www.dgnsgreenworld.blogspot.com

Wednesday, October 9, 2019

ಜೀವನವನ್ನು ಹಗುರವಾಗಿ ತೆಗೆದುಕೊಳ್ಳಿ,. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ, ಆರೋಗ್ಯವಂತ ಜೀವನ ಮುಖ್ಯ.

SAVE NATURE, HEALTHY, WEALTHY & WISE. dgnsgreenworld Family
ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)

ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲ ದಿದ್ದರೂ ಏನೂ ತೊಂದರೆ ಆಗಲ್ಲ)

ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)

ವಯಸ್ಸು 50 ಆದಾಗ
*"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)

ವಯಸ್ಸು 60 ಆದಾಗ *"ಎತ್ತರದ ಸ್ಥಾನ", "ಕೆಳಗಿನ ಸ್ಥಾನ" ಒಂದೇ.* (ಅಧಿಕಾರಿಯು ನಿವೃತ್ತಿಗೊಂಡ ಮೇಲೆ ಗೌರವ ಕೊಡಲಾರ)

ವಯಸ್ಸು 70 ಆದಾಗ *"ದೊಡ್ಡ ಮನೆ" ಮತ್ತು "ಸಣ್ಣ ಮನೆ" ಒಂದೇ.* (ಸಂದು ನೋವು, ಚಲಿಸಲು ಕಷ್ಟ, ಇದ್ದವರಿಗೆ ಸ್ವಲ್ಪ ಜಾಗ ಕೂರಲು ಸಿಕ್ಕರೆ ಸಾಕು)

ವಯಸ್ಸು 80 ಆದಾಗ *"ಹಣ ಇರುವುದು" ಮತ್ತು "ಹಣ ಇಲ್ಲದಿರುವುದು" ಒಂದೇ.* (ನಿಮಗೆ ಹಣ ಖರ್ಚು  ಮಾಡಬೇಕೆನ್ನಿಸಿದರೂ ಎಲ್ಲಿ ಖರ್ಚು ಮಾಡಬೇಕೆಂದು ತಿಳಿಯುವುದಿಲ್ಲ)

ವಯಸ್ಸು 90 ಆದಾಗ *"ನಿದ್ದೆ ಮಾಡೋದು" ಹಾಗೂ "ಎಚ್ಚರದಿಂದಿರುವುದು" ಎರಡೂ ಒಂದೇ.* (ಎದ್ದ ಮೇಲೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ)

ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.

*ದೀರ್ಘಾವಧಿಯ ಜೀವನ ನೋಡಿದರೆ ನಾವೆಲ್ಲಾ ಒಂದೇ. ಆದ್ದರಿಂದ ಎಲ್ಲಾ ಒತ್ತಡ / ಆತಂಕ ಗಳನ್ನು ಮರೆತು ಜೀವನವನ್ನು ಆನಂದಿಸೋಣ🙏

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World