಹೈಪರ್ ಎಸಿಡಿಚಿ, ಹೊಟ್ಟೆಯಲ್ಲಿ ಉರಿ ಇತ್ಯಾದಿಗಳಿಗೆ ಒಂದು ಮುಖ್ಯ ಕಾರಣ ಸಕ್ಕರೆ. 
13. ರಕ್ತದಲ್ಲಿ ಟ್ರೈಗ್ಲಿಸರಿನ್ ಹೆಚ್ಚಲು ಕಾರಣ ಸಕ್ಕರೆ. 
14. ಸಕ್ಕರೆಯ ಕೆಟ್ಟ ಪರಿಣಾಮಗಳಿಂದಾಗಿ ಪಾಶ್ವ೯ವಾಯು, ಪೆರಲಿಸಿಸ್ ಆಗಲು ಒಂದು ಮುಖ್ಯ ಕಾರಣ. 
15. ಒಟ್ಟಾರೆ ಹೇಳುವುದಾದರೆ, ಸಕ್ಕರೆಯು ಕಾಯಿಲೆಗಳ ಉದ್ಭವ ಮತ್ತು ಉಲ್ಭಣಕ್ಕೆ ಮೂಲ. 
ಆತ್ಮೀಯರೇ, ನಿಮ್ಮಲ್ಲೊಂದು ಕಳಕಳಿಯ ವಿನಂತಿ. ಸಕ್ಕರೆ ಎಂಬ ನಿದಾನ ವಿಷ (slow poison) ನಿಂದ ದೂರವಿದ್ದು, ನಮ್ಮ ಪೂವ೯ಜರಂತೆ ಬೆಲ್ಲದ ಉಪಯೋಗಕ್ಕೆ ಪರಿವತಿ೯ಸಿರಿ. ರೋಗ ಮುಕ್ತ ಜೀವನ ನಮ್ಮ, ನಿಮ್ಮೆಲ್ಲರದ್ದಾಗುವುದು. 
ಈ ಮಾಹಿತಿಯನ್ನು ನಿಮ್ಮ ಬಂದುಗಳಿಗೆ, ಮಿತ್ರರಿಗೆ, ಪರಿಚಯಸ್ಥರಿಗೆ, ಬೇರೆ ಬೇರೆ ಗ್ರೂಪ್ಗಳಿಗೆ ಸಾದ್ಯವಾದಷ್ಟು ಕಳುಹಿಸಿರಿ. ಯಾರಿಗಾದರೂ ಸಹಾಯ ಆಗುವುದಕ್ಕೆ ಸಹಕಾರ ಮಾಡಿದಂತಾಗಲಿ.

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World