www.dgnsgreenworld.blogspot.com

Sunday, May 30, 2021

ಜಪಾನೀಯರ ಅಚ್ಚರಿಯ ಶೋಧ...

ಜಪಾನೀಯರ ಅಚ್ಚರಿಯ ಶೋಧ... 

1. ಡಯೆಟ್‌ನಲ್ಲಿ ಏರುಪೇರಾಗೋದು ಅಸಿಡಿಟಿಗೆ ಕಾರಣ ಅಲ್ಲ. ಒತ್ತಡವೇ ಅಸಿಡಿಟಿಗೆ ಮುಖ್ಯ ಕಾರಣ. 

2. ರಕ್ತದೊತ್ತಡ ಉಪ್ಪು ಹೆಚ್ಚುಳ್ಳ ತಿನಿಸುಗಳಿಂದ ಮಾತ್ರವಲ್ಲ, ನಮ್ಮ ಭಾವನೆಗಳನ್ನು ನಿಭಾಯಿಸುವಾಗ ಮಾಡುವ ತಪ್ಪುಗಳಿಂದಲೂ ಉಂಟಾಗುತ್ತದೆ. 

3. ಕೊಲೆಸ್ಟ್ರಾಲ್ ಕೊಬ್ಬುಳ್ಳ ಊಟಗಳಿಂದ ಮಾತ್ರವಲ್ಲ... ಇದಕ್ಕೆ ಹೆಚ್ಚಿನ ಸೋಮಾರಿತನ ಅಥವಾ ಹೆಚ್ಚು ಓಡಾಟವಿಲ್ಲದ ಜೀವನಶೈಲಿ ಕೂಡ  ಹೊಣೆ. 

4. ಆಸ್ತಮಾ ಶ್ವಾಸಕೋಶಕ್ಕೆ ಸರಬರಾಜಾಗುವ ಆಮ್ಲಜನಕದ ಅಡೆತಡೆಯಿಂದ ಮಾತ್ರ ಅಲ್ಲ... ನಮ್ಮ ದುಃಖಭರಿತ ಭಾವನೆಗಳು ಕೂಡ ಶ್ವಾಸಕೋಶವನ್ನು ಅಸ್ಥಿರಗೊಳಿಸುತ್ತವೆ. 

5. ಡಯಾಬಿಟೀಸ್ ಹೆಚ್ಚಿನ ಗ್ಲೂಕೋಸ್ ಸೇವಿಸುವುದರಿಂದ ಮಾತ್ರವಲ್ಲ, ಸ್ವಾರ್ಥ ಮತ್ತು ಹಟಮಾರಿ ಮನೋಭಾವಗಳು ಮೇಧೋಜೀರಕ ಗ್ರಂಥದ ಕ್ರಿಯೆಯನ್ನು ಹೆಚ್ಚು ಕಡಿಮೆ ಮಾಡುತ್ತವೆ.
 
6. ಕಿಡ್ನಿ ಸ್ಟೋನ್ಸ್ ಕ್ಯಾಲ್ಶಿಯಮ್ ಆಕ್ಸಲೇಟ್ ಹೆಚ್ಚಾಗಿ ಮಾತ್ರ ಅಲ್ಲ... ನಮ್ಮೊಳಗೆ ಅದುಮಿ ಕುಳಿತ ಭಾವತೀವ್ರತೆಗಳಿಂದ, ದ್ವೇಷದಿಂದ ಉಂಟಾಗುತ್ತವೆ. 

7. ಸ್ಪಾಂಡಿಲೈಟಿಸ್ ಕುತ್ತಿಗೆಯ ಸಮಸ್ಯೆಯಿಂದ ಮಾತ್ರ ಅಲ್ಲ... ಭವಿಷ್ಯದ ಬಗ್ಗೆಗಿನ ವಿಪರೀತ ಚಿಂತೆಗಳ ಅತಿಭಾರದಿಂದ ಕೂಡ ಬರುತ್ತದೆ. 

ಆರೋಗ್ಯಕರವಾದ ಬದುಕಿಗೆ 

1. ಮನಸ್ಸು ಸ್ಥಿರವಾಗಿರಲಿ
2. ದೈನಂದಿನ ಎಕ್ಸರ್‌ಸೈಜ್ ಮುಖ್ಯ 
3. ಧ್ಯಾನ ಮುಖ್ಯ 
4. ಚಲನೆ ಇರಲಿ
5. ನಗಬೇಕು ಮತ್ತು ಇತರರನ್ನು ನಗಿಸಬೇಕು
6. ಗೆಳೆತನ ಮಾಡೋಣ. 
 
ಈ ಕ್ರಿಯೆಗಳು ನಮ್ಮ ಮನ, ಬುದ್ಧಿ ಮತ್ತು ದೇಹಗಳನ್ನು ಗಟ್ಟಿ ಮಾಡುತ್ತವೆ. 

ಆರೋಗ್ಯದಿಂದ ಇದ್ದು ಜೀವನವನ್ನು ಆನಂದಿಸೋಣ. 

ಇರುವುದೊಂದು ಜೀವನ... ಅದನ್ನು ಪೂರ್ಣವಾಗಿ ಜೀವಿಸೋಣ. 

(ವಾಟ್ಸ್ಯಾಪ್ ಆಂಗ್ಲ ಸಂದೇಶವೊಂದರ ಅನುವಾದ)

Friday, May 14, 2021

ಭಕ್ತಿ ಶುಭಾಶಯ ನುಡಿಯ ನುಡಿವೆನು,ಜಗದೋದ್ಧಾರಕ ಬಸವೇಶ ನಿಮ್ಮ ಪಾದಗಳಿಗೆ ಶರಣೆನುವೆನು"

"ಭಕ್ತಿ ಶುಭಾಶಯ ನುಡಿಯ ನುಡಿವೆನು,ಜಗದೋದ್ಧಾರಕ ಬಸವೇಶ ನಿಮ್ಮ ಪಾದಗಳಿಗೆ ಶರಣೆನುವೆನು"

ಅರಿಯದ ಹುಲುಮಾನವರಿಗೆ ಅರಿವು ನೀಡಲು ಬಂದೆ,
ಕಷ್ಟದಲ್ಲಿ ನೊಂದವರಿಗೆ ಭರವಸೆಯ ಬೆಳಕಾದೆ,
ಬೈದವರೆಲ್ಲರನೂ ಬಂಧುಗಳೆಂದು ಕರೆದೆ,
ಎಲ್ಲರೂ ನಮ್ಮವರೆಂಬ ಭಾವವ ನೀಡಿದೆ.

ಸಮಾಜದಲಿ ಸಕಲರು ಸರಿಸಮಾನರೆಂಬುದಾ ತೋರಿದೆ,
ಕಾಯಕವ ನಂಬಿ ಕೆಟ್ಟವರಿಲ್ಲ ಕಾಯಕವೇ ಕೈಲಾಸ ಎಂಬುದಾ ಸಾರಿದೆ,
ಸ್ತ್ರೀಕುಲಕೆ ಸಮತೆಯ ದಾರಿದೀಪ ನೀನಾದೆ.

ಅನುಭವ ಮಂಟಪದ ಹರಿಕಾರನಾದೆ,
ಜಗದೆಲ್ಲಾ ಶರಣರಿಗೆ ಗೌರವದ ಗುರುವಾದೆ,
ಅರಿವೇ ಗುರುವೆಂಬ ಮಂತ್ರವ ತೋರಿಸಿದೆ,
ಜಗಕೆ ಸುಜ್ಞಾನದ ಬೆಳಕಾಗಿ ಜಗಜ್ಯೋತಿಯಾದೆ.

ಬಾಹ್ಯಗುಡಿಯ ಆಸೆಯಾರಿಗೂ ಬೇಡವೆಂದೆ,
ನಿಮ್ಮ ದೇಹವೇ ದೇವಾಲಯವೆಂಬ ಪರಿಯ ನೀಡಿದೆ,
ನಡೆನುಡಿ,ಅರಿವು ಆಚಾರಗಳೇನೆಂದು ಜಗಕೆ ನೀಡಿದೆ.

* ನಿಜದೇವನು ನೀನೆಂದು ಜಗವೇ ಪೂಜಿಸುತಿದೆ ಇಂದು,
ಮಹಾಮಹಿಮ ಗುರುವೇ ನಿಮಗೆ ಶರಣು ಶರಣೆಂಬೆ*

ಎಲ್ಲರಿಗೂ ಬಸವಜಯಂತಿಯ ಭಕ್ತಿ ಶುಭಾಶಯಗಳು🙏🏼🙏🏼🌺🌺🙏🏼🙏🏼

Friday, May 7, 2021

ಓ ಆರಕ್ಷಕ...ಜನಸಮುದಾಯದ ರಕ್ಷಕ..

ಓ ಆರಕ್ಷಕ...
ಜನಸಮುದಾಯದ ರಕ್ಷಕ..

'ಕಾನೂನು ಗೌರವಿಸುವವರನ್ನು
ನಾನು ಗೌರವಿಸುತ್ತೇನೆ'
ಎನ್ನುವ ಓ ಆರಕ್ಷಕ
ನಿನ್ನ ಬದುಕೇ ಒಂದು ರೋಚಕ !!

ನಮ್ಮೊಡನೆಯೇ ಜನಿಸಿ,
ಶಿಕ್ಷಣ ಪಡೆದು,ಕೆಲಸ ಗಳಿಸಿ,
ಕಾನೂನು ತರಬೇತಿ ಪಡೆದು,
ಕಾನೂನು ಜಾರಿಗೊಳಿಸುವಾಗ,
ನಿನಗೆಷ್ಟುಅಡ್ಡಿ,ಆತಂಕ,ಒತ್ತಡಗಳ ಸುಳಿ....

ನಾವೆಲ್ಲ ಮನೆಯಲಿ
ನೆಮ್ಮದಿಯಲಿ ನಿದ್ರಿಸಿರುವಾಗ,
ಕಳ್ಳರು,ವಂಚಕರಿಂದ
ಸಮಾಜವನು ರಕ್ಷಿಸುವ
ಮಹೋನ್ನತ ಜವಾಬ್ದಾರಿ ನಿನ್ನದು...

ಮುಷ್ಕರ,ಬಂದ್,ಕೋಮುಗಲಭೆ,ಸಾಂಕ್ರಾಮಿಕ ಕಾಯಿಲೆ
ಯಾವುದೇನೇ ಇರಲಿ,
ಬೆಚ್ಚದೆ,ಬೆದರದೆ,ಮುನ್ನುಗ್ಗಿ,
ಅಶಕ್ತರ ರಕ್ಷಿಸಿ,ಕಾನೂನು ಉಲ್ಲಂಘಿಸಿದವರ 
ಬಂಧಿಸುವ ಜವಾಬ್ದಾರಿ ಶ್ಲಾಘನೀಯ.....

ಕಾನೂನು ವಿರೋಧಿಗಳ ಸಂಘರ್ಷದಲಿ
ಹಲವೊಮ್ಮೆ ಪ್ರಾಣತ್ಯಾಗ ಮಾಡುವ ಪುಣ್ಯಾತ್ಮನು ನೀನು,
ತಂದೆ-ತಾಯಿ,ಹೆಂಡತಿ-ಮಕ್ಕಳ ಬಂಧ ಮರೆತು,
ಕಾನೂನೆಂಬ ಹೆದ್ದಾರಿಯಲಿ ಜೀವನವಿಡೀ
ಕಳೆಯುವ ಓ ಆರಕ್ಷಕ ನಿನಗಿದೋ ನಮ್ಮ ಸಲಾಂ...

ನೀನು ಧರಿಸಿರುವ ಖಾಕಿ ಸಮವಸ್ತ್ರದೊಳೊಂದು
ಮಾತೃಹೃದಯವಿದೆ,ಮಾನವೀಯ ಚಿಂತನೆಯಿದೆ,
ಬಡವರ ಕಷ್ಟಗಳಿಗೆ ಮರುಗುವ ಆತ್ಮೀಯತೆಯಿದೆ,
ಅಪರಾಧಿಗಳ ,ವಂಚಕರ ವಿರುದ್ದ ಸಿಡಿದೇಳುವ ಛಾತಿಯಿದೆ...

ಕಾನೂನು ನಿರ್ವಹಣೆಯಲಿ ಜೀವನ ಸವೆಸುವ,
ಸುಖಾಸುಮ್ಮನೆ ರಾಜಕಾರಣಿಗಳ,ಅಧಿಕಾರಸ್ಥರ
ಮಿಥ್ಯಾರೋಪಕ್ಕೆ ಗುರಿಯಾಗುವ ಓ ಆರಕ್ಷಕ,
ನಿನಗೆ ಜನಸಮುದಾಯದ ಶುಭಾಶೀರ್ವಾದವಿದೆ..

ಓ ಆರಕ್ಷಕ,ನೀನೊಬ್ಬ ಕಾನೂನು ಪಂಡಿತ,
ಠಾಣೆಗೆ ಬರುವ ಎಲ್ಲಾ ವಿವಾದಗಳ‌ಪರಿಹರಿಸುವ
ಮನಶಾಸ್ತ್ರಜ್ಞ ,ಸಮಾಜಸೇವಕ,ಜನಪರ ಚಿಂತಕ,
ಇಡೀ ಸಮಾಜದ ಒಳಿತಿಗೆ ಶ್ರಮಿಸುವ‌ ಆರಕ್ಷಕ,
ನಿನಗೆ ,ನಿನ್ನ ಕುಟುಂಬಕ್ಕೆ     ಇಡೀ ಮಾನವ ಸಮುದಾಯದ ಆಶೀರ್ವಾದವಿದೆ..

ವಂದನೆಗಳೊಂದಿಗೆ

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World