www.dgnsgreenworld.blogspot.com

Friday, April 12, 2024

ಬದುಕಿನಲ್ಲಿ ಈ ಏಳು ಸಂಗತಿಗಳನ್ನು ಯಾವತ್ತೂ ಮರೆಯಬೇಡಿ

ಆಲೋಚಿಸಿ... 

ಬದುಕಿನಲ್ಲಿ ಈ ಏಳು ಸಂಗತಿಗಳನ್ನು ಯಾವತ್ತೂ ಮರೆಯಬೇಡಿ.

1. ಇನ್ನೊಬ್ಬರೊಡನೆ ಸುಮ್ಮನೆ ವಾಗ್ವಾದಕ್ಕೆ ಇಳಿಯಬೇಡಿ ಯಾಕೆಂದರೆ ಅಲ್ಲೊಬ್ಬನಿಗೆ ಮಾತನಾಡಲೇ ಬರುವುದಿಲ್ಲ.

2. ಆಹಾರದ ರುಚಿಯ ಬಗ್ಗೆ ದೂರಬೇಡಿ ಕೆಲವರಿಗೆ ಒಂದು ಹೊತ್ತಿನ ಊಟವೂ ಸಿಗುವುದಿಲ್ಲ.

3. ನಿಮ್ಮ ಸಂಗಾತಿಯ ಬಗ್ಗೆ ಸಹನೆ ಕಳೆದುಕೊಳ್ಳದಿರಿ ನಿನ್ನೆಯಷ್ಟೇ ಒಬ್ಬ ತನ್ನ ಸಂಗಾತಿಯನ್ನು ಮಣ್ಣು ಮಾಡಿದ ದುಃಖದಲ್ಲಿದ್ದಾನೆ.

4. ನಿಮ್ಮ ಮನೆ ಸೋರುತ್ತಿದೆ ಎಂದು ಬೇಸರ ಪಡಬೇಡಿ ಅಲ್ಲೊಬ್ಬನ ತಲೆಯ ಮೇಲೆ ಸೂರೇ ಇಲ್ಲ.

5. ನಿಮ್ಮ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ ಅವೆಷ್ಟೋ ದಂಪತಿಗಳಿಗೆ ತಂದೆ ತಾಯಿಯಾಗುವ ಭಾಗ್ಯವೇ ಇರುವುದಿಲ್ಲ.

6. ನಿಮ್ಮ ಉದ್ಯೋಗದ ಬಗ್ಗೆ ಅಸಡ್ಡೆ ತೋರಬೇಡಿ ಅಲ್ಲೊಬ್ಬ ಯುವಕನಿಗೆ ಓದಿದ್ದರೂ ಕೆಲಸವೇ ಸಿಕ್ಕಿಲ್ಲ.

7. ನಿಮ್ಮ ಜೀವನವನ್ನು ಶಪಿಸುತ್ತಾ ಕುಳಿತುಕೊಳ್ಳಬೇಡಿ ಎಷ್ಟೋ ಮಂದಿ ಯೌವನದಲ್ಲೇ ಹಾಸಿಗೆ ಹಿಡಿದು ನರಳುತ್ತಿದ್ದಾರೆ.

 *ಜೀವನವೆಂಬುದು ಸುಂದರವಾದ ಉಡುಗೊರೆ. ವ್ಯರ್ಥಾಲಾಪದಲ್ಲಿ ಅದನ್ನು ಹಾಳು ಮಾಡಿಕೊಳ್ಳಬೇಡಿ. ಬದುಕಿನಲ್ಲಿ ಏನೋ ಸರಿಯಿಲ್ಲ ಎನ್ನಿಸುತ್ತಿದ್ದರೆ ಒಮ್ಮೆ ಯೋಚಿಸಿ, ನೀವಿನ್ನೂ ಬದುಕಿದ್ದೀರಿ ನಿಮಗಿಷ್ಟವಾಗದ ಸಂಗತಿಯನ್ನು ಬದಲಾಯಿಸುವ ಅವಕಾಶ ನಿಮಗಿದೆ. ನಿಮಗೆ ಬೇಕಾದಂತೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.* ಸಾಧ್ಯವಾದರೆ ಷೇರ್ ಮಾಡಿ, ನೊಂದ ಮನಗಳಿಗೆ ಟಾನಿಕ್ ಕೂಡಾ ಆಗಬಲ್ಲದು ಈ ಸಂದೇಶ.
ಇಂತಿ 
ನಂಜುಂಡಸ್ವಾಮಿ

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World