www.dgnsgreenworld.blogspot.com

Wednesday, April 14, 2021

ಅನ್ನಪೂರ್ಣ ದೇವಿಗೆ ವಂದಿಸಿ...... ಅಡುಗೆಮನೆ ಕೆಲ್ಸ ಅಂದ್ರೆ ಬೇಯ್ಸೋದಷ್ಟೇ ಅಲ್ಲ..

ಅನ್ನಪೂರ್ಣ ದೇವಿಗೆ ವಂದಿಸಿ...... 
ಅಡುಗೆಮನೆ ಕೆಲ್ಸ ಅಂದ್ರೆ 
ಬೇಯ್ಸೋದಷ್ಟೇ ಅಲ್ಲ..

ಮೊದ್ಲು ಪಾತ್ರೆ ಸಾವರಿಸ್ಕೊಬೇಕು..

ಆಮೇಲೆ ಅಳತೆ  ಅಂದಾಜು ಮಾಡ್ಕೋಬೇಕು.. 

ದಿನಸಿ ಲೆಕ್ಕಾಚಾರ ಇಡಬೇಕು..

ತೋಳೀಬೇಕು.. 
ಬಳೀಬೇಕು..

ಕೊತ್ತಂಬರಿ ಕರಿಬೇವು ಮೆಣಸಿನಕಾಯಿ ಕೆಡದೇ ಇರೋ ಹಾಗ್ ಮ್ಯಾನೇಜ್ ಮಾಡೋ ಕಲೆ ಇರಬೇಕು..

ಹಳೆ ಹಾಲು 
ಹೊಸ ಹಾಲು 
ಹಳೆ ಡಿಕಾಕ್ಷನ್ನು 
ಹೊಸಾ ಡಿಕಾಕ್ಷನ್ನು 
ವ್ಯತ್ಯಾಸ ಗೊತ್ತಿರಬೇಕು..

ಕಾಫಿ ಪುಡಿ 
ಟೀ ಪುಡಿ ವ್ಯತ್ಯಾಸ 
ಗೊತ್ತಿರಬೇಕು.. 

ಬಡಿಸೋಕ್ಕೆ ಗೊತ್ತಿರಬೇಕು.. 
ಮಿಕ್ಕಿದ್ದನ್ನ ಖಾಲಿ ಮಾಡಿ ಬೇರೆದಕ್ಕೆ ಹಾಕಿಡೋ ಸ್ಪೇಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.. 

ಎರಡೆರಡು ಬರ್ನರುಗಳಲ್ಲಿ 
ಬೇರೆ ಬೇರೆ ವೆರೈಟಿ ಮಾಡೋ 
ಟೈಮ್ ಮ್ಯಾನೇಜ್ಮೆಂಟ್ 
ಗೊತ್ತಿರಬೇಕು..

ಒಂದು ದೋಸೆ ತಟ್ಟೆಲಿದ್ರೆ 
ಇನ್ನೊಂದನ್ನ ಕಾವಲಿಯಲ್ಲಿ 
ಮತ್ತೊಂದನ್ನ ಹಾಟ್ಬಾಕ್ಸಲ್ಲಿ ಕೂರಿಸೋ ಚಾಕಚಕ್ಯತೆ ಇರಬೇಕು.. 

ಸುಮ್ನೆ ಒಂದ್ ರಾಶಿ ಪಾತ್ರೆ 
ಗುಡ್ಡೆ ಹಾಕದೇ  ಕನಿಷ್ಠ ಪಾತ್ರೆಗಳಲ್ಲೇ  
ಗರಿಷ್ಠ ಅಡುಗೆ ಮಾಡಿ ಬಡಿಸೋ ರಿಸೋರ್ಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು..

ಅಮ್ಮಾ.. ಅನ್ನೋ 

ವಿಧವಿಧವಾದ ಕರೆಗಳಿಗೆ ಸ್ಪಂದಿಸುತ್ತಲೇ ಅಂದುಕೊಂಡ ಸಮಯಕ್ಕೆ ಅಚ್ಚುಕಟ್ಟಾಗಿ ಎಲ್ಲಾ ಮಾಡಿಡೋ ಮಲ್ಟಿ ಟಾಸ್ಕಿಂಗ್ ಎಬಿಲಿಟಿ ಇರಬೇಕು..

ಸಣ್ಣ ಪುಟ್ಟ ಅವಘಡಗಳಾದಾಗ 
ಧೃತಿಗೆಡದೆ 
ಗಾಬರಿಯಾಗದೆ 
ನಿಭಾಯಿಸೋ ಅಷ್ಟು 
ಸೈನ್ಸು,
ಸಮಯಪ್ರಜ್ಞೆ, 
ಸಾಮಾನ್ಯಜ್ಞಾನ ಇರಬೇಕು..

ಇಷ್ಟನ್ನೂ ಯಾವುದೇ 
ಕೋರ್ಸಿಗೆ ಹೋಗದೇ ತಲೆತಲೆಮಾರುಗಳಿಂದ ಕಲಿತು 
ಮಾಡ್ತಾ ಬಂದಿರೋ ಎಲ್ಲ ಶ್ರಮಜೀವಿಗಳಿಗೂ  
ಗೌರವ ಕೊಡೋ ದೊಡ್ಡಮನಸ್ಸಿರಬೇಕು..

ಅಡುಗೆಮನೆ ಕೆಲ್ಸಾನಾ... 
ಅದೇನ್ ಮಹಾ ಅಂತ ಒಮ್ಮೆ ತಾತ್ಸಾರ ಮಾಡಿ ಹೀಗಳೆಯೋ ಮುನ್ನ ಇಷ್ಟೆಲ್ಲ ಕ್ವಾಲಿಟಿ, ಕ್ಯಾಪಾಸಿಟಿ ನಿಮಗಿದ್ಯಾ ಅಂತ ಯೋಚಿಸಿ..

ಅಡುಗೆ ಮನೆ ಎಲ್ಲರ ಅವಶ್ಯಕತೆ..

ಅದೊಂದು ಧ್ಯಾನ..
ಅದೊಂದು ದಿನಚರಿ..
ಅದೊಂದು ಕಲೆ..
ಅದೊಂದು ವಿಜ್ಞಾನ..
ಅದೊಂದು ಅನುಭೂತಿ..
ಅದೊಂದು ಸೇವೆ.. 
ಅದೊಂದು ಪ್ರೀತಿ..
ಅದೊಂದು ಗೌರವ..
ಅದೊಂದು ಮೌಲ್ಯ..

ತಾತ್ಸಾರ ಬೇಡ... 
ಎಲ್ಲಾ ಅಡುಗೆ ಮನೆ 
ಕಲಾವಿದರಿಗೂ ಒಂದು ಸಲಾಂ 🙏

No comments:

Post a Comment

welcome to dgnsgreenworld Family

29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .

29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .

Green World