www.dgnsgreenworld.blogspot.com

Wednesday, April 14, 2021

ಅನ್ನಪೂರ್ಣ ದೇವಿಗೆ ವಂದಿಸಿ...... ಅಡುಗೆಮನೆ ಕೆಲ್ಸ ಅಂದ್ರೆ ಬೇಯ್ಸೋದಷ್ಟೇ ಅಲ್ಲ..

ಅನ್ನಪೂರ್ಣ ದೇವಿಗೆ ವಂದಿಸಿ...... 
ಅಡುಗೆಮನೆ ಕೆಲ್ಸ ಅಂದ್ರೆ 
ಬೇಯ್ಸೋದಷ್ಟೇ ಅಲ್ಲ..

ಮೊದ್ಲು ಪಾತ್ರೆ ಸಾವರಿಸ್ಕೊಬೇಕು..

ಆಮೇಲೆ ಅಳತೆ  ಅಂದಾಜು ಮಾಡ್ಕೋಬೇಕು.. 

ದಿನಸಿ ಲೆಕ್ಕಾಚಾರ ಇಡಬೇಕು..

ತೋಳೀಬೇಕು.. 
ಬಳೀಬೇಕು..

ಕೊತ್ತಂಬರಿ ಕರಿಬೇವು ಮೆಣಸಿನಕಾಯಿ ಕೆಡದೇ ಇರೋ ಹಾಗ್ ಮ್ಯಾನೇಜ್ ಮಾಡೋ ಕಲೆ ಇರಬೇಕು..

ಹಳೆ ಹಾಲು 
ಹೊಸ ಹಾಲು 
ಹಳೆ ಡಿಕಾಕ್ಷನ್ನು 
ಹೊಸಾ ಡಿಕಾಕ್ಷನ್ನು 
ವ್ಯತ್ಯಾಸ ಗೊತ್ತಿರಬೇಕು..

ಕಾಫಿ ಪುಡಿ 
ಟೀ ಪುಡಿ ವ್ಯತ್ಯಾಸ 
ಗೊತ್ತಿರಬೇಕು.. 

ಬಡಿಸೋಕ್ಕೆ ಗೊತ್ತಿರಬೇಕು.. 
ಮಿಕ್ಕಿದ್ದನ್ನ ಖಾಲಿ ಮಾಡಿ ಬೇರೆದಕ್ಕೆ ಹಾಕಿಡೋ ಸ್ಪೇಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.. 

ಎರಡೆರಡು ಬರ್ನರುಗಳಲ್ಲಿ 
ಬೇರೆ ಬೇರೆ ವೆರೈಟಿ ಮಾಡೋ 
ಟೈಮ್ ಮ್ಯಾನೇಜ್ಮೆಂಟ್ 
ಗೊತ್ತಿರಬೇಕು..

ಒಂದು ದೋಸೆ ತಟ್ಟೆಲಿದ್ರೆ 
ಇನ್ನೊಂದನ್ನ ಕಾವಲಿಯಲ್ಲಿ 
ಮತ್ತೊಂದನ್ನ ಹಾಟ್ಬಾಕ್ಸಲ್ಲಿ ಕೂರಿಸೋ ಚಾಕಚಕ್ಯತೆ ಇರಬೇಕು.. 

ಸುಮ್ನೆ ಒಂದ್ ರಾಶಿ ಪಾತ್ರೆ 
ಗುಡ್ಡೆ ಹಾಕದೇ  ಕನಿಷ್ಠ ಪಾತ್ರೆಗಳಲ್ಲೇ  
ಗರಿಷ್ಠ ಅಡುಗೆ ಮಾಡಿ ಬಡಿಸೋ ರಿಸೋರ್ಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು..

ಅಮ್ಮಾ.. ಅನ್ನೋ 

ವಿಧವಿಧವಾದ ಕರೆಗಳಿಗೆ ಸ್ಪಂದಿಸುತ್ತಲೇ ಅಂದುಕೊಂಡ ಸಮಯಕ್ಕೆ ಅಚ್ಚುಕಟ್ಟಾಗಿ ಎಲ್ಲಾ ಮಾಡಿಡೋ ಮಲ್ಟಿ ಟಾಸ್ಕಿಂಗ್ ಎಬಿಲಿಟಿ ಇರಬೇಕು..

ಸಣ್ಣ ಪುಟ್ಟ ಅವಘಡಗಳಾದಾಗ 
ಧೃತಿಗೆಡದೆ 
ಗಾಬರಿಯಾಗದೆ 
ನಿಭಾಯಿಸೋ ಅಷ್ಟು 
ಸೈನ್ಸು,
ಸಮಯಪ್ರಜ್ಞೆ, 
ಸಾಮಾನ್ಯಜ್ಞಾನ ಇರಬೇಕು..

ಇಷ್ಟನ್ನೂ ಯಾವುದೇ 
ಕೋರ್ಸಿಗೆ ಹೋಗದೇ ತಲೆತಲೆಮಾರುಗಳಿಂದ ಕಲಿತು 
ಮಾಡ್ತಾ ಬಂದಿರೋ ಎಲ್ಲ ಶ್ರಮಜೀವಿಗಳಿಗೂ  
ಗೌರವ ಕೊಡೋ ದೊಡ್ಡಮನಸ್ಸಿರಬೇಕು..

ಅಡುಗೆಮನೆ ಕೆಲ್ಸಾನಾ... 
ಅದೇನ್ ಮಹಾ ಅಂತ ಒಮ್ಮೆ ತಾತ್ಸಾರ ಮಾಡಿ ಹೀಗಳೆಯೋ ಮುನ್ನ ಇಷ್ಟೆಲ್ಲ ಕ್ವಾಲಿಟಿ, ಕ್ಯಾಪಾಸಿಟಿ ನಿಮಗಿದ್ಯಾ ಅಂತ ಯೋಚಿಸಿ..

ಅಡುಗೆ ಮನೆ ಎಲ್ಲರ ಅವಶ್ಯಕತೆ..

ಅದೊಂದು ಧ್ಯಾನ..
ಅದೊಂದು ದಿನಚರಿ..
ಅದೊಂದು ಕಲೆ..
ಅದೊಂದು ವಿಜ್ಞಾನ..
ಅದೊಂದು ಅನುಭೂತಿ..
ಅದೊಂದು ಸೇವೆ.. 
ಅದೊಂದು ಪ್ರೀತಿ..
ಅದೊಂದು ಗೌರವ..
ಅದೊಂದು ಮೌಲ್ಯ..

ತಾತ್ಸಾರ ಬೇಡ... 
ಎಲ್ಲಾ ಅಡುಗೆ ಮನೆ 
ಕಲಾವಿದರಿಗೂ ಒಂದು ಸಲಾಂ 🙏

Monday, April 12, 2021

ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ !

ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ !
ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ ೩೫ ನಿಯಮ ಪಾಲಿಸಬೇಕು:-
1. ಅವರ ಮುಂದೆ ಕುಳಿತಾಗ ಫೋನ್ ಗಳನ್ನು ದೂರವಿಡಿ.
2. ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ ಮಧ್ಯದಲ್ಲೇ ನಿಲ್ಲಿಸಬೇಡಿ.
3. ಅವರ ಅಭಿಪ್ರಾಯ ಒಪ್ಪಿಕೊಳ್ಳಿ
4. ಅವರ ಜೊತೆ ಮಾತಾಡುವಾಗ ಚಿತ್ತವಿಡಿ
5. ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ
6. ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ
7. ದುಖ:ದ ವಿಷಯ ಆದಷ್ಟು ಅವೈಡ್ ಮಾಡಿ
8. ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಮಾತ್ರ ಮಾತಾಡಿ
9. ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ
10. ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ
11. ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ
12. ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ
13. ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ
14. ಅವರ ಮಾತನ್ನು ತೆಗಳಬೇಡಿ.
15. ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ.
16. ಅವರ ವಯಸ್ಸಿಗೆ ಬೆಲೆಕೊಡಿ.
17. ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ
18. ಅವರ ಮುಂದೆ ಮೊಮ್ಮಕ್ಕಳನ್ನು ಹೊಡೆಯಬೇಡಿ
19. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.
20. ಅವರ ಮುಂದೆ ಜೋರಾಗಿ ಮಾತನಾಡಬೇಡಿ
21. ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ
22. ಅವರಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ
23. ಅವರ ನ್ಯೂನ್ಯತೆಯನ್ನು ಪದೇ ಪದೇ ಎತ್ತಿ ತೋರಿಸಬೇಡಿ.
24. ಸಣ್ಣ ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.
25. ಅವರು ಮಾಡಿದ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ
26. ನಿಮ್ಮ ಕಷ್ಟಗಳನ್ನು ಆದಷ್ಟು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.
27. ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ
28. ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.
29. ಹೋಗುವಾಗ ಬರುವಾಗ ಭೆಟ್ಟಿಯಾಗಿ ಆಶೀರ್ವಾದ ಪಡೆಯಿರಿ
30. ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ
31. ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ
32. ದಿನಕ್ಕೆ ಕನಿಷ್ಟ 1ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ
33. ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ
34. ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ
35. ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯಲೋಪದ ಬಗ್ಗೆ ಯೋಚಿಸಬೇಡಿ.
ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ, ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ,
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

Sunday, April 11, 2021

ಪೆರಿಂಗೊತ್ತುಕರ ದೇವಸ್ತಾನಂ ಕೇರಳದ ವಿಶಿಷ್ಟವಾದ ಶ್ರೀ ವಿಷ್ಣುಮಯ ಕುಟ್ಟಿಚಾಥನ್ ಭುವನೇಶ್ವರಿ ದೇವಾಲಯವಾಗಿದೆ

ಪೆರಿಂಗೊತ್ತುಕರ ದೇವಸ್ತಾನಂ ಕೇರಳದ ವಿಶಿಷ್ಟವಾದ ಶ್ರೀ ವಿಷ್ಣುಮಯ ಕುಟ್ಟಿಚಾಥನ್ ಭುವನೇಶ್ವರಿ ದೇವಾಲಯವಾಗಿದೆ. ಇದು ಕೇರಳದ ತ್ರಿಚೂರ್ ಜಿಲ್ಲೆಯ ಪೆರಿಂಗೊಟುಕಾರದಲ್ಲಿ ನೆಲೆಗೊಂಡಿರುವ ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಶ್ರೀ ವಿಷ್ಣುಮಯ ಕುಟ್ಟಿಚಥನ್ ಸ್ವಾಮಿ ದೇವಾಲಯವಾಗಿದೆ. ಪೆರಿಂಗೊತ್ತುಕರ ದೇವಸ್ತಾನಂ ತನ್ನ ಶ್ರೀಕೋವಿಲ್ ಅಥವಾ ಬಲಿಪೀಠದ ಕಡೆಗೆ ನಿರಂತರವಾಗಿ ಬೆಳೆಯುತ್ತಿರುವ ಭಕ್ತರನ್ನು ಆಕರ್ಷಿಸುತ್ತದೆ, ಬೇಷರತ್ತಾದ ಪರಿಹಾರ, ಪರಿಹಾರಗಳು ಮತ್ತು ಶಾಂತಿಯನ್ನು ಅವರ ಆಳವಾದ ದುಃಖಗಳು, ಶಾಪಗಳು ಮತ್ತು ಮಾನಸಿಕ ಸಂಕಟಗಳಿಂದ ಪರಿಹರಿಸುತ್ತದೆ. ಈ ದೇವಾಲಯವು ಭಾರತದ ಎಲ್ಲಾ ಭಾಗಗಳಿಂದ ಮತ್ತು ವಿದೇಶಗಳಿಂದ ಭಕ್ತರನ್ನು ಆಕರ್ಷಿಸುತ್ತಿದೆ. ಆಳವಾದ ದುಃಖಗಳು ಮತ್ತು ಕಾಯಿಲೆಗಳಿಂದ ತಮ್ಮನ್ನು ಉದ್ಧಾರ ಮಾಡಿಕೊಳ್ಳಲು ಸಾವಿರಾರು ಭಕ್ತರು ಈ ಜನಪ್ರಿಯ 'ಕಲಿಯುಗವರ್ಧ ದೇವಸ್ಥಾನ'ವನ್ನು ಭೇಟಿ ಮಾಡುತ್ತಾರೆ.

Saturday, April 3, 2021

ಸಾಧ್ಯವಾದರೆ ಓಡುಆಗಲಿಲ್ಲವಾದರೆ ನಡೆಅದೂ ಸಾಧ್ಯವಾಗದಿರೆಉರುಳಿ ಕೊಂಡು ಹೋಗು ಅಷ್ಟೇ!

ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!

ಆದರೆ ಕದಲದೇ 
ಬಿದ್ದಿರಬೇಡ ಒಂದೇ ಕಡೆ

ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!

ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!

ಮನಸು ಮಾಡಿದರೇ...
ನಿನ್ನ ಹಣೆಬರಹ ಇಷ್ಟೇ 
ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ 
ತಾಕತ್ತು ನಿನ್ನಲ್ಲಿದೆ

ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?

ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು

ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು 
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ

ಯಾವುದೂ  ನಿಲ್ಲಬಾರದು.
ಏಳು... ಎದ್ದೇಳು
ಹೊರಡು...
ನಿನ್ನನ್ನು ಅಲಗಾಡದಂತೆ 
ಮಾಡಿದ ಆ ಮಾನಸಿಕ ‌ಸಂಕೋಲೆಗಳನ್ನು ಬೇಧಿಸು, 
ಬಿದ್ದ ಜಾಗದಿಂದಲೇ
ಓಟ ಶುರು ಮಾಡು

ನೀನು ಮಲಗಿದ ಹಾಸಿಗೆ 
ನಿನ್ನನ್ನು ಅಹಸ್ಯಪಡುವ ಮುನ್ನ 
ಅಲಸ್ಯವನ್ನು ಬಿಡು

ಕನ್ನಡಿ ನಿನ್ನನ್ನು ಪ್ರಶ್ನಿಸುವ 
ಮುನ್ನ ಉತ್ತರ ಹುಡುಕು

ನೆರಳು ನಿನ್ನನ್ನು ಬಿಡುವ 
ಮುನ್ನ ಬೆಳಕಿಗೆ ಬಾ

ಮತ್ತೆ ಹೇಳುತ್ತಿದ್ದೇನೆ...
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ! 
ಬೆವರು ಸುರಿಸುವುದರಿಂದ 
ಮಾತ್ರ ಚರಿತ್ರೆ 
ಸೃಷ್ಟಿಸಬಹುದೆಂದು 
ತಿಳಿದುಕೋ...

ಓದಿದರೆ ಇವು ಪದಗಳಷ್ಟೇ...
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!

*ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ..*
*ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ...*
*ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ...*
                  *ಆದರೆ*
*"ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ
                *ಎಚ್ಚರ*

ಓದಿ ಇಷ್ಟವಾಗಬಹುದು..A beautiful story...*ಸಣ್ಣಕತೆ*

ಓದಿ ಇಷ್ಟವಾಗಬಹುದು..
A beautiful story...
*ಸಣ್ಣಕತೆ*

ರಾತ್ರಿ ಸಮಯ ಅಂಗಡಿಯ
ಮಾಲೀಕ ಅಂಗಡಿಯನ್ನು , ಮುಚ್ಚುವ ತವಕದಲ್ಲಿ ಇದ್ದನು..
ಅಷ್ಟರಲ್ಲಿ ಒಂದು ನಾಯಿ ಅಲ್ಲಿಗೆ ಬಂದಿತು.

ಅದರ ಬಾಯಿಯಲ್ಲಿ ಒಂದು
ಪ್ಲಾಸ್ಟಿಕ್ ಚೀಲ ಇತ್ತು .. ಆ ಚೀಲದಲ್ಲಿ ಸಾಮಾನುಗಳ ಚಿಟಿ ಮತ್ತು ಹಣ ಇತ್ತು..

ಅಂಗಡಿಯವನು ಹಣವನ್ನು ತೆಗದುಕೊಂಡು ಸಾಮಾನುಗಳನ್ನು ಆ ಚೀಲದಲ್ಲಿ ತುಂಬಿದನು ನಾಯಿಯ ಬಾಯಿಯಿಂದ ಆ ಚೀಲವನ್ನು ತೆಗದುಕೊಂಡು ಹೊರಟಿತು.. 

ಅಂಗಡಿಯವ ಅಶ್ಚರ್ಯಚಕಿತನಾಗಿ ನಾಯಿ ಹಿಂದೆ ಹಿಂದೆ ತೆರಳಿದನು ... ಯಾಕೆಂದರೆ ನಾಯಿಗೆ ಎಷ್ಟು ತಿಳುವಳಿಕೆ ಇದೆ ಮತ್ತು ಇದರ ಮಾಲೀಕರು ಯಾರು ಎಂದು ಪರಿಶೀಲನೆ ಮಾಡಲು.!

ನಾಯಿ ಬಸ್ ಸ್ಟಾಪ್ ನಲ್ಲಿ ನಿಂತಿತ್ತು.. ಸ್ವಲ್ಪ ಸಮಯದ ನಂತರ ಬಸ್ ಬಂದಿತು.. ನಾಯಿ ಬಸ್ ಅನ್ನು ಹತ್ತಿತು.

ಕಂಡಕ್ಟರ್ ಬಂದಾಗ ತಲೆ ಮುಂದೆ ಚಾಚಿತು.ಕಂಡಕ್ಟರ್ ನಾಯಿಯ ಕೊರಳುನಲ್ಲಿ ಇರುವ ಪಟ್ಟಿಯಲ್ಲಿ ಇರುವ ವಿಳಾಸವನ್ನು ನೋಡಿ ಹಣ ತೆಗದುಕೊಂಡು ನಾಯಿಯ ಕೊರಳಲ್ಲಿ ಟಿಕೆಟ್ ಇಟ್ಟನು.

ನಾಯಿ ಇಳಿಯುವ ಜಾಗ ಬಂದಾಗ ಮುಂದಿನ ಬಾಗಿಲಿನಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಬಸ್ ನಿಲ್ಲಿಸುವಂತೆ ಸನ್ನೆ ಮಾಡಿತು‌.

ಬಸ್ ನಿಂತ ಮೇಲೆ ಬಾಲ ಅಲ್ಲಾಡಿಸುತ್ತ  ಇಳಿದು ಹೋಗುತ್ತಿತ್ತು.

ಅಂಗಡಿಯವನಿಗೆ ಇನ್ನು ಉತ್ಸಾಹ ಹೆಚ್ಚಾಗಿತ್ತು.. ನಾಯಿ ಹಿಂದೆ , ಹಿಂದೆ ಬರುತ್ತಿದ್ದನು.‌

ನಾಯಿ ಒಂದು ಮನೆಯ ಹತ್ತಿರ
ಬಂದು ನಿಂತು ಚೀಲವನ್ನು ಕೆಳಗೆ ಇಟ್ಟು ಕಾಲಿನಿಂದ ಮೂರು ಸಲ ಬಾಗಿಲು ಬಡಿಯಿತು.

ಒಳಗಡೆಯಿಂದ ನಾಯಿಯ ಮಾಲಿಕ ಬಂದು ಕಟ್ಟಿಗೆಯಿಂದ ನಾಯಿಯನ್ನು ಹೊಡೆದನು.

ಅಂಗಡಿಯವವನು ನಾಯಿಯ ಮಾಲಿಕನಗೆ ಕೇಳಿದನು.
ನಾಯಿಯನ್ನು ಯಾಕೇ ಹೊಡೆದೆ ಎಂದು.?

ನಾಯಿಯ ಮಾಲಿಕ ಹೇಳಿದನು..

ಇದು ನನ್ನ ನಿದ್ರೆಯನ್ನು ಹಾಳು ಮಾಡಿತು..

ಹಣ , ಚೀಟಿ ಮತ್ತು ಚೀಲ ತೆಗದುಕೊಂಡ ಹೋದ ಇದು
ಕೀಲಿಯನ್ನು ಯಾಕೇ ಮರೆತು ಹೋಗಬೇಕಾಗಿತ್ತು  ಎಂದು ಬೈದನು.

*ಜೀವನದ ಸತ್ಯವು ಇಷ್ಟೇ*

ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ ಮಾಡುವ ದಿನಗಳಷ್ಟು ಮಾತ್ರ
ಒಳ್ಳೆಯವರಾಗಿ ಕಾಣುತ್ತೇವೆ.

ನಮ್ಮಿಂದ ಒಂದು ಚಿಕ್ಕ ತಪ್ಪಾದರೂ ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ.

ಅದ್ದರಿಂದ ನಾವು ಮಾಡುವ ಕೆಲಸ ಒಳ್ಳೆಯದಾಗಿದ್ದರೆ
ಅದೇ ದಾರಿಯಲ್ಲಿ ಮುಂದುವರಿಯುವುದು ಉತ್ತಮ. 

ಯಾಕೆಂದರೆ ನಾವು ಮಾಡುವ ಕೆಲಸಗಳು
ಜನರನ್ನು ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲ್ಲ.

✍ಸಂಗ್ರಹ

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World