www.dgnsgreenworld.blogspot.com

Tuesday, February 13, 2024

ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು..

ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು..

1998 ರಲ್ಲಿ, ಕೊಡಾಕ್‌ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು.ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.

 HMT (ವಾಚ್)
 ಬಜಾಜ್ (ಸ್ಕೂಟರ್)
 ಡೈನೋರಾ (ಟಿವಿ)
 ಮರ್ಫಿ (ರೇಡಿಯೋ)
 ನೋಕಿಯಾ (ಮೊಬೈಲ್)
 ರಾಜ್‌ದೂತ್ (ಬೈಕ್)
 ಅಂಬಾಸಿಡರ್ (ಕಾರು)
 ದಿನೇಶ್ (ಬಟ್ಟೆ)

 ಸ್ನೇಹಿತರೇ,
 ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಿದ್ದವು !!
 ಕಾರಣ ???
 ಕಾಲಕ್ಕೆ ತಕ್ಕಂತೆ ಅವು ಬದಲಾಗಲಿಲ್ಲ.!!

 ಮುಂಬರುವ 10 ವರ್ಷಗಳಲ್ಲಿ ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ 70% ರಿಂದ 90% ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ.

 ಉಬರ್ ಕೇವಲ ಸಾಫ್ಟ್‌ವೇರ್ ಆಗಿದೆ. ತನ್ನದೇ ಆದ ಒಂದು ಕಾರು ಹೊಂದಿಲ್ಲದಿದ್ದರೂ, ಅವರು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.

 ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.

 Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.

 ಯುಎಸ್ ನಲ್ಲಿ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟ್‌ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, 90% ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ..10% ಉಳಿದಿರುವವರು ... ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.

 ವ್ಯಾಟ್ಸನ್ ಹೆಸರಿನ ಸಾಫ್ಟ್‌ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್‌ಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತವಾಗಿರುತ್ತವೆ.

 ಮುಂದಿನ 10 ವರ್ಷಗಳಲ್ಲಿ, 90% ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ… ಉಳಿದಿರುವುವು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗಿರುತ್ತವೆ… ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ 90% ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು  ದಿವಾಳಿಯಾಗುತ್ತವೆ.

 ನೀವು ಉಬರ್‌ನಂತಹ ಸಾಫ್ಟ್‌ವೇರ್‌ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ ... ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್‌ಗಿಂತ ಅಗ್ಗವಾಗಿರುತ್ತದೆ.

 ಕಾರುಗಳು ಚಾಲಕರಹಿತವಾಗಿರುವುದರಿಂದ 99% ಅಪಘಾತಗಳು ನಿಂತುಹೋಗುತ್ತವೆ.. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.

 ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ 90% ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್‌ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ... ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮಾನವಾಗಿರುತ್ತದೆ.

 5 ಅಥವಾ 10 ವರ್ಷಗಳ ಹಿಂದೆ, ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ, ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು .. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್‌ಲೈನ್‌ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ.

 ನೀವು ಎಂದಾದರೂ ಗಮನಿಸಿದ್ದೀರಾ ..?

 ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿನ ಪ್ರತಿ ಮೂರು ಅಂಗಡಿಗಳಲ್ಲಿ ಒಂದು ಅಂಗಡಿಯಲ್ಲಿ ಮೊಬೈಲ್ ಫೋನ್‌
 ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ ಮಾಡಲಾಗುತ್ತಿದೆ.

 ಈಗ ಎಲ್ಲವನ್ನೂ ಪೇಟಿಎಂ ಮೂಲಕ ಮಾಡಲಾಗುತ್ತದೆ .. ಈಗ ಜನರು ತಮ್ಮ ಫೋನ್‌ಗಳಿಂದಲೂ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ .. ಈಗ ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ .. ಕರೆನ್ಸಿ ನೋಟ್ ಅನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು.ಈಗ ಅದು ಡಿಜಿಟಲ್ ಆಗಿ ಮಾರ್ಪಟ್ಟಿದೆ.

 ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ .. ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ, ಇಲ್ಲದಿದ್ದರೆ ನೀವು ಹಿಂದೆ ಉಳಿಯುತ್ತೀರಿ….

 ಆದ್ದರಿಂದ ...
 ಒಬ್ಬ ವ್ಯಕ್ತಿಯು ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.

ಮುಂದಿನ ದಿನಗಳಲ್ಲಿ ಕೇವಲ ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಇಡೀ ಜಗತ್ತನ್ನು ಆವರಿಸುವುದರಲ್ಲಿ ಸಂಶಯವಿಲ್ಲ. 

 ಸಮಯದೊಂದಿಗೆ ಸಾಗಿ ಮತ್ತು ಯಶಸ್ಸನ್ನು ಸಾಧಿಸಿ.

ವಂದನೆಗಳೊಂದಿಗೆ ನಂಜುಂಡಸ್ವಾಮಿ 🙏💐

Monday, February 5, 2024

'ಡಿಜಿಟಲ್ ಇಂಡಿಯಾ' ಅಂದರೆ ಏನು?

'ಡಿಜಿಟಲ್ ಇಂಡಿಯಾ' ಅಂದರೆ ಏನು?

ಇದು ಶ್ರೀ ಸಾಮಾನ್ಯನಿಗೆ ಅರ್ಥವಾಗೋದು ಕಷ್ಟ.  ಅದಕ್ಕೇ  ಉತ್ತರ ಇಲ್ಲಿದೆ.

ವರ್ಷ : ಕ್ರಿಸ್ತ ಶಕ 2030

ಗುಂಡ ಎಂಬಾತ ಮಸಾಲೆ ದೋಸೆ ಬೇಕಾಗಿ "ಅಡಿಗಾಸ್ ಹೋಟೆಲ್ ಗೆ ಕಾಲ್ ಮಾಡುತ್ತಾನೆ.

ಅಡಿಗಾಸ್: ಹಲೊ ಅಡಿಗಾಸ್, ಹೇಳಿ....

ಗುಂಡ: ನನ್ನ ಆರ್ಡರ್ ತಗೊಳ್ಳಿ.

ಅ: ಸರ್, ನಿಮ್ಮ ಆಧಾರ್ ನಂಬರ್ ಹೇಳಿ....

ಗುಂಡ: ಆಧಾರ್?..... k ತಗೊಳ್ಳಿ 6113-0676-4727.

ಅ: ನಿಮ್ಮ ಹೆಸರು Mr.ಗುಂಡ. ನಿಮ್ಮ. ಮನೆ ವಿಳಾಸ ನಂಬರ್ 115, 2nd cross, 5th main, Teacher colony, Bangalore.ನಿಮ್ಮ ಮನೆ ದೂರವಾಣಿ ಸಂಖ್ಯೆ 080-23545678.  ನಿಮ್ಮ ಮೊಬೈಲ್ ಸಂಖ್ಯೆ 9900858333.

ಗುಂಡ: ನಿಮಗೆ ಇದೆಲ್ಲಾ ಹೇಗೆ  ತಿಳಿತು?

ಅ: ನಿಮ್ಮ ಆಧಾರ ಸಂಖ್ಯೆ "ಡಿಜಿಟಲ್ ಇಂಡಿಯಾ " ಜೊತೆ ಕನೆಕ್ಟಿಂಗ್ ಮಾಡಿದ್ವಿ ಅದರಿಂದ ತಿಳಿತು.

ಗುಂಡ:  ಸರಿ. ನನಗೆ ಮಸಾಲ ದೋಸೆ ಬೇಕಿತ್ತು.

ಅ: ಅದು ಬೇಡ ಸರ್

ಗುಂಡ: ಯಾಕೆ

ಅ: ನಿಮ್ಮ. ದೇಹದ ಅರೋಗ್ಯಕ್ಕೆ ಅನುಗುಣವಾಗಿ ನಿಮಗೆ ಬೊಜ್ಜು ಮತ್ತೆ ವಾಯು ಸಮಸ್ಯೆ ಇರುವುದರಿಂದ ಅದು ಬೇಡ.

ಗುಂಡ: ಹೌದಾ...ನನಗೆ ತಿನ್ನೋಕೆ  ಏನಿದೆ?

ಅ: ನಿಮ್ಮ. ಇಷ್ಟದ ರವಾ ಇಡ್ಲಿ  ಇದೆ.

ಗುಂಡ: ನನಗೆ ಇಷ್ಟ ಅಂತ ಹೇಗೆ ಗೊತ್ತಾಯ್ತು?

ಅ:ನೀವು ಹೋದವಾರ ಸದಾಶಿವನಗರ ಸ್ವಪ್ನಾ ಬುಕ್ ಹೌಸ್ ನಲ್ಲಿ "ರವಾ ಇಡ್ಲಿ ಮಾಡುವ ವಿಧಾನಗಳು" ಎಂಬ ಪುಸ್ತಕ ಖರೀದಿ ಮಾಡಿದಿರಲ್ಲವೆ?

ಗುಂಡ: ನಿಜ, ರವಾ ಇಡ್ಲಿ ಕಳಿಸಿ.

ಅ: ನಿಮ್ಮ ಮನೆಯಲ್ಲಿ 7 ಜನ ಇದ್ದಿರಿ. 14 ಇಡ್ಲಿ ಸಾಕು. 350 ರೂಪಾಯಿ ಆಗುತ್ತದೆ. 

ಗುಂಡ: ಸರಿ  ನಾ ಕ್ರೆಡಿಟ್  ಕಾರ್ಡ್  ಕೊಡ್ತೀನಿ.

ಅ: ಬೇಡ ಸಾರ್, ನಿಮ್ಮ ಸಂಬಳದಲ್ಲಿ ಎಲ್ಲಾ ಖರ್ಚು  ಹೋಗಿ ನಿನ್ನೆ ನಿಮ್ಮ ಮನೆ ಲೋನ್ 12,357.50 ಕಟ್ ಆಗಿ ಈಗ ಬರಿ 180 ರೂಪಾಯಿ ಇದೆ.

ಗುಂಡ: ತೊಂದರೆ ಇಲ್ಲ. ನನ್ನ ಹತ್ತಿರ ATM ಕಾರ್ಡ ಇದೆ.

ಅ: ಸಾರಿ ಸರ್, ಅದರಲ್ಲಿ  ಬರೀ 30 ರೂಪಾಯಿ ಇದೆ.

ಗುಂಡ: ಸರಿ ನಾ ಕ್ಯಾಶ್ ಕೊಡ್ತೇನೆ. ರವಾ ಇಡ್ಲಿ ಬರೋಕೆ ಎಷ್ಟು ಹೊತ್ತಾಗುತ್ತೆ?

ಅ: 45 ನಿಮಿಷ ಅಗುತ್ತೆ. ನೀವು ಸುಮ್ಮನೆ  ಕಾಯಬೇಕು . ಅದರ ಬದಲು ನಿಮ್ಮ ಹೀರೋ ಹೊಂಡ KA 02 EA 3641 ಗಾಡಿ ಇದೆ ಅಲ್ವಾ. ಅದರಲ್ಲಿ ಬಂದು ತೆಗೆದು ಕೊಂಡು ಹೋಗಬಹುದಲ್ವಾ?

ಗುಂಡ: ಅದು ನಿಮಗೆ  ಗೊತ್ತಾ? ಸರಿ 10 ರವಾ ಇಡ್ಲಿಗೆ  ಅರ್ಧ ಲೀ ಪೆಪ್ಸಿ free ಅಂತ ಆಫರ್ ಇದೆ ಅಲ್ವಾ?

ಅ: ಹೌದು ಸರ್, ಆದರೆ ನಿಮಗೆ ಕೊಡೋಕೆ  ಆಗೋಲ್ಲ. ಹೋದ ವಾರ ರಾಮಯ್ಯ ಆಸ್ಪತ್ರೆಯಲ್ಲಿ  ಮೆಡಿಕಲ್ ಚೆಕಪ್ ಗೆ ಅಂತಾ ಹೋದಾಗ ನಿಮ್ಮ. ಶುಗರ್ ಲೆವೆಲ್ ಜಾಸ್ತಿ ಆಗಿದೆ ಅಂತ ಡಾಕ್ಟರ ಸುರೇಶ್ ರಾವ್ ಹೇಳಿದ್ದಾರಲ್ವಾ?

ಗುಂಡ: ನಿಮ್ಮ. ಅಜ್ಜಿ ...

ಅ: ಸರ್ ಹಾಗೆಲ್ಲ ಕೆಟ್ಟದಾಗಿ  ಮಾತಾಡಬೇಡಿ. 1999 ರಲ್ಲಿ ಇಂದಿರಾನಗರದಲ್ಲಿ ಗಲಾಟೆ ಆದಾಗ ನೀವು ಇದೇ ರೀತಿ ಕೆಟ್ಟದಾಗಿ  ಮಾತಾಡಿದ್ದಕ್ಕೆ ಪೋಲಿಸನವರು 500 ರೂಪಾಯಿ ದಂಡ ಹಾಕಿದ್ದು ನೆನಪಿದೆಯಾ?

ಗುಂಡ ಸುಸ್ತೋ ಸುಸ್ತು.

ಇದೇ  ಡಿಜಿಟಲ್ ಇಂಡಿಯಾ.

Sunday, February 4, 2024

🌹 ನಿತ್ಯಸತ್ಯ ಜ್ಞಾನದ ಭಂಡಾರ🌹

🌹 ನಿತ್ಯಸತ್ಯ  ಜ್ಞಾನದ ಭಂಡಾರ🌹

ಇದನ್ನ ಯಾವ ಪುಣ್ಯಾತ್ಮ ಬರೆದಿದ್ದು ಅಂತ ಗೊತ್ತಿಲ್ಲ. ವಾಟ್ಸಪ್ ಲ್ಲಿ ಬಂತು. ಲೇಖಕರ ಹೆಸರಿರ್ಲಿಲ್ಲ. ಅರ್ಥ ಮಾಡ್ಕೊಂಡ್ರೆ ತುಂಬ ಚೆನಾಗಿದೆ.

ಮಗಳು:-  ಅಮ್ಮ ಪ್ರಪಂಚದ 6 ಹೆಸರಾಂತ ವೈದ್ಯರುಗಳು ಯಾರಮ್ಮ?

ತಾಯಿ:- ಮಗಳೇ ಪ್ರಪಂಚದ 6 ಹೆಸರಾಂತ ವೈದ್ಯರುಗಳ ಬಗ್ಗೆ ಸರಿಯಾಗಿ ಗಮನವಿಟ್ಟು ಕೇಳು ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದೀಯಾ

1 ಸೂರ್ಯನ :-ಬೆಳಕು ಅಥವಾ ಸೂರ್ಯನ ಕಿರಣಗಳು

ದಿನನಿತ್ಯ ಬೆಳಿಗ್ಗೆ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು ಅಥವಾ ನಿಧಾನವಾಗಿ ನಡೆಯಬೇಕು ಸೂರ್ಯನ ಬೆಳಕು ಭಗವಂತನ ಶಕ್ತಿ ಆ ದಿವ್ಯಶಕ್ತಿ ನಮ್ಮ ದೇಹದಲ್ಲಿ  ಡಿ ವಿಟಮಿನ್ ಆಗಿ ಪ್ರವೇಶಿಸಿ ದಿನನಿತ್ಯ ನವಚೈತನ್ಯವನ್ನು ಉಂಟುಮಾಡುತ್ತದೆ

2 .ವಿಶ್ರಾಂತಿ:-   ನಾವು ದಿನನಿತ್ಯ ಅತಿಯಾದ ಕೆಲಸಗಳನ್ನು ಮಾಡುತ್ತಿರುವಾಗ ನಮ್ಮ ದೇಹದ ಶಕ್ತಿ ಕುಂದುತ್ತದೆ ಅದಕ್ಕಾಗಿ ಸಾಧ್ಯವಾದಷ್ಟು ಸಮಯ ಸಿಕ್ಕಾಗ ವಿಶ್ರಾಂತಿ ಪಡೆಯಬೇಕು ದೇಹದ ಅಂಗಾಂಗಗಳ ವಿಶ್ರಾಂತಿಯು ದೇಹವನ್ನು ಚೈತನ್ಯ ದಲ್ಲಿಡಿತ್ತದೆ

3.  ವ್ಯಾಯಾಮ:-  ಭಗವಂತ ನಮ್ಮ ದೇಹವನ್ನು ಅದ್ಭುತವಾಗಿ ಸೃಷ್ಟಿಸಿದ್ದಾನೆ 72000 ನಾಡಿಗಳಿ ವೆ ಇಡೀ ಪೃಥ್ವಿಯ ಎಲ್ಲಾ ಮಾಹಿತಿಗಳನ್ನು ನಮ್ಮ ಮೆದುಳಿನ ಚಿಪ್ಪಿನಲ್ಲಿ ಇಟ್ಟು ತುಂಬಿದರೆ ಅದು ಕೇವಲ ಶೇಕಡ ಒಂದರಷ್ಟು ಮಾತ್ರ ಎನ್ನುವುದು ಎಷ್ಟು ಅದ್ಭುತ  ಭಗವಂತ ನಮ್ಮನ್ನು ದೇವರ ಸ್ವರೂಪ ದಂತೆ  ಸರ್ವಶಕ್ತಿಯನ್ನು ಕೊಟ್ಟು ಸೃಷ್ಟಿಸಿದ್ದಾನೆ  ಇಂತಹ ಅದ್ಭುತವಾದ ದೇಹವನ್ನು ದಿನನಿತ್ಯದ ಚಟುವಟಿಕೆಗಾಗಿ ವ್ಯಾಯಾಮ  ತುಂಬಾ ಅವಶ್ಯಕತೆ

4. ಮಿತ :-ಆಹಾರ ದೇಹಕ್ಕೆ ಅವಶ್ಯಕತೆಯಾದಷ್ಟು ಮಾತ್ರ ಪ್ರೋಟಿನ್ ಯುಕ್ತ ಆಹಾರ ಸೇವಿಸಬೇಕು ಹಣ್ಣು ಸೊಪ್ಪು ತರಕಾರಿ ಹಾಗೂ ಒಣ ಹಣ್ಣುಗಳು ದೇಹಕ್ಕೆ ಅವಶ್ಯಕತೆ ಇವೆಲ್ಲವನ್ನು ಮಿತವಾಗಿ ಸೇವಿಸಬೇಕು  ಈ ರೀತಿ  ನಿತ್ಯ ಸೇವಿಸಿದಾಗ ದೇಹವು ಚೈತನ್ಯ ಪೂರಕವಾಗಿ ನಮ್ಮ ದೇಹದ  ಎಲ್ಲ ಅಂಗಾಂಗಗಳು ಆರೋಗ್ಯಪೂರ್ಣವಾಗಿರಲು
ಸಾಧ್ಯವಾಗುತ್ತದೆ

5.ಆತ್ಮಸ್ಥೈರ್ಯ:- ನಾವು ಏನೇ ಕಳೆದುಕೊಂಡರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಆತ್ಮಸ್ಥೈರ್ಯ ನಮಗೆ ಸದಾ ಸಂಜೀವಿನಿ ಜೀವರಕ್ಷಕ ಆಪದ್ಬಾಂಧವ ನಾವು ಸದಾ ಚಟುವಟಿಕೆಯಿಂದ ಇರಲು ನೆರವಾಗುತ್ತದೆ ಭಯ ಭೀತಿ 
ಸಂಕುಚಿತ ಮನೋಭಾವ
ಗಾಬರಿ ನಾಳೆ ಏನಾಗುತ್ತದೋ ಏನೋ ಎಂಬ ಅನುಮಾನ ಸದಾ ಕೆಟ್ಟದ್ದನ್ನೇ ಯೋಚಿಸುವುದು
ಪ್ರಸ್ತುತ ಮಹಾಮಾರಿಯ ಬಗ್ಗೆ ಚಿಂತಿಸುವುದು ಇವೆಲ್ಲವೂ ಋಣಾತ್ಮಕ ಚಿಂತನೆ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ
ಆತ್ಮಸ್ಥೈರ್ಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಆದ್ದರಿಂದ ಧನಾತ್ಮಕ ಚಿಂತನೆಗಳು ಆತ್ಮಸ್ಥೈರ್ಯದ ಜೀವನದ ಆಧಾರ ಸ್ತಂಭಗಳು

6. ಸ್ನೇಹಿತರು:-    ಜೀವನದಲ್ಲಿ ಕನಿಷ್ಠ ಐದಾರು ಜನ ಉತ್ತಮ ಸ್ನೇಹಿತರನ್ನು ಪ್ರತಿಯೊಬ್ಬರು ಹೊಂದಬೇಕು ಅವರೊಡನೆ ಪ್ರತಿನಿತ್ಯ ಭೇಟಿಯಾಗಲಿ ಅಥವಾ ದೂರವಾಣಿಯಲ್ಲಾಗಲಿ ಮಾತನಾಡಬೇಕು ಸ್ನೇಹಿತರೊಡನೆ ಮುಕ್ತವಾಗಿ
 ಮಾತನಾಡುವುದರಿಂದ ಮನಸ್ಸು ಹಗುರವಾಗುತ್ತದೆ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
 ದಿನನಿತ್ಯ ಸದಾ ನಾವು ಚಟುವಟಿಕೆಯಿಂದ ಇರಲು
ಸ್ನೇಹ ಸಂಜೀವಿನಿಯಂತೆ ಕೆಲಸ ಮಾಡುತ್ತದೆ

 ತಾಯಿ :-     ಮಗಳೇ.   ಪ್ರಪಂಚದ ಅತ್ಯುತ್ತಮ ವೈದ್ಯರ ಬಗ್ಗೆ ಅರ್ಥವಾಯಿತೇ

Thursday, February 1, 2024

ಎಲ್ಲಿಯವರೆಗೆ ನೀವು ಪ್ರಾಮಾಣಿಕರಾಗಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ನಾವು ನಿಮ್ಮನ್ನು ನಂಬುವ ಮಾತೇ ಇಲ್ಲ."

ಹಾಂಕಾಂಗ್‌ನಲ್ಲಿರುವ ಸ್ನೇಹಿತನಿಂದ ತಿಳಿದುಬಂದ 
*'ಬಹಳ ಆಘಾತಕಾರಿ ಸಂದೇಶ'*

ದಯವಿಟ್ಟು ಪೂರ್ಣ ಓದಿ 👇

*ಹಾಂಗ್ ಕಾಂಗ್ ನಲ್ಲಿ ಬಹಳಷ್ಟು ಜನರು ಅಲ್ಲಿರುವ ಭಾರತೀಯರೊಂದಿಗೆ ಹೆಚ್ಚು ಸ್ನೇಹ ಬೆಳೆಸುವುದಿಲ್ಲ  ಮತ್ತು ಕೆಲವರು ಭಾರತೀಯರನ್ನು ದ್ವೇಷಿಸುತ್ತಾರೆ!* 

ಆದರೆ *ಯಾಕೆ??*

ಅಲ್ಲಿ ವಾಸಿಸುವ ನನ್ನ ಸ್ನೇಹಿತರೊಬ್ಬರು ಹೀಗೆ ವಿವರಿಸಿದ್ದಾರೆ:

ಹಾಂಗ್ ಕಾಂಗ್ ನಲ್ಲಿ  ಸುಮಾರು ಒಂದು ವರ್ಷ ಕಳೆದ ನಂತರ, ನಾನು ಅನೇಕ ಸ್ಥಳೀಯರೊಂದಿಗೆ ಸ್ನೇಹ ಬೆಳೆಸಿದ್ದೆ. ಆದರೆ ಇಲ್ಲಿನ ಜನರು ನನ್ನೊಂದಿಗೆ ಸಂಶಯಮುಕ್ತರಾಗಿರಲಿಲ್ಲ ಮತ್ತು ನನ್ನಿಂದ ಅಂತರವನ್ನು ಕಾಯ್ದುಕೊಂಡಿದ್ದರು!!

ಇಲ್ಲಿಯ ಯಾವುದೇ ಸ್ಥಳೀಯ ಸ್ನೇಹಿತ ನನ್ನನ್ನು ತನ್ನ ಮನೆಗೆ ಆಹ್ವಾನಿಸಲಿಲ್ಲ ಮತ್ತು ನಮ್ಮ ಸ್ನೇಹ ಕೇವಲ ಔಪಚಾರಿಕವಾಗಿರುತ್ತಿತ್ತು. ನನ್ನ ಮತ್ತು ಅವರ ನಡುವೆ ಹಾರ್ದಿಕ ಸ್ನೇಹ ಬೆಳೆಸುವ ದಿಶೆಯಲ್ಲಿ ನನ್ನ ಪ್ರಯತ್ನ ಪ್ರಾಮಾಣಿಕವಾಗಿದ್ದರೂ ಕೂಡ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿರಲಿಲ್ಲ.

ಆಗಾಗ್ಗೆ ಅದರ ಬಗ್ಗೆ ನನಗೆ ಆಶ್ಚರ್ಯವಾಗುತ್ತಿತ್ತು. ಒಂದು ದಿನ ನಾನು ಸಾಹಸ ಮಾಡಿ ನನ್ನ ಸಹೋದ್ಯೋಗಿ ಸ್ನೇಹಿತನನ್ನು ಇದರ ಬಗ್ಗೆ ಕೇಳಿಯೇಬಿಟ್ಟೆ.

ಮೊದಲು ಉತ್ತರಿಸಲು ಸ್ವಲ್ಪ ಹಿಂಜರಿಕೆ ಮಾಡಿದ ಆ ನನ್ನ ಹಾಂಗ್ ಕಾಂಗ್ ಸ್ನೇಹಿತ, ನಂತರ ನನ್ನ ಒತ್ತಾಯಕ್ಕೆ ಮಣಿದು ಆಡಿದ ಮಾತುಗಳು ಮತ್ತು ಆ ಗಂಭೀರ ವಿಷಯಗಳು ನನ್ನನ್ನು ಅಚ್ಚರಿಗೊಳಿಸಿತು, ಮಾತ್ರವಲ್ಲ ಅವನ ಅಭಿಪ್ರಾಯ ಕೇಳಿ ನನಗೆ ಬಹಳ ಬಹಳ ನಾಚಿಕೆಯಾಯಿತು.

ಹಾಂಗ್ ಕಾಂಗ್ ಸ್ನೇಹಿತ ಕೇಳಿದ್ದು *"200 ವರ್ಷಗಳ ಕಾಲ ಆಳ್ವಿಕೆ ನಡೆಸಲು ಭಾರತದಲ್ಲಿ ಎಷ್ಟು ಬ್ರಿಟಿಷರು ವಾಸಿಸುತ್ತಿದ್ದರು?"* ನಾನೆಂದೆ "ಸುಮಾರು 10,000 ಬ್ರಿಟಿಷರಿರಬಹುದು"

 "ಹಾಗಾದರೆ 32 ಕೋಟಿ ಭಾರತದ ಜನರನ್ನು ಹಿಂಸಿಸಿದವರು, ಮತ್ತು ಇಷ್ಟು ವರ್ಷಗಳ ಕಾಲ ಆಳಿದವರು ಯಾರು? ಅವರು ನಿಮ್ಮ ಸ್ವಂತ ಜನರೇ ತಾನೇ??"

 "ಜಲಿಯನ್ ವಾಲಭಾಗ್ ನಲ್ಲಿ ಜನರಲ್ ಡೈಯರ್ #ಫೈರ್ ಎಂದು ಹೇಳಿದಾಗ 1300 ನಿರಾಯುಧ ಜನರನ್ನು ಹೊಡೆದು ಕೊಂದವರು ಯಾರು?? ಅಲ್ಲಿ ಬ್ರಿಟಿಷ್ ಸೈನ್ಯವೇನೂ ಇರಲಿಲ್ಲವಲ್ಲ!
*ಒಬ್ಬನೇ ಒಬ್ಬ ಗನ್‌ಮ್ಯಾನ್ ಏಕೆ ಹಿಂದೆ ತಿರುಗಿ ಜನರಲ್ ಡೈಯರ್‌ನನ್ನು ಕೊಲ್ಲಲು ಸಾಧ್ಯವಾಗಲಿಲ್ಲ??"*

ಮುಂದುವರೆದು ಆತ ಕೇಳಿದ:

"ಟರ್ಕಿ ಅಥವಾ ಮಧ್ಯ ಏಷ್ಯಾದಿಂದ ಎಷ್ಟು ಮೊಘಲರು ಮತ್ತು ಇತರರು ಭಾರತಕ್ಕೆ ಬಂದರು? ಹೇಗೆ ಅವರು ಸುಮಾರು 800 ವರ್ಷಗಳ ಕಾಲ ಭಾರತವನ್ನು ಲೂಟಿ ಮಾಡಿದರು ಮತ್ತು ಭಾರತವನ್ನು ಆಳಿದರು ಮತ್ತು ಭಾರತೀಯರನ್ನು ಗುಲಾಮರನ್ನಾಗಿ ಇಟ್ಟುಕೊಂಡರು???"

"ಹೇಗೆ ನಿಮ್ಮ ಸ್ವಂತ ಜನರನ್ನು ತಮ್ಮ ಇಸ್ಲಾಮ್ ಮತಕ್ಕೆ ಮತಾಂತರಿಸಿದರು ಮತ್ತು ಅದೇ ಮತಾಂತರಿಗಳನ್ನು ನಿಮ್ಮ ವಿರುದ್ಧ ನಿಲ್ಲುವಂತೆ ಮಾಡಿದರು??"
 
ಅವನ ಈ ಎಲ್ಲ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವೇ ಇಲ್ಲವಾಗಿತ್ತು, ಏನು ಹೇಳಬೇಕೆಂದೇ ತೋಚಲಿಲ್ಲ..

ಅವನೇ ಹೇಳಿದ:

"ಉತ್ತರ ಇಷ್ಟೇ..
ಹಣ ಮತ್ತು ಅಧಿಕಾರದ ದುರಾಸೆಯಲ್ಲಿ ಆ ವಿದೇಶಿಗರ ಅಮಿಷಕ್ಕೊಳಗಾಗಿ ನಿಮ್ಮವರು ತಮ್ಮ ಸಹೋದರರನ್ನೇ ಹಿಂಸಿಸಲು ಮತ್ತು ಲೂಟಿ ಮಾಡಲು ಶತ್ರುಗಳೊಂದಿಗೇ ಸೇರಿಕೊಂಡರಲ್ಲವೇ??  
ಈಗ ಅವರು ವಿದೇಶಿಯರು ಎಂದು ಹೇಳಬೇಡಿ!

*ನಿಮ್ಮ ಸ್ವಂತ ಜನರೇ, ಭಾರತೀಯರೇ ವಿದೇಶಿಯರ ದಾಸರಾಗಿ, ಕೂಲಿಗಳಾಗಿ, ಸೈನಿಕರಾಗಿ ಶತಮಾನಗಳಿಂದ ಹಣ, ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ತಮ್ಮ ಸ್ವಂತ ಸಹೋದರ ಸಹೋದರಿಯರನ್ನೇ ಕೊಂದು ಅತ್ಯಾಚಾರ ಮಾಡುತ್ತಿದ್ದಾರೆ, ನಿಜವಲ್ಲವೇ??"*

"ದೇಶದ್ರೋಹದಲ್ಲಿ ನಿಮ್ಮ ಜನರ ಪಾತ್ರದ ಬಗ್ಗೆ ನಮಗೆ ಬಲವಾದ ತಿರಸ್ಕಾರವಿದೆ. ನಮ್ಮಲ್ಲಿ ಅನೇಕರು ನಿಮ್ಮ *ಸ್ವಾರ್ಥ, ದುರಾಸೆ ಮತ್ತು ದ್ರೋಹದ ಕಾರಣಕ್ಕಾಗಿ* ನಿಮ್ಮನ್ನು ಬಲವಾಗಿ ದ್ವೇಷಿಸುತ್ತಾರೆ."

"ನಮ್ಮಲ್ಲಿ ಅಂತಹ ಜನರು ಇಲ್ಲವೇ ಇಲ್ಲ ಎಂದಲ್ಲ, ಆದರೆ *ನಾವು ನಮ್ಮ ಮೇಲೆ ದಬ್ಬಾಳಿಕೆ ನಡೆಸುವವರೊಂದಿಗೆ ಸಹಕರಿಸುವುದಿಲ್ಲ. ನಮ್ಮ ದೇಶ ಅಥವಾ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡುವ ಅಥವಾ ವರ್ತಿಸುವ ಜನರನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ನಾನು ನಿಮಗೆ ಪ್ರಮಾಣ ಮಾಡಿ ಹೇಳಬಲ್ಲೆ!*

ಕಮ್ಯುನಿಸ್ಟ್ ದೇಶವಾಗಿದ್ದರೂ ಚೀನಾದಲ್ಲಿ ಅಂತಹ ಜನರು ನಿಮಗೆ ಕಾಣುವುದಿಲ್ಲ!

*ನಾವು ಎಂದಿಗೂ ನಮ್ಮ ರಾಷ್ಟ್ರಕ್ಕೆ ದ್ರೋಹ ಮಾಡಲು ಸಾಧ್ಯವೇ ಇಲ್ಲ.  ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ನಮಗೆ ಸದಾ ಹೆಮ್ಮೆ ಇದೆ.*

ನಾವು ಸಾಧ್ಯವಾದಷ್ಟು ಭಾರತೀಯರ ಬಗ್ಗೆ ಹೆದರುವುದಿಲ್ಲ ??

ಬ್ರಿಟಿಷರು ನಮ್ಮ ದೇಶ ಹಾಂಕಾಂಗ್‌ಗೆ ಬಂದಾಗ, ಒಬ್ಬ ವ್ಯಕ್ತಿಯೂ ಅವರ ಸೈನ್ಯಕ್ಕೆ ಸೇರಲಿಲ್ಲ ಏಕೆಂದರೆ ನಮ್ಮ ಪೂರ್ವಜರು ತಮ್ಮ ಜನರ ವಿರುದ್ಧ ಹೋರಾಡಲು ಸಿದ್ಧರಿರಲಿಲ್ಲ??

*ಸ್ವಲ್ಪವೂ ಯೋಚಿಸದೇ ಸಂಪೂರ್ಣವಾಗಿ ಮಾರಾಟವಾಗಲು ಸಿದ್ಧರಾಗಿರುವ ಭಾರತೀಯರ ದ್ವಿಪಾತ್ರ ಇದು. ಇಂದಿಗೂ ಭಾರತದಲ್ಲಿ ಅದೇ ನಡೆಯುತ್ತಿದೆ! ಸ್ವತಂತ್ರಗೊಂಡ ಮೇಲೂ ಭಾರತೀಯರ ಪರಿಸ್ಥಿತಿ ಮತ್ತು ಮನಸ್ಸು ಬದಲಾಗಲೇ ಇಲ್ಲ.*

ಪ್ರಾಕೃತಿಕ, ಆಕ್ರಾಮಕ ಅಥವಾ ಇನ್ನಾವುದೇ ಸಮಸ್ಯೆಗಳಿರಲಿ *ನೀವು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಎರಡನೇ ಸ್ಥಾನವನ್ನು ನೀಡುತ್ತೀರಿ ಮತ್ತು ನಿಮ್ಮ ಸ್ವಂತ ಲಾಭಕ್ಕಾಗಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಸೇರಲು ನಿಮಗೆ ಹಿಂಜರಿಕೆಯೇ ಇಲ್ಲ.*

ದೇಶದ ಸಂಕಷ್ಟದ ಸಮಯದಲ್ಲಿಯೂ ನಿಮ್ಮಲ್ಲಿ ಮೂಡುವ ಮೊದಲ ಭಾವನೆ *ದೇಶ ನಾಶವಾಗಿ ಹೋದರೂ 'ನಾನು ಮತ್ತು ನನ್ನ ಕುಟುಂಬ ಮೊದಲು ಉಳಿಯಬೇಕು!!'.* ಎನ್ನುವುದು.

ಎಲ್ಲಿಯವರೆಗೆ ನೀವು ಪ್ರಾಮಾಣಿಕರಾಗಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ನಾವು ನಿಮ್ಮನ್ನು ನಂಬುವ ಮಾತೇ ಇಲ್ಲ."

"ಹಾಂಗ್ ಕಾಂಗ್ ನ ಆ ಸ್ನೇಹಿತ ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ನನಗೆ  ಅವರೇನೆಂದು ಮತ್ತು ನಾವೇನೆಂದು ಅರ್ಥವಾಗಿ ಹೋಗಿತ್ತು."
---
ಸ್ನೇಹಿತರೇ,
ಇದು ನಮಗೆಲ್ಲಾ ನಾಚಿಕೆಗೇಡಿನ ವಿಷಯವಲ್ಲವೇ?
ನಮಗೆ ಗಂಭೀರ ಆತ್ಮಾವಲೋಕನದ ಅಗತ್ಯವಿಲ್ಲವೇ.

ಈ ಬರಹ ನಿಮ್ಮ ಮನಸ್ಸನ್ನು ಮುಟ್ಟಿದ್ದಲ್ಲಿ ಆದಷ್ಟು ಜನರಿಗೆ ಮತ್ತು ಗುಂಪುಗಳಿಗೆ ಫಾರ್ವರ್ಡ್ ಮಾಡಿ ಭಾರತೀಯರನ್ನು ಎಚ್ಚರಿಸುವ ಕಾರ್ಯದಲ್ಲಿ ಕೈಜೋಡಿಸಿ.

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World