ಬದುಕಿನ ಕೊನೆಯ ತುಣುಕು
*************************
ಎಲ್ಲ ಮಿತ್ರರೂ ಮುಪ್ಪಾಗುತ್ತಿದ್ದಾರೆ
ನಿಧಾನಕ್ಕೆ ನಡೆಯುತ್ತಿದ್ದಾರೆ ನನ್ನ ಹಾಗೇ
ಹರೆಯದಲ್ಲಿ ಮಿಂಚುತ್ತಿದ್ದ ಪಟ್ಟುಗಳೆಲ್ಲ
ಈಗ ಮಾಯವಾಗಿವೆ
ಯಾರಿಗೋ ಬೊಜ್ಜು ಬಂದಿದೆ
ಇನ್ಯಾರಿಗೋ ಕೂದಲು ಹಣ್ಣಾಗುತ್ತಿವೆ
ಎಲ್ಲರ ತಲೆಯ ಮೇಲೆ ಜವಾಬ್ದಾರಿ
ಎಲ್ಲರಿಗೂ ಸಣ್ಣ ಪುಟ್ಟ ಅಜಾರಿ
ಯಾರಿಗೋ ದೇಹದ ನೋವು
ಯಾರಿಗೋ ಮನದ ಅಳಲು
ದಿನವಿಡೀ ಓಡುತ್ತಿದ್ದವರು
ಈಗ ನಡೆಯುವಾಗಲೂ ದಣಿವಾರಿಸಿಕೊಳ್ಳುತ್ತಿದ್ದಾರೆ.
ಯಾರಿಗೂ ಸಮಯವಿಲ್ಲ
ಎಲ್ಲರ ಕಣ್ಣಲ್ಲೂ ನೋವಿನ ಛಾಯೆ
ಎಲ್ಲರಿಗೂ (ನನ್ನ ಸೇರಿ)
ಅಪ್ಪನನ್ನು ಇನ್ನಷ್ಟು ಆರೈಕೆ ಮಾಡಬೇಕಿತ್ತು
ಕೊನೆಯ ದಿನಗಳಲ್ಲಿ ಅಮ್ಮನ ಸೇವೆ ಮಾಡಬೇಕಿತ್ತು
ಆ ಮಿತ್ರನೊಂದಿಗೆ ಪರಲು ಹರಿದುಕೊಳ್ಳಬಾರದಿತ್ತು
ಎಂಬ ಏನೇನೋ ಹಳವಂಡಗಳು
ಕಾಡುತ್ತವೆ.
ಅಂತೂ ಇಷ್ಟಾದರೂ ಸಾಧಿಸಿದೆನಲ್ಲ
ಎಂಬ ನೆಮ್ಮದಿಯೂ ಇದೆ
ಹಳೆಯ ಭಾವಚಿತ್ರಗಳ ನೋಡಿ
ಈಗಲೂ ಮನಸ್ಸು ತುಂಬಿ ಬರುತ್ತದೆ
ಈ ಸಮಯವೂ ಎಂಥ ವಿಚಿತ್ರ ನೋಡಿ!
ಹೇಗೆ ಸವೆದು ಹೋಗುತ್ತದೆ
ನಿನ್ನೆಯ ನವಯುವಕ ನನ್ನ ಮಿತ್ರ
ಇಂದು ವೃದ್ಧನಂತೆ ಕಾಣುತ್ತಾನೆ
ಒಂದೊಮ್ಮೆ ಕನಸು ಕಾಣುತ್ತಿದ್ದವರು
ಗತಿಸಿದ ದಿನಗಳಲ್ಲಿ ಕಳೆದು ಹೋಗಿದ್ದಾರೆ
ಆದರೆ ಇದು ಪರಮ ಸತ್ಯ!
ಎಲ್ಲಾ ಮಿತ್ರರೂ ಹಣ್ಣಾಗುತ್ತಿದ್ದಾರೆ.
ಮಿತ್ರರೇ ,
ಮುಂದೆ ಸಮಯದ ಲಯ
ಇನ್ನೂ ತೀವ್ರವಾಗಲಿದೆ.
ಈಗ ಉಳಿದ ಬದುಕೇ 'ಬಹುಮಾನ'
ಆದ್ದರಿಂದ,
ಮಾಡುವುದನ್ನು ಮಾಡಿ ಮುಗಿಸಿ
ಕೊಡುವುದನ್ನು ಕೊಟ್ಟು ಮುಗಿಸಿ
ನಿರಾಳ ಮನಸ್ಸಿನಿಂದ ಬದುಕಿ
ಪ್ರತಿಯೊಬ್ಬ ಹಳೆಯ ಮಿತ್ರ
'ಕೊಹಿನೂರ್ ವಜ್ರ'
ಹಳೆಯ ಮಿತ್ರರೊಂದಿಗೆ
ಬದುಕಿನ ಕೊನೆಯ ತುಣುಕು
ನಗುನಗುತ್ತ ಕಳೆಯಿರಿ.
ಎಲ್ಲಾ ಮಿತ್ರರಿಗೂ ಸಮರ್ಪಣೆ...... 🌹🙏.
No comments:
Post a Comment
welcome to dgnsgreenworld Family