ಮಹಮದ್ ಬಿನ್ ತುಘಲಕ್ ಮಹಾನ್? ಸಾಧನೆ
ಸುಲ್ತಾನನು ರಾಜಧಾನಿಯನ್ನು ದೆಹಲಿಯಿಂದ ಮಹಾರಾಷ್ಟ್ರದ ದೇವಗಿರಿ (ದೌಲತಾಬಾದ್)ಗೆ ಬದಲಾಯಿಸಿದನು. ಇದಕ್ಕೆ ಅವನು ಕೊಟ್ಟ ಕಾರಣಗಳೆಂದರೆ, ೧. ರಾಜಧಾನಿ ಸಾಮ್ರಾಜ್ಯದ ಮಧ್ಯದಲ್ಲಿರಬೇಕೆಂದು. ೨ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವು ಹೆಚ್ಚು ಸಮ್ಋದ್ಧವಾಗಿದೆ ಎಂದು. ೩. ದೆಕ್ಷಿಣ ಭಾರತದಲ್ಲಿ ಇಸ್ಲಾಂ ಪ್ರಚಾರ ಮಾಡುವುದು. ೪. ಉತ್ತರಕ್ಕೆ ಸೀಮಿತವಾಗಿದ್ದ ಇಸ್ಲಾಂ ಪ್ರಭುತ್ವವನ್ನು ದಕ್ಷಿಣಕ್ಕೆ ವಿಸ್ತರಿಸುವುದು. ೫. ಮುಂಗೋಲರ ದಾಳಿಗಳಿಂದ ರಾಜಧಾನಿಯನ್ನು ರಕ್ಷಿಸುವುದು. ೬. ಅವಾಚ್ಯ ಶಬ್ಧಗಳಿಂದ ಬೈಯ್ದು ದೆಹಲಿಯ ನಾಗರೀಕರು ಸುಲ್ತಾನನಿಗೆ ಪತ್ರ ಬರೆಯುತ್ತಿದ್ದರು. ಅವುಗಳಿಂದ ಮುಕ್ತನಾಗಲು . ಇತ್ಯಾದಿ. ಹೊಸ ರಾಜಧಾನಿಯಲ್ಲಿ ಕಟ್ಟಡಗಳು ನಿರ್ಮಿಸಲು ಹಣವನ್ನು ನೀರಿನಂತೆ ಚೆಲ್ಲಿದನು. ಅನಂತರ ಸುಲ್ತಾನ ಆಜ್ಞೆ ಕೋಟ್ಟು ದೆಹಲಿಯ ಎಲ್ಲಾ ನಾಗರೀಕರು ತಮ್ಮ ಗಂಟು ಮೂಟೆ ಕಟ್ಟಿಕೋಂಡು ದೇವಗಿರಿಗೆ ಹೋಗಬೇಕೆಂದು ತಿಳಿಸಿದನು. ದೆಹಲಿಯಲ್ಲಿ ಈಗ ನೋಡಲು ಒಂದು ನರಪಿಳ್ಳೆಯಾಗಲಿ, ಬೆಕ್ಕಿನ ಮರಿಯಾಗಲಿ ಇರಲಿಲ್ಲ. ಅದು ನೋಡಲು ಸ್ಮಶಾನದಂತಿತ್ತು. ಹೀಗಾಗಿ ಮಂಗೋಲರು ದೆಹಲಿಯನ್ನು ಮುತ್ತಿ ಲೂಟಿ ಮಾಡಿದರು. ದೆಹಲಿ ತನ್ನ ಶತಮಾನಗಳ ವೈಭವವನ್ನು ಕಳೆದುಕೊಂಡಿತು. ಕೊನೆಗೆ ತನ್ನ ತಪ್ಪು ಅರಿತ ಸುಲ್ತಾನ ಪುನಃ ಜನರಿಗೆ ದೇವಗಿರಿಯಿಂದ ದೆಹಲಿಗೆ ಹಿಂತಿರುಗಬೇಕೆಂದು ಆಜ್ಙಾಪಿಸಿದನು. ಅದನ್ನು ಕೇಳಿದ ಅವರಿಗೆ ಪ್ರಾಣವೇ ಹೋದಂತಾಗಿತು. ಆದರೂ ಸುಲ್ತಾನನ ಆಜ್ಙೆಯನ್ನು ಪಾಲಿಸಲೇಬೇಕಿತ್ತು. ದೆಹಲಿ ಮತ್ತು ದೇವಗಿರಿಗಳ ನಡುವೆ ೭೦೦ ಮೈಲಿ ಉದ್ದದ ರಸ್ತೆ ಕಲ್ಲುಮುಳ್ಳುಗಳಿಂದ ತುಂಬಿದ್ದು, ಆಹಾರವಿಲ್ಲದೆ ಹಿಂತಿರುಗುವಾಗ ಮುಕ್ಕಾಲು ಭಾಗ ಜನ ಸತ್ತರು. ದೆಹಲಿ ಪುನಃ ತನ್ನ ವೈಭವವನ್ನು ಪಡೆಯಲು ಹಲವು ವರ್ಷಗಳೇ ಬೇಕಾದವು. ಲೇನ್ ಪೋಲರು ರಾಜಧಾನಿ ಬದಲಾವಣೆಯನ್ನು 'ಶಕ್ತಿಯ ಆಪ ನಿದೇಶಿತ ಸ್ಮಾರಕ" ವಾಗಿತ್ತೆಂದು ಟೀಕಿಸಿದ್ದಾರೆ.
ಪರೀಕ್ಷೆ ಹತ್ತಿರ ಇರೋದ್ರಿಂದ ಬೇಕಾದವರಿಗೆ ಸಹಾಯವಾದೀತು.