www.dgnsgreenworld.blogspot.com

Sunday, June 20, 2021

ಪೆಟ್ರೋಲ್ ನೂರಾದದ್ದು ಕಂಡ ನನಗೆ ಸ್ವಾತಂತ್ರ್ಯ ಬಂದ 𝟕𝟎 ವರ್ಷಗಳ ನಂತರವೂ ಕತ್ತಲಲ್ಲಿದ್ದ 𝟏𝟖𝟎𝟎𝟎 ಹಳ್ಳಿಗಳಿಗೆ ವಿದ್ಯುತ್ ತಲುಪಿದ್ದು ಕಾಣಲೇ ಇಲ್ಲ.

👇 *"ಪೆ_ಟ್ರೋಲಾಯಣ"*👇

 *👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಸ್ವಾತಂತ್ರ್ಯ ಬಂದ 𝟕𝟎 ವರ್ಷಗಳ ನಂತರವೂ ಕತ್ತಲಲ್ಲಿದ್ದ 𝟏𝟖𝟎𝟎𝟎 ಹಳ್ಳಿಗಳಿಗೆ ವಿದ್ಯುತ್ ತಲುಪಿದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ಸಿಗುವಂತಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಗಂಗಾ ನದಿ ಶುಚಿಯಾಗಿ ಸಂಭ್ರಮಿಸಿದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಬ್ಯಾಂಕ್ ಮುಖವನ್ನೇ ನೋಡಿಲ್ಲದ ಕೋಟಿ-ಕೋಟಿ ಜನರ ಖಾತೆ ತೆರೆಯುವಂತಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಬಯಲುಶೌಚ ಮುಕ್ತವಾದ ನನ್ನ ದೇಶ ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹ‌ವಾಯಿ ಚಪ್ಪಲಿ ಹಾಕುವವ ಹವಾಯಿ ಜಹಾಜ್ ನಲ್ಲಿ ಸಂಚರಿಸುವಂತಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಸಾಲುಮರದ ತಿಮ್ಮಕ್ಕರಂತಹರನ್ನು ಪದ್ಮ ಪ್ರಶಸ್ತಿಗಳು ಹುಡುಕಿಕೊಂಡು ಬಂದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ವಿಶೇಷ ವ್ಯಕ್ತಿಗಳ ವಾಹನಗಳಿಂದ ಕೆಂಪು ದೀಪ ಮಾಯವಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹಂಚಿಹೋಗಿದ್ದ ನನ್ನ ದೇಶವನ್ನು ಒಗ್ಗೂಡಿಸಿದವನ ವಿಶ್ವದ ಅತಿ ಎತ್ತರದ ಪ್ರತಿಮೆ ಸ್ಟ್ಯಾಚು ಆಫ್ ಯೂನಿಟಿ ತಲೆ ಎತ್ತಿ ನಿಂತದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಸಿಗುವಂತಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ರಕ್ಷಣಾ ವ್ಯವಸ್ಥೆಗೆ ಆತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇರ್ಪಡೆಗೊಂಡಿದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ದಶಕಗಳ ಕನಸಾದ ರಫೇಲ್ ಬಂದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಟ್ರಿಪಲ್ ತಲಾಕ್ ತರಹದ ಒಂದು ಅನಿಷ್ಟ ಪದ್ಧತಿ ರದ್ದಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ದೇಶದ ಭದ್ರತೆಗೆ ಮಾರಕವಾಗಿರುವ ಅಕ್ರಮ ನುಸುಳುಕೋರರನ್ನು ಒದ್ದು ಓಡಿಸಲು ಬಂದಿರುವ ಸಿಎಎ ಕಾನೂನು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಶತಮಾನಗಳಿಂದ ಕಗ್ಗಂಟಾಗಿದ್ದ ರಾಮ ಮಂದಿರ ವಿವಾದ ಯಾವುದೇ ತಂಟೆ-ತಕರಾರಿಲ್ಲದೆ ಇತ್ಯರ್ಥವಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಭವ್ಯ ರಾಮಮಂದಿರ ನಿರ್ಮಾಣ ಆರಂಭವಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಆರ್ಟಿಕಲ್ 𝟑𝟕𝟎 ರದ್ದಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ದೇಶದ ನಂಬರ್ 1 ವೈರಿ ಚೀನಾವನ್ನು ಹಿಮ್ಮೆಟ್ಟಿಸಿದ್ದು ಕಾಣಲೇ ಇಲ್ಲ.*

*ಪೆಟ್ರೋಲ್ ನೂರಾದದ್ದು ಕಂಡ ನನಗೆ ಪಾಕಿಸ್ತಾನಕ್ಕೆ ಅವರದೇ ನೆಲದಲ್ಲಿ ನುಗ್ಗಿ ಹೊಡೆದು ಬುದ್ಧಿ ಕಲಿಸಿದ್ದು ಕಾಣಲೇ ಇಲ್ಲ.*

*ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ವಿಜ್ಞಾನಿಗಳ ಪರಿಶ್ರಮದಿಂದ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಯಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಇಡೀ ವಿಶ್ವವೇ ಯೋಗದೆಡೆಗೆ ಹೊರಳುವಂತೆ ಮಾಡಿದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ರೈತರ ಖಾತೆಗೆ ವಾರ್ಷಿಕ 𝟔𝟎𝟎𝟎 ಎಲ್ಲಿಗೂ ಅಲೆಯದೆ ಸೀದಾ ಖಾತೆಗೆ ಜಮೆಯಾಗುವಂತೆ ಆದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹೊಸ ಶೈಕ್ಷಣಿಕ ನೀತಿ ಜಾರಿಯಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹೊಸ ಕೃಷಿ ಕಾನೂನು ಜಾರಿಯಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ವೈದ್ಯಕೀಯ ಕ್ಷೇತ್ರ ಕರೋನಾದಂತಹ ಮಹಾಮಾರಿಗೆ ಲಸಿಕೆ ಕಂಡುಹಿಡಿದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಯಾವುದೇ ರಾಷ್ಟ್ರ ತೊಂದರೆಯಲ್ಲಿದ್ದರೆ ಮೊದಲು ಸಹಾಯಹಸ್ತ ಚಾಚುವ ನನ್ನ ದೇಶ ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹಾವಾಡಿಗರ ದೇಶ ಎಂದು ಬಿಂಬಿತವಾಗಿದ್ದ ನನ್ನ ದೇಶದ ಇಮೇಜು ಬದಲಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹಂತ ಹಂತವಾಗಿ ಆತ್ಮ ನಿರ್ಭರವಾಗುತ್ತಿರುವ ನನ್ನ ದೇಶ ಕಾಣಲೇ ಇಲ್ಲ.*

*👉ಮೋದಿ ಫೋಬಿಯಾ ಇರುವ ನನಗೆ ಕಂಡಿದ್ದು ಪೆಟ್ರೋಲ್ ನೂರಾದದ್ದು ಮಾತ್ರ...*

*🙏🤝ದೇಶವನ್ನು ಕಾಪಾಡುತ್ತಿರುವ ಒಬ್ಬ ನಿಜವಾದ ರಾಜಕೀಯ ನೇತಾರನನ್ನು ನಾವ್ಯಾರು ಕ್ಷುಲ್ಲಕ ಕಾರಣಕ್ಕೆ ಕಳೆದುಕೊಳ್ಳಬಾರದು. ನೆನಪಿರಲಿ ಬಂಧುಗಳೆ ರಾಜಋಷಿ ಮೋದಿ ನಿಜವಾದ ಭಾರತ ರಕ್ಷಕ🙏*
ಜೈ ಮೋದಿಜಿ 🙏🕉️🇮🇳💖

Friday, June 11, 2021

ಮೊದಲು ಭಾರತೀಯರು ಮಾನಸಿಕವಾಗಿ ಸ್ವತಂತ್ರ ರಾಗಬೇಕಾಗಿದೆ.

ಮೊದಲು ಭಾರತೀಯರು ಮಾನಸಿಕವಾಗಿ ಸ್ವತಂತ್ರ ರಾಗಬೇಕಾಗಿದೆ.ಇಂದು ಬಹುತೇಕ ಭಾರತೀಯರ ಮನಸ್ಥಿತಿ ಹೇಗಿದೆ ಎಂದರೆ ಯಾವುದೋ ವಿಜ್ಞಾನಿಗಳು ಅಥವಾ ಕಾರ್ಪೊರೇಟ್ ಕಂಪೆನಿಗಳು ಸಿಪಾರಸ್ಸು ಮಾಡಿದರೆ ಕೊಳಚೆಯನ್ನಾದರೂ ತಿನ್ನುವ ಮಾನಸಿಕ ಪರಿಸ್ಥಿತಿ ನಮ್ಮದಾಗಿದೆ ಮೊದಲು ನಾವು ಅದರಿಂದ ಹೊರಬರಬೇಕಿದೆ
ಪ್ರಸ್ತುತ ಇರುವ ಸಾಂಕ್ರಾಮಿಕ ರೋಗಗಳಿಗೆ ನಮ್ಮ ಆಹಾರ ಪದ್ದತಿ ಯಲ್ಲೇ ಔಷಧಿಗಳಿವೆ ಆದರೆ ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ ಮಾಹಿತಿ ಇದ್ದರೂ ನಂಬಿಕೆ ಇಲ್ಲ ಯಾಕಂದ್ರೆ ನಾವು ಯಾರು ಮತ್ತು ನಾವು ಏನು ಎಂಬುದನ್ನೇ ಮರೆತು ಬದುಕುವ ಸಮಾಜ ನಮ್ಮದಾಗಿದೆ......
ಇದು ಎಲ್ಲಿಯವರೆಗೆ ಅಂದರೆ WHO IMA ನಂತಹ ಅಲೋಪತಿ ದಳ್ಳಾಳಿಗಳು ಹೇಳಿದರೆ ಮಾತ್ರ ನಾವು ನಂಬಬಲ್ಲೆವು ನಮ್ಮ ಹಿರಿಯರ  ಔಷದೀಯ ಪದ್ದತಿ ಅಥವಾ ನಮ್ಮ ವೇದ ಪುರಾಣಗಳಲ್ಲಿ ಸೂಚಿಸಲ್ಪಟ್ಟ ಮನೆ ಮದ್ದುಗಳ ಮೇಲೆ ನಮಗೇ ನಂಬಿಕೆ ಇಲ್ಲದಾಗಿದೆ ಅಷ್ಟರಮಟ್ಟಿಗೆ ನಮ್ಮ ತನವನ್ನು ಕಳಕೊಂಡಿದ್ದೇವೆ.
ಆಯುರ್ವೇದ ಅಂದ್ರೆ ಬರೀ ಮೆಡಿಕಲ್ ನಲ್ಲಿ ಸಿಗುವ ಔಷದ ಮಾತ್ರ ಅಲ್ಲ ಹಿಂದೆ ನಾವು ನಮ್ಮ ಮನೆಗಳಲ್ಲೇ ಹಬ್ಬಹರಿದಿನಗಳ ನೆಪದಲ್ಲಿ,ಹಾಗೂ ನಿತ್ಯ ಸೇವಿಸುವ ವಿವಿಧ ರೀತಿಯ ಸೊಪ್ಪು ತರಕಾರಿ ಮತ್ತು ಮಸಾಲೆಗಳಲ್ಲೇ ಅಡಗಿದೆ ಈ ಆಯುರ್ವೇದ ಔಷಧ. ಅದರ ಬಗ್ಗೆ ನಮಗೆಷ್ಟು ಜನರಿಗೆ ಮಾಹಿತಿ ಇದೆ ?.....
ಇಲ್ಲ ಇಂದಿನ ನಮ್ಮ ಆಹಾರ ಪದ್ದತಿ ? ನಮಗೆಲ್ಲಾ ಇವತ್ತು ಎಲ್ಲಾ ರಾಸಾಯನಿಕ ಯುಕ್ತ ರೆಡಿಮೇಡ್ ಆಹಾರ ಗಳೇ ಬೇಕು .ಯಾಕಂದ್ರೆ ಅದನ್ನು ದೊಡ್ಡ ಕಂಪೆನಿಗಳು ಹೆಸರಾಂತ  ಬ್ರಾಂಡ್ ಗಳಲ್ಲಿ ಮಾರುತ್ತಾರೆ...ಎಂತಹ ವಿಪರ್ಯಾಸ?
ನಮ್ಮಲ್ಲಿ ಎಷ್ಟು ಜನರಿಗೆ ಪಂಚಗವ್ಯ ದ ಮಹತ್ವ ಗೊತ್ತು ? ಕಾಳುಮೆಣಸಿನ ಔಷಧೀಯ ಗುಣ ಗೊತ್ತು? ಜೀರಿಗೆ ಧನಿಯಾ ಕಾಳಿನ ಮಹತ್ವ ನಮಗೇನು ತಿಳಿದಿದೆ ?
ಅರಶಿಣ ಶುಂಠಿ ಮಹತ್ವ ಬರೀ ಮಸಾಲೆಗೆ ಸೀಮಿತವಾಗಿದೆ
ತುಳಸಿ ಯ ಮಹತ್ವ ಪೂಜೆಗಷ್ಟೇ ಸೀಮಿತ ಮನೆಯಂಗಳದ ಹೂದೋಟ ದಲ್ಲಿರುವ ದಾಸವಾಳ ನಿತ್ಯಪುಷ್ಪ ಬರೀ ಅಲಂಕಾರಕ್ಕಷ್ಟೇ ಸೀಮಿತ ಗರಿಕೆ ಯ ಔಷದೀಯ ಉಪಯೋಗದ ಮಾಹಿತಿ ಎಲ್ಲೂ ಇಲ್ಲ  ಅಜ್ಜಿ ಕಾಡಿನಿಂದ ಅದಾವುದೋ ಗಿಡಗಳ ಚಿಗುರು ಆರಿಸಿಕೊಂಡು ಬಂದು  ಮಾಡಿಕೊಡುತಿದ್ದ ರೈತದ ಬಗ್ಗೆ ನೆನಪೇ ಇಲ್ಲ .
ಎಷ್ಟು ಜನರಿಗೆ ತಿಳಿದಿದೆ ಗೊನೆ ಬಿಟ್ಟ ಬಾಳೆಗಿಡದ ಒಳಗಿನ ಕಾಂಡ ಕಿಡ್ನಿಯಲ್ಲಿನ ರೋಗಕ್ಕೆ ಉಪಯೋಗ ಎಂದು ಮನೆಯ ಕೈತೊಟದಲ್ಲಿರುವ ಡೊಡ್ಡಪತ್ರೆ ಒಂದೆಲಗ ನೆಲನೆಲ್ಲಿ ಎಷ್ಟು ಜನರಿಗೆ ಪರಿಚಯ ಇದೆ? ಬಜೆ ಹಿಪ್ಪಲಿ ಯ ಹೆಸರುಗಳು ಎಷ್ಟು ಜನರಿಗೆ ಗೊತ್ತು ನೆಲ್ಲಿಯಲ್ಲಿರುವ  ಔಷಧೀಯ ಗುಣ ಯಾರಿಗೆ ಗೊತ್ತು ಪಾರಜಾತ ಪುಷ್ಪ ಮತ್ತು ಅದರ ಗಿಡದ ಭಾಗಗಳಲ್ಲಿರುವ ಮದ್ದಿನ ಗುಣ ನಮಗೇನು ತಿಳಿದಿದೆ 
 ಹೇಳಲಿಕ್ಕೆ ಹೋದರೆ ಇನ್ನೂ ಮತ್ತಷ್ಟೋ ಅನೇಕ ....
ಸೌಂದರ್ಯ ವರ್ಧಕ ವಾಗಿ ರಾಸಾಯನಿಕ  ಕ್ರೀಂ ಬಳಸುವ ನಾವು ಮನೆಯಲ್ಲೇ ಇರುವ ಲೋಳೆಸರ ( ಅಲೋವೆರ) ಮತ್ತು ಹಸಿ ಅರಿಷಿಣ ತೇದು ಹಚ್ಚಿದರೆ ಮುಖದ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ ಎಂದು ಮರೆತೇ ಬಿಟಿಟಲ್ವಾ....ಮಾಮೂಲಿ ಕೆಮ್ಮಿಗೂ ಅಲೋಪತಿ ಮಾತ್ರೆ ತೆಗೆದು ಕೊಳ್ಳುವ ನಾವು ಅದನ್ನು ಕಾಳು ಮೆಣಸು(ಪೆಪ್ಪರ್) ಮತ್ತು ಜೇನಿನಲ್ಲೇ ಕಡಿಮೆ ಆಗುತ್ತೆ ಅನ್ನೋದನ್ನೇ ಮರೆತಿಲ್ಲವೇ?.
ಇಷ್ಟು ಔಷಧೀಯ ಗುಣಗಳಿರುವ ಮನೆ ಮದ್ದುಗಳಿರುವ ನಮ್ಮ ದೇಶದಲ್ಲಿ ಹೀಗೇಕೆ ? ನಿಜ ನಾವು ನಮ್ಮ ತನ ಮೆರೆತಿದ್ದೇವೆ ? ನಾವು ಯಾರು ಮತ್ತು ನಾವು ಏನು ಎಂಬುದನ್ನೇ ಮರೆತು ನಮ್ಮ ಸಂಸ್ಕೃತಿ ಬಿಟ್ಟು ಬದುಕುತಿದ್ದೇವೆ ಇದು ಬದಲಾಗಬೇಕು ಮತ್ತೆ ನಾವ್ಯಾರು ಎಂಬುದನ್ನು ಅರಿತು ಬದುಕಿ ಈ ಮೆಡಿಕಲ್ ಮಾಫಿಯಾ ವನ್ನು ಎದುರಿಸಿ ದೇಶವನ್ನು ರಕ್ಷಿಸಬೇಕಾಗಿದೆ.
ಇನ್ನು ಮನೆ ಮದ್ದಾಗಲೀ ಆಯುರ್ವೇದ ವಾಗಲೀ ಅಲೋಪತಿಯಂತೆ ನಮ್ಮ ದೇಹಕ್ಕೆ ಯಾವುದೇ ಹಾನಿಮಾಡದೆ ರೋಗಬನ್ನು ಬುಡದಿಂದ ಕಿತ್ತು ಬಿಸಾಕಿ ಮತ್ತೆಂದೂ ಬಾರದಿರುವಂತೆ ನಮ್ಮ ದೆಃವನ್ನು ಕಾಪಾಡುತ್ತದೆ.
ಇಂದು ನಮ್ಮ ಆಯುರ್ವೇದ ಇಷ್ಟು ಕಠಿಣ ಸವಾಲುಗಳನ್ನು ಎದುರಿಸಲು ಕಾರಣವೂ ಇದೇ ಭಾರತೀಯರು ಮತ್ತೆ ತಮ್ಮ ಮೂಲವಾದ ಆಯುರ್ವೇದ ದ ಕಡೆಗೆ ವಾಲಿದರೆ ಮತ್ತೆ ಅಲೋಪತಿಯ ಮಾರುಕಟ್ಟೆ ಕುಸಿತಗೊಂಡು ತಮ್ಮ ಬಂಡವಾಳಕ್ಕೆ ಕುತ್ತು ಬರುವುದು ಖಚಿತ ಅನ್ನೋದು ಫಾರ್ಮಾ ಲಾಬಿಗಳ ಭಯ ಮಾತ್ರ ಅಲ್ಲ ಇದರ ಹಿಂದೆ ಇರೋ ಕ್ರಿಶ್ಚಿಯನ್ ಮಿಷಙರಿಗಳಿಗೂ ಇದು ಅಪತ್ಯ ಯಾವಾಗ ಭಾರತೀಯ ಮತ್ತೆ ಆಯುರ್ವೇದ ದ ಕಡೆಗೆ ವಾಲಿದರೆ ಭಾರತೀಯ ಮೂಲಕ್ಕೆ ಹಿಂತಿರುಗಿದರೆ ಮತಾಂತರದ ಕೆಲಸವೂ ಅಸಾಧ್ಯ ಅನೋದಕ್ಕಾಗೇ ಅವರು ಆಯುರ್ವೇದ ದ ಬಗ್ಗೆ ಅಪಪ್ರಚಾರ ಸುಳ್ಳು ಮಾಹಿತಿ ಹರಡಿ ಜನರಲ್ಲಿ ಗೊಂದಲ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಲು ತಿದ್ದಾರೆ....
ಇದಕ್ಕೆಲ್ಲ ಪರಿಹಾರ ಭಾರತೀಯರು ಮಾನಸಿಕ ಗುಲಾಮಿತನದಿಂದ ಹೊರಬಂದು ಮತ್ತೆ ಭಾರತೀಯ ಚಿಂತನೆಯ ಭಾರತೀಯ ರಾಗೋದು ಒಂದೇ ಪರಿಹಾರ.....
ಸರ್ವೇ ಭವಂತು ಸುಖಿನಃ

ವಂದೇ ಮಾತರಂ
ಮತ್ತೆ ನಾವು ನಾವಾಗೋಣ. ಫಾರ್ವರ್ಡ್ ಮೆಸೇಜ್ ತುಂಬಾ ಉಪಯುಕ್ತ ಅನಿಸಿ ಗುಂಪಿನಲ್ಲಿ ಹಾಕಿದ್ದೆನೆ.🙏

Friday, June 4, 2021

ಋಣಾತ್ಮಕ ಚಿಂತನೆ ದೇಹಕ್ಕೂ ಹಾಗೂ ಮನಸಿಗೂ ಎರಡಕ್ಕೂ ಕೆಟ್ಟದ್ದೇ...

ಋಣಾತ್ಮಕ ಚಿಂತನೆ ದೇಹಕ್ಕೂ ಹಾಗೂ ಮನಸಿಗೂ ಎರಡಕ್ಕೂ ಕೆಟ್ಟದ್ದೇ...

    ಋಣಾತ್ಮಕ ಚಿಂತನೆ ಎಂಬುದು ಮನಸ್ಸಿಗೆ ಅಂಟಿದ ಕ್ಯಾನ್ಸರ್ ನಂತೆ. ನಮ್ಮನ್ನು ತಿಂದು ತಿಂದು ಕೊಲ್ಲುತ್ತದೆ.

    ಎಲ್ಲದರಲ್ಲೂ ತಪ್ಪು ಹುಡುಕಿಕೊಂಡು ಹೋದರೆ ನಮಗೆ ಪರಿಪೂರ್ಣವಾದ ವಸ್ತು ಹಾಗೂ ವ್ಯಕ್ತಿ ಎಲ್ಲೂ ಸಿಗುವುದೇ ಇಲ್ಲ. ದೇವರೂ ಸಹ ತಪ್ಪು ಮಾಡುತ್ತಾನೆ ,ಅಂದಮೇಲೆ ನಾವೇನು ಮಹಾ ! ಅಲ್ಲವೇ....

    ಎಲ್ಲರಿಗೂ ಲೋಟದಲ್ಲಿ ನೀರು ತುಂಬಿರುವ ಬಗೆಗಿನ ಆಲೋಚನೆ ಕುರಿತು ಇರುವ ಕಥೆಯ ಬಗ್ಗೆ ತಿಳಿದೇ ಇದೆ.
ಒಬ್ಬರು ಅರ್ಧ ಖಾಲಿ ಇದೆ ಅಂದ್ರೆ ಇನ್ನೊಬ್ಬರು ಅರ್ಧ ತುಂಬಿದೆ ಎನ್ನುತ್ತಾರೆ, ಇಬ್ಬರ ಉತ್ತರವೂ ಸರಿ ಆದರೆ ಅರ್ಧ ತುಂಬಿದೆ ಅನ್ನುವ ಧನಾತ್ಮಕ ಚಿಂತನೆ ನಮ್ಮ ಬದುಕಿನ ಪಥವನ್ನೆ ಬದಲಿಸುತ್ತದೆ. ಕೊಂಕು ಹೇಳುವ, ಎಲ್ಲದರಲ್ಲೂ ನ್ಯೂನತೆ ಹುಡುಕುವುದು ಸುಲಭ ಆದರೆ ಅದು ಜೀವನಕ್ಕೆ ಮಾರಕ.

    ಒಂದು ಕಥೆ ಹೇಳುವೆ ಕೇಳಿ, ಒಮ್ಮೆ ಬಾಟ ಕಂಪೆನಿ ಯವರು ಆಫ್ರಿಕಾದ ಒಂದು ಪ್ರದೇಶದಲ್ಲಿ ತಮ್ಮ ಶಾಖೆಯನ್ನು ಸ್ಥಾಪನೆ ಮಾಡಲು ನಿರ್ಧರಿಸಿದರು. ಅದಕ್ಕಾಗಿ ಒಂದು ಸಣ್ಣ ಸರ್ವೇ ಮಾಡಬೇಕೆಂದು ಇಬ್ಬರು ಮಾರ್ಕೆಟಿಂಗ್ ಆಫೀಸರ್ ಗಳನ್ನು ಅಲ್ಲಿಗೆ ಕಳುಹಿಸಿದರು. ಒಂದು ವಾರದ ಸರ್ವೇ ನಂತರ ಬಂದ ಆ ಇಬ್ಬರು ತಮ್ಮ ಸಲಹೆಗಳನ್ನು ಸಲ್ಲಿಸಿದರು. 

    ಮೊದಲನೇ ಅಧಿಕಾರಿ ಹೇಳಿದಂತೆ " ಅಲ್ಲಿ ಯಾರೂ ಸಹ ಚಪ್ಪಲಿಯನ್ನು ಧರಿಸುತ್ತಿರಲ್ಲಿಲ್ಲ ,ಆದ್ದರಿಂದ ಅಲ್ಲಿ ಚಪ್ಪಲಿ ಅಂಗಡಿ ತೆರೆದರೆ ಯಾವುದೇ ವ್ಯಾಪಾರ ಆಗುವುದಿಲ್ಲ, ಆದ್ದರಿಂದ ಅಂಗಡಿ ತೆರೆಯುವ ಪ್ಲಾನ್ ಅನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಶಿಫಾರಸು ಮಾಡಿದರು.

    ಇನ್ನು, ಮತ್ತೊಬ್ಬ  ಅಧಿಕಾರಿಯು ಬೇರೆಯೇ ರೀತಿಯ ಸಲಹೆಗಳನ್ನು ಸಲ್ಲಿಸಿದನು. ಇದನ್ನು ನೋಡಿದ ಕಂಪನಿಯವರಿಗೆ ಆಶ್ಚರ್ಯ ಆಗಿತ್ತು. ಅವರು ಹೇಳಿದ್ದ ಪ್ರಕಾರ ಅಲ್ಲಿ ಯಾರೂ ಸಹ ಚಪ್ಪಲಿಗಳನ್ನು ಬಳಸುತ್ತಿರಲಿಲ್ಲ , ಅದುವೇ ನಮಗೆ ಟ್ರಂಪ್ ಕಾರ್ಡ್, ನಾವು ಇಲ್ಲಿ ಚಪ್ಪಲಿಯನ್ನು ಪರಿಚಯಿಸಿದರೆ ನಮಗೆ ಉತ್ತಮ ವ್ಯಾಪಾರ ಆಗುತ್ತದೆ ಎಂದು ಆತ್ಮವಿಶ್ವಾಸದಿಂದ ವರದಿ ನೀಡಿದ್ದನು. ಇದೇ ತಿಳಿಸುವುದು, ಧನಾತ್ಮಕವಾಗಿ ಹಾಗೂ ಋಣಾತ್ಮವಾಗಿ ಚಿಂತಿಸುವರಿಗೆ ಇರುವ ವ್ಯತ್ಯಾಸ..ಎಲ್ಲಾ ವಿಷಯಗಳಲ್ಲೂ ಸಹ ಋಣಾತ್ಮಕ ಹಾಗೂ ಧನಾತ್ಮಕ ವಿಷಯ ಇರುತ್ತದೆ ಅದರಲ್ಲಿ ನಾವು ಯಾವುದನ್ನು ಸ್ವೀಕರಿಸುತ್ತೇವೆ ಅನ್ನುವುದು ಬಹಳ ಪ್ರಮುಖ ಆಗಿರುತ್ತದೆ.

    ನಾವು ಮಾತನಾಡುವ ಪದಗಳಿಗಿಂತ ಅದನ್ನು ಹೇಗೆ ಸ್ವೀಕರಿಸುತ್ತೇವೆ ಅನ್ನುವ ಮನೋಭಾವ ಮುಖ್ಯ ಆಗಿರುತ್ತದೆ. ನಮಗೆ ತುಂಬಾ ಪ್ರೀತಿಸುವ ವ್ಯಕ್ತಿಗಳು ಏನಾದ್ರೂ ತಪ್ಪು ಮಾಡಿದರೂ ಹಾಗೂ ತಪ್ಪು ಮಾತನಾಡಿದರು ಸಹ ನಮಗೆ ಅವರು ಇಷ್ಟ ಇದ್ದರೆ ಅದನ್ನು ನಾವು ಧನಾತ್ಮಕವಾಗಿ ತೆಗೆದುಕೊಳ್ಳುತ್ತೇವೆ, ಕೋಪಗೊಳ್ಳುವುದಿಲ್ಲ. ಅದೇ ವ್ಯಕ್ತಿಗಳನ್ನು ನಾವು ದ್ವೇಷಿಸುತ್ತಿದ್ದರೆ ಅದೇ ಮಾತುಗಳಿಗೆ ನಾವು ಕೋಪ ಗೊಳ್ಳುತ್ತೇವೆ. ಮಾತುಗಳು ಅದೇ ಆಗಿರುತ್ತದೆ ಆದರೆ ಅದನ್ನು ಸ್ವೀಕರಿಸುವ ಮನೋಭಾವ ಬೇರೆಯದೇ ಆಗಿರುತ್ತದೆ. ಆದ್ದರಿಂದ ನಮ್ಮ ಮನಸ್ಸು ಧನಾತ್ಮಕವಾಗಿ ಚಿಂತಿಸಬೇಕು ಹಾಗೂ ಧನಾತ್ಮಕವಾಗಿ ಸ್ವೀಕರಿಸಬೇಕು. ತಪ್ಪು ಮಾಡಿದ್ದೀಯ ಎಂದು ಯಾರಾದರೂ ಹೇಳಿದರೆ ಅದನ್ನು ನಮ್ರತೆಯಿಂದ ಸ್ವೀಕರಿಸಬೇಕು. ಅದು ನಮ್ಮನ್ನು ಜೀವನದ ಹಾಗೂ ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ.

    ಕೇವಲ ಧನಾತ್ಮಕವಾಗಿ ಮಾತ್ರ ಇರಬೇಕು ಎಂದು ನಾನು ಹೇಳುವುದಿಲ್ಲ. ಬದಲಾಗಿ ಒಮ್ಮೊಮ್ಮೆ ಋಣಾತ್ಮಕ ಚಿಂತನೆಗಳು ಕೂಡ ಅವಶ್ಯಕ. ವಿಮಾನ ಕಂಡುಹಿಡಿದ ನಂತರ ಬಂದ ಒಂದು ಋಣಾತ್ಮಕ ಚಿಂತನೆ ( ಅಪಘಾತ ಆದರೆ) ಅಂದು ಪ್ಯಾರಾಚೂಟ್ ಕಂಡುಹಿಡಿಯಲು ಸಹಾಯ ಆಯಿತು. ಹಾಗೆಯೇ ಒಮ್ಮೊಮ್ಮೆ ಒಂದೊಂದು ವಿಷಯಗಳನ್ನು ಅರಿಯಲು ಋಣಾತ್ಮಕ ಆಲೋಚನೆ ಬೇಕಾಗುತ್ತದೆ. ಆದರೆ ಅದೇ ಆಲೋಚನೆಗಳು ನಮ್ಮ ಜೀವನವನ್ನು ನಡೆಸಬಾರದು ಅಷ್ಟೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುತ್ತಾರಲ್ಲ ಹಾಗೆ.

    ಋಣಾತ್ಮಕ ಚಿಂತನೆಗಳು ಹೆಚ್ಚಿದಂತೆ ಮನಸ್ಸಿನಲ್ಲಿ ಒತ್ತಡ ಹೆಚ್ಚುತ್ತದೆ. ಒತ್ತಡ ಹೆಚ್ಚಿದಂತೆ ಮನಸ್ಸು–ದೇಹ  ದಣಿಯುತ್ತದೆ.ದಣಿವಿನಿಂದ ಅಲಸ್ಯವೂ ಎದುರಾಗುತದೆ. ಋಣಾತ್ಮಕ ಚಿಂತನೆ  ನಮ್ಮನ್ನು ನಿಧಾನವಾಗಿ ಚಿಂತೆಗೆ ನೂಕುತ್ತದೆ. ಚಿಂತೆಯು ಕೊನೆಗೆ ಚಿತೆಯ ಮೇಲೇರುವಂತೆ ಮಾಡಿಬಿಡುತ್ತದೆ. ಎಷ್ಟು ಪ್ರಭಾವ ಇದೆ ಅಲ್ಲವೇ ಒಂದು ಸಣ್ಣ ಋಣಾತ್ಮಕ ಚಿಂತನೆಗೆ. 

    ಮದುವೆ ಮನೆಗೆ ಹೋಗಿ ಕೇವಲ ಊಟ ಮಾಡಿ , ನನಗೆ ಐಸ್ ಕ್ರೀಂ ಸಿಗಲಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ಮುರಿದ ಮಹಾಪುರುಷರು ಇದ್ದಾರೆ, ಮನೆಯಲ್ಲಿ ಮಾಡಿದ ಸಾಂಬರಲ್ಲಿ ಉಪ್ಪು ಕಡಿಮೆ ಇದೆ ಎಂದು ಹೆಂಡತಿಗೆ ವಿಚ್ಛೇದನ ನೀಡಲು ಹೊರಟ ವೀರರಿದ್ದಾರೆ. ಅರಳಿಕಟ್ಟೆಯಲ್ಲಿ ಕುಳಿತು ,ಪಾರ್ಲಿಮೆಂಟ್ ಮಾದರಿಯ ಚರ್ಚೆ ಮಾಡಿ ಕೇವಲ ತಪ್ಪು ಹುಡುಕುವ ಗಾವ ಸಚಿವರು ಇದ್ದಾರೆ. ಎಲ್ಲದರಲ್ಲೂ ಋಣಾತ್ಮಕ ಚಿಂತನೆ ಮಾಡುವ ಹಲವರು ನಮ್ಮ ಮದ್ಯೆಯೆ ಇದ್ದಾರೆ. ಇದರಿಂದ ನಮಗೆ ಪ್ರಯೋಜನ ಕಡಿಮೆ. ಎಲ್ಲವನ್ನೂ ಮಾಡುವ ಮೊದಲೇ ಫಲಿತಾಂಶದ ಬಗ್ಗೆ ನಕಾರಾತ್ಮಕ ಯೋಚನೆ ಸಲ್ಲ.

    ಪರೀಕ್ಷೆ ಬರೆಯುವ ಮುಂಚೆಯೇ ನಾನು ನಪಾಸಾದರೆ ? ಪ್ರಯತ್ನ ಮಾಡುವ ಮುಂಚೆಯೇ ಸೋತರೆ ಎಂದು ಆಲೋಚನೆ ಮಾಡಿದರೆ ಏನು ಸಿಗುತ್ತದೆ ಹೇಳಿ,,, ಪರೀಕ್ಷೆ ಹಾಗೂ ಪ್ರಯತ್ನ ಮಾಡಿದ ನಂತರ ತಾನೇ ಗೊತ್ತಾಗುವುದು ಫಲ ಏನು ಬರುವುದು ಎಂದು.. ಏನೂ ಮಾಡದೇ ಇದ್ದರೆ ನಮಗಿರುವುದು ಒಂದೇ ಫಲ ಅದು ನಪಾಸು ,ಆದರೆ ಪ್ರಯತ್ನ ಮಾಡಿದರೆ ನಪಾಸಿನ ಜೊತೆ ಪಾಸು ಸಹ ಆಗಬಹುದು ಅಲ್ಲವೇ.ಪ್ರಯತ್ನ ಮಾಡೋಣ, ಫಲಾಫಲ ದೇವರಿಗೆ ಬಿಡೋಣ. ಅದನ್ನೇ ಹೇಳಿದ್ದಲ್ಲವೆ ಶ್ರೀಕೃಷ್ಣ....

ಇನ್ನು ಅಂತಹ ವ್ಯಕ್ತಿಯ ಜೊತೆ ವ್ಯವಹರಿಸಲು ಪುಟ್ಟ  ಸಲಹೆ ಏನೆಂದರೆ...

   ಮೊದಲು ಆ ವ್ಯಕ್ತಿ ನಮಗೆ ತುಂಬಾ ಆತ್ಮೀಯರಾದರೆ ಅವರನ್ನು ಬದಲಿಸಲು ಪ್ರಯತ್ನ ಮಾಡಬೇಕು. ಇಲ್ಲವಾದರೆ ಅವರು ಹೇಳುವ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ಅದನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟುಬಿಡಬೇಕು.

    ಆದಷ್ಟು ಅಂತಹ ವ್ಯಕ್ತಿಗಳ ಸಹವಾಸವನ್ನು ಮಾಡಲೇ ಬಾರದು.ಮಾಡಿದ್ದೆ ಆದರೆ ಅವರನ್ನು ಜಾಸ್ತಿ ನಮ್ಮ ಜೊತೆ ಬೆರೆಯಲು ಬಿಡಬಾರದು. ಬಿಟ್ಟರು ಸಹ ಅವರ ಮಾತುಗಳಿಗೆ ತುಪ್ಪ ಹಚ್ಚಬಾರದು, ಕಿಚ್ಚು ಹತ್ತಿಸಿಕೊಳ್ಳಬಾರದು. 

    ಯಾರಾದರೂ ಹೀಗೆ ಋಣಾತ್ಮಕವಾಗಿ ಹೇಳುತ್ತಿದ್ದಾರೆ ಎಂದರೆ ಅವರಿಗೆ ಒಮ್ಮೆ ಅದು ತಪ್ಪು ಅಂದು ಮನವರಿಕೆ ಮಾಡಲು ಪ್ರಯತ್ನಿಸಬೇಕು. ಅವರು ಕೇಳದೆ ಇದ್ದಾಗ ಅವರ ಜೊತೆ ವಾದ ಬೇಡ. ಹಂದಿಯ ಜೊತೆ ಗುದ್ದಾಡಿದರೆ ಯಾರಿಗೆ ಕೊಳೆಯಾಗುವುದು ಒಮ್ಮೆ ಯೋಚಿಸಿ.

    ಯಾರಾದರೂ ಕೊಂಕು ಮಾತನಾಡುತ್ತಿದ್ದರೆ ,ಒಂದು ಸಣ್ಣ ಮುಗುಳ್ನಗೆ ನೀಡಿ , thank u ಅಂದುಬಿಡಿ, ಬದಲಾಗಿ ಅವರ ಜೊತೆ ವಾದ ವಿವಾದ ಬೇಡ. ನಮ್ಮ ಸಣ್ಣ ನಗು ಅವರ ನಕಾರಾತ್ಮಕ ಚಿಂತನೆಗಳಿಗೆ  ಆಯುರ್ವೇದದಲ್ಲಿ ಕಷಾಯ ಕೊಟ್ಟಂತೆ  ಇರುತ್ತದೆ. ಒಮ್ಮೆ ಪ್ರಯತ್ನಿಸಿ.

  
    ನಾವು ಮಾಡುವ ಹಲವು ಕೆಲಸಗಳನ್ನು ಟೀಕಿಸುವ ಹಲವು ಮಂದಿ ಇರುತ್ತಾರೆ. ನಾವು ನಡೆದು ಹೋಗುವಾಗ ನಮ್ಮ ಮೇಲೆ ಯಾರಾದರೂ ಕಲ್ಲು ಎಸೆದರೆ ಅದನ್ನು ಟೀಕೆ ಮಾತ್ರ ಎಂದು ಪರಿಗಣಿಸಿದೆ ಆ ಕಲ್ಲುಗಳನ್ನು ಬಳಸಿ ಮನೆ ನಿರ್ಮಾಣ ಮಾಡುವಾತ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ. 

    ಟೀಕೆಗಳು ನಮ್ಮ ಯಶಸ್ಸಿನ ಪಯಣಕ್ಕೆ ಉಚಿತ ಟಿಕೆಟ್ ಇದ್ದಂತೆ. ಅದನ್ನು ಬಳಸಿ ನಾವು ನಮ್ಮ ಪಯಣವನ್ನು ಮುಂದುವರೆಸಬೇಕು. ಆದರೆ ಅದನ್ನು ಋಣಾತ್ಮಕವಾಗಿ ಸ್ವೀಕರಿಸಿ ದುಃಖಿಸಿ ಚಿಂತೆ ಮಾಡುವ ಕೆಲಸ ಬೇಡ.

    ಯಾವಾಗಲೂ ನನ್ನ ಆಲೋಚನೆ ಒಂದೇ, ಋಣಾತ್ಮಕ ಎಂದರೆ ಒಂದು (-) ಇದ್ದ ಹಾಗೆ, ಆದ್ರೆ ಎರಡು( -) ಸೇರಿಸಿ ನಾವು ( +) ಮಾಡಿಕೊಂಡು ಜೀವನ ಸಾಗಿಸಬೇಕು, ಯಶಸ್ಸು ಕಾಣಬೇಕು, ಅಲ್ಲವೇ?

     ಜೀವನದಲ್ಲಿ ಎಲ್ಲದರಲ್ಲೂ ತಪ್ಪು ಹುಡುಕಿ ನಮ್ಮನ್ನು ನಾವೇ ಹಾಳು ಮಾಡಿಕೊಳ್ಳುವ ಬದಲಾಗಿ ಧನಾತ್ಮಕವಾಗಿ ಚಿಂತಿಸೋಣ, ಉತ್ತಮ ಜೀವನ ನಿರ್ಮಾಣ ನಮ್ಮ ಕೈಯಲ್ಲೇ ಇದೆ. ಏನಂತೀರಾ ???
ವಂದನೆಗಳೊಂದಿಗೆ 
,ಇಂತಿ ತಮ್ಮ ನಂಜುಂಡಸ್ವಾಮಿ,,

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World