www.dgnsgreenworld.blogspot.com

Friday, May 14, 2021

ಭಕ್ತಿ ಶುಭಾಶಯ ನುಡಿಯ ನುಡಿವೆನು,ಜಗದೋದ್ಧಾರಕ ಬಸವೇಶ ನಿಮ್ಮ ಪಾದಗಳಿಗೆ ಶರಣೆನುವೆನು"

"ಭಕ್ತಿ ಶುಭಾಶಯ ನುಡಿಯ ನುಡಿವೆನು,ಜಗದೋದ್ಧಾರಕ ಬಸವೇಶ ನಿಮ್ಮ ಪಾದಗಳಿಗೆ ಶರಣೆನುವೆನು"

ಅರಿಯದ ಹುಲುಮಾನವರಿಗೆ ಅರಿವು ನೀಡಲು ಬಂದೆ,
ಕಷ್ಟದಲ್ಲಿ ನೊಂದವರಿಗೆ ಭರವಸೆಯ ಬೆಳಕಾದೆ,
ಬೈದವರೆಲ್ಲರನೂ ಬಂಧುಗಳೆಂದು ಕರೆದೆ,
ಎಲ್ಲರೂ ನಮ್ಮವರೆಂಬ ಭಾವವ ನೀಡಿದೆ.

ಸಮಾಜದಲಿ ಸಕಲರು ಸರಿಸಮಾನರೆಂಬುದಾ ತೋರಿದೆ,
ಕಾಯಕವ ನಂಬಿ ಕೆಟ್ಟವರಿಲ್ಲ ಕಾಯಕವೇ ಕೈಲಾಸ ಎಂಬುದಾ ಸಾರಿದೆ,
ಸ್ತ್ರೀಕುಲಕೆ ಸಮತೆಯ ದಾರಿದೀಪ ನೀನಾದೆ.

ಅನುಭವ ಮಂಟಪದ ಹರಿಕಾರನಾದೆ,
ಜಗದೆಲ್ಲಾ ಶರಣರಿಗೆ ಗೌರವದ ಗುರುವಾದೆ,
ಅರಿವೇ ಗುರುವೆಂಬ ಮಂತ್ರವ ತೋರಿಸಿದೆ,
ಜಗಕೆ ಸುಜ್ಞಾನದ ಬೆಳಕಾಗಿ ಜಗಜ್ಯೋತಿಯಾದೆ.

ಬಾಹ್ಯಗುಡಿಯ ಆಸೆಯಾರಿಗೂ ಬೇಡವೆಂದೆ,
ನಿಮ್ಮ ದೇಹವೇ ದೇವಾಲಯವೆಂಬ ಪರಿಯ ನೀಡಿದೆ,
ನಡೆನುಡಿ,ಅರಿವು ಆಚಾರಗಳೇನೆಂದು ಜಗಕೆ ನೀಡಿದೆ.

* ನಿಜದೇವನು ನೀನೆಂದು ಜಗವೇ ಪೂಜಿಸುತಿದೆ ಇಂದು,
ಮಹಾಮಹಿಮ ಗುರುವೇ ನಿಮಗೆ ಶರಣು ಶರಣೆಂಬೆ*

ಎಲ್ಲರಿಗೂ ಬಸವಜಯಂತಿಯ ಭಕ್ತಿ ಶುಭಾಶಯಗಳು🙏🏼🙏🏼🌺🌺🙏🏼🙏🏼

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World