'ಡಿಜಿಟಲ್ ಇಂಡಿಯಾ' ಅಂದರೆ ಏನು?
ಇದು ಶ್ರೀ ಸಾಮಾನ್ಯನಿಗೆ ಅರ್ಥವಾಗೋದು ಕಷ್ಟ. ಅದಕ್ಕೇ ಉತ್ತರ ಇಲ್ಲಿದೆ.
ವರ್ಷ : ಕ್ರಿಸ್ತ ಶಕ 2030
ಗುಂಡ ಎಂಬಾತ ಮಸಾಲೆ ದೋಸೆ ಬೇಕಾಗಿ "ಅಡಿಗಾಸ್ ಹೋಟೆಲ್ ಗೆ ಕಾಲ್ ಮಾಡುತ್ತಾನೆ.
ಅಡಿಗಾಸ್: ಹಲೊ ಅಡಿಗಾಸ್, ಹೇಳಿ....
ಗುಂಡ: ನನ್ನ ಆರ್ಡರ್ ತಗೊಳ್ಳಿ.
ಅ: ಸರ್, ನಿಮ್ಮ ಆಧಾರ್ ನಂಬರ್ ಹೇಳಿ....
ಗುಂಡ: ಆಧಾರ್?..... k ತಗೊಳ್ಳಿ 6113-0676-4727.
ಅ: ನಿಮ್ಮ ಹೆಸರು Mr.ಗುಂಡ. ನಿಮ್ಮ. ಮನೆ ವಿಳಾಸ ನಂಬರ್ 115, 2nd cross, 5th main, Teacher colony, Bangalore.ನಿಮ್ಮ ಮನೆ ದೂರವಾಣಿ ಸಂಖ್ಯೆ 080-23545678. ನಿಮ್ಮ ಮೊಬೈಲ್ ಸಂಖ್ಯೆ 9900858333.
ಗುಂಡ: ನಿಮಗೆ ಇದೆಲ್ಲಾ ಹೇಗೆ ತಿಳಿತು?
ಅ: ನಿಮ್ಮ ಆಧಾರ ಸಂಖ್ಯೆ "ಡಿಜಿಟಲ್ ಇಂಡಿಯಾ " ಜೊತೆ ಕನೆಕ್ಟಿಂಗ್ ಮಾಡಿದ್ವಿ ಅದರಿಂದ ತಿಳಿತು.
ಗುಂಡ: ಸರಿ. ನನಗೆ ಮಸಾಲ ದೋಸೆ ಬೇಕಿತ್ತು.
ಅ: ಅದು ಬೇಡ ಸರ್
ಗುಂಡ: ಯಾಕೆ
ಅ: ನಿಮ್ಮ. ದೇಹದ ಅರೋಗ್ಯಕ್ಕೆ ಅನುಗುಣವಾಗಿ ನಿಮಗೆ ಬೊಜ್ಜು ಮತ್ತೆ ವಾಯು ಸಮಸ್ಯೆ ಇರುವುದರಿಂದ ಅದು ಬೇಡ.
ಗುಂಡ: ಹೌದಾ...ನನಗೆ ತಿನ್ನೋಕೆ ಏನಿದೆ?
ಅ: ನಿಮ್ಮ. ಇಷ್ಟದ ರವಾ ಇಡ್ಲಿ ಇದೆ.
ಗುಂಡ: ನನಗೆ ಇಷ್ಟ ಅಂತ ಹೇಗೆ ಗೊತ್ತಾಯ್ತು?
ಅ:ನೀವು ಹೋದವಾರ ಸದಾಶಿವನಗರ ಸ್ವಪ್ನಾ ಬುಕ್ ಹೌಸ್ ನಲ್ಲಿ "ರವಾ ಇಡ್ಲಿ ಮಾಡುವ ವಿಧಾನಗಳು" ಎಂಬ ಪುಸ್ತಕ ಖರೀದಿ ಮಾಡಿದಿರಲ್ಲವೆ?
ಗುಂಡ: ನಿಜ, ರವಾ ಇಡ್ಲಿ ಕಳಿಸಿ.
ಅ: ನಿಮ್ಮ ಮನೆಯಲ್ಲಿ 7 ಜನ ಇದ್ದಿರಿ. 14 ಇಡ್ಲಿ ಸಾಕು. 350 ರೂಪಾಯಿ ಆಗುತ್ತದೆ.
ಗುಂಡ: ಸರಿ ನಾ ಕ್ರೆಡಿಟ್ ಕಾರ್ಡ್ ಕೊಡ್ತೀನಿ.
ಅ: ಬೇಡ ಸಾರ್, ನಿಮ್ಮ ಸಂಬಳದಲ್ಲಿ ಎಲ್ಲಾ ಖರ್ಚು ಹೋಗಿ ನಿನ್ನೆ ನಿಮ್ಮ ಮನೆ ಲೋನ್ 12,357.50 ಕಟ್ ಆಗಿ ಈಗ ಬರಿ 180 ರೂಪಾಯಿ ಇದೆ.
ಗುಂಡ: ತೊಂದರೆ ಇಲ್ಲ. ನನ್ನ ಹತ್ತಿರ ATM ಕಾರ್ಡ ಇದೆ.
ಅ: ಸಾರಿ ಸರ್, ಅದರಲ್ಲಿ ಬರೀ 30 ರೂಪಾಯಿ ಇದೆ.
ಗುಂಡ: ಸರಿ ನಾ ಕ್ಯಾಶ್ ಕೊಡ್ತೇನೆ. ರವಾ ಇಡ್ಲಿ ಬರೋಕೆ ಎಷ್ಟು ಹೊತ್ತಾಗುತ್ತೆ?
ಅ: 45 ನಿಮಿಷ ಅಗುತ್ತೆ. ನೀವು ಸುಮ್ಮನೆ ಕಾಯಬೇಕು . ಅದರ ಬದಲು ನಿಮ್ಮ ಹೀರೋ ಹೊಂಡ KA 02 EA 3641 ಗಾಡಿ ಇದೆ ಅಲ್ವಾ. ಅದರಲ್ಲಿ ಬಂದು ತೆಗೆದು ಕೊಂಡು ಹೋಗಬಹುದಲ್ವಾ?
ಗುಂಡ: ಅದು ನಿಮಗೆ ಗೊತ್ತಾ? ಸರಿ 10 ರವಾ ಇಡ್ಲಿಗೆ ಅರ್ಧ ಲೀ ಪೆಪ್ಸಿ free ಅಂತ ಆಫರ್ ಇದೆ ಅಲ್ವಾ?
ಅ: ಹೌದು ಸರ್, ಆದರೆ ನಿಮಗೆ ಕೊಡೋಕೆ ಆಗೋಲ್ಲ. ಹೋದ ವಾರ ರಾಮಯ್ಯ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಗೆ ಅಂತಾ ಹೋದಾಗ ನಿಮ್ಮ. ಶುಗರ್ ಲೆವೆಲ್ ಜಾಸ್ತಿ ಆಗಿದೆ ಅಂತ ಡಾಕ್ಟರ ಸುರೇಶ್ ರಾವ್ ಹೇಳಿದ್ದಾರಲ್ವಾ?
ಗುಂಡ: ನಿಮ್ಮ. ಅಜ್ಜಿ ...
ಅ: ಸರ್ ಹಾಗೆಲ್ಲ ಕೆಟ್ಟದಾಗಿ ಮಾತಾಡಬೇಡಿ. 1999 ರಲ್ಲಿ ಇಂದಿರಾನಗರದಲ್ಲಿ ಗಲಾಟೆ ಆದಾಗ ನೀವು ಇದೇ ರೀತಿ ಕೆಟ್ಟದಾಗಿ ಮಾತಾಡಿದ್ದಕ್ಕೆ ಪೋಲಿಸನವರು 500 ರೂಪಾಯಿ ದಂಡ ಹಾಕಿದ್ದು ನೆನಪಿದೆಯಾ?
ಗುಂಡ ಸುಸ್ತೋ ಸುಸ್ತು.
ಇದೇ ಡಿಜಿಟಲ್ ಇಂಡಿಯಾ.
No comments:
Post a Comment
welcome to dgnsgreenworld Family