www.dgnsgreenworld.blogspot.com

Wednesday, April 27, 2022

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ!

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ! 

ಈ ವರ್ಷ ಮತ್ತೆ ಅಕ್ಷಯ ತೃತೀಯ ಬರುತ್ತಿದೆ (May 3). ಆಗಲೇ ಬಂಗಾರದ ಅಂಗಡಿಗಳು ಭಾರಿ ಆಫರ್ ಗಳನ್ನು ಕೊಡಲು ಆರಂಭಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಟಿವಿಗಳಲ್ಲಿ ಬ್ರಹ್ಮಾಂಡ ಬೃಹಸ್ಪತಿಗಳು ಬಂದು ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಹೇಗೆ ಬರುತ್ತಾಳೆ ಅಂತ ಪುಂಖಾನುಪುಂಖವಾಗಿ ಪುಗುತ್ತಾರೆ. ನೆನಪಿಡಿ ಈ ಕಾರ್ಯಕ್ರಮಗಳನ್ನು ಸ್ಪಾನ್ಸರ್ ಮಾಡುವುದು ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳೇ!ಗೋಲ್ಡ್ ಶೋರೂಮ್ ಗಳಂತೂ ಭರ್ಜರಿ ಆಫರ್ ಜೊತೆಗೆ ಅದೃಷ್ಟ ಲಕ್ಷ್ಮಿಯನ್ನು ನಿಮ್ಮ ಮನೆಗೆ ಇವರೇ ಖುದ್ದು ಕಳಿಸಿಕೊಡುವವರಂತೆ ವರ್ತಿಸುತ್ತಾರೆ. 

ಒಂದು ಚೂರು ಯೋಚನೆ ಮಾಡಿ ನೋಡಿ...ಒಂದು ಹದಿನೈದು ಇಪ್ಪತ್ತು ವರ್ಷ ಹಿಂದಕ್ಕೆ ಹೋಗಿ. ಆಗ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳು ಇರಲಿಲ್ಲ, ಖಾಸಗಿ ಟಿವಿ ಚಾನಲ್ ಗಳು ದೊಡ್ಡದಾಗಿರಲಿಲ್ಲ...ಬ್ರಹ್ಮಾಂಡ ಬೃಹಸ್ಪತಿಗಳು ಟಿವಿಗಳಲ್ಲಿ ಕಾಣುತ್ತಿರಲಿಲ್ಲ.ಜನರು ಮುಗಿದು ಬಿದ್ದು ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿ ಕೂಡ ಮಾಡುತ್ತಿರಲಿಲ್ಲ.ಈಗಂತೂ ವಾರಕ್ಕೆ ಮೊದಲೇ ಪ್ರತಿವರ್ಷ
ಅಕ್ಷಯ ತೃತೀಯ ಕಾರ್ಯಕ್ರಮಗಳು ಪ್ರಸಾರ ಶುರುವಾಗುತ್ತದೆ. ಅಕ್ಷಯ ತೃತೀಯ ಸ್ಪೆಷಲ್ ಕಾರ್ಯಕ್ರಮಗಳ ಹಿಂದೆ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳ ಕೈವಾಡ ಇರುತ್ತದೆ. ಜ್ಯೋತಿಷ್ಯಗಳ ಮೂಲಕ ಇದೇ ದಿನ ಬಂಗಾರ ಖರೀದಿ ಮಾಡಬೇಕು. ಈ ದಿನ ಬಂಗಾರ ಖರೀದಿ ಮಾಡುವುದರಿಂದ ಅಕ್ಷಯ ಅಂದರೆ ವೃದ್ಧಿಸುತ್ತದೆ ಎಂಬ ಭಾವನೆಯನ್ನು ಬಿತ್ತುತ್ತಿದ್ದಾರೆ.
ತಿಂಗಳಿಗೆ ಮೊದಲೇ ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿಗೆ ಮುಂಗಡ ಬುಕಿಂಗ್ ಗೋಲ್ಡ್ ಶೋರೂಮ್ ಗಳು ಆರಂಭಿಸುತ್ತವೆ. ಬೃಹಸ್ಪತಿ ಗಳ ಮಾತನ್ನು ನಂಬಿಕೊಂಡು
ಅದೆಷ್ಟೋ ಮಧ್ಯಮವರ್ಗದವರು ಸಾಲಸೋಲ ಮಾಡಿ ಇದೇ ದಿನ ಬಂಗಾರ ಖರೀದಿಗೆ ಮುಗಿದು ಬೀಳುತ್ತಿದ್ದಾರೆ. 

ಇಷ್ಟಕ್ಕೂ ಅಕ್ಷಯ ತೃತೀಯ ಎಂದರೇನು?

ವೈಶಾಖ ಮಾಸದ ಶುಕ್ಲಪಕ್ಷದ ಮೂರನೆಯ ದಿನವನ್ನು ಅಕ್ಷಯ ತೃತೀಯ ಅಂತ ಕರೆಯುತ್ತಾರೆ. 'ಅಕ್ಷಯ' ಎಂದರೆ ಸದಾ ವೃದ್ಧಿಯಾಗುವುದು, ಎಂದಿಗೂ ಕೂಡ ಕರಗದೆ ಇರುವ ಸಂಪತ್ತು ಎಂಬ ಅರ್ಥ ಕೊಡುತ್ತದೆ. ಅಕ್ಷಯ ತೃತೀಯ ಎಂದರೆ ದಾನ ಮಾಡುವ ದಿನ. ಹೌದು ನಮ್ಮ ಬಳಿಯಲ್ಲಿ ಇರುವಂತಹ ಧವಸ-ಧಾನ್ಯಗಳು ಜೊತೆಗೆ ಬಡವರಿಗೆ ಬಟ್ಟೆಗಳನ್ನುದಾನ ಮಾಡುವ ಮೂಲಕ ಪುಣ್ಯವನ್ನು ಅಕ್ಷಯ ಮಾಡಿಕೊಳ್ಳುವ ದಿನ.

ಅಕ್ಷಯ ತೃತೀಯ ದಿನ ಮಾಡಬೇಕಾದದು ಬರೀ ದಾನ... ದಾನ...ದಾನ...ಈ ದಿನ ತನ್ನಲ್ಲಿರುವ  ಸಂಪತ್ತನ್ನು  ಬಡವರಿಗೆ -ಅಸಹಾಯಕರಿಗೆ ದಾನ ಮಾಡುವುದರಿಂದ ಪುಣ್ಯ ದಕ್ಕಿ ಅದರಿಂದ ದಾನ ಮಾಡಿದವರ ಬದುಕಿನಲ್ಲಿ,
ಕುಟುಂಬಗಳಲ್ಲಿ ಸಂತೋಷ ನೆಮ್ಮದಿ ಶಾಂತಿ ಮತ್ತು ಆರೋಗ್ಯಗಳು ಅಕ್ಷಯವಾಗಲಿ ಎಂಬ ಸದುದ್ದೇಶ 'ಅಕ್ಷಯ ತೃತೀಯ' ದಿನದ ಆಚರಣೆಯ ಹಿನ್ನೆಲೆಯಲ್ಲಿ ಇರುವಂತಹದು. ಅಕ್ಷಯ ತೃತೀಯ ದಿನ ನೀವು ಬಡಬಗ್ಗರು, ನಿರ್ಗತಿಕರಿಗೆ ಅಸಹಾಯಕರಿಗೆ ಏನನ್ನು ದಾನ ರೂಪದಲ್ಲಿ (ಅನ್ನ-ನೀರು, ದವಸ-ಧಾನ್ಯ, ಹಣ ಹೀಗೆ) ನೀವು ಏನನ್ನು ನೀಡಿದರೂ ಅದು ನಿಮಗೆ ಮತ್ತೆ ಅಕ್ಷಯವಾಗಲಿ ಎಂಬ ಹಾರೈಕೆಯ ಹಿನ್ನೆಲೆ ಅಕ್ಷಯ ತೃತೀಯ ಆಚರಣೆ.

ಅಕ್ಷಯ ತೃತೀಯ ದಿನ ಮುಖ್ಯವಾಗಿ ಮೂರು ದಾನಗಳನ್ನು ಮಾಡುತ್ತಿದ್ದರು.

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಆಚರಣೆಗೂ ಒಂದು ವೈಜ್ಞಾನಿಕ ಕಾರಣಗಳಿವೆ. ಆಚರಣೆಗಳ ಒಳಗೆ ಮಡಿ-ಮೈಲಿಗೆ-ಕಂದಾಚಾರಗಳು ಪ್ರವೇಶಮಾಡಿ ಅರ್ಥಗಳು  ಕಳೆದುಹೋಗಿ ಅನರ್ಥಗಳು ಮಾತ್ರ ಉಳಿದು ಹೋಗಿವೆ. ಇದರಿಂದ ಅಕ್ಷಯತೃತಿಯ ಕೂಡ ಹೊರತಾಗಿಲ್ಲ. 

ಅಕ್ಷಯ ತೃತೀಯ ವೈಶಾಖ ಮಾಸದಲ್ಲಿ ಬರುತ್ತದೆ ಅಂದರೆ ಸುಡುಬಿಸಿಲಿನ ಕಾಲ. ಹೀಗಾಗಿ ದಾನದ ರೂಪದಲ್ಲಿ ಬಡವರಿಗೆ ಮತ್ತು ಅಸಹಾಯಕ ನಿರ್ಗತಿಕರಿಗೆ ನೀರಿನ (ಮಣ್ಣಿನ) ಮಡಿಕೆ ಈ ದಿನ ದಾನದ ರೂಪದಲ್ಲಿ ನೀಡುತ್ತಿದ್ದರು. ಜೊತೆಗೆ ಮತ್ತೊಂದು ವಿಶಿಷ್ಟವಾದದ್ದು ಅಂದರೆ ಸುವಾಸನಾಭರಿತವಾದ ನೀರಿನ ದಾನ. ಹೌದು ಹೇಗೆ ನಾವು ಈಗ ರಾಮನವಮಿಗೆ  ಪಾನಕ -ಹೆಸರುಬೇಳೆ ಕೊಡುತ್ತೇವೆ ಹಾಗೆ ಹಿಂದಿನ ಕಾಲದಲ್ಲಿ ಅಕ್ಷಯತೃತಿಯ ದಿನ ಬಿಸಿಲಿಗೆ ಬಳಲಿ ಬೆಂಡಾಗಿದ್ದ ಸಾಮಾನ್ಯರಿಗೆ ರಸ್ತೆ ಬದಿಯಲ್ಲಿ ನಿಂತು ಸುವಾಸನಾಭರಿತವಾದ ನೀರನ್ನು ನೀಡುತ್ತಿದ್ದರು. (ನೀರನ್ನು ದಾನದ ರೂಪದಲ್ಲಿ ನೀಡುವುದಕ್ಕೆ ಬಹುಮುಖ್ಯ ಕಾರಣವೆಂದರೆ ಮನುಷ್ಯನಿಗೆ ಆಹಾರವಿಲ್ಲದೆ ಹೋದರೂ ಪರವಾಗಿಲ್ಲ ಆದರೆ ನೀರು ಇದ್ದರೆ ಮಾತ್ರ ಜೀವ. ಸತ್ತು ಸ್ವರ್ಗದ ದಾರಿಯಲ್ಲಿ ನಡೆಯಬೇಕಾದ ಕೂಡ ಮುಂದೆ ನೀರಿನ ಹಾಹಾಕಾರ ಬರೆದೆ ಇರಲಿ ಎಂದು ನೀರನ್ನು ದಾನದ ರೂಪದಲ್ಲಿ ಕೊಡುತ್ತಿದ್ದರು)

ಅಷ್ಟಕ್ಕೂ ಸುವಾಸನಾಭರಿತವಾದ ನೀರು ಹೇಗೆ ತಯಾರು ಮಾಡುತ್ತಿದ್ದರು ಗೊತ್ತೇ?

ಅಕ್ಷಯ ತೃತೀಯ ಹಿಂದಿನ ದಿನ ಮಾರುಕಟ್ಟೆಯಿಂದ ಹೊಸದಾದ ನೀರಿನ ಮಡಿಕೆಯನ್ನು ತೆಗೆದುಕೊಂಡು ಬಂದು ಅದನ್ನು ಶುದ್ಧವಾಗಿ ತೊಳೆದು ಅದರ ತುಂಬಾ ಕುಡಿಯುವ ನೀರನ್ನು ಹಾಕಿ, ಒಂದೆರಡು ಲವಂಗ- ಏಲಕ್ಕಿ- ಜಾಜಿಕಾಯಿ- ಜಾಪತ್ರೆ-ಪಚ್ಚ (ಹಸಿ)ಕರ್ಪೂರಮತ್ತು ಕಸ್ತೂರಿ ಇದನ್ನೆಲ್ಲವನ್ನು ಒಟ್ಟಿಗೆ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಂಡು ಮಡಿಕೆ ಒಳಗಿನ ಕುಡಿಯುವ ನೀರಿನ ಒಳಗೆ ಹಾಕುತ್ತಾರೆ. ಅದನ್ನು ಮುಚ್ಚಳದಿಂದ ಚೆನ್ನಾಗಿ ಮುಚ್ಚಿಡುತ್ತಾರೆ. ಬೆಳಗ್ಗೆ ಮುಚ್ಚಳವನ್ನು ತೆರೆದಾಗ ಕುಡಿಯುವ ನೀರು ಸುವಾಸನಾಭರಿತವಾಗಿರುತ್ತದೆ ಮತ್ತು ಅದು ಶಕ್ತಿಯುತ ಮತ್ತು ಆರೋಗ್ಯವಂತವಾದ ಪಾನೀಯವಾಗುತ್ತದೆ. ಈ ಸುವಾಸನಾಭರಿತ ವಾದ ನೀರನ್ನು ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತು ಸುಡುಬಿಸಿಲಿನಲ್ಲಿ ನಡೆದು ಹೋಗುತ್ತಿರುವ ದಾರಿಹೋಕರಿಗೆ ನೀಡುವ ಮೂಲಕ ಅವರ ಸಂತೋಷಪಡಿಸಿ ತಾವು ಸಂತೃಪ್ತರಾಗಿದ್ದರು.

ಇನ್ನು ಇದೇ ಸಮಯದಲ್ಲಿ ಇನ್ನು ಎರಡು ಮುಖ್ಯ ದಾನಗಳನ್ನು ಕೂಡ ಮಾಡುತ್ತಿದ್ದರು. ಒಂದು ಬಿಸಿಲಿನ ಕಾರಣಕ್ಕಾಗಿ ಪಾದರಕ್ಷೆಗಳು ಇನ್ನೊಂದು ಕೊಡೆಯನ್ನು ಕೂಡ ದಾನದ ರೂಪದಲ್ಲಿ ನೀಡುತ್ತಿದ್ದರು. ಬಡವರು-ನಿರ್ಗತಿಕರಿಗೆ ದಾನದ ರೂಪದಲ್ಲಿ ಇದೆಲ್ಲವನ್ನೂ ನೀಡುವುದರಿಂದ ತಮ್ಮ ಜೀವನದಲ್ಲಿ ಪುಣ್ಯ -ಸಂತೋಷ- ನೆಮ್ಮದಿಗಳು ಅಕ್ಷಯವಾಗುತ್ತದೆ ಎಂಬ ನಂಬಿಕೆ ಅಂದಿನ ಜನರಲ್ಲಿತ್ತು.
ಅಕ್ಷಯ ತೃತೀಯ ಅರ್ಥವೇ ದಾನ...

ಬಂಗಾರ ಖರೀದಿ ಮಾಡಿದರೆ ದರಿದ್ರವನ್ನು ಮನೆಗೆ ತೆಗೆದುಕೊಂಡು ಹೋದಂತೆ!

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಯಾವ ಶಾಸ್ತ್ರದಲ್ಲೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ನೆನಪಿಡಬೇಕಾದ ವಿಷಯವೆಂದರೆ ಇದು ಕಲಿಯುಗ, ಕಲಿಪುರುಷ ಇನ್ನಿಲ್ಲದಂತೆ ಜನರನ್ನು ಹಿಂಸಿಸುತ್ತಾನೆ ಮತ್ತು ಕಾಡುತ್ತಾನೆ. ಕಲಿಪುರುಷನ ವಾಸಸ್ಥಾನದಲ್ಲಿ ಮೊದಲನೆಯದು ಬಂಗಾರ. ಹೀಗಾಗಿ ನಿಮ್ಮ ಮನೆಯಲ್ಲಿ ಎಷ್ಟು ಬಂಗಾರವಿರುತ್ತದೆ ಅಷ್ಟು ಅಶಾಂತಿ ಮನೆಮಾಡಿರುತ್ತದೆ. ಮನೆಗೆ ಕನ್ನ ಹಾಕುವ ಕಳ್ಳರು ಕೂಡ ಮೊದಲು ದೋಚುವುದು ಕೂಡ ದರಿದ್ರ ಬಂಗಾರವನ್ನೆ. ಅಂತಹ ಬಂಗಾರವನ್ನು ನೀವು ಅಕ್ಷಯ ತೃತೀಯ ದಿನ ಖರೀದಿ ಮಾಡಿದರೆ ಕಲಿಪುರುಷನ ಪ್ರವೇಶ ನಿಮ್ಮ ಮನೆಗೆ ಆಗುತ್ತದೆ. ಮನೆಯಲ್ಲಿ ಅಶಾಂತಿ, ನಿತ್ಯ ಗಲಾಟೆಗಳು,ರಂಪಾಟಗಳು ಅಕ್ಷಯವಾಗುತ್ತದೆ. 

ನಿಮ್ಮ ಬಳಿ ಹಣವಿದ್ದಾಗ ಬಂಗಾರವನ್ನು ಖರೀದಿ ಮಾಡಿ ಆದರೆ ಯಾವನೋ ಟಿವಿಯಲ್ಲಿ ಬೃಹಸ್ಪತಿ ಹೇಳಿದ ಅಂತ ಹೇಳಿ ಅಪ್ಪಿತಪ್ಪಿ ಕೂಡ ಅಕ್ಷಯ ತೃತೀಯ ದಿನ ಸಾಲ ಮಾಡಿ ಬಂಗಾರದ  ಖರೀದಿ ಮಾಡಿ ಸಂಕಷ್ಟಗಳಿಗೆ ಸಿಲುಕಬೇಡಿ. ಅಕ್ಷಯ ತೃತೀಯ ದಿನ ನೀವು ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋದರೆ ಮುಂದಿನ ಅಕ್ಷಯತೃತೀಯ ದಿನದವರೆಗೂ ನಿಮ್ಮ ಮನೆಯಲ್ಲಿ ಕಲಿ ಪುರುಷ ಸ್ಥಿರನಾಗುತ್ತಾನೆ.ಅಶಾಂತಿಯ ಗೂಡು ನಿಮ್ಮ ಮನೆಯಾಗುತ್ತದೆ, ನೆಮ್ಮದಿಯ ನಿದ್ದೆ ಹೋಗುತ್ತದೆ, ಅಪಮಾನಗಳು ಎದುರಾಗುತ್ತದೆ...ಹೀಗಾಗಿ ಆಯ್ಕೆ ನಿಮ್ಮದು!

ಅಕ್ಷಯ ತೃತೀಯ ದಿನದಂದು ಸಾಧ್ಯವಾದರೆ ಯಾವುದಾದರೂ ಒಂದು ಅನಾಥಾಶ್ರಮದ ಮಕ್ಕಳಿಗೆ  ಊಟ ಹಾಕಿಸಿ, ಪರಿಸರ ಸಂರಕ್ಷಿಸಲು ಒಂದು ಗಿಡ ನೆಡಿ. ಸಾಧ್ಯವಾದಷ್ಟು ಒಳ್ಳೆಯ ವಿಷಯಗಳನ್ನು ಒಳ್ಳೆಯತರದಲ್ಲಿ  ಬದುಕಿನ ಆಲೋಚನೆಗಳನ್ನು ಮಾಡಿ ಇದರಿಂದ ಬದುಕು ಅಕ್ಷಯವಾಗುತ್ತದೆ.
💐💐💐💐💐💐💐💐💐
 ಚಿನ್ನವೇ ಬದುಕಲ್ಲ
ಬದುಕೇ   ಚಿನ್ನ. 
🌹🌹🌹🌹🌹🌹🌹🌹🌹

Tuesday, April 26, 2022

ವೈದ್ಯೋ ನಾರಾಯಣ ಹರಿ.

🇳🇪🇳🇪🇳🇪🇳🇪🇳🇪
*( ಆಧುನಿಕ ರಾಕ್ಷಸರ ಬಗ್ಗೆ  ಒಬ್ಬ ವೈದ್ಯ ಬಹಳ ಅರ್ಥಪೂರ್ಣವಾಗಿ ಬರೆದಿದ್ದಾರೆ ಒಮ್ಮೆ ಓದಿ...)

*ಕಪ್ಪು ಹಣ ಸಂಪಾದಿಸುವ ಮಾರ್ಗಗಳು ಕೊನೆಗೊಳ್ಳಬೇಕು......*

_ನಾನು ವೈದ್ಯ, ಅದಕ್ಕಾಗಿಯೇ_
_ನಾನು ಎಲ್ಲಾ ಪ್ರಾಮಾಣಿಕ_ _ವೈದ್ಯರಲ್ಲಿ ಕ್ಷಮೆಯಾಚಿಸುತ್ತೇನೆ_........ 

*ಹೃದಯಾಘಾತ* ನಡೆದಿದೆ ವೈದ್ಯರು ಹೇಳುತ್ತಾರೆ - *ಸ್ಟ್ರೆಪ್ಟೋಕಿನೇಸ್*  ಚುಚ್ಚುಮದ್ದು ನೀಡಿ ... 9,000 /- ರೂ . ಇಂಜೆಕ್ಷನ್‌ನ ನಿಜವಾದ ವೆಚ್ಚ ರೂ. 700 /- ರಿಂದ 900 /- ರೂ., ಆದರೆ MRP ರೂ.  9,000 /- !  ನೀವೇನು ಮಾಡುವಿರಿ ?...

*ಟೈಫಾಯಿಡ್* ಬಂತು
  ವೈದ್ಯರು ಬರೆದರು . ಒಟ್ಟು 14 *ಮೊನೊಸೆಫ್* ತೆಗೆದುಕೊಳ್ಳಿ!  ಸಗಟು ಬೆಲೆ ರೂ.25 /=  ಆಸ್ಪತ್ರೆಯ ರಸಾಯನಶಾಸ್ತ್ರಜ್ಞ ರೂ.53 / = ಕೊಡುತ್ತಾನೆ . ಏನು ಮಾಡುತ್ತೀರಿ ??...

ಕಿಡ್ನಿ ವೈಫಲ್ಯ .ಮೂರು ದಿನಕ್ಕೆ ಒಮ್ಮೆ ಡಯಾಲಿಸಿಸ್ ಮಾಡ್ತಾರೆ .., ಡಯಾಲಿಸಿಸ್ ಮಾಡಿ ಇಂಜೆಕ್ಷನ್ ಕೊಡ್ತಾರೆ . MRP 1800 ರೂ.  
ನಾನು ಅದನ್ನು ಸಗಟು ಮಾರುಕಟ್ಟೆಯಿಂದ ತೆಗೆದುಕೊಳ್ಳುತ್ತೇನೆ ಎಂದು ನೀವು ಭಾವಿಸುತ್ತೀರಿ...! 

ಭಾರತದಾದ್ಯಂತ ಹುಡುಕಿದರೂ ಎಲ್ಲಿಯೂ ಸಿಗಲ್ಲ... ಏಕೆ ?  
ಕಂಪನಿಯ ಸರಬರಾಜು ವೈದ್ಯರಿಗೆ ಮಾತ್ರ !!  
ಚುಚ್ಚುಮದ್ದಿನ ಮೂಲ ಬೆಲೆ 500 / -,  ಆದರೆ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ MRP 1,800 /-
 ಏನು ಮಾಡುತ್ತೀರಿ ??...

*ಸೋಂಕು* ಉಂಟಾಗಿದೆ.ವೈದ್ಯರು ಬರೆದ ಆ್ಯಂಟಿಬಯೋಟಿಕ್ ರೂ.540/-
ಅದೇ ಬೇರೆ ಕಂಪನಿಯಿಂದ 150 /- ಮತ್ತು ಜೆನೆರಿಕ್ ರೂ 45 /-
ಆದರೆ ರಸಾಯನಶಾಸ್ತ್ರಜ್ಞ ನಿರಾಕರಿಸುತ್ತಾನೆ. ನಾವು ಯಾವುದೇ ಜೆನೆರಿಕ್ ನೀಡುವುದಿಲ್ಲ .., 
ವೈದ್ಯರ ಪ್ರಿಸ್ಕ್ರಿಪ್ಷನ್ ಅನ್ನು ಮಾತ್ರ ನೀಡುತ್ತೇವೆ ... 
ಅಂದರೆ 540 /- ನೀವೇನು ಮಾಡುವಿರಿ...??

ಮಾರುಕಟ್ಟೆಯಲ್ಲಿ  ಅಲ್ಟ್ರಾಸೌಂಡ್ ಪರೀಕ್ಷೆಯು ರೂ.  750 /- , ಟ್ರಸ್ಟ್ ಫಾರ್ಮಸಿ ರೂ.  240 /- ರೂ.750 ರಲ್ಲಿ ವೈದ್ಯರ ಕಮೀಷನ್ 300 /- ರೂ.....!
 
MRI ನಲ್ಲಿ ವೈದ್ಯರ ಕಮಿಷನ್ ರೂ.  2,000 /- ದಿಂದ 3,000/-
ವೈದ್ಯರು ಮತ್ತು ಆಸ್ಪತ್ರೆಗಳ ಈ ದರೋಡೆ, ಅತಿರಂಜಿತ, ನಿರ್ಭೀತ, ನಿರ್ಭೀತ ಭಾರತ ದೇಶದಲ್ಲಿ ನಡೆಯುತ್ತಿದೆ...!

ದೇಶವನ್ನು ನೇರವಾಗಿ ಒತ್ತೆ ಇಡುವಷ್ಟು ಔಷಧ ಕಂಪನಿಗಳ ಲಾಬಿ ಪ್ರಬಲವಾಗಿದೆ....!

ವೈದ್ಯರು ಮತ್ತು ಔಷಧೀಯ ಕಂಪನಿಗಳು ಇದರಲ್ಲಿ ಶಾಮೀಲು!  ಇಬ್ಬರೂ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ...!!  

ದೊಡ್ಡ ಪ್ರಶ್ನೆ ...
ಮಾಧ್ಯಮಗಳು ಹಗಲು ರಾತ್ರಿ ಏನು ತೋರಿಸುತ್ತವೆ ?  

ಹಳ್ಳಕ್ಕೆ ಬಿದ್ದ ರಾಜಕುಮಾರ, ಡ್ರೈವರ್ ಲೆಸ್ ಕಾರು, ರಾಕಿ ಸಾವಂತ್, ಬಿಗ್ ಬಾಸ್, ಅತ್ತೆ-ಮಾವ , ಕ್ರೈಂ ರಿಪೋರ್ಟ್, ಕ್ರಿಕೆಟಿಗನ ಗೆಳತಿ ಇದನ್ನೆಲ್ಲ ತೋರಿಸುತ್ತಾರೆ...

ಆದರೆ ...

ವೈದ್ಯರ ಕಂಪನಿಗಳು, ಆಸ್ಪತ್ರೆ ಮತ್ತು ಔಷಧೀಯ ಕಂಪನಿಗಳು ಅದರ ಸ್ಪಷ್ಟ ದರೋಡೆಯನ್ನು ಏಕೆ ತೋರಿಸುವುದಿಲ್ಲ ?

ಸಮಾಜದ ನೆರವಿಗೆ ಮಾಧ್ಯಮಗಳು ಬರದಿದ್ದರೆ ಯಾರು ಬರುತ್ತಾರೆ ?

ವೈದ್ಯಕೀಯ ಲಾಬಿಯ ಕ್ರೌರ್ಯವನ್ನು ತಡೆಯುವುದು ಹೇಗೆ ?

ಈ ಲಾಬಿ ಸರ್ಕಾರವನ್ನು ಕುಣಿಸುತ್ತಿದೆಯೇ ? 

ಮಾಧ್ಯಮಗಳು ಏಕೆ ಮೌನವಾಗಿವೆ ?

20 ರೂ ಹೆಚ್ಚು ಕೇಳಿದರೆ ಆಟೋರಿಕ್ಷಾ ಚಾಲಕನಿಗೆ,  ಹೊಡೆಯುತ್ತೀರಿ...

ವೈದ್ಯರರಿಗೆ ಏನು ಮಾಡುತ್ತೀರಿ ???

ಇನ್ನಾದರೂ " ವೈದ್ಯೋ ನಾರಾಯಣ ಹರಿ "  ಎನ್ನುವ ಮನುಕುಲಕ್ಕೆ ಮೋಸವಾಗದಿರಲಿ
   
ಇಂತಹ ಮಾನವೀಯತೆಯಿಲ್ಲದ ಕಾಳದಂಧೆಗೆ ದಿಕ್ಕಾರವಿರಲಿ.
ವಂದನೆಗಳೊಂದಿಗೆ

🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪

ಈ ವರ್ಷ ಮತ್ತೆ ಅಕ್ಷಯ ತೃತೀಯ ಬರುತ್ತಿದೆ??

ಗಂಡಸರಿಗೆ ಶುಭ ಸುದ್ದಿ:
*******************

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ! 

ಈ ವರ್ಷ ಮತ್ತೆ ಅಕ್ಷಯ ತೃತೀಯ ಬರುತ್ತಿದೆ (May 3). ಆಗಲೇ ಬಂಗಾರದ ಅಂಗಡಿಗಳು ಭಾರಿ ಆಫರ್ ಗಳನ್ನು ಕೊಡಲು ಆರಂಭಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಟಿವಿಗಳಲ್ಲಿ ಬ್ರಹ್ಮಾಂಡ ಬೃಹಸ್ಪತಿಗಳು ಬಂದು ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಹೇಗೆ ಬರುತ್ತಾಳೆ ಅಂತ ಪುಂಖಾನುಪುಂಖವಾಗಿ ಪುಗುತ್ತಾರೆ. ನೆನಪಿಡಿ ಈ ಕಾರ್ಯಕ್ರಮಗಳನ್ನು ಸ್ಪಾನ್ಸರ್ ಮಾಡುವುದು ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳೇ!ಗೋಲ್ಡ್ ಶೋರೂಮ್ ಗಳಂತೂ ಭರ್ಜರಿ ಆಫರ್ ಜೊತೆಗೆ ಅದೃಷ್ಟ ಲಕ್ಷ್ಮಿಯನ್ನು ನಿಮ್ಮ ಮನೆಗೆ ಇವರೇ ಖುದ್ದು ಕಳಿಸಿಕೊಡುವವರಂತೆ ವರ್ತಿಸುತ್ತಾರೆ. 

ಒಂದು ಚೂರು ಯೋಚನೆ ಮಾಡಿ ನೋಡಿ...ಒಂದು ಹದಿನೈದು ಇಪ್ಪತ್ತು ವರ್ಷ ಹಿಂದಕ್ಕೆ ಹೋಗಿ. ಆಗ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳು ಇರಲಿಲ್ಲ, ಖಾಸಗಿ ಟಿವಿ ಚಾನಲ್ ಗಳು ದೊಡ್ಡದಾಗಿರಲಿಲ್ಲ...ಬ್ರಹ್ಮಾಂಡ ಬೃಹಸ್ಪತಿಗಳು ಟಿವಿಗಳಲ್ಲಿ ಕಾಣುತ್ತಿರಲಿಲ್ಲ.ಜನರು ಮುಗಿದು ಬಿದ್ದು ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿ ಕೂಡ ಮಾಡುತ್ತಿರಲಿಲ್ಲ.ಈಗಂತೂ ವಾರಕ್ಕೆ ಮೊದಲೇ ಪ್ರತಿವರ್ಷ
ಅಕ್ಷಯ ತೃತೀಯ ಕಾರ್ಯಕ್ರಮಗಳು ಪ್ರಸಾರ ಶುರುವಾಗುತ್ತದೆ. ಅಕ್ಷಯ ತೃತೀಯ ಸ್ಪೆಷಲ್ ಕಾರ್ಯಕ್ರಮಗಳ ಹಿಂದೆ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳ ಕೈವಾಡ ಇರುತ್ತದೆ. ಜ್ಯೋತಿಷ್ಯಗಳ ಮೂಲಕ ಇದೇ ದಿನ ಬಂಗಾರ ಖರೀದಿ ಮಾಡಬೇಕು. ಈ ದಿನ ಬಂಗಾರ ಖರೀದಿ ಮಾಡುವುದರಿಂದ ಅಕ್ಷಯ ಅಂದರೆ ವೃದ್ಧಿಸುತ್ತದೆ ಎಂಬ ಭಾವನೆಯನ್ನು ಬಿತ್ತುತ್ತಿದ್ದಾರೆ.
ತಿಂಗಳಿಗೆ ಮೊದಲೇ ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿಗೆ ಮುಂಗಡ ಬುಕಿಂಗ್ ಗೋಲ್ಡ್ ಶೋರೂಮ್ ಗಳು ಆರಂಭಿಸುತ್ತವೆ. ಬೃಹಸ್ಪತಿ ಗಳ ಮಾತನ್ನು ನಂಬಿಕೊಂಡು
ಅದೆಷ್ಟೋ ಮಧ್ಯಮವರ್ಗದವರು ಸಾಲಸೋಲ ಮಾಡಿ ಇದೇ ದಿನ ಬಂಗಾರ ಖರೀದಿಗೆ ಮುಗಿದು ಬೀಳುತ್ತಿದ್ದಾರೆ. 

ಇಷ್ಟಕ್ಕೂ ಅಕ್ಷಯ ತೃತೀಯ ಎಂದರೇನು?

ವೈಶಾಖ ಮಾಸದ ಶುಕ್ಲಪಕ್ಷದ ಮೂರನೆಯ ದಿನವನ್ನು ಅಕ್ಷಯ ತೃತೀಯ ಅಂತ ಕರೆಯುತ್ತಾರೆ. 'ಅಕ್ಷಯ' ಎಂದರೆ ಸದಾ ವೃದ್ಧಿಯಾಗುವುದು, ಎಂದಿಗೂ ಕೂಡ ಕರಗದೆ ಇರುವ ಸಂಪತ್ತು ಎಂಬ ಅರ್ಥ ಕೊಡುತ್ತದೆ. ಅಕ್ಷಯ ತೃತೀಯ ಎಂದರೆ ದಾನ ಮಾಡುವ ದಿನ. ಹೌದು ನಮ್ಮ ಬಳಿಯಲ್ಲಿ ಇರುವಂತಹ ಧವಸ-ಧಾನ್ಯಗಳು ಜೊತೆಗೆ ಬಡವರಿಗೆ ಬಟ್ಟೆಗಳನ್ನುದಾನ ಮಾಡುವ ಮೂಲಕ ಪುಣ್ಯವನ್ನು ಅಕ್ಷಯ ಮಾಡಿಕೊಳ್ಳುವ ದಿನ.

ಅಕ್ಷಯ ತೃತೀಯ ದಿನ ಮಾಡಬೇಕಾದದು ಬರೀ ದಾನ... ದಾನ...ದಾನ...ಈ ದಿನ ತನ್ನಲ್ಲಿರುವ  ಸಂಪತ್ತನ್ನು  ಬಡವರಿಗೆ -ಅಸಹಾಯಕರಿಗೆ ದಾನ ಮಾಡುವುದರಿಂದ ಪುಣ್ಯ ದಕ್ಕಿ ಅದರಿಂದ ದಾನ ಮಾಡಿದವರ ಬದುಕಿನಲ್ಲಿ,
ಕುಟುಂಬಗಳಲ್ಲಿ ಸಂತೋಷ ನೆಮ್ಮದಿ ಶಾಂತಿ ಮತ್ತು ಆರೋಗ್ಯಗಳು ಅಕ್ಷಯವಾಗಲಿ ಎಂಬ ಸದುದ್ದೇಶ 'ಅಕ್ಷಯ ತೃತೀಯ' ದಿನದ ಆಚರಣೆಯ ಹಿನ್ನೆಲೆಯಲ್ಲಿ ಇರುವಂತಹದು. ಅಕ್ಷಯ ತೃತೀಯ ದಿನ ನೀವು ಬಡಬಗ್ಗರು, ನಿರ್ಗತಿಕರಿಗೆ ಅಸಹಾಯಕರಿಗೆ ಏನನ್ನು ದಾನ ರೂಪದಲ್ಲಿ (ಅನ್ನ-ನೀರು, ದವಸ-ಧಾನ್ಯ, ಹಣ ಹೀಗೆ) ನೀವು ಏನನ್ನು ನೀಡಿದರೂ ಅದು ನಿಮಗೆ ಮತ್ತೆ ಅಕ್ಷಯವಾಗಲಿ ಎಂಬ ಹಾರೈಕೆಯ ಹಿನ್ನೆಲೆ ಅಕ್ಷಯ ತೃತೀಯ ಆಚರಣೆ.

ಅಕ್ಷಯ ತೃತೀಯ ದಿನ ಮುಖ್ಯವಾಗಿ ಮೂರು ದಾನಗಳನ್ನು ಮಾಡುತ್ತಿದ್ದರು.

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಆಚರಣೆಗೂ ಒಂದು ವೈಜ್ಞಾನಿಕ ಕಾರಣಗಳಿವೆ. ಆಚರಣೆಗಳ ಒಳಗೆ ಮಡಿ-ಮೈಲಿಗೆ-ಕಂದಾಚಾರಗಳು ಪ್ರವೇಶಮಾಡಿ ಅರ್ಥಗಳು  ಕಳೆದುಹೋಗಿ ಅನರ್ಥಗಳು ಮಾತ್ರ ಉಳಿದು ಹೋಗಿವೆ. ಇದರಿಂದ ಅಕ್ಷಯತೃತಿಯ ಕೂಡ ಹೊರತಾಗಿಲ್ಲ. 

ಅಕ್ಷಯ ತೃತೀಯ ವೈಶಾಖ ಮಾಸದಲ್ಲಿ ಬರುತ್ತದೆ ಅಂದರೆ ಸುಡುಬಿಸಿಲಿನ ಕಾಲ. ಹೀಗಾಗಿ ದಾನದ ರೂಪದಲ್ಲಿ ಬಡವರಿಗೆ ಮತ್ತು ಅಸಹಾಯಕ ನಿರ್ಗತಿಕರಿಗೆ ನೀರಿನ (ಮಣ್ಣಿನ) ಮಡಿಕೆ ಈ ದಿನ ದಾನದ ರೂಪದಲ್ಲಿ ನೀಡುತ್ತಿದ್ದರು. ಜೊತೆಗೆ ಮತ್ತೊಂದು ವಿಶಿಷ್ಟವಾದದ್ದು ಅಂದರೆ ಸುವಾಸನಾಭರಿತವಾದ ನೀರಿನ ದಾನ. ಹೌದು ಹೇಗೆ ನಾವು ಈಗ ರಾಮನವಮಿಗೆ  ಪಾನಕ -ಹೆಸರುಬೇಳೆ ಕೊಡುತ್ತೇವೆ ಹಾಗೆ ಹಿಂದಿನ ಕಾಲದಲ್ಲಿ ಅಕ್ಷಯತೃತಿಯ ದಿನ ಬಿಸಿಲಿಗೆ ಬಳಲಿ ಬೆಂಡಾಗಿದ್ದ ಸಾಮಾನ್ಯರಿಗೆ ರಸ್ತೆ ಬದಿಯಲ್ಲಿ ನಿಂತು ಸುವಾಸನಾಭರಿತವಾದ ನೀರನ್ನು ನೀಡುತ್ತಿದ್ದರು. (ನೀರನ್ನು ದಾನದ ರೂಪದಲ್ಲಿ ನೀಡುವುದಕ್ಕೆ ಬಹುಮುಖ್ಯ ಕಾರಣವೆಂದರೆ ಮನುಷ್ಯನಿಗೆ ಆಹಾರವಿಲ್ಲದೆ ಹೋದರೂ ಪರವಾಗಿಲ್ಲ ಆದರೆ ನೀರು ಇದ್ದರೆ ಮಾತ್ರ ಜೀವ. ಸತ್ತು ಸ್ವರ್ಗದ ದಾರಿಯಲ್ಲಿ ನಡೆಯಬೇಕಾದ ಕೂಡ ಮುಂದೆ ನೀರಿನ ಹಾಹಾಕಾರ ಬರೆದೆ ಇರಲಿ ಎಂದು ನೀರನ್ನು ದಾನದ ರೂಪದಲ್ಲಿ ಕೊಡುತ್ತಿದ್ದರು)

ಅಷ್ಟಕ್ಕೂ ಸುವಾಸನಾಭರಿತವಾದ ನೀರು ಹೇಗೆ ತಯಾರು ಮಾಡುತ್ತಿದ್ದರು ಗೊತ್ತೇ?

ಅಕ್ಷಯ ತೃತೀಯ ಹಿಂದಿನ ದಿನ ಮಾರುಕಟ್ಟೆಯಿಂದ ಹೊಸದಾದ ನೀರಿನ ಮಡಿಕೆಯನ್ನು ತೆಗೆದುಕೊಂಡು ಬಂದು ಅದನ್ನು ಶುದ್ಧವಾಗಿ ತೊಳೆದು ಅದರ ತುಂಬಾ ಕುಡಿಯುವ ನೀರನ್ನು ಹಾಕಿ, ಒಂದೆರಡು ಲವಂಗ- ಏಲಕ್ಕಿ- ಜಾಜಿಕಾಯಿ- ಜಾಪತ್ರೆ-ಪಚ್ಚ (ಹಸಿ)ಕರ್ಪೂರಮತ್ತು ಕಸ್ತೂರಿ ಇದನ್ನೆಲ್ಲವನ್ನು ಒಟ್ಟಿಗೆ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಂಡು ಮಡಿಕೆ ಒಳಗಿನ ಕುಡಿಯುವ ನೀರಿನ ಒಳಗೆ ಹಾಕುತ್ತಾರೆ. ಅದನ್ನು ಮುಚ್ಚಳದಿಂದ ಚೆನ್ನಾಗಿ ಮುಚ್ಚಿಡುತ್ತಾರೆ. ಬೆಳಗ್ಗೆ ಮುಚ್ಚಳವನ್ನು ತೆರೆದಾಗ ಕುಡಿಯುವ ನೀರು ಸುವಾಸನಾಭರಿತವಾಗಿರುತ್ತದೆ ಮತ್ತು ಅದು ಶಕ್ತಿಯುತ ಮತ್ತು ಆರೋಗ್ಯವಂತವಾದ ಪಾನೀಯವಾಗುತ್ತದೆ. ಈ ಸುವಾಸನಾಭರಿತ ವಾದ ನೀರನ್ನು ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತು ಸುಡುಬಿಸಿಲಿನಲ್ಲಿ ನಡೆದು ಹೋಗುತ್ತಿರುವ ದಾರಿಹೋಕರಿಗೆ ನೀಡುವ ಮೂಲಕ ಅವರ ಸಂತೋಷಪಡಿಸಿ ತಾವು ಸಂತೃಪ್ತರಾಗಿದ್ದರು.

ಇನ್ನು ಇದೇ ಸಮಯದಲ್ಲಿ ಇನ್ನು ಎರಡು ಮುಖ್ಯ ದಾನಗಳನ್ನು ಕೂಡ ಮಾಡುತ್ತಿದ್ದರು. ಒಂದು ಬಿಸಿಲಿನ ಕಾರಣಕ್ಕಾಗಿ ಪಾದರಕ್ಷೆಗಳು ಇನ್ನೊಂದು ಕೊಡೆಯನ್ನು ಕೂಡ ದಾನದ ರೂಪದಲ್ಲಿ ನೀಡುತ್ತಿದ್ದರು. ಬಡವರು-ನಿರ್ಗತಿಕರಿಗೆ ದಾನದ ರೂಪದಲ್ಲಿ ಇದೆಲ್ಲವನ್ನೂ ನೀಡುವುದರಿಂದ ತಮ್ಮ ಜೀವನದಲ್ಲಿ ಪುಣ್ಯ -ಸಂತೋಷ- ನೆಮ್ಮದಿಗಳು ಅಕ್ಷಯವಾಗುತ್ತದೆ ಎಂಬ ನಂಬಿಕೆ ಅಂದಿನ ಜನರಲ್ಲಿತ್ತು.
ಅಕ್ಷಯ ತೃತೀಯ ಅರ್ಥವೇ ದಾನ...

ಬಂಗಾರ ಖರೀದಿ ಮಾಡಿದರೆ ದರಿದ್ರವನ್ನು ಮನೆಗೆ ತೆಗೆದುಕೊಂಡು ಹೋದಂತೆ!

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಯಾವ ಶಾಸ್ತ್ರದಲ್ಲೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ನೆನಪಿಡಬೇಕಾದ ವಿಷಯವೆಂದರೆ ಇದು ಕಲಿಯುಗ, ಕಲಿಪುರುಷ ಇನ್ನಿಲ್ಲದಂತೆ ಜನರನ್ನು ಹಿಂಸಿಸುತ್ತಾನೆ ಮತ್ತು ಕಾಡುತ್ತಾನೆ. ಕಲಿಪುರುಷನ ವಾಸಸ್ಥಾನದಲ್ಲಿ ಮೊದಲನೆಯದು ಬಂಗಾರ. ಹೀಗಾಗಿ ನಿಮ್ಮ ಮನೆಯಲ್ಲಿ ಎಷ್ಟು ಬಂಗಾರವಿರುತ್ತದೆ ಅಷ್ಟು ಅಶಾಂತಿ ಮನೆಮಾಡಿರುತ್ತದೆ. ಮನೆಗೆ ಕನ್ನ ಹಾಕುವ ಕಳ್ಳರು ಕೂಡ ಮೊದಲು ದೋಚುವುದು ಕೂಡ ದರಿದ್ರ ಬಂಗಾರವನ್ನೆ. ಅಂತಹ ಬಂಗಾರವನ್ನು ನೀವು ಅಕ್ಷಯ ತೃತೀಯ ದಿನ ಖರೀದಿ ಮಾಡಿದರೆ ಕಲಿಪುರುಷನ ಪ್ರವೇಶ ನಿಮ್ಮ ಮನೆಗೆ ಆಗುತ್ತದೆ. ಮನೆಯಲ್ಲಿ ಅಶಾಂತಿ, ನಿತ್ಯ ಗಲಾಟೆಗಳು,ರಂಪಾಟಗಳು ಅಕ್ಷಯವಾಗುತ್ತದೆ. 

ನಿಮ್ಮ ಬಳಿ ಹಣವಿದ್ದಾಗ ಬಂಗಾರವನ್ನು ಖರೀದಿ ಮಾಡಿ ಆದರೆ ಯಾವನೋ ಟಿವಿಯಲ್ಲಿ ಬೃಹಸ್ಪತಿ ಹೇಳಿದ ಅಂತ ಹೇಳಿ ಅಪ್ಪಿತಪ್ಪಿ ಕೂಡ ಅಕ್ಷಯ ತೃತೀಯ ದಿನ ಸಾಲ ಮಾಡಿ ಬಂಗಾರದ  ಖರೀದಿ ಮಾಡಿ ಸಂಕಷ್ಟಗಳಿಗೆ ಸಿಲುಕಬೇಡಿ. ಅಕ್ಷಯ ತೃತೀಯ ದಿನ ನೀವು ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋದರೆ ಮುಂದಿನ ಅಕ್ಷಯತೃತೀಯ ದಿನದವರೆಗೂ ನಿಮ್ಮ ಮನೆಯಲ್ಲಿ ಕಲಿ ಪುರುಷ ಸ್ಥಿರನಾಗುತ್ತಾನೆ.ಅಶಾಂತಿಯ ಗೂಡು ನಿಮ್ಮ ಮನೆಯಾಗುತ್ತದೆ, ನೆಮ್ಮದಿಯ ನಿದ್ದೆ ಹೋಗುತ್ತದೆ, ಅಪಮಾನಗಳು ಎದುರಾಗುತ್ತದೆ...ಹೀಗಾಗಿ ಆಯ್ಕೆ ನಿಮ್ಮದು!

ಅಕ್ಷಯ ತೃತೀಯ ದಿನದಂದು ಸಾಧ್ಯವಾದರೆ ಯಾವುದಾದರೂ ಒಂದು ಅನಾಥಾಶ್ರಮದ ಮಕ್ಕಳಿಗೆ  ಊಟ ಹಾಕಿಸಿ, ಪರಿಸರ ಸಂರಕ್ಷಿಸಲು ಒಂದು ಗಿಡ ನೆಡಿ. ಸಾಧ್ಯವಾದಷ್ಟು ಒಳ್ಳೆಯ ವಿಷಯಗಳನ್ನು ಒಳ್ಳೆಯತರದಲ್ಲಿ  ಬದುಕಿನ ಆಲೋಚನೆಗಳನ್ನು ಮಾಡಿ ಇದರಿಂದ ಬದುಕು ಅಕ್ಷಯವಾಗುತ್ತದೆ....(ಸಂಗ್ರಹ)

Sunday, April 17, 2022

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು.

ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ. ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಸ್ಫೂನ್ ಅಭ್ಯಾಸ ಮಾಡುತ್ತಿದ್ದಾರೆ ತಂದೆತಾಯಿ. ಅದಕ್ಕೆ ಅವರು ಕೊಡುತ್ತಿರುವ ಮುಖ್ಯ ಕಾರಣ…ಕೈಗಳು ಸ್ವಚ್ಛವಾಗಿರಲ್ಲ ಅನ್ನೋದು. ಆದರೆ ಒಮ್ಮೆ ಕೈಯಲ್ಲಿ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳನ್ನು ನೋಡೋಣ. ಇದನ್ನು ಓದಿದ ಮೇಲೆ ನೀವು ಎಲ್ಲೇ ಇರಿ…? ನೀವು ಮಟ್ಟಸವಾಗಿ ಕೈಯನ್ನು ಉಪಯೋಗಿಸಿ ಭೋಜನ ಮಾಡುತ್ತೀರಿ ಎಂದು ಆಶಿಸುತ್ತೇವೆ.

ಕೈಯಲ್ಲಿ ಆಹಾರ ತಿನ್ನಿವುದರಿಂದ ಆಗುವ ಪ್ರಯೋಜನಗಳು: ( As Per Science).

1. ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.

2. ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವೆ.
 
3. ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ.

4. ಕೈಯಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೆ, ಯಾವುದೇ ಆಲೋಚನೆಗಳು ಬರದೆ ಒಂದೇ ಆಲೋಚನೆಯಲ್ಲಿ ಇರುತ್ತೇವೆ.

5. ನಮ್ಮ ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ತಯಾರಿಸಿದ ಆಹಾರವನ್ನು ಸ್ಫೂನ್ಸ್, ಫೋರ್ಕ್ಸ್‌ನಿಂದ ತಿನ್ನುವುದರಿಂದ ಪ್ರತಿಕ್ರಿಯೆ ಏರ್ಪಟ್ಟು ರುಚಿ ಕೆಡುತ್ತದೆ.

6. ಕೈ ಬೆರಳಲ್ಲಿ ಆಹಾರವನ್ನು ಕಲೆಸಿಕೊಂಡು, ಒಂದೊಂದೇ ತುತ್ತು ತಿನ್ನುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.

7. ಕೈಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ, ಬೆರಳು ತುಟಿಗೆ ತಾಗುತ್ತಿದ್ದಂತೆ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ.

8. ಇನ್ನು ಕೈ ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಪಾಲಾಗದೆ, ಆರೋಗ್ಯವಾಗಿರುತ್ತೇವೆ. ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇದು ಒಂದು ರೀತಿ ವ್ಯಾಯಾಮದಂತಿರುತ್ತದೆ.

ಪುರಾಣಗಳ ಪ್ರಕಾರ…

* ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ತತ್ವವನ್ನು ಹೊಂದಿರುತ್ತವೆ.

* ಹೆಬ್ಬೆರಳು: ಅಗ್ನಿತತ್ವ

* ತೋರು ಬೆರಳು: ವಾಯುತತ್ವ

* ಮಧ್ಯ ಬೆರಳು: ಆಕಾಶ

* ಉಂಗುರ ಬೆರಳು: ಭೂಮಿ

* ಕಿರುಬೆರಳು: ಜಲತತ್ವ

ಈ ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ.

ಫ್ಯಾಷನ್‌ಗೆ ಕೊಟ್ಟಷ್ಟು ಬೆಲೆ… ಸಂಸ್ಕೃತಿಗೆ ಕೊಟ್ಟರೆ…ಮಾನವನ ಜೀವನ ಸ್ವಲ್ಪ ಸರಳವಾಗುತ್ತದೆ ಅನ್ನಿಸುತ್ತದೆ.
ವಂದನೆಗಳೊಂದಿಗೆ,
                        
Saturday, April 16, 2022

ಆಯುರ್ವೇದ ಚಿಕಿತ್ಸೆಗಳು

ಆಯುರ್ವೇದ ಚಿಕಿತ್ಸೆಗಳು

ಪಂಚಕರ್ಮ

ಆಯುರ್ವೇದ ಸಂಪೂರ್ಣ ನಿರ್ವಿಶೀಕರಣ ಮತ್ತು ಶುದ್ಧೀಕರಣ

ಪಂಚಕರ್ಮವು ಆಯುರ್ವೇದದ ಪ್ರಾಥಮಿಕ ಶುದ್ಧೀಕರಣ ಮತ್ತು ನಿರ್ವಿಶೀಕರಣ ಚಿಕಿತ್ಸೆಯಾಗಿದೆ. ಪಂಚಕರ್ಮ ಎಂದರೆ "ಐದು ಚಿಕಿತ್ಸೆಗಳು". ದೇಹದಿಂದ ವಿಷವನ್ನು ತೆಗೆದುಹಾಕುವ ಈ 5 ಚಿಕಿತ್ಸಕ ವಿಧಾನಗಳೆಂದರೆ ವಾಮನ, ವಿರೇಚನ, ನಾಸ್ಯ, ಬಸ್ತಿ ಮತ್ತು ರಕ್ತಮೋಕ್ಷಣೆ. ಐದು ಚಿಕಿತ್ಸೆಗಳ ಈ ಸರಣಿಯು ದೋಶಗಳನ್ನು (ಎಲ್ಲಾ ಜೈವಿಕ ಕ್ರಿಯೆಗಳನ್ನು ನಿಯಂತ್ರಿಸುವ ಶಕ್ತಿಗಳು) ಸಮತೋಲನಗೊಳಿಸುವಾಗ ದೇಹದಿಂದ ವಿಷವನ್ನು ಉಂಟುಮಾಡುವ ಆಳವಾದ ಬೇರೂರಿರುವ ಒತ್ತಡ ಮತ್ತು ಅನಾರೋಗ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಪಂಚಕರ್ಮ ಆಹಾರ ಪದ್ಧತಿ

ಚಿಕಿತ್ಸೆಗಳ ಜೊತೆಗೆ ವಿಶೇಷ ನಿರ್ವಿಶೀಕರಣ ಆಹಾರವನ್ನು ನೀಡದಿದ್ದರೆ ಪಂಚಕರ್ಮವು ನಿಷ್ಪರಿಣಾಮಕಾರಿಯಾಗಿದೆ. ಆಯುರ್ವೇದ ರಿಟ್ರೀಟ್‌ನಲ್ಲಿ ನಾವು ಇದರ ಬಗ್ಗೆ ಬಹಳ ತಿಳಿದಿರುತ್ತೇವೆ ಮತ್ತು ಪಂಚಕರ್ಮಕ್ಕೆ ಒಳಗಾಗುವ ಪ್ರತಿಯೊಬ್ಬ ವ್ಯಕ್ತಿಯು ವಿಶೇಷ ಆಹಾರವನ್ನು ಪಡೆಯುತ್ತಾನೆ, ಇದನ್ನು ವೈದ್ಯರು ಪ್ರತಿದಿನ ಮೇಲ್ವಿಚಾರಣೆ ಮಾಡುತ್ತಾರೆ. ಹೆಚ್ಚುವರಿ ಚಿಕಿತ್ಸೆಯನ್ನು ವೈದ್ಯರು ಶಿಫಾರಸು ಮಾಡಬಹುದು ಆದರೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ.

1) ವಾಮನ

ವಾಮನ ಒಂದು ಔಷಧೀಯ ವಾಂತಿ ಚಿಕಿತ್ಸೆಯಾಗಿದ್ದು ಅದು ದೇಹ ಮತ್ತು ಶ್ವಾಸನಾಳದಲ್ಲಿ ಸಂಗ್ರಹವಾಗಿರುವ ಕಫಾ ವಿಷವನ್ನು ತೆಗೆದುಹಾಕುತ್ತದೆ. ಹೆಚ್ಚಿನ ಕಫಾ ಅಸಮತೋಲನ ಹೊಂದಿರುವ ಜನರಿಗೆ ಇದನ್ನು ನೀಡಲಾಗುತ್ತದೆ. ದೈನಂದಿನ ಚಿಕಿತ್ಸೆಯು ಅಂತಿಮವಾಗಿ ಅವುಗಳನ್ನು ತೊಡೆದುಹಾಕುವ ಪ್ರಯತ್ನದಲ್ಲಿ ವಿಷವನ್ನು ಸಡಿಲಗೊಳಿಸುವುದು ಮತ್ತು ಸಜ್ಜುಗೊಳಿಸುವುದನ್ನು ಒಳಗೊಂಡಿರುತ್ತದೆ.

ವಾಮನ ಪ್ರಯೋಜನಗಳು: ಶ್ವಾಸನಾಳದ ಆಸ್ತಮಾ, ದೀರ್ಘಕಾಲದ ಅಲರ್ಜಿಗಳು, ಹೇ ಜ್ವರ, ವಿಟಲಿಗೋ, ಸೋರಿಯಾಸಿಸ್, ಹೈಪರ್ಆಸಿಡಿಟಿ, ದೀರ್ಘಕಾಲದ ಅಜೀರ್ಣ ಮೂಗಿನ ದಟ್ಟಣೆ, ಎಡಿಮಾ, ಬೊಜ್ಜು, ಮಾನಸಿಕ ಅಸ್ವಸ್ಥತೆಗಳು, ಚರ್ಮದ ಅಸ್ವಸ್ಥತೆಗಳು.

2) ವಿರೇಚನ (ಶುದ್ಧೀಕರಣ)

ವಿರೇಚನವು ಔಷಧೀಯ ಶುದ್ಧೀಕರಣ ಚಿಕಿತ್ಸೆಯಾಗಿದ್ದು, ಇದು ಯಕೃತ್ತು ಮತ್ತು ಪಿತ್ತಕೋಶದಲ್ಲಿ ಸಂಗ್ರಹವಾಗಿರುವ ದೇಹದಿಂದ ಪಿಟ್ಟಾ ವಿಷವನ್ನು ತೆಗೆದುಹಾಕುತ್ತದೆ, ಇದು ಜಠರಗರುಳಿನ ಪ್ರದೇಶವನ್ನು ಸಂಪೂರ್ಣವಾಗಿ ಶುದ್ಧಗೊಳಿಸುತ್ತದೆ. ಇದು ಅಡ್ಡಪರಿಣಾಮಗಳಿಲ್ಲದ ಸುರಕ್ಷಿತ ವಿಧಾನವಾಗಿದೆ. ವಿರೇಚನದ ಪ್ರಯೋಜನಗಳು ದೀರ್ಘಕಾಲದ ಜ್ವರ, ಮಧುಮೇಹ, ಅಸ್ತಮಾ, ಚರ್ಮದ ಕಾಯಿಲೆಗಳಾದ ಹರ್ಪಿಸ್, ಪಾರ್ಶ್ವವಾಯು, ಹೆಮಿಪ್ಲೆಜಿಯಾ ಜಂಟಿ ಅಸ್ವಸ್ಥತೆಗಳು, ಜೀರ್ಣಕಾರಿ ಅಸ್ವಸ್ಥತೆಗಳು, ಮಲಬದ್ಧತೆ, ಹೈಪರ್ಆಸಿಡಿಟಿ, ವಿಟಲಿಗೋ, ಸೋರಿಯಾಸಿಸ್, ತಲೆನೋವು, ಎಲಿಫಾಂಟಿಯಾಸಿಸ್ ಮತ್ತು ಸ್ತ್ರೀ ರೋಗಶಾಸ್ತ್ರದ ಅಸ್ವಸ್ಥತೆಗಳನ್ನು ಬೇರುಬಿಡಲು ಸಹಾಯ ಮಾಡುತ್ತದೆ.

3) ಬಸ್ತಿ (ಎನಿಮಾ ಅಥವಾ ಕೊಲೊನಿಕ್ ನೀರಾವರಿ)

ಬಸ್ತಿ (ಎನಿಮಾ) ಅನ್ನು ಎಲ್ಲಾ ಪಂಚಕರ್ಮ ಚಿಕಿತ್ಸೆಗಳ ತಾಯಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಕರುಳಿನ ಮೂಲಕ ಎಲ್ಲಾ 3 ದೋಷಗಳಾದ ವಾತ, ಪಿತ್ತ ಮತ್ತು ಕಫಗಳಿಂದ ಸಂಗ್ರಹವಾದ ವಿಷವನ್ನು ಶುದ್ಧೀಕರಿಸುತ್ತದೆ. ಪುನರ್ಯೌವನಗೊಳಿಸುವ ಚಿಕಿತ್ಸೆಯಾಗಿ ಬಸ್ತಿ ಕೂಡ ಹೆಚ್ಚು ಪ್ರಯೋಜನಕಾರಿಯಾಗಿದೆ. ಕೊಲೊನ್ ಅನ್ನು ಸ್ವಚ್ಛಗೊಳಿಸಲು ಮತ್ತು ಸ್ನಾಯುವಿನ ನಾದವನ್ನು ಹೆಚ್ಚಿಸಲು ಔಷಧೀಯ ಎಣ್ಣೆ ಅಥವಾ ತುಪ್ಪ ಮತ್ತು ಗಿಡಮೂಲಿಕೆಗಳ ಕಷಾಯವನ್ನು ಎನಿಮಾವಾಗಿ ನೀಡಲಾಗುತ್ತದೆ. ವ್ಯಕ್ತಿಯ ವೈದ್ಯಕೀಯ ಸ್ಥಿತಿಯನ್ನು ಆಧರಿಸಿ ಈ ವಿಧಾನವನ್ನು ಸಾಮಾನ್ಯವಾಗಿ 8 ರಿಂದ 30 ದಿನಗಳವರೆಗೆ ಅನ್ವಯಿಸಲಾಗುತ್ತದೆ. ಪ್ರಯೋಜನಗಳು ಹೆಮಿಪ್ಲೆಜಿಯಾ, ಪಾರ್ಶ್ವವಾಯು, ಕೊಲೈಟಿಸ್, ಚೇತರಿಕೆ, ಗರ್ಭಕಂಠದ ಸ್ಪಾಂಡಿಲೋಸಿಸ್, ಕೆರಳಿಸುವ ಕರುಳಿನ ಸಹಲಕ್ಷಣಗಳು ಮಲಬದ್ಧತೆ, ಜೀರ್ಣಕಾರಿ ಅಸ್ವಸ್ಥತೆಗಳು, ಬೆನ್ನುನೋವು ಮತ್ತು ಸಿಯಾಟಿಕಾ, ಹೆಪಟೊಮೆಗಾಲಿ ಮತ್ತು ಸ್ಪ್ಲೇನೋಮೆಗಾಲಿ, ಬೊಜ್ಜು, ಪೈಲ್ಸ್, ಲೈಂಗಿಕ ದೌರ್ಬಲ್ಯ ಮತ್ತು ಬಂಜೆತನ.

4) ನಾಸ್ಯ (ಮೂಗು ಶುಚಿಗೊಳಿಸುವಿಕೆ)

ತಲೆ ಮತ್ತು ಕತ್ತಿನ ಪ್ರದೇಶದಿಂದ ಸಂಗ್ರಹವಾದ ಕಫಾ ವಿಷವನ್ನು ಶುದ್ಧೀಕರಿಸಲು ಮೂಗಿನ ಮೂಲಕ ಔಷಧೀಯ ಎಣ್ಣೆಯ ಆಡಳಿತವನ್ನು Nasya ಒಳಗೊಂಡಿರುತ್ತದೆ. ವ್ಯಕ್ತಿಯ ವೈದ್ಯಕೀಯ ಸ್ಥಿತಿಯನ್ನು ಆಧರಿಸಿ, ಇದನ್ನು 30 ದಿನಗಳವರೆಗೆ ನೀಡಬಹುದು. ಟ್ರೈಜಿಮಿನಲ್ ನ್ಯೂರಾಲ್ಜಿಯಾ, ಬೆಲ್ಸ್ ಪಾಲ್ಸಿ, ಸ್ಮರಣಶಕ್ತಿ ಮತ್ತು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ, ನಿದ್ರಾಹೀನತೆ, ಮುಖದಲ್ಲಿನ ಹೆಚ್ಚುವರಿ ಲೋಳೆಯ ಹೈಪರ್ ಪಿಗ್ಮೆಂಟೇಶನ್ ನಿವಾರಣೆ, ಕೂದಲು ಪ್ರಬುದ್ಧವಾಗಿ ಬಿಳಿಯಾಗುವುದು, ಧ್ವನಿಗೆ ಸ್ಪಷ್ಟತೆ, ವಿವಿಧ ಮೂಲದ ಹೆಮಿಪ್ಲೆಜಿಯಾ ತಲೆನೋವು, ವಾಸನೆ ಮತ್ತು ರುಚಿಯ ನಷ್ಟ, ನಸ್ಯ ಪ್ರಯೋಜನಗಳು ಸೇರಿವೆ. ಹೆಪ್ಪುಗಟ್ಟಿದ ಭುಜ, ಮೈಗ್ರೇನ್, ಕುತ್ತಿಗೆಯ ಬಿಗಿತ, ಮೂಗಿನ ಅಲರ್ಜಿಗಳು ನಾಸಲ್ ಪಾಲಿಪ್, ನರವೈಜ್ಞಾನಿಕ ಅಪಸಾಮಾನ್ಯ ಕ್ರಿಯೆ, ಪ್ಯಾರಾಪ್ಲೆಜಿಯರ್, ಸೈನುಟಿಸ್.

5) ರಕ್ತಮೋಕ್ಷನ

ರಕ್ತಮೋಕ್ಷನವು ರಕ್ತವನ್ನು ಶುದ್ಧೀಕರಿಸುವ ವಿಧಾನವಾಗಿದೆ ಮತ್ತು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಸೂಚಿಸಲಾಗುತ್ತದೆ. ಸಾಮಾನ್ಯ ಪಂಚಕರ್ಮದ ಸಮಯದಲ್ಲಿ ಇದು ಸೂಕ್ತವಲ್ಲ. ನಮ್ಮದು ಸೇರಿದಂತೆ ಹೆಚ್ಚಿನ ಆಯುರ್ವೇದ ಕೇಂದ್ರಗಳು ರಕ್ತ ಶುದ್ಧೀಕರಣದಲ್ಲಿ ಸೋಂಕಿನ ಹೆಚ್ಚಿನ ಅಪಾಯದ ಕಾರಣ ರಕ್ತಮೋಕ್ಷನವನ್ನು ನೀಡುವುದಿಲ್ಲ.

ಪಂಚಕರಾಮದ ಚಿಕಿತ್ಸೆಗಳು

ಪಂಚಕರ್ಮ ಚಿಕಿತ್ಸೆ

ಪಂಚಕರ್ಮ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ "ಐದು ಕ್ರಿಯೆಗಳು" ಅಥವಾ "ಐದು ಚಿಕಿತ್ಸೆಗಳು". ರೋಗ ಮತ್ತು ಕಳಪೆ ಪೋಷಣೆಯಿಂದ ಉಳಿದಿರುವ ವಿಷಕಾರಿ ವಸ್ತುಗಳ ದೇಹವನ್ನು ಸ್ವಚ್ಛಗೊಳಿಸಲು ಇದು ಒಂದು ಪ್ರಕ್ರಿಯೆಯಾಗಿದೆ. ಅಸಮತೋಲನ ದೋಷಗಳು ತ್ಯಾಜ್ಯವನ್ನು ಸೃಷ್ಟಿಸುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಈ ತ್ಯಾಜ್ಯ ವಸ್ತುವನ್ನು ಆಯುರ್ವೇದದಲ್ಲಿ ಅಮ ಎಂದು ಕರೆಯಲಾಗುತ್ತದೆ. ಅಮಾ ಒಂದು ದುರ್ವಾಸನೆ, ಜಿಗುಟಾದ, ಹಾನಿಕಾರಕ ವಸ್ತುವಾಗಿದ್ದು, ದೇಹದಿಂದ ಸಾಧ್ಯವಾದಷ್ಟು ಸಂಪೂರ್ಣವಾಗಿ ಹೊರಹಾಕಬೇಕು.

ಪಂಚಕರ್ಮವು ಹೆಚ್ಚುವರಿ ದೋಷಗಳನ್ನು (ಅಥವಾ ದೋಷದಲ್ಲಿನ ಅಸಮತೋಲನ) ಜೊತೆಗೆ ನಿಮ್ಮ ವ್ಯವಸ್ಥೆಯಿಂದ ಜಿಗುಟಾದ ಅಮಾವನ್ನು ಹೊರಹಾಕುತ್ತದೆ, ದೇಹದ ತ್ಯಾಜ್ಯವನ್ನು ಹೊರಹಾಕುವ ಮಾರ್ಗಗಳಾದ ಬೆವರು ಗ್ರಂಥಿಗಳು, ಮೂತ್ರದ ಪ್ರದೇಶ, ಕರುಳುಗಳು ಇತ್ಯಾದಿಗಳ ಮೂಲಕ ಪಂಚಕರ್ಮವು ಸಮತೋಲನಗೊಳಿಸುತ್ತದೆ. ಕಾರ್ಯಾಚರಣೆ ಇದು ದೈನಂದಿನ ಮಸಾಜ್ ಮತ್ತು ಎಣ್ಣೆ ಸ್ನಾನವನ್ನು ಒಳಗೊಂಡಿರುತ್ತದೆ ಮತ್ತು ಇದು ಅತ್ಯಂತ ಆಹ್ಲಾದಕರ ಅನುಭವವಾಗಿದೆ. ಆಯುರ್ವೇದವು ಪಂಚಕರ್ಮವನ್ನು ನಿಮ್ಮ ಮನಸ್ಸಿನ ದೇಹ ವ್ಯವಸ್ಥೆಯನ್ನು ಟೋನ್ ಮಾಡಲು ಕಾಲೋಚಿತ ಚಿಕಿತ್ಸೆಯಾಗಿ ಶಿಫಾರಸು ಮಾಡುತ್ತದೆ. ಪಂಚಕರ್ಮವು ಐದು ಪಟ್ಟು ಚಿಕಿತ್ಸೆಯಾಗಿದೆ; ದೇಹದ ಪ್ರಕಾರ, ದೋಷದ ಅಸಮತೋಲನವನ್ನು ಅವಲಂಬಿಸಿ ವ್ಯಕ್ತಿಯ ಅಗತ್ಯತೆಗಳ ಆಧಾರದ ಮೇಲೆ ಇದು ಹೆಚ್ಚು ವೈಯಕ್ತೀಕರಿಸಲ್ಪಟ್ಟಿದೆ

ಆಯುರ್ವೇದ ಚಿಕಿತ್ಸೆಗಳು/ ಚಿಕಿತ್ಸೆಗಳು

ಶಿರೋ ಧಾರಾ

ವಿಶೇಷವಾದ ಮರದ ಹಾಸಿಗೆಯ ಮೇಲೆ ರೋಗಿಯನ್ನು ಮಲಗಿಸಿ ನಂತರ ಔಷಧೀಯ ಎಣ್ಣೆ/ಹಾಲು ಅಥವಾ ಮಜ್ಜಿಗೆ ಇತ್ಯಾದಿಗಳನ್ನು ಸೂಚಿಸಿದ, ನಿರಂತರ ಸ್ಟ್ರೀಮ್‌ನಲ್ಲಿ ಅವನ ತಲೆಯ ಮೇಲೆ ಸುರಿಯುವ ಚಿಕಿತ್ಸಾ ಪ್ರಕ್ರಿಯೆಯು ಚಿಕಿತ್ಸಕರಿಂದ ಈ ಚಿಕಿತ್ಸೆಯಲ್ಲಿ ಸಹಾಯವಾಗುತ್ತದೆ. ಚಿಕಿತ್ಸಕರು ಥೆರಪಿ ತೆಗೆದುಕೊಳ್ಳುವವರ ದೇಹದ ಮೇಲೆ ತೈಲವನ್ನು ಅನ್ವಯಿಸಲು ಸಹಾಯ ಮಾಡುತ್ತಾರೆ.

ಸ್ವೀಡನಾ

ಈ ಸಮಯದಲ್ಲಿ ಆಯುರ್ವೇದ ಥೆರಪಿ ಎಣ್ಣೆಯನ್ನು ನಿರ್ದಿಷ್ಟ ರೀತಿಯ ಮಸಾಜ್‌ನೊಂದಿಗೆ ಇಡೀ ದೇಹಕ್ಕೆ ಅನ್ವಯಿಸಲಾಗುತ್ತದೆ, ಇದು ವಿಷವನ್ನು ಜಠರ-ಕರುಳಿನ ಕಡೆಗೆ ಚಲಿಸಲು ಸಹಾಯ ಮಾಡುತ್ತದೆ. ಆಯುರ್ವೇದ ತೈಲ ಮಸಾಜ್ ಮೇಲ್ಮೈ ಮತ್ತು ಆಳವಾದ ಅಂಗಾಂಶಗಳನ್ನು ಮೃದುಗೊಳಿಸುತ್ತದೆ ಮತ್ತು ಒತ್ತಡವನ್ನು ತೆಗೆದುಹಾಕಲು ಮತ್ತು ನರಮಂಡಲವನ್ನು ಪೋಷಿಸಲು ಸಹಾಯ ಮಾಡುತ್ತದೆ.

ನಾಸ್ಯ

ಗಿಡಮೂಲಿಕೆಗಳ ರಸಗಳು, ಔಷಧೀಯ ತೈಲಗಳು ಇತ್ಯಾದಿಗಳನ್ನು ಮೂಗಿನ ಮೂಲಕ ಅನ್ವಯಿಸಲಾಗುತ್ತದೆ. ನಾಸ್ಯದ ಈ ಪ್ರಯೋಜನಗಳು ಅಗಾಧವಾಗಿವೆ ಮತ್ತು ಕೆಲವು ರೀತಿಯ ತಲೆನೋವುಗಳಿಗೆ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿದೆ, ಕೂದಲು ಪ್ರಬುದ್ಧವಾಗಿ ಬಿಳಿಯಾಗುವುದು, ಧ್ವನಿ ಸ್ಪಷ್ಟತೆ, ವಿವಿಧ ಮೂಲದ ತಲೆನೋವು.

ಅಭ್ಯಂಗ

ಇದು ಮೃದುವಾದ ಆದರೆ ದೃಢವಾದ ಇಡೀ ದೇಹ ಆಯುರ್ವೇದದ ಬೆಚ್ಚಗಿನ ಔಷಧೀಯ ಎಣ್ಣೆಯನ್ನು ಬಳಸಿ ತಲೆಯಿಂದ ಪಾದದವರೆಗೆ ಮಸಾಜ್ ಆಗಿದೆ. ವ್ಯಕ್ತಿಗಳು ಅಭ್ಯಂಗ ಮಸಾಜ್ ಗಿಡಮೂಲಿಕೆಗಳ ಸಾರವನ್ನು ಬಳಸಿದರೆ ದೇಹದ ಸ್ವಭಾವಕ್ಕೆ ಅನುಗುಣವಾಗಿ ಆಯುರ್ವೇದ ತಜ್ಞರು ತೈಲಗಳನ್ನು ಆಯ್ಕೆ ಮಾಡುತ್ತಾರೆ.

ಪಿಜಿಚಿಲ್

: ಒಂದು ವಿಶೇಷ ಚಿಕಿತ್ಸೆಯಾಗಿದೆ, ಇದನ್ನು ರಾಯಲ್ ಟ್ರೀಟ್ಮೆಂಟ್ ಎಂದೂ ಕರೆಯುತ್ತಾರೆ, ಅಂದರೆ ದೇಹದ ಮೇಲೆ ಎಣ್ಣೆಯಲ್ಲಿ ನೆನೆಸಿದ ಬಟ್ಟೆಯನ್ನು ಹಿಸುಕಿಕೊಳ್ಳುವುದು. ಈ ಚಿಕಿತ್ಸೆಯ ಸಮಯದಲ್ಲಿ ಅತಿಥಿಯು ಕುಳಿತುಕೊಳ್ಳುವ ಸ್ಥಾನದಲ್ಲಿ ಉಳಿಯುತ್ತಾನೆ ಮತ್ತು ಔಷಧೀಯ ತೈಲಗಳನ್ನು ತಲೆ ಮತ್ತು ದೇಹದ ಮೇಲೆ ಅನ್ವಯಿಸಲಾಗುತ್ತದೆ.

ಶಿರೋ ವಸ್ತಿ

ಆಯುರ್ವೇದ ವೈದ್ಯರು ಸೂಚಿಸಿದ ಸಮಯಕ್ಕೆ ಬೆಚ್ಚಗಿನ ಗಿಡಮೂಲಿಕೆಗಳ ಎಣ್ಣೆಗಳ ಮಿಶ್ರಣವನ್ನು ದಿನಕ್ಕೆ 15 ರಿಂದ 60 ನಿಮಿಷಗಳ ಕಾಲ ತಲೆಯ ಮೇಲೆ ಅಳವಡಿಸಲಾಗಿರುವ ಕ್ಯಾಪ್ನಲ್ಲಿ ಸುರಿಯಲಾಗುತ್ತದೆ. ಶಿರೋ ವಸ್ತಿ ಆಯುರ್ವೇದ ಚಿಕಿತ್ಸೆಯು ಮುಖದ ಪಾರ್ಶ್ವವಾಯು, ಮೂಗಿನ ಹೊಳ್ಳೆಗಳು, ಬಾಯಿಯ ಶುಷ್ಕತೆಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಮತ್ತು ಗಂಟಲು, ತೀವ್ರ ತಲೆನೋವು.

ನೇತ್ರ ತರ್ಪಣ

ನೇತ್ರ ತರ್ಪಣವು ಕಣ್ಣುಗಳಿಗೆ ಆಯಾಸದಿಂದ ಮುಕ್ತಿ ಪಡೆಯಲು ಮತ್ತು ದೃಷ್ಟಿ ಸುಧಾರಿಸಲು ವಿಶೇಷ ಆಯುರ್ವೇದ ಚಿಕಿತ್ಸೆಯಾಗಿದೆ. ತೀವ್ರ ಕಣ್ಣಿನ ದೃಷ್ಟಿ ಕೆಲಸ ಅಗತ್ಯವಿರುವ ಕಂಪ್ಯೂಟರ್ ಇತ್ಯಾದಿಗಳಲ್ಲಿ ನಿಯಮಿತವಾಗಿ ಕೆಲಸ ಮಾಡುವ ವೃತ್ತಿಪರರಿಗೆ ಚಿಕಿತ್ಸೆಯನ್ನು ಸೂಚಿಸಲಾಗಿದೆ.

ಖಿಝಿ

ಖಿಝಿ ಆಯುರ್ವೇದ ಚಿಕಿತ್ಸೆಯು ಸಿಂಕ್ರೊನೈಸ್ ಮಾಡಿದ ವಿಶೇಷ ಮಸಾಜ್, ಹರ್ಬಲ್ ಸ್ಟೀಮ್ ಬಾತ್ ಇತ್ಯಾದಿಗಳನ್ನು ಒಳಗೊಂಡಿರುವ ಸಂಪೂರ್ಣ ಪುನರ್ಯೌವನಗೊಳಿಸುವ ಚಿಕಿತ್ಸೆಯಾಗಿದೆ. ಈ ಎಚ್ಚರಿಕೆಯಿಂದ ಯೋಜಿಸಲಾದ ಆರೋಗ್ಯ ಕಾರ್ಯಕ್ರಮವು ಚೈತನ್ಯ ಮತ್ತು ಚೈತನ್ಯವನ್ನು ಸುಧಾರಿಸುವ ಕಡೆಗೆ ನಿರ್ದೇಶಿಸಲ್ಪಟ್ಟಿದೆ.

ಪಿಂಡ ಸ್ವೇದ

ವಿಶೇಷವಾಗಿ ತಯಾರಿಸಿದ ಮಿಶ್ರಣದಿಂದ ತುಂಬಿದ ಸಣ್ಣ ಲಿನಿನ್ ಚೀಲಗಳನ್ನು ನೋವನ್ನು ನಿವಾರಿಸಲು ಸ್ಥಳೀಯವಾಗಿ ಅನ್ವಯಿಸಲಾಗುತ್ತದೆ. ಗಿಡಮೂಲಿಕೆಗಳ ಸಾರಗಳ ಪರಿಣಾಮವು ನೋವನ್ನು ನಿವಾರಿಸುತ್ತದೆ ಮತ್ತು ಪೀಡಿತ ಪ್ರದೇಶವನ್ನು ವಿಶ್ರಾಂತಿ ಮಾಡುವುದು ಮತ್ತು ನಿರ್ಮಿಸುವುದು.

ದೇಹದಲ್ಲಿ ಸೆಲ್ಯುಲೈಟ್ ಶೇಖರಣೆಯನ್ನು ಕಡಿಮೆ ಮಾಡಲು ವಿಶೇಷ ಆಯುರ್ವೇದ ಗಿಡಮೂಲಿಕೆಗಳ ಪುಡಿ ಮಿಶ್ರಣವನ್ನು ಬಳಸಿಕೊಂಡು ಉತ್ತೇಜಿಸುವ ಮಸಾಜ್. ಈ ಚಿಕಿತ್ಸೆಯ ಮೂಲಕ ಇಡೀ ದೇಹವು ಆಯುರ್ವೇದದ ಪುಡಿಗಳ ತೀವ್ರವಾದ ಮಿಶ್ರಣವನ್ನು ಬಳಸಿಕೊಂಡು ಪುನರುಜ್ಜೀವನಗೊಳ್ಳುತ್ತದೆ, ಇದು ಕೊಬ್ಬಿನ ನಿಕ್ಷೇಪಗಳನ್ನು ಒಡೆಯುತ್ತದೆ ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.

ವಷ್ಪಸ್ವೇದನಮ್

ಇದು ಅತ್ಯುತ್ತಮ ಆಯುರ್ವೇದ ಚಿಕಿತ್ಸೆಯಾಗಿದ್ದು, ಇದರಲ್ಲಿ ಔಷಧೀಯ ಸಸ್ಯಗಳ ಎಲೆಗಳನ್ನು ಕುದಿಸಿ ಮತ್ತು ಪರಿಣಾಮವಾಗಿ ಹಬೆಯನ್ನು ಇಡೀ ದೇಹಕ್ಕೆ ನೀಡಲಾಗುತ್ತದೆ. ಈ ಆಯುರ್ವೇದ ಚಿಕಿತ್ಸೆಯು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಕೆಲವು ಚರ್ಮ ರೋಗಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಆಯುರ್ವೇದ ಚಿಕಿತ್ಸೆಯು ಪಂಚಕರ್ಮ ಕಾರ್ಯವಿಧಾನಗಳ ಒಂದು ಭಾಗವಾಗಿದೆ.

ದೇಹದ ಆರೈಕೆ

ಆಯುರ್ವೇದ ದೇಹ ಶುದ್ಧೀಕರಣ ಅಥವಾ ಶೋಧನ್ ಚಿಕಿತ್ಸಾ ಎನ್ನುವುದು ಆಯುರ್ವೇದದ ಪಂಚಕರ್ಮ ಸಿದ್ಧಾಂತದ ಆಧಾರದ ಮೇಲೆ ಸರಿಯಾದ ಸಮತೋಲನವನ್ನು ಪಡೆಯಲು ಇಡೀ ದೇಹವನ್ನು ಶುದ್ಧೀಕರಿಸುವ ಪ್ರಕ್ರಿಯೆಯಾಗಿದೆ. ಫೇಸ್ ಪ್ಯಾಕ್, ಹರ್ಬಲ್ ಕ್ರೀಮ್ ಮಸಾಜ್, ಹರ್ಬಲ್ ಆಯಿಲ್ ಮಸಾಜ್, ಹರ್ಬಲ್ ಟೀ ಸೇವನೆ ಮತ್ತು ಸ್ಟೀಮ್ ಬಾತ್ ಅನ್ನು ಶಿಫಾರಸು ಮಾಡಲಾಗುತ್ತದೆ. ಈ ಚಿಕಿತ್ಸೆಯು ಚರ್ಮದ ಬಣ್ಣವನ್ನು ಹೆಚ್ಚಿಸುತ್ತದೆ, ದೀರ್ಘಕಾಲದವರೆಗೆ ಚರ್ಮದ ಟೋನ್ ಅನ್ನು ಹೆಚ್ಚಿಸುತ್ತದೆ!

ಉರೋವಸ್ತಿ

ವಿಶೇಷವಾಗಿ ತಯಾರಿಸಲಾದ ಬೆಚ್ಚಗಿನ ಗಿಡಮೂಲಿಕೆ ಎಣ್ಣೆಯನ್ನು ಎದೆಯ ಮೇಲೆ ಸುರಿಯಲಾಗುತ್ತದೆ ಮತ್ತು 45 ನಿಮಿಷಗಳ ಕಾಲ ಗಿಡಮೂಲಿಕೆಗಳ ಪೇಸ್ಟ್ ಗಡಿಯೊಳಗೆ ಇಡಲಾಗುತ್ತದೆ. ಈ ಮಸಾಜ್‌ಗೆ ಬಳಸಲಾಗುವ ಗಿಡಮೂಲಿಕೆಗಳ ತೈಲಗಳ ಗುಣಪಡಿಸುವ ಗುಣಲಕ್ಷಣಗಳು ರಕ್ತವನ್ನು ಸಮೃದ್ಧಗೊಳಿಸುತ್ತದೆ ಮತ್ತು ಬಲವಾದ ಸ್ನಾಯು ಮತ್ತು ಸಂಯೋಜಕ ಅಂಗಾಂಶಗಳನ್ನು ನಿರ್ವಹಿಸುತ್ತದೆ. ಸ್ನಾಯುವಿನ ಎದೆ ನೋವಿಗೆ ಉತ್ತೇಜಕ ಮತ್ತು ಚಿಕಿತ್ಸಕ ಚಿಕಿತ್ಸೆ.

ಬಸ್ತಿ

ಆಯುರ್ವೇದ ಬಸ್ತಿಯು ಗುದನಾಳದೊಳಗೆ ಎಳ್ಳಿನ ಎಣ್ಣೆಯ ಗಿಡಮೂಲಿಕೆಗಳ ಮಿಶ್ರಣಗಳನ್ನು ಮತ್ತು ಕೆಲವು ಗಿಡಮೂಲಿಕೆಗಳ ಸಿದ್ಧತೆಗಳನ್ನು ದ್ರವ ಮಾಧ್ಯಮದಲ್ಲಿ ಪರಿಚಯಿಸುವುದನ್ನು ಒಳಗೊಂಡಿರುತ್ತದೆ. ಬಸ್ತಿ, ವಾತ ಅಸ್ವಸ್ಥತೆಗಳ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ, ಆದಾಗ್ಯೂ ನಿಗದಿತ ಅವಧಿಯಲ್ಲಿ ಅನೇಕ ಎನಿಮಾಗಳು ಸಾಮಾನ್ಯವಾಗಿ ಅಗತ್ಯವಿರುತ್ತದೆ.

ವಂದನೆಗಳೊಂದಿಗೆ

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World