www.dgnsgreenworld.blogspot.com

Sunday, July 17, 2022

ಆ ಮಹಿಳೆ ಯಾರು ಅಂದರೆ , ಇದೀಗ ಭಾರತದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ , " ಶ್ರೀಮತಿ ದ್ರೌಪದಿ ಮುಮು೯ ".

ಯಾವಾಗ ತಾನು ಭುವನೇಶ್ವರದಲ್ಲಿ ಜಿಲ್ಲಾಧಿಕಾರಿಯಾಗಿದ್ದೆನೊ, ಆಗ  ಒಂದು ದಿನ ಮಧ್ಯಾಹ್ನ ನಾನು ಸರ್ಕಾರಿ ಪ್ರವಾಸ ಮುಗಿಸಿ ಕಚೇರಿಗೆ ಬಂದಾಗ ಓರ್ವ ಮಹಿಳೆ ಅಲ್ಲಿಯ ಬಾಕಿನ ಮೇಲೆ ಕುಳಿತಿದ್ದಳು. 

ನಾನು ಅವಳನ್ನು ಒಳಗೆ ಕರೆದು ಬಂದ ಕಾರಣ ಕೇಳಿದಾಗ, ಆಕೆ ಬಹಳ ದಿನಗಳಿಂದ ತಾನು ಒಂದು ಅರ್ಜಿ ಸಲ್ಲಿಸಿದ್ದು , ತನ್ನ ಭೂಮಿಯನ್ನು ಮಾರಾಟ ಮಾಡುವದಿದ್ದು ಅದಕ್ಕಾಗಿ ಅನುಮತಿ ಪತ್ರ ಬೇಕಾಗಿದೆ ಎಂದು ಹೇಳಿದಳು.

ಆಕೆಯ ಕಡತ ( ಫೈಲ್ ) ತಪಾಸಣೆ ಮಾಡಿದಾಗ, ಆಕೆ ಈ ಮೊದಲು ಕೂಡ ಆ ಒಂದೇ ಜಮೀನು ಮಾರುವುದಕ್ಕೆ ಮೂರು ಸಲ ಪರವಾನಗಿ ಪಡೆದಿರುವ ಬಗ್ಗೆ ತನ್ನ ಗಮನಕ್ಕೆ ಬಂತು. ಆದಾಗ್ಯೂ ಇನ್ನೂ ಜಮೀನು ಮಾರಾಟ ಮಾಡದೇ ಇರುವ ಕಾರಣ ಕೇಳಿದಾಗ, ಆಕೆ ಹೇಳಿದ್ದು ಕೇಳಿ ,  ನನಗೆ ಮಾತೇ ಹೊರಡಲಿಲ್ಲ. 

ಮೊದಲ ಸಲ ಪರವಾನಗಿ ಪಡೆದಾಗ , ಅವಳ ಒಬ್ಬ ಪುತ್ರ ಆಕಸ್ಮಿಕವಾಗಿ ತೀರಿಕೊಂಡ.  

ಎರಡನೇ ಸಲ ಮಾರಾಟ ಮಾಡುವ ವೇಳೆ ತನ್ನ ಗಂಡ ಸಾವನ್ನಪ್ಪಿದ್ದನು.  ಅದೆಲ್ಲಾ ಆಘಾತದಿಂದ ತಾನು ಹೊರಗೆ ಬರುತ್ತಿದ್ದಂತೆ, ಮೂರನೇ ಬಾರಿ ಅನುಮತಿ ಪಡೆದು ಮಾರಾಟ ಮಾಡುವ ವೇಳೆ ತನ್ನ ಏಕೈಕ ಆಧಾರವಾಗಿದ್ದ ಇನ್ನೊಬ್ಬ ಪುತ್ರ ಅಪಘಾತದಲ್ಲಿ ಅಸುನೀಗಿದ.
ಹೀಗಾಗಿ ಇದೀಗ ಸಾಲ ತೀರಿಸಲು ಸದರಿ  ಜಮೀನನ್ನು ಮಾರಾಟ ಮಾಡುವ ಸಲುವಾಗಿ ನಾಲ್ಕನೇ ಬಾರಿಗೆ ಅನುಮತಿ ಪಡೆಯಲು ಬಂದಿರುವೆ ಎಂದಳು.

ನಾನು ಅವಳನ್ನು ಏನೂ ಪ್ರಶ್ನಿಸದೇ ಕೂಡಲೇ ಮಂಜೂರಾತಿ ಪತ್ರ ಅವಳ ಕೈಗೆ ಕೊಟ್ಟೆ.

ಆ ಮಹಿಳೆ ಯಾರು ಅಂದರೆ , ಇದೀಗ ಭಾರತದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ , 
" ಶ್ರೀಮತಿ  ದ್ರೌಪದಿ  ಮುಮು೯ ". 

ಅವರು ಆಗ ಸ್ವತಃ ತಾವು ಓಡಿಸಾದ ಸಚಿವೆಯಾಗಿದ್ದರೂ ಕೂಡ ಇತರರಂತೆ ಧಿಮಾಕು ತೋರಿಸದೇ , ಸಾಮಾನ್ಯ ಪ್ರಜೆಗಳ ಹಾಗೆ ಕಚೇರಿಗೆ ಬಂದು ಸರದಿಯಲ್ಲಿ ನಿಂತು ತನ್ನ ಜಮೀನು ಮಾರಾಟ ಮಾಡುವ ಸಲುವಾಗಿ ಪರವಾನಗಿ ಪಡೆದರು.

ಇಂಥ ವ್ಯಕ್ತಿ , ಇಂಥ ಸಾಮಾನ್ಯ  ಮಹಿಳೆ  ನಮ್ಮ ದೇಶದ   " ರಾಷ್ಟ್ರಪತಿ " ಆಗುವಳೆಂದರೆ ನಾವೆಲ್ಲರೂ ಹೆಮ್ಮೆ ಪಡುವಂತಹ ಸಂಗತಿ ಅಲ್ಲವೇ ?

      ಲೇಖಕರು:  
ಶ್ರೀಮತಿ ವಿಜಯಾ ವಾಷ್ಣೆರ್ಯ.
ಜಿಲ್ಲಾಧಿಕಾರಿಗಳು, ಭುವನೇಶ್ವರ.

 ಅನುವಾದ :  
      -  ನೀಲಕಂಠ ದಾತಾರ.

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World