www.dgnsgreenworld.blogspot.com

Sunday, October 3, 2021

ಹನುಮಂತ 'ಭಜರಂಗಬಲಿ" ಆಗಿದ್ದು ಹೇಗೆ?

 'ಭಜರಂಗಬಲಿ" ಆಗಿದ್ದು  ಹೇಗೆ? 

ತಾಯಿ ಕೈಕೆಯ  ಆದೇಶದಂತೆ, ರಾಮ, ಸೀತೆ, ಲಕ್ಷ್ಮಣ, ಹದಿನಾಲ್ಕು ವರ್ಷಗಳ ವನವಾಸಕ್ಕೆ ಹೊಗುತ್ತಾರೆ. ಹೀಗೆ ಹೋದಾಗ ರಾಮನಿಗೆ, ಹನುಮಂತ ಸಿಗುತ್ತಾನೆ. ಮುಂದೆ ಹನುಮಂತ,  ರಾಮನ ಪರಮಭಕ್ತನಾಗುತ್ತಾನೆ.
ಸೀತಾಮಾತೆ  ನಿತ್ಯವೂ ಹಣೆಗೆ  ಸಿಂಧೂರ ಇಡುವುದನ್ನು ಆಂಜನೇಯ ನೋಡುತ್ತಿರುತ್ತಾನೆ. ಅವನಿಗೆ  ಇದನ್ನು ನೋಡಿದಾಗಲೆಲ್ಲ, ಯಾಕೆ ಪ್ರತಿನಿತ್ಯ ಸೀತಾಮಾತೆ  ಈ ಬಣ್ಣವನ್ನು ಹಣೆಗೆ ಹಚ್ಚಿಕೊಳ್ಳುತ್ತಾಳೆ ಎಂದು ಆಶ್ಚರ್ಯವಾಗುತ್ತದೆ. ಹಾಗೆ ಅವನಿಗೆ ಅದೊಂದು  ದೊಡ್ಡ ಪ್ರಶ್ನೆಯಾಗಿ  ಉಳಿಯುತ್ತದೆ. ಅದನ್ನು ಕೇಳಬೇಕೆಂದರೊ, ಅವನಿಗೆ ಸೀತಾಮಾತೆಯ ಕುರಿತಾಗಿ ಇರುವ  ಭಕ್ತಿಯ ಕಾರಣ ಈ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ.  ಅಲ್ಲದೆ ಅವನಿಗೆ  ಒಂಥರಾ  ಸಂಕೋಚ. ಹೀಗೆ ಒಂದು ದಿನ ಅರಣ್ಯದಲ್ಲಿ ಎಲ್ಲರೂ ಕುಳಿತು ಮಾತಾಡ್ತಾ ಇರ್ತಾರೆ.   ಹನುಮಂತನನ್ನೇ  ಗಮನಿಸುತ್ತಿದ್ದ ಸೀತೆ , ನೇರವಾಗಿ ಕೇಳಿದಳು.  ನಿನ್ನ ಮನಸ್ಸಿನಲ್ಲಿ ಏನೋ ಒಂದು ಕುತೂಹಲ ಇದೆ. ಅದನ್ನು ಕೇಳಲು ನೀನು ಬಹಳ ಹಿಂದೇಟು ಹಾಕುತ್ತಾ ಇದ್ದೀಯಾ ಪರವಾಗಿಲ್ಲ  ಕೇಳು ಎಂದಳು. ಆದರೂ ಅವನಿಗೆ ಹೆದರಿಕೆ. ಇದನ್ನು  ಅರಿತ  ಸೀತೆ , ಪರವಾಗಿಲ್ಲ  ನೀನು ಎಂಥದೇ ದಡ್ಡ ಪ್ರಶ್ನೆ ಕೇಳಿದರು ನಾನು ಏನು ತಿಳಿದುಕೊಳ್ಳುವುದಿಲ್ಲ ಕೇಳು ಹೇಳುತ್ತೇನೆ  ಎಂದಳು. 

ಈಗ  ಹನುಮಂತನು ಧೈರ್ಯದಿಂದ , " ಮಾತೇ ನೀನು ಪ್ರತಿದಿವಸ ಹಣೆಗೆ ಸಿಂಧೂರವನ್ನು  ಹಚ್ಚಿಕೊಳ್ಳುವೆ  ಏಕೆ? ಎಂದನು. ಅವನು ಹೇಳಿದ್ದನ್ನು  ಕೇಳಿ ನಕ್ಕ ಸೀತೆ,  ಇದನ್ನು ಕೇಳುವುದಕ್ಕೆ ಇಷ್ಟು ಯೋಚನೆ ಮಾಡಿದೀಯಾ?  ಮದುವೆಯಾದ ಮೇಲೆ ಹೆಣ್ಣುಮಕ್ಕಳು ತಮ್ಮ  ಪತಿಯ ಆಯುರಾರೋಗ್ಯಕ್ಕಾಗಿ ದೇವಿಯನ್ನು ಬೇಡಿಕೊಂಡು   ಹಣೆಗೆ ಸಿಂಧೂರ ಇಟ್ಟುಕೊಳ್ಳುವುದು ಹಿಂದೂ ಧರ್ಮದ ಸಂಪ್ರದಾಯವಾಗಿದೆ. ಹೀಗಾಗಿ ಮದುವೆಯಾದ ಎಲ್ಲಾ ಹೆಣ್ಣುಮಕ್ಕಳು ಹಣೆಗೆ ಸಿಂಧೂರವನ್ನು ಇಟ್ಟುಕೊಳ್ಳುತ್ತಾರೆ, ನಾನು ನನ್ನ  ಪತಿ ಶ್ರೀರಾಮನನ್ನು ವರಿಸಿದ್ದೇನೆ. ಶ್ರೀರಾಮನ ಆಯಸ್ಸು ವೃದ್ಧಿಸಲಿ, ನಾನು  ದೀರ್ಘಸುಮಂಗಲಿಯಾಗಿ, ಸುಖ ಸಮೃದ್ಧಿಯಿಂದ  ಬಾಳುವಂತೆ ಅನುಗ್ರಹಿಸು  ತಾಯಿ ಎಂದು ಪಾರ್ವತಿ ದೇವಿಯನ್ನು ಬೇಡಿಕೊಂಡು ಕುಂಕುಮವನ್ನು ಇಟ್ಟುಕೊಳ್ಳುತ್ತೇನೆ " ಎಂದಳು.
ಹನುಮಂತ ಈ ಮಾತನ್ನು ಕೇಳ್ತಾ ಇದ್ದ ಹಾಗೆ ತಕ್ಷಣ ಎದ್ದು, ಅಲ್ಲಿದ್ದ ಕುಂಕುಮದ ಡಬ್ಬಿಯನ್ನೇ ತೆಗೆದುಕೊಂಡು, ಡಬ್ಬಿಯಲ್ಲಿದ್ದ ಅಷ್ಟೂ ಸಿಂಧೂರವನ್ನು  ತನ್ನ ಮೈತುಂಬಾ ಬಳಿದುಕೊಳ್ಳುತ್ತಾನೆ. ಇದನ್ನು ನೋಡಿ ಸೀತೆ ಜೋರಾಗಿ ನಕ್ಕು, ಅಲ್ವೋ ಹನುಮಂತ ನೀನ್ಯಾಕೆ ಕುಂಕುಮವನ್ನು ಮೈತುಂಬ ಹೆಚ್ಚಿಕೊಂಡಿದ್ದೀಯಾ?  ಎಂದು ಕೇಳಿದಾಗ, ಅವನು ಹೇಳುತ್ತಾನೆ, "ನೀನು ಇಷ್ಟು ಸ್ವಲ್ಪ ಕುಂಕುಮವನ್ನು ಹಣೆಗೆ ಹಚ್ಚಿಕೊಂಡರೆ  ರಾಮನ ಆಯಸ್ಸು ಸ್ವಲ್ಪ ಮಾತ್ರ ಹೆಚ್ಚಾಗುತ್ತದೆ. ಆದರೆ ನಾನು ನನ್ನ ಈ ದೊಡ್ಡ ಶರೀರದ  ತುಂಬಾ ಬಳಿದುಕೊಂಡರೆ, ರಾಮನ ಆಯಸ್ಸು  ಜಾಸ್ತಿಯಾಗುತ್ತದೆ" ಎಂದನು. ಇದರಿಂದ ಹನುಮಂತನು ಎಷ್ಟೊಂದು ಮುಗ್ಧ ಸ್ವಭಾವದವನು, ಮತ್ತು ಶ್ರೀರಾಮನನ್ನು ಅದೆಷ್ಟು ಪ್ರೀತಿಸುತ್ತಾನೆ ಎಂಬುದು ಸೀತೆಗೆ ತಿಳಿಯುತ್ತದೆ. ರಾಮನು ತನ್ನ ಪರಮಭಕ್ತನಾದ ಹನುಮಂತನ  ಇಂಥ  ಮುಗ್ಧತೆ, ಅವನು ತೋರಿಸುವ ಪ್ರೀತಿ, ಇವುಗಳನ್ನೆಲ್ಲ ನೋಡಿ ಹನುಮಂತನನ್ನು 'ಭಜರಂಗಬಲಿ' ಎಂದು ಕರೆದನು. 

'ಭಜರಂಗಬಲಿ' ಇದರ ಅರ್ಥ:- 'ಭಜರಂಗ' ಅಂದರೆ ಕೇಸರಿ ಅಥವಾ ಕುಂಕುಮ, ಹನುಮಂತನು  ಅಷ್ಟೂ  ಕೇಸರಿಯನ್ನು ತನ್ನ ಮೈತುಂಬ ಹಚ್ಚಿಕೊಂಡ ಕಾರಣ 'ಭಜರಂಗಬಲಿ' ಎಂಬ ಹೆಸರು ಬಂದಿತು.
'ಜೈ ಭಜರಂಗಬಲಿ'  ಇದು ಮಕ್ಕಳಿಗೆ, ಯುವ ಜನತೆಗೆ  ಪ್ರೇರಕ ಶಕ್ತಿಯಾಗಿ,  ಪ್ರೀತಿ,ಉತ್ಸಾಹ, ಸಾಹಸ, ಒಗ್ಗಟ್ಟು, ಇವುಗಳನ್ನೆಲ್ಲ ಒಗ್ಗೂಡಿಸಿ ಕೊಂಡಿರುವ  ಈ ಹೆಸರು ಎಲ್ಲರನ್ನೂ  ಮಂತ್ರ ಮುಕ್ತರನ್ನಾಗಿಸಿ ಜಡತ್ವ ತುಂಬಿರುವ  ಮನಗಳನ್ನು ಬಡಿದೆಬ್ಬಿಸಿ 'ಸ್ಪೂರ್ತಿ'ಯನ್ನು ಉಕ್ಕಿಸುವ  ಘೋಷಣೆಯ ವಾಕ್ಯವಾಗಿದೆ.

" ಮನೋಜವಂ ಮಾರುತ ತುಲ್ಯ ವೇಗಂ, 
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್,
ವಾತಾತ್ಮಜಂ ವಾನರಯೂಥ ಮುಖ್ಯಂ,
ಶ್ರೀ ರಾಮದೂತಂ ಶಿರಸಾ ನಮಾಮಿ." 

ವಾಯುವಿಗೆ ಸಮಾನ ವೇಗವುಳ್ಳ, ಜಿತೇಂದ್ರಿಯನಾದ, ಬುದ್ಧಿವಂತರಲ್ಲಿ ಶ್ರೇಷ್ಠನಾದ ,ವಾಯುಪುತ್ರನಾದ ,ವಾನರ ಸಮೂಹಕ್ಕೆ ಮುಖ್ಯನಾದ ಶ್ರೀರಾಮದೂತನಾದ ಹನುಮಂತನಿಗೆ  ನಮಸ್ಕರಿಸುತ್ತೇನೆ. 

ವಂದನೆಗಳೊಂದಿಗೆ,

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World