www.dgnsgreenworld.blogspot.com

Tuesday, January 28, 2020

ಬದಲಾದ ಬದುಕು

SAVE NATURE, HEALTHY, WEALTHY & WISE. dgnsgreenworld Family

ಬದಲಾದ ಬದುಕು

ಒಂದಾನೊಂದು ಕಾಲದಲ್ಲಿ ಒಂದಾನೊಂದು ದೇಶದಲ್ಲಿ ಕಚೇರಿಗಳು ಬೆಳಿಗ್ಗೆ ಒಂಬತ್ತೂವರೆಗೆ ತೆರೆಯುತ್ತಿದ್ದವು. ಕೆಲಸಗಾರರು ಬಂದು ಮೇಜು, ಕುರ್ಚಿಗಳನ್ನು ಸ್ವಚ್ಛಮಾಡಿ ಕಾಗದ ಪತ್ರಗಳನ್ನು ಓರಣವಾಗಿ ಜೋಡಿಸಿಡುತ್ತಿದ್ದರು.

ಹತ್ತೂವರೆಗೆ ಆಫೀಸಿನ ಕೆಲಸ ಪ್ರಾರಂಭವಾಗುತ್ತಿತ್ತು. ಸಿಬ್ಬಂದಿ ವರ್ಗದವರು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಒಂದರ್ಧ ಗಂಟೆ ಊಟ ಮುಗಿಸಿ ಮತ್ತೆ ಕೆಲಸ. ಸಂಜೆ ಐದೂವರೆಯ ವರೆಗೆ ತಮ್ಮ ನಿಗದಿತ ಕೆಲಸವನ್ನು ಮುಗಿಸಿ ಮೇಲೇಳುತ್ತಿದ್ದರು. ತಮ್ಮ ದಿನದ ಕರ್ತವ್ಯವನ್ನು ಮುಗಿಸಿದೆವು ಎಂಬ ತಪ್ತಿ ಅವರಿಗಿರುತ್ತಿತ್ತು. ಅವರ ಮೇಲಿನವರಿಗೂ ಕೆಲಸ ಸರಿಯಾದ ಸಂತೋಷ.


ಮನೆಗೆ ಬರುವಾಗ ನವಿಲಿನ ನಡಿಗೆ. ದಾರಿಯಲ್ಲಿ ಹೆಂಡತಿಯ ಮುಡಿಗೊಂದು ಮೊಳ ಮಲ್ಲಿಗೆ ತಂದರೆ ಮತ್ತಷ್ಟು ಸಂತೋಷ. ಕಚೇರಿಯ ಕೆಲಸ ಮನೆಗೆ ಬರುತ್ತಿರಲಿಲ್ಲ. ಅಲ್ಲಿಯದು ಅಲ್ಲಿಗೇ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ನಗು, ವಿಹಾರ. ಸಂಜೆಗೆ ಎಲ್ಲರೂ ಒಂದೆಡೆಗೆ ಕುಳಿತು ಊಟ, ಹರಟೆ, ನಂತರ ಅದು ವಿಶ್ರಾಂತಿಯ ಸಮಯ.

ಇದೆಲ್ಲಿಯೋ ಕೇಳಿದ ಕಥೆ ಎಂದೆನಿಸುವುದಿಲ್ಲವೇ? ಮತ್ತೆ ಕಥೆಗೆ ಬರೋಣ.


ಪಶ್ಚಿಮದ ದೇಶಗಳಿಂದ ಕೆಲ ಪ್ರವಾಸಿಗಳು ಇಡೀ ಪ್ರಪಂಚವನ್ನು ಒಂದು ಹೊಳೆಹೊಳೆಯುವ ಪೆಟ್ಟಿಗೆಯಲ್ಲಿ ತುಂಬಿಕೊಂಡು ತಂದರು. ಅದನ್ನು ಜನ ಕಂಪ್ಯೂಟರ್ ಎಂದು ಕರೆದರು. ಅದರೊಳಗೆ ಇಂಟರ್‌ನೆಟ್ ಎಂಬ ಹೂರಣವನ್ನು ತುಂಬಿದರು.

ಇದರ ಜೊತೆಗೆ ಹೆಂಡತಿಯನ್ನು ಬಿಟ್ಟರೂ ಇದನ್ನು ಬಿಡಲಾರೆನೆಂಬಂಥ ಉಪಕರಣವನ್ನು ತಂದರು. ಜನ ಅದನ್ನು ಮೊಬೈಲ್ ಫೋನ್ ಎಂದು ಗುರುತಿಸಿದರು. ಇವೆಲ್ಲ ನೌಕರಿ ಮಾಡುವವರ ಕೈ ಸೇರಿದವು. ಆಗ ಅವರೆಲ್ಲ ಈ ಉಪಕರಣಗಳನ್ನು ಬಳಸುವಲ್ಲಿ ಉತ್ಸಾಹ ತೋರಿದರು. ಅಕ್ಷರಗಳನ್ನು, ಸಂಖ್ಯೆಗಳನ್ನು ಬಡಿಬಡಿದು ಪೆಟ್ಟಿಗೆಯೊಳಗೆ ತುಂಬಿದರು. ಅವರಿಗೆ ಅದೇನು ಸಂತೋಷ! ಮಾಲೀಕರು, ಮೇಲಧಿಕಾರಿಗಳೂ ಸಂತೋಷಪಟ್ಟರು. ಈಗ ಮೊದಲಿನಗಿಂತ ಹತ್ತು ಪಟ್ಟು ಕೆಲಸ ಹೆಚ್ಚಾಗುತ್ತಿದೆ, ಜಗತ್ತು ತುಂಬ ವೇಗವಾಗಿ ಮುಂದುವರಿಯುತ್ತಿದೆ ಎಂದು ಸಂಭ್ರಮಿಸಿದರು.


ನಂತರ ದೊಡ್ಡ ಪೆಟ್ಟಿಗೆ ಮಾಯವಾಗಿ ಚೀಲದಲ್ಲಿ ತುಂಬಿಕೊಂಡು, ಹೆಗಲಿಗೆ ತಗುಲಿಸಿಕೊಂಡು ಹೋಗುವ ಪುಸ್ತಕದಾಕಾರದ ಪೆಟ್ಟಿಗೆಗಳು ಬಂದವು. ಅವುಗಳನ್ನು ಲ್ಯಾಪ್‌ಟಾಪ್ ಎಂದು ಕರೆದರು. ಜನರ, ಮಾಲೀಕರ ಉತ್ಸಾಹ ಹೆಚ್ಚಾಯಿತು.

ಆಫೀಸಿನಲ್ಲಿ ಕೆಲಸ ಮುಗಿದೊಡನೆ ಅದನ್ನು ಚೀಲಕ್ಕೆ ಸೇರಿಸಿ ಮನೆಗೆ ನಡೆದು ಮತ್ತೆ ಮನೆಯಲ್ಲಿ ಕೆಲಸ. ಹೆಂಡತಿಯ ಮಲ್ಲಿಗೆಯ ಮಾಲೆ ಮರೆಯಾಯಿತು. ರಾತ್ರಿ ಎಲ್ಲರೊಡನೆ ಮಾಡುತ್ತಿದ್ದ ಊಟ ದೂರವಾಯಿತು. ಪೆಟ್ಟಿಗೆಯ ಮುಂದೆ ಕುಳಿತು ಪರದೆಯನ್ನು ನೊಡುತ್ತ, ನೋಡುತ್ತ ಕಣ್ಣಿನ ಕನ್ನಡಕಗಳು ದಪ್ಪವಾದವು. ಹೊಟ್ಟೆ ಮುಂದೆ ಬಂದಿತು, ಮಾತ್ರೆಗಳ ಸಂಖ್ಯೆ ಹೆಚ್ಚಾಯಿತು. ಬರಬರುತ್ತ ನಿದ್ರೆ ಅಪರೂಪವಾಯಿತು. ಮನಸ್ಸಿನ ಶಾಂತಿ ಕಡಿಮೆಯಾಗಿ ಮನೆಯ ಜನರೊಂದಿಗಿನ ಹೊಂದಾಣಿಕೆ ಹಿಂದೆ ಉಳಿಯಿತು. ವಿವಾಹಗಳು ಮುರಿಯತೊಡಗಿದವು. ಅತ್ಮಹತ್ಯೆಗಳು ಅಪರೂಪವಾಗಿ ಉಳಿಯಲಿಲ್ಲ.

ಇದು ಇಂದಿನ ಕೆಲಸದ ಕಥೆ.


ಯಾವುದು ಸರಿ? ಕೆಲಸ ಮಾಡದಿರುವುದು ಅಲಸ್ಯತನ. ಅಲಸ್ಯತನ ಮಾನವನ ಸ್ವಭಾವಕ್ಕೇ ನಾಚಿಕೆಯ ವಿಷಯ. ಆದರೆ ಎಷ್ಟು ಕೆಲಸ ಸರಿ? ಎಷ್ಟು ಕಾಲ ಈ ಧಾವಂತ, ಈ ಉಸಿರು ಬಿಗಿಹಿಡಿದು ಓಡುವ ಪರಿ? ಹೀಗೆ ಉಸಿರು ಬಿಗಿ ಹಿಡಿದು ಓಡುತ್ತ ಓಡುತ್ತ ಉಸಿರಾಡುವುದನ್ನೇ ಮರೆತುಬಿಡುತ್ತೇವೇನೋ? ಎಲ್ಲವೂ ಒತ್ತಡದ ಬದುಕು. ಈ ಒತ್ತಡ ನಮ್ಮ ಜೀವನವನ್ನೇ ಒಡೆದೀತು.


ಕೊನೆಗೊಂದು ಪ್ರಶ್ನೆ. ನಮ್ಮ ಸಂತೋಷದ ಬದುಕಿಗೆ ಕೆಲಸವೋ? ಕೆಲಸಕ್ಕಾಗಿ ಬದುಕೋ? ತೀರ್ಮಾನ, ಆಯ್ಕೆ ನಮ್ಮವೇ.

Source:Dr.Gururaj Ka

Saturday, January 25, 2020

ಆಹಾರ ಆರೋಗ್ಯ ಐಶ್ವರ್ಯ ?

SAVE NATURE, HEALTHY, WEALTHY & WISE. dgnsgreenworld Family

1) ನೀವು ಬೆಳಿಗ್ಗೆ ಉಪಾಹಾರ ಮಾಡದಿದ್ದಾಗ ಹೊಟ್ಟೆ ಹೆದರುತ್ತದೆ.

(2) ನೀವು 24 ಗಂಟೆಗಳಲ್ಲಿ 10 ಲೋಟ ನೀರು ಕುಡಿಯದಿದ್ದಾಗ ಮೂತ್ರಪಿಂಡಗಳು ಭಯಪಡುತ್ತವೆ.

(3) ನೀವು 11 ಗಂಟೆಯವರೆಗೆ ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯೋದಯದಲ್ಲಿ ಎಚ್ಚರಗೊಳ್ಳದಿದ್ದಾಗ ಪಿತ್ತಕೋಶವು ಹೆದರುತ್ತದೆ.

(4) ನೀವು ಶೀತ ಮತ್ತು ಹಳೆಯ ಆಹಾರವನ್ನು ಸೇವಿಸಿದಾಗ ಸಣ್ಣ ಕರುಳು ಹೆದರುತ್ತದೆ.

(5) ನೀವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ದೊಡ್ಡ ಕರುಳುಗಳು ಹೆದರುತ್ತವೆ.

(6) ಸಿಗರೇಟ್ ಮತ್ತು ಬೀಡಿಗಳ ಹೊಗೆ, ಕೊಳಕು ಮತ್ತು ಕಲುಷಿತ ವಾತಾವರಣದಲ್ಲಿ ನೀವು ಉಸಿರಾಡುವಾಗ ಶ್ವಾಸಕೋಶವು ಹೆದರುತ್ತದೆ.

(7) ನೀವು ಭಾರವಾದ ಕರಿದ ಆಹಾರ, ಜಂಕ್ ಮತ್ತು ತ್ವರಿತ ಆಹಾರವನ್ನು ಸೇವಿಸಿದಾಗ ಯಕೃತ್ತು ಭಯವಾಗುತ್ತದೆ.

(8) ನಿಮ್ಮ ಊಟವನ್ನು ಹೆಚ್ಚು ಉಪ್ಪು ಮತ್ತು ಕೊಲೆಸ್ಟ್ರಾಲ್ ನೊಂದಿಗೆ ಸೇವಿಸಿದಾಗ ಹೃದಯ ಭಯವಾಗುತ್ತದೆ.

(9) ರುಚಿ ಮತ್ತು ಮುಕ್ತವಾಗಿ ಲಭ್ಯವಿರುವುದರಿಂದ ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದಾಗ ಮೇದೋಜ್ಜೀರಕ ಗ್ರಂಥಿಯು ಹೆದರುತ್ತದೆ.

(10) ನೀವು ಮೊಬೈಲ್ ಮತ್ತು ಕಂಪ್ಯೂಟರ್ ಪರದೆಯ ಬೆಳಕಿನಲ್ಲಿ ಕತ್ತಲೆಯಲ್ಲಿ ಕೆಲಸ ಮಾಡುವಾಗ ಕಣ್ಣುಗಳು ಭಯಭೀತರಾಗುತ್ತವೆ.

ಮತ್ತು

(11) ನೀವು ನಕಾರಾತ್ಮಕ ವಿಷಯಗಳನ್ನು ಯೋಚಿಸಲು ಪ್ರಾರಂಭಿಸಿದಾಗ ಮೆದುಳು ಹೆದರುತ್ತದೆ.

ನಿಮ್ಮ ದೇಹದ ಭಾಗಗಳನ್ನು ನೋಡಿಕೊಳ್ಳಿ ಮತ್ತು ಅವರನ್ನು ಹೆದರಿಸಬೇಡಿ.

ಈ ಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಲಭ್ಯವಿರುವವುಗಳು ತುಂಬಾ ದುಬಾರಿಯಾಗಿದೆ ಮತ್ತು ಬಹುಶಃ ನಿಮ್ಮ ದೇಹದಲ್ಲಿ ಹೊಂದಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ದೇಹದ ಭಾಗಗಳನ್ನು ಆರೋಗ್ಯವಾಗಿಡಿ.
ವಂದನೆಗಳೊಂದಿಗೆ

Saturday, January 11, 2020

ಸಮೂಹ ಅಂದು, ಇಂದು* ?

SAVE NATURE, HEALTHY, WEALTHY & WISE. dgnsgreenworld Family
*ಓಂ ಸಾಯಿರಾಂ*💐👏🏻
   *ಸಮೂಹದ  ಅಂದು, ಇಂದು*

*ಅಂದು,*
_ಒಂದು ಮನೆಯಿಂದ ಐದಾರು ಮಂದಿ ಒಟ್ಟಿಗೆ ಒಂದೇ ಕಾರಿನಲ್ಲಿ  ಒಂದು ಸ್ಥಳಕ್ಕೆ ಹೋಗತ್ತಿದ್ದೆವು._

*ಇಂದು,*
_ಒಂದು ಮನೆಯಿಂದ ಒಂದು ಸ್ಥಳಕ್ಕೆ ಐದಾರು ಮಂದಿ ಐದಾರು ಕಾರಿನಲ್ಲಿ ಹೋಗುತ್ತೇವೆ._

*ಅಂದು,*
_ಒಂದು ಕೋಣೆಯಿರುವ ಮನೆಯಲ್ಲಿ ಹತ್ತಾರು ಮಂದಿ ವಾಸಿಸುತ್ತಿದ್ದೆವು._

*ಇಂದು,*
_ಹತ್ತಾರು ಕೋಣೆಯಿರುವ ಮನೆಯಲ್ಲಿ ಒಂದೋ ಎರಡೋ ಮಂದಿ ವಾಸಿಸುತ್ತಿದ್ದೇವೆ._

*ಅಂದು,*
_ನೂರು ರೂಪಾಯಿ ಕೊಟ್ಟರೆ ಒಂದು ಚೀಲ ತುಂಬಾ ಸಾಮಾಗ್ರಿ ತರುತ್ತಿದ್ದವು._

*ಇಂದು,*
_ಒಂದು ಚೀಲ ತುಂಬಾ ಹಣ ಕೊಟ್ಟು  ಒಂದೋ ಎರಡೋ ಸಾಮಾಗ್ರಿ ಖರೀದಿಸುತ್ತೇವೆ._

*ಅಂದು,*
_ಹತ್ತು ಜನ ಊಟ ಮಾಡಲು ಎಂಟು ಜನರಿಗಾಗುವಷ್ಟು ಊಟ ತಯಾರಿಸಿ ಹನ್ನೆರಡು ಮಂದಿ ಊಟ ಮಾಡುತ್ತಿದ್ದೆವು._

*ಇಂದು,*
_ಹತ್ತು ಜನ ಊಟ ಮಾಡಲು, ಇಪ್ಪತ್ತು ಜನರಿಗಾಗುವಷ್ಟು ಊಟ ತಯಾರಿಸಿ, ಎಂಟು ಮಂದಿ ಊಟ ಮಾಡಿ , ಬಾಕಿ ಕಸದ ತೊಟ್ಟಿಗೆ ಹಾಕುತ್ತೇವೆ._

*ಅಂದು,*
_ಸಾವಿರ ಮಂದಿಗೆ  ಸಹಾಯ ಮಾಡಿದವರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ._

*ಇಂದು ,*
_ಒಬ್ಬನಿಗೆ ಸಹಾಯ ಮಾಡಿದರೆ ಸಾವಿರ ಮಂದಿಗೆ ಗೊತ್ತಾಗುತ್ತದೆ._

*ಅಂದು,*
_ಅರ್ಧ ಹೊಟ್ಟೆ ತುಂಬಿಸಲು ಬೇಕಾಗಿ ಕಿಲೋಮೀಟರ್ ವರೆಗೆ ನಡೆದು ಹೋಗಿ ಕೆಲಸ ಮಾಡತ್ತಿದ್ದೆವು._

*ಇಂದು,*
_ಹೊಟ್ಟೆ ಕರಗಿಸಲು ಬೇಕಾಗೆ ಕಿಲೋಮೀಟರ್ ವರೆಗೆ  ನಡೆಯುತ್ತೇವೆ._ 

*ಅಂದು*
ಸಾವಿರ ಜನಕ್ಕೆ ಅಡುಗೆ ಮಾಡಿ ಬಡಿಸಿದರೂ ಅಯಸ ಪಡದವಳು ತಾಯಿ

*ಇಂದು*
ಈಗಿನ ಹೆಣ್ಣುಮಕ್ಕಳು ಕಸ ಗುಡಿಸುವುದೆ ಅಯಸ.

*ಅಂದು,*
_ಜೀವಿಸಲಿಕ್ಕಾಗಿ ತಿನ್ನುತ್ತಿದ್ದೆವು._

*ಇಂದು,*
_ತಿನ್ನಲಿಕ್ಕೋಸ್ಕರ ಜೀವಿಸುತ್ತಿದ್ದೇವೆ._

*ಅಂದು ,*
_ಮನೆಯೊಳಗೆ ಊಟ ಮಾಡಿ ಹೊರಗಡೆ ಶೌಚಾಲಯಕ್ಕೆ ಹೋಗುತ್ತಿದ್ದೆವು._

*ಇಂದು,*
_ಹೊರಗಡೆ ಊಟ ಮಾಡಿ ಒಳಗೆ ಶೌಚಾಲಯಕ್ಕೆ ಹೋಗುತ್ತೇವೆ._

*ಅಂದು,*
_ಮಾನ ಮುಚ್ಚಲು ವಸ್ತ್ರ ಧರಿಸುತ್ತಿದ್ದೆವು._

*ಇಂದು,*
_ಮಾನ ಇತರರಿಗೆ ತೋರಿಸಲು ವಸ್ತ್ರ ಧರಿಸುತ್ತಿದ್ದೇವೆ._

*ಅಂದು ,*
_ಅಧ್ಯಾಪಕರ ಕೈಯಿಂದ ಪೆಟ್ಟು  ಸಿಗಬಾರದು ಎಂದು ಪ್ರಾರ್ಥಿಸುತ್ತಿದ್ದವು._

*ಇಂದು,*
_ವಿದ್ಯಾರ್ಥಿಗಳ ಕೈಯಿಂದ ಪೆಟ್ಟು  ಸಿಗದೆ ಇರಲು ಅಧ್ಯಾಪಕರು ಪ್ರಾರ್ಥಿಸುತ್ತಿದ್ದಾರೆ._
     
      *ಒಮ್ಮೆ ಯೋಚಿಸಿ ಸಾಧ್ಯವಾದರೆ ಬದಲಾಗುವುದಕ್ಕೆ ಪ್ರಯತ್ನಿಸಿ*🌱

*_ಬದಲಾಗಿರುವುದು ನಾವೇ ಹೊರತು,  ಕಾಲವಲ್ಲ._*
                ,,,,,,,,,✍❓
     💐💐💐ಶುಭವಾಗಲಿ
ವಂದೆಗಳೊಂದಿಗೆ.

Wednesday, January 8, 2020

ಹಾಲು ತುಪ್ಪವಾಗಿ ದೀಪದ ಮೂಲಕ ದೇವರಿಗೆ ಅರ್ಪಣೆ ಆಗುವ ಬಗ್ಗೆ

SAVE NATURE, HEALTHY, WEALTHY & WISE. dgnsgreenworld Family

*ಸಂಸ್ಕೃತದಲ್ಲಿ ಒಂದು ಕಥೆ ಇದೆ*...

*ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ*..
 *ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ*..

*ಆಗ ಹಾಲು ಹೇಳಿತಂತೆ*..' *ದೇವರೇ*.. *ನಾನು ಹಾಲು*
 *ಆಕಳು / ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ*...
 *ಆದರೆ ಈ ಪಾಪಿ ಮಾನವ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ*..
*ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ*..

*ಆಗ ದೇವರು ನಕ್ಕು*.
*' ಎಲೈ* .. *ಹಾಲೇ ಇಲ್ಲಿ ಕೇಳು*.. *ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು*..

*ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ*.. *ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ*.. *ಮೊಸರಾಗಿ ಕಡೆದರೆ*.. *ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ*..
*ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ*...
*ಬೆಣ್ಣೆಯನ್ನು  ಹದವಾಗಿ ಕಾಯಿಸಿ*.. *ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ ತುಂಬಾ ದಿನ ಬದುಕುವೆ ಹಾಗೂ ಔಷಧವಾಗುವೆ*..
*ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ*. 

*ಈಗ ಹೇಳು ಒಂದು ದಿನ   ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ*..
*ಅಥವಾ ಕ್ಷಣ ಕ್ಷಣವೂ*.. *ಅನುದಿನವೂ* .. *ದಿನ ದಿನವೂ*..  *ಬೆಳೆದು*.. *ರೂಪಾಂತರ ಪಡೆದು* ..  *ಭಗವಂತನಿಗೆ ಬೆಳಕಾಗುವೆಯಾ ' ಎಂದು ದೇವರು ಪ್ರಶ್ನಿಸಿದನಂತೆ*...

*ದೇವರ ಮಾತಿಗೆ*..
*ಹಾಲು ಮೂಕವಾಯಿತು*..
*ಶರಣಾಯಿತು*..
*ತನ್ನ ಮನದ ಅಂಧಕಾರ*.. *ಮದದಿಂದ ಹೊರಬಂತು*..
*ದೇವರ ಮುಂದೆ ಪ್ರಜ್ವಲಿಸುವ ಬೆಳಕಾಯಿತು*..

*ನಾವು ಹಾಗೇ ಅಲ್ವಾ*.. *ನಮ್ಮ ಮನಸ್ಸಿಗೆ ಯಾರೋ ಹುಳಿ ಹಿಂಡಿದರೆಂದು ಕೊರಗದೆ*..
 *ಹಾಲಾಗಿ ಮೊಸರಾಗಿ ಮಜ್ಜಿಗೆ ಬೆಣ್ಣೆ ತುಪ್ಪವಾಗಿ ದೇವರ ಮುಂದೆ ದೀಪವಾಗುವ ಸಾರ್ಥಕ ಬದುಕಿಗೆ ಬದಲಾಗೋಣ*..

ವಂದನೆಗಳೊಂದಿಗೆ

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World