www.dgnsgreenworld.blogspot.com

Saturday, November 28, 2020

ನೀವುಇಷ್ಟೆಲ್ಲ ರಾಮನಾಮ ಗುಣಗಾನಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂಶ್ರೀರಾಮನ ದರ್ಶನ ಆಗಿದೆಯೇ?"

ತುಂಬಾ ಚೆನ್ನಾಗಿದೆ ಓದಿ:

ಒಮ್ಮೆ ಭಕ್ತನೊಬ್ಬ ಗೋಸ್ವಾಮಿ
ತುಳಸೀದಾಸರನ್ನು ಕೇಳುತ್ತಾನೆ...

"ನೀವು
ಇಷ್ಟೆಲ್ಲ ರಾಮನಾಮ ಗುಣಗಾನ
ಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂ
ಶ್ರೀರಾಮನ ದರ್ಶನ ಆಗಿದೆಯೇ?"

ಅದಕ್ಕೆ ತುಳಸೀದಾಸರು,
"ಖಂಡಿತವಾಗಿಯೂ ಆಗಿದೆ!" ಎಂದು
ಹೆಮ್ಮೆಯಿಂದ ಹೇಳುತ್ತಾರೆ.

ಭಕ್ತನು
"ಹಾಗಿದ್ದರೆ ನನಗೂ ಶ್ರೀರಾಮದರ್ಶನ
ಸಾಧ್ಯವಿದೆಯೇ?" ಎಂದು ಕೇಳುತ್ತಾನೆ.

ತುಳಸೀದಾಸರು "ಯಾಕಿಲ್ಲ? ನಿನಗೂ
ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ
ಸುಲಭವಾಗಿಯೂ ಇದೆ. ನೀನು ಈ
ಪ್ರಪಂಚದಲ್ಲಿ ಯಾವುದೇ
ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ
ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.

ಭಕ್ತನಿಗೆ ಅರ್ಥವಾಗಲಿಲ್ಲ. "ಬಿಡಿಸಿ ಹೇಳಿ
ಸ್ವಾಮೀ" ಎಂದು ವಿನಂತಿಸಿದ.

ತುಳಸೀದಾಸರು ಹೇಳುತ್ತಾರೆ-
"ನೋಡು, ಇದಕ್ಕೊಂದು ಸುಲಭಸೂತ್ರ
ಇದೆ. ಈ ಪ್ರಪಂಚದಲ್ಲಿ ಯಾರದೇ
ಹೆಸರಿಗಾದರೂ ಸರಿ ಈ ಸೂತ್ರವನ್ನು
ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ
ಹೆಸರೇ ಸಿಗುತ್ತದೆ!"

ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ.
ಯಾವುದು ಆ ಸೂತ್ರ? ಎಂದು ಕೇಳಿದ.

ಆಗ ತುಳಸೀದಾಸರು ಹೇಳುತ್ತಾರೆ:

ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ || 

ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ,
ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು
ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ
ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ
ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು
(ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು
ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ).
ಭಾಗಲಬ್ಧ ಎಷ್ಟೇ ಇರಲಿ, ಶೇಷ
ಉಳಿಯುವುದು ಎರಡೇ. ಆ ಎರಡು
ಅಕ್ಷರಗಳೇ "ರಾಮ"!

ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು
ತನ್ನ ಹೆಸರು "ನಿರಂಜನ" ಎಂದು ನಾಲ್ಕು
ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು
ಅನ್ವಯಿಸಿದ. 4X4=16; 16+5=21;
21X2=42; 42/8= ಭಾಗಲಬ್ಧ 5. ಶೇಷ 2.

ತನ್ನ ಹೆಂಡತಿಯ ಹೆಸರು "ನಿರ್ಮಲಾ" ಎಂದು
ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 3X4=12;
12+5=17; 17X2=34; 34/8 =
ಭಾಗಲಬ್ಧ 4. ಶೇಷ 2.

ತನ್ನ ಮಗಳ ಹೆಸರು "ನಿಧಿ" ಎಂದು ಇದ್ದದ್ದಕ್ಕೆ
ಸೂತ್ರ ಅನ್ವಯಿಸಿದ. 2X4=8; 8+5=13;
13X2=26; 26/8 = ಭಾಗಲಬ್ಧ 3. ಶೇಷ
2.

ತನ್ನ ಪಕ್ಕದಮನೆಯವನ ಹೆಸರು "ನಿಖಿಲಾನಂದ"
ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.
5X4=20; 20+5=25; 25X2=50; 50/8
= ಭಾಗಲಬ್ಧ 6. ಶೇಷ 2.

ಹೌದಲ್ವಾ! ಹೆಸರು ಯಾವುದೇ ಇದ್ದರೂ,
ಎಷ್ಟು ಅಕ್ಷರಗಳೇ ಇದ್ದರೂ
ಕೊನೆಯಲ್ಲುಳಿಯುವುದು ಎರಡಕ್ಷರ
"ರಾಮ" ಮಾತ್ರ! ಭಕ್ತನಿಗೆ ಬಹಳ
ಖುಷಿಯಾಯ್ತು.

ತುಳಸೀದಾಸರ
ಕಾಲಿಗೆರಗಿದ. ಇವತ್ತು ನನಗೆ
ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು
ಯಾವಾಗಲೂ ನಾನು ರಾಮನನ್ನೇ
ಕಾಣುತ್ತಿರುತ್ತೇನೆ ಎಂದು ಅಲ್ಲಿಂದ
ಹೊರಟುಹೋದ.

ಅಷ್ಟಾಗಿ, ತುಳಸೀದಾಸರು ಹೇಳಿದ
ಸೂತ್ರದಲ್ಲಿನ ಸಂಖ್ಯೆಗಳ ಮತ್ತು
ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ?

ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ
ಎಂಬ ನಾಲ್ಕು ಪುರುಷಾರ್ಥ.

ಪಂಚತತ್ತ್ವ = ಭೂಮಿ, ನೀರು, ಅಗ್ನಿ,
ವಾಯು, ಆಕಾಶ ಎಂಬ ಪಂಚಮಹಾಭೂತ.

ದ್ವಿಗುಣ = ಮಾಯೆ ಮತ್ತು ಬ್ರಹ್ಮ.

ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ,
ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ
ಎಂಟು ಸೌಭಾಗ್ಯಗಳು.

ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ
ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ
ಕೊನೆಗೂ ಉಳಿಯುವ ಶೇಷ "ರಾಮ"
ಮಾತ್ರ!

ಜೈ ಶ್ರೀರಾಮ್
 "ಭಗವತ್ ಗೀತೆ ನುಡಿ "

ಹುಟ್ಟಿದಾಗ ನೀ ಅಳುತ್ತಿದ್ದೆ,
   ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
         ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

           ಹುಟ್ಟಿದಾಗ  ಹುಡುಕುವರು ನಿನಗೆ
                             ನೂರೆಂಟು ನಾಮ,
                    ಮಡಿದಮೇಲೆ ಶವ ಎಂದೇ
                                    ನಿನ್ನ ನಾಮ.

   ನೀನೇನನ್ನೂ ಗಳಿಸದೇ ಬಂದೆ, 
                           ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.
 
ಓ ಮಾನವಾ..
              ಮಡಿದಾಗ ಮಣ್ಣಲ್ಲಿ ಮರಳಾಗಿ
                              ಹೊಗುವ ನೀನು
               ನಿನ್ನದು ಎನ್ನಲು ನಿನಗೇನಿದೆ,

     ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

     ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

 ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
       ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
                     ನಾನು ಯಾರು ?
                              ಏನಿದೇ ನನ್ನಲ್ಲಿ ?

ವಂದನೆಗಳೊಂದಿಗೆ
 ನಂಜುಂಡಸ್ವಾಮಿ ದೊಡ್ಡಹುಂಡಿ

Sunday, November 22, 2020

ನಮ್ಮ ಮೈ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು ಆದ್ಭುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇಹದಲ್ಲೇ ಇವೆ

*ನಮ್ಮ ಮೈ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು ಆದ್ಭುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇಹದಲ್ಲೇ ಇವೆ*

*ನಮ್ಮ ದೇಹಕ್ಕೆ ಯಾವ್ದು ಸರಿ? ಚಳಿ ಇದ್ರೆ ಒಳ್ಳೆದಾ? ಬಿಸಿಲಾದ್ರೆ ಒಳ್ಳೆದಾ? ಯಾವ್ದು ಶೀತ ಯಾವ್ದು ಉಷ್ಣ, ಏನು ತಿಂದ್ರೆ ಒಳ್ಳೇದು ಏನು ಮಾಡಿದ್ರೆ ಒಳ್ಳೇದು... ಈ ಎಲ್ಲಾ ವಿಷಯಗಳು ನಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ನಮ್ಮ ದೇಹದ ಬಗ್ಗೆ ತಿಳ್ಕೊಳಕ್ಕೆ ಬ್ರಹ್ಮಾಂಡದಷ್ಟಿದೆ. ಅದರಲ್ಲಿ ನೀವು ಪ್ರಾಯಶಃ ಕೇಳಿಲ್ಲದಿರೋ 20 ವಿಷಯಗಳ್ನ ಹೇಳ್ತೀವಿ ಕೇಳಿ… ಮೊದಲು ಕೇಳಿದಾಗ ನಮಗೆ ಬಹಳ ಆಶ್ಚರ್ಯ ಆಯಿತು. ನಿಮಗೂ ಆಗೋದ್ರಲ್ಲಿ ಸಂದೇಹ ಇಲ್ಲ, ಓದ್ತಾ ಹೋಗಿ…*

*1. ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ - ಬೆರಳಚ್ಚು ಹೇಗೋ ಹಾಗೆ ಸೈನ್ ಹಾಕಕ್ಕೆ ಬರದೆ ಇರೋರು ಹೆಬ್ಬೆಟ್ಟು ಯಾಕೆ ಒತ್ತುತ್ತಾರೆ ಹೇಳಿ? ಯಾಕಂದ್ರೆ ಬೆರಳಚ್ಚು ಒಬ್ಬೊಬ್ಬರಿಗೂ ಬೇರ್ಬೇರೆ. ಹಾಗೇ ನಿಮ್ಮ ನಾಲಿಗೆ ಅಚ್ಚು ಕೂಡ ಬೇರೆಯೋರ ತರಹ ಇರಲ್ಲ.*

*2. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತೆ ಅದಕ್ಕೆ.*

*3. ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಲ್ಲೂ ಇರುತ್ವೆ. ಆದ್ರೆ ಅವು ತೊಂದ್ರೆ ಮಾಡಲ್ಲ ಬಿಡಿ.*

*4. ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಅಂತರ್ಥ.*

*5. ನಿಮ್ಮ ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚೆಲಿಸುತ್ತೆ.*

*6. ಮನುಷ್ಯನ ರಕ್ತದಲ್ಲಿ 29 ಬಗೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತೆ.*

*7. ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.*

*8. ನಮ್ಮ ದೇಹದ ನರಗಳನ್ನೆಲ್ಲ ಒಟ್ತುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.*

*9. ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡ್ತೀವಿ.*

*10. ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.*

*11. ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ - ವರ್ಷಕ್ಕೆ 0.25 mm ನಷ್ಟು*

*12. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.*

*13. ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕ 2 ಕಿಲೋ ಗೊತ್ತಾ!* 

*14. ನಮ್ಮ ಚರ್ಮದ 1 sq.cm ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.*

*15. ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.*

*16. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.*

*17. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡ್ತಾರೆ*

*18. ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ವೆ.*

*19. ನೀವು ಶೀತ ಆದಾಗ ಸೀನ್ತೀರಲ್ಲ ಅದರ ವೇಗ ಗಂಟೆಗೆ 160 ಕಿ. ಮೀ ಇರುತ್ತೆ.*

*20. ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ… ಅತ್ತಾಗ 43... ಅಂದ್ರೆ ಅಳಕ್ಕೆ ಕೆಲಸ ಜಾಸ್ತಿ ಮಾಡಬೇಕು* 

*21. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ*

*22. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದಸಿಗಲ್ಲ*      
                        
*23. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ*

*24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ*

*25. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.*

*26. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.*

*27. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.*

*28. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ*

*29. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!*

*30. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...*

*31. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ*

*32. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ*

*33. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.*

*34. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ*

*35. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ*

*ಚುಕ್ಕುಬುಕ್ಕು*

*36. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ*

*37. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.*

*38. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.*

*39. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ*

*40. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ*

*41. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ*

*42. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.*

*ಎಲ್ಲರಿಗೂ ಗೊತ್ತಾಗಲಿ ; ಹಂಚಿ* 

😊😊😀😀🙏🏽 *ಕ್ರಪೇ  ಆರೋಗ್ಯ ಕೈಪಿಡಿ*

Saturday, November 21, 2020

ಬೇರೆ ಗುಂಪಿನಿಂದ ಬಂದ ಸಂದೇಶ ಯಾರಿಗಾದರೂ ಉಪಯೋಗ ಆಗಬಹುದು kidney failure, AYURVEDA VAYDYA ADDRESS

(ಬೇರೆ ಗುಂಪಿನಿಂದ ಬಂದ ಸಂದೇಶ ಯಾರಿಗಾದರೂ ಉಪಯೋಗ ಆಗಬಹುದು)
🙏🏻
ನನ್ನ ಹೆಸರು ರವಿ ಕುಮಾರ್ 42 ವರ್ಷ ವಯಸ್ಸು,ನಾನು ಮೈಸೂರಿನಲ್ಲಿ ವಾಸವಾಗಿದ್ದೇನೆ,2014 ರಲ್ಲಿ ಮೂತ್ರದಲ್ಲಿ ರಕ್ತ ಬಂದು ಉರಿ ಆಗುತ್ತಿತ್ತು ,ಕೊನೆಗೆ ಕೈ ಕಾಲು ಊದಿಕೊಂಡು ನೋವಾಗುತ್ತಿತ್ತು,  ನಂತರ  ಮೈಸೂರಿನ ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಬ್ಲೆಡ್ ಟೆಸ್ಟ್ ಮಾಡಿಸಿದೆ ಆಗ ತಿಳಿಯಿತು  ನನ್ನ ಎರಡೂ ಕಿಡ್ನಿಗಳೂ ಪೈಲೂರ್ ಆಗಿ ಕ್ರಿಯಾಟೀನ್ ಲೆವಲ್ 28 ಕ್ಕೆ ಬಂದಿತ್ತು, ಬಿ ಪಿ 430 ಇತ್ತು,ವೈದ್ಯರ  ಸಲಹೆ ಮೇರೆಗೆ ಕಿಡ್ನಿ ಬೇರೆ ಹಾಕಿಸುವವರೆಗೂ ಡಯಾಲಿಸೀಸ್ ಮಾಡಿಸಬೇಕು,ವಾರಕ್ಕೆ ಎರಡು ಬಾರಿ ಡಯಾಲಿಸೀಸ್ ಮಾಡಿಸುತ್ತಿದ್ದೆ,ನಾನು ಮೈಸೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಉಪಾಧ್ಯಾಯನಾಗಿ  ಕೆಲಸ ಮಾಡುತ್ತಿದ್ದೇನೆ,ನನಗೆ 15000 ಸಾವಿರ ಸಂಬಳ ಬರುತ್ತಿತ್ತು,ಒಂದು ತಿಂಗಳಿಗೆ ಡಯಾಲಿಸಿಸ್ ಮಾಡಿಸಬೇಕಾದರೆ 4500 ಖರ್ಚು ಬರುತ್ತಿತ್ತು, ಮನೆ ಬಾಡಿಗೆ ಕಟ್ಟಿ ಮಕ್ಕಳನ್ನು ಪೋಷಿಸುವುದು ಕಷ್ಟವಾಗಿತ್ತು.
           ಬೆಂಗಳೂರಿನಲ್ಲಿ ನನ್ನ ಹೆಂಡತಿಯ ಸಂಬಂದಿಕರೊಬ್ಬರ ಬಳಿ ವಿಷಯ ತಿಳಿಸಿದೆ,ಅದಕ್ಕವರು ನೀನು ನೇರ ನನ್ನ ಮನೆಗೆ ಬಂದು ಬಿಡು ಇಲ್ಲೇ ನಮ್ಮ ಬೆಂಗಳೂರಿನ ಕೃಷ್ಣರಾಜಪುರದಲ್ಲಿ ನಾಲ್ಕು ತಲೆ ಮಾರಿನ  ವಂಶಪಾರಂಪರ್ಯ ನಾಟಿ ವೈದ್ಯ ಶಿವ ಕುಮಾರ್ ಅಂಥ ಇದ್ದಾರೆ ಗಿಡಮೂಲಿಕೆ ಚಿಕಿತ್ಸೆ ಕೊಡುತ್ತಾರೆ,ಮೂರು ವರ್ಷಗಳ ಕೆಳಗೆ ನಮ್ಮ ಸ್ನೇಹಿತರೊಬ್ಬರಿಗೂ ಇದೇ ರೀತಿ ಎರಡೂ ಕಿಡ್ನಿ ಪೈಲೂರ್ ಆಗಿತ್ತು ಒಂದೂವರೆ ವರ್ಷ ಡಯಾಲಿಸೀಸ್ ಮಾಡಿಸಿದ ಮೇಲೆ ಅವರ ಬಳಿ ಚಿಕಿತ್ಸೆ ಕೊಡಿಸಿದ್ದು,ಈಗ ಅವರು ಗುಣ ಮುಖರಾಗಿ ಎಲ್ಲರಂತೆ ಚನ್ನಾಗಿದ್ದಾರೆ,ಎಂದು ತಿಳಿಸಿದರು,
         ನಾನು ಕೂಡಲೇ ನಮ್ಮ ಸಂಬಂದಿಕರ ಮನೆ ಬೆಂಗಳೂರಿಗೆ ಬಂದು ಅವರ ಚಿಕಿತ್ಸಾಲಕ್ಕೆ ಹೋದೆ ವೈದ್ಯ ಶಿವಕುಮಾರ್ ರವರು ಇದ್ದರು, ರಿಪೋರ್ಟ್ಸ್ ನೋಡಿಸಿದೆ,ರಿಪೋರ್ಟ್ಸ್ ನೋಡಿದ ಮೇಲೆ ನಾಡಿ ಪರೀಕ್ಷೆ ಮಾಡಿ ಅವರ ಚಿಕಿತ್ಸಾ ವಿಧಾನ ಹಾಗೂ
  ಔಷಧಿ ಕೊಟ್ಟು ಉಪಯೋಗಿಸುವ ವಿಧಾನ ತಿಳಿಸಿ ಒಂದು ವಾರಕ್ಕೆ ಎರಡು ಬಾರಿ  ನೀವು ಡಯಾಲಿಸೀಸ್ ಮಾಡಿಸುತ್ತಿದ್ದೀರಿ,ನಮ್ಮ ಗಿಡ ಮೂಲಿಕೆ ಔಷದಿಯನ್ನು ನೀವು ಸೇವಿಸಿದ 15 ದಿನಗಳ ನಂತರ ವಾರಕ್ಕೂಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,ಒಂದು ತಿಂಗಳ ನಂತರ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,ನಂತರ ಎರಡನೇ ತಿಂಗಳು ಔಷಧಿ ಸೇವಿಸಿದ ಮೇಲೆ 15 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,
ಮೂರನೇ ತಿಂಗಳು ಔಷಧಿಯನ್ನು ಸೇವಿಸಿದ ಮೇಲೆ 20 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,
ಕನಿಷ್ಟ ನೀವು  ನಮ್ಮ ಔಷದಿಯನ್ನು 13 ತಿಂಗಳು ಅಂದರೆ 2015 ಮಾರ್ಚ್ ತಿಂಗಳಿ ನಿಂದ ಶುರು ಮಾಡಿ ಮುಂದಿನ ವರ್ಷ 2016 ಏಪ್ರಿಲ್ ನವರೆಗೂ  ಸೇವಿಸಬೇಕು ನಮ್ಮ ಔಷದಿ ಸೇವಿಸಿದ ಆರು ತಿಂಗಳಿಗೆ ಡಯಾಲಿಸೀಸ್ ನ ಅವಶ್ಯಕತೆ  ಸಂಪೂರ್ಣ ನಿಂತು ಹೋಗಿ ಮಾಮೂಲಿನಂತೆ ಮೂತ್ರ ವಿಸರ್ಜನೆ ಮಾಡಬಹುದು ಎಂದು ತಿಳಿಸಿದರು.
ಔಷದಿ ತೆಗೆದುಕೊಂಡು,ನಿಮಗೆ ವಾಸಿಯಾದರೆ ನಾಲ್ಕು ಜನಕ್ಕೆ ಹೇಳಿ ಉಪಯೋಗವಾಗುತ್ತದೆ ಅಂತ ಹೇಳಿದರು,
ವೈದ್ಯ ಶಿವಕುಮಾರ್ ರವರು ಹೇಳಿದ ಹಾಗೆ ಮಾರ್ಚ್ ತಿಂಗಳಿನಲ್ಲಿ ಔಷದಿ ಸೇವಿಸಿದ ಎರಡು ವಾರ ಮೂರು ಬಾರಿ ಡಯಾಲಿಸೀಸ್ ಮಾಡಿಸಿದೆ,ಇನ್ನು ಉಳಿದ ಹದಿನೈದು ದಿನಗಳಲ್ಲಿ ವಾರಕ್ಕೂಂದರಂತೆ ಎರಡು ಬಾರಿ ಡಯಾಲಿಸೀಸ್ ಮಾಡಿಸಿದೆ,
ಮತ್ತೆ ಏಪ್ರಿಲ್ ತಿಂಗಳಿನಲ್ಲಿ ಪುನಃ ಅವರ ಚಿಕಿತ್ಸಾಲಯಕ್ಕೆ ಹೋಗಿದ್ದೆ, ಒಂದು ತಿಂಗಳ ಔಷದಿಯನ್ನು ಕೊಟ್ಟು ಅದೇ ರೀತಿ ಚಾಚೂ ತಪ್ಪದೇ ಉಪಯೋಗಿಸಿದರೆ ಈ ತಿಂಗಳಿಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಬಹುದು ಎಂದು ಹೇಳಿ ಔಷದಿ ಕೊಟ್ಟು ಕಳುಹಿಸಿದರು,ಅವರು ಹೇಳಿದ ಹಾಗೆ ಆ ತಿಂಗಳಿನಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್  ಮಾಡಿಸಿದೆ, 
    ಮತ್ತೆ ಮೂರನೇ ತಿಂಗಳು 15 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಿ ಒಟ್ಟು ಐದು ತಿಂಗಳಿಗೆ ಡಯಾಲಿಸೀಸ್ ಮಾಡಿಸುವ ಅವಶ್ಯಕತೆ ನಿಂತುಹೋಯಿತು,ಅವರು ಆರು ತಿಂಗಳಿಗೆ ಡಯಾಲಿಸೀಸ್ ನಿಲ್ಲುತ್ತದೆ ಎಂದು ಹೇಳಿದ್ದರು ನನಗೆ ಐದು ತಿಂಗಳಿಗೆ ನನ್ನ ಕ್ರಿಯಾಟಿನ್ ಲೆವೆಲ್ 1.5 ಗೆ ಬಂದಿತ್ತು ,ಅವರು ಹೇಳಿದ ಹಾಗೆ 2016 ಏಪ್ರಿಲ್ ವರೆಗೂ ಗಿಡ ಮೂಲಿಕೆ ಔಷದಿಯನ್ನು ಸೇವಿಸಿದ್ದಕ್ಕೆ ನನ್ನ ಎರಡೂ ಕಿಡ್ನಿಗಳು ಗುಣಮುಖವಾಗಿ ಈಗ ನನ್ನ ಕ್ರಿಯಾಟಿನ್ ಲೆವೆಲ್ 1.2 ಇದೆ ಈಗ ನಾನು ಎಲ್ಲರಂತೆ ಚನ್ನಾಗಿದ್ದೇನೆ.
       ಮಿತ್ರರೆ ಈ ಮಾಹಿತಿಯನ್ನು ನೀವು ನಿಮ್ಮ ಕುಟುಂಬ ವರ್ಗದವರಿಗೆ ಬಂಧು ಮಿತ್ರರಿಗೆ ನಿಮಗೆ ತಿಳಿದಿರುವ ಎಲ್ಲರಿಗೂ ತಿಳಿಸಿ,ನಮ್ಮಿಂದ ಎಲ್ಲರಿಗೂ ಸಹಾಯವಾಗಲಿ,
ಇಂತಿ 
ರವಿಕುಮಾರ್ ಮೈಸುರು 

ಪಾರಂಪರಿಕ ವೈದ್ಯ 
 ಶಿವ ಕುಮಾರ್ ರವರ ವಿಳಾಸ  ಕಾಮಧೇನು ಪಂಚಗವ್ಯ ಚಿಕಿತ್ಸಾಲಯ 
ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ
ದೇವಸಂದ್ರ 
ಕೃಷ್ಣರಾಜಪುರ 
ಬೆಂಗಳೂರು 560036 
ಹಳೆ ಮದ್ರಾಸ್ ರಸ್ತೆ 
ಮೊಬೈಲ್ ಸಂಖ್ಯೆ 8747099983
8970788888
     ಸಮಯ: ಬೆಳಗ್ಗೆ 10  ಗಂಟೆಯಿಂದ ಸಂಜೆ 8 ಗಂಟೆಯವರಗೆ 
    ಪೋನ್ ಮಾಡಿಕೊಂಡು ಹೋದರೆ ಒಳ್ಳೆಯದು...

👆
👌👌
🙏🙏🙏

FORWARDED AS RECEIVED...

Friday, November 20, 2020

ಊಟದ ಪ್ರಭಾವ ಜೀವನದ ಮೇಲೆ..

ಊಟದ ಪ್ರಭಾವ ಜೀವನದ ಮೇಲೆ..

ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ , ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರಿ ಅಲ್ಲ, ದೇವರಿಗೆ ಸಮರ್ಪಿಸಿದ ‌ಅನ್ನ.
ನಿಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ ,both
Physical and mental change.
ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡಿಗೆಗೆ ಸಾತ್ವಿಕ ಅಡಿಗೆ ಅನ್ನುವುದಿಲ್ಲ.so ಅಡಿಗೆ
ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವದು, ಚೀರಾಡುವದು ಮಾಡುವದು ಸರಿಯಲ್ಲ (ಇದು ಈಗ common ಆಗಿದೆ)
ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆ ಗೆ
Negative vibrations ಹೊಗುವದು common. ನೆನಪಿಡಿ  ನಾವು ಅದನ್ನೇ ಉಣ್ಣುವ ದು.
ಅದಕ್ಕೆ ನಮ್ಮ ಹಿಂದೂ ಧರ್ಮದ ಆಚರಣೆಗಳಲ್ಲಿ   ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ದೇವರ ನಾಮಸ್ಮರಣೆ ಮಾಡುತ್ತಾ ಅಡಿಗೆ ಮಾಡುವ ಸಂಪ್ರದಾಯ ಇಂದಿಗೂ  ಗುಡಿ , ಮಠ , ದಾಸೋಹ ಗಳಲ್ಲಿ ಕಾಣುವ ದುಂಟು.

ಅಡಿಗೆ , ಊಟಾ ೩ ತರಹ
*1. ಹೋಟೆಲ್ ಪಾರ್ಟಿಗಳಲ್ಲಿನ ಊಟ*

*2.ಮನೆಯಲ್ಲಿ ತಾಯೀ, ಪತ್ನಿ ಮಾಡುವ ಅಡಿಗೆ, ಊಟ.*

*3.ಮಂದಿರ, ಮಠಗಳಲ್ಲಿ ಮಾಡುವ ಅಡಿಗೆ, ಊಟ.*

ಈ ಮೂರು ಪ್ರಕಾರದ ಊಟದಲ್ಲಿ  ಬೇರೆ ಬೇರೆ ತರಹದ ಸ್ಪಂದನೆಗಳು ಇರುವವೂ.

ಹೋಟೆಲ್ ಊಟ..
ಇಲ್ಲಿ ಯಾವುದೇ ಪಾಸಿಟಿವ್ vibrations ಇರುವುದಿಲ್ಲ.
ಕೇವಲ ದುಡ್ಡಿಗಾಗಿ , ಸ್ವಾರ್ಥಕ್ಕಾಗಿ ಮಾಡಿದ ಅಡಿಗೆ ಅದು, ಯಾರು ಅಡಿಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹದ ಇರುವವೋ ಗೊತ್ತಿಲ್ಲ,
ಅವರ ಮನಸ್ಸಿನ ಸ್ಪಂದನೆಗಳು ಅವರು ಮಾಡಿದ ಅಡಿಗೆಯಲ್ಲಿ ಇಳಿಯುವವು.

*ಮನೆಯಲ್ಲಿ ತಾಯಿ, ಅಥವಾ ಪತ್ನಿ ಮಾಡುವ ಅಡಿಗೆ...*

*ಇಲ್ಲಿ ಮಾಡುವ ಅಡಿಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ ಅಂದರೆ ಪಾಸಿಟಿವ್ ಸ್ಪಂದನೆಗಳು ಇರುವ ಅಡಿಗೆ.*

ಆದರೆ ಇತ್ತೀಚಿಗೆ ಮನೆಯಲ್ಲಿ 
ಅಡಿಗೆ ಕೆಲಸದವಳು ಅಡಿಗೆ ಮಾಡುವ fashion ಆಗಿದೆ.
ಮನೆಯಲ್ಲಿ ಒಂದಿಬ್ಬರೆ  ಇದ್ದರೂ
ಅಡಿಗೆ ಮಾಡುವುದು ಅಡಿಗೆ ಕೆಲಸದವಳೆ , ಅವಳ ಮನಸ್ಸು ಯಾವ ತರಹ ಇದೆ, ಅವಳು ದುಡ್ಡಿಗೆ ಮಾತ್ರ ಅಡಿಗೆ ಮಾಡುವಳು so ಅಲ್ಲಿಯೂ
ನೆಗೆಟಿವ್ vibration ಇರುವುದು 
So ಈ ಅಡಿಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ
ಸ್ವಲ್ಪ ವಿಚಾರ ಮಾಡಿ ನೋಡಿ.
ನಿಮ್ಮ ಮನೆಯ ಅಜ್ಜಿ , ತಾಯೀ ಮಾಡಿದ ಅಡಿಗೆ ಮತ್ತು ಕೆಲಸದವಳು ಮಾಡುವ ಅಡಿಗೆಗೆ ಎಷ್ಟು ‌ವ್ಯತ್ಯಾಸ ?
ತಾಯಿ  ಅಡಿಗೆ ಮಾಡುವಾಗ ಮಗ ಒಂದು ರೊಟ್ಟಿ , ಅಥವಾ ಚಪಾತಿ ಹೆಚ್ಚು ಕೇಳಿದರೆ ತಾಯಿಗೆ ಇನ್ನೂ ಹೆಚ್ಚು ಆನಂದ ಆಗುವುದು ಸಹಜ, ಅದೇ ಅಡುಗೆ ಅವಳಿಗೆ ಒಂದೆರಡು ಹೆಚ್ಚು ರೊಟ್ಟಿ, ಚಪಾತಿ ಮಾಡಲು ಹೇಳಿ ನೋಡಿ, ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ.

*ಮಂದಿರ ಮಠಗಳಲ್ಲಿನ ಅಡಿಗೆ....*

ಅದು ದೇವರಿಗೆ ನೈವೇದ್ಯ ಅರ್ಪಿಸಿ , ನಮಗೆ ಬಡಿಸುವ ಅಡಿಗೆ, ಅದು ನಾವು ಉಣ್ಣುವುದು  ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡಿಗೆಯಲ್ಲಿ ಪಾಸಿಟಿವ್ vibrations ತುಂಬಿ ತುಳುಕುತ್ತಿರುತ್ತದೆ.

ಆದಕಾರಣ ನಾವು ಮಾಡುವ ಅಡಿಗೆ ದೇವರಿಗೆ ಸಮರ್ಪಿಸಿ ,  .
ಅದರ ಸ್ವಲ್ಪ ಭಾಗ ಬಡವರಿಗೆ
ಸಮರ್ಪಿಸಿ ನಾವು ಸೇವಿಸುವುದು ಉತ್ತಮ.
ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿ ಇತ್ತು, ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ಇದೆ,
ನಮ್ಮ ಅಜ್ಜಿ, ನಮ್ಮ ತಾಯೀ ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋಗ್ರಾಸ  ಎಂದು ಕೊಡುವುದನ್ನು ನಾನು ಸಣ್ಣವನಿದ್ದಾಗ ನೋಡಿದ ನೆನಪಿದೆ.

*ಅನ್ನದಲ್ಲಿ ಜಾದು ಇದೆ,.*  ಅಡಿಗೆ ಮಾಡುವವರಲ್ಲಿ ಒಳ್ಳೆಯ ಸಂಸ್ಕಾರವಿದೆ. ಮತ್ತು ಅಡಿಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ ಅಡಿಗೆ ಆದ ಮೇಲೆ ದೇವರಿಗೆ ಸಮರ್ಪಿಸಿ  ಊಟ ಮಾಡಿ ನೋಡಿ.
3 ತಿಂಗಳು ಇದನ್ನು ಮಾಡಿ ನೋಡಿ.
*ನಿಮ್ಮಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿರಿ.* 

*ಓಂ ಅನ್ನಪೂರ್ಣೇಶ್ವರಿಯೇ ನಮಃ*  🙏

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World