www.dgnsgreenworld.blogspot.com

Friday, February 28, 2020

ಮೇಷ್ಟ್ರು ಅಥವಾ ಉಪನ್ಯಾಸಕರ ಪಾಠಗಳು, ತಂದೆ, ತಾಯಿಯರು ಕಲಿಸಿದ ಸಂಸ್ಕೃತಿ, ಸದ್ಗುರುಗಳ ಜ್ಞಾನ ಬೋಧನೆ ಕೂಡ, ರವಿವರ್ಮನ ಚಿತ್ರಗಳ ತರಹ ಊಹೆಗೂ ನಿಲುಕದಷ್ಟು ಬೆಲೆ ಬಾಳುವವು.

SAVE NATURE, HEALTHY, WEALTHY & WISE. dgnsgreenworld Family

*ಒಂದು ದಿನ ಖ್ಯಾತ ಚಿತ್ರ ಕಲಾವಿದ "ರಾಜಾ ರವಿವರ್ಮ" ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ.!!*

*ರವಿವರ್ಮ ಆಶ್ಚರ್ಯ ವ್ಯಕ್ತಪಡಿಸಿ, ಈ ಕೂಡಲೇ ಅದೂ ಬಜಾರ {ರಸ್ತೆ} ದಲ್ಲಿ ಹೇಗೆ ಸಾಧ್ಯ? ಪ್ರಶ್ನಿಸಿದರು... ಮುಂದಿನ ದಿನಗಳಲ್ಲಿ ಭೇಟಿ ಯಾದಾಗ ಖಂಡಿತಾ ಬಿಡಿಸಿ ಕೊಡುತ್ತೇನೆ ಎಂದರೂ, ಪಟ್ಟು ಬಿಡದೆ ಈಗಲೇ ಬೇಕೆಂದು ಹಠ ಹಿಡಿದು ಅಂಗಲಾಚಿದಾಗ,, ಬೇರೆ ದಾರಿ ಕಾಣದೆ ಆ ಕ್ಷಣಕ್ಕೆ ಒಂದು ಚಿತ್ರವನ್ನು ಬಿಡಿಸಿ ಕೊಡುವಾಗ... ನಗುತ್ತಾ ಹೇಳುತ್ತಾನೆ... ಇದರ ಬೆಲೆ ಕೋಟಿ ರೂಪಾಯಿಗೂ ಅಧಿಕ, ಜಾಗೃತೆ ಇಂದ ಕಾಪಾಡಲು ಹೇಳಿ ಹೋಗುತ್ತಾನೆ.!!*

*ಆ ಯುವತಿ ಆಶ್ಚರ್ಯದಿಂದ ಚಿತ್ರ ನೋಡಿ, ಮರುದಿನವೇ ಪೇಟೆಗೆ ಹೋಗಿ ಪ್ರಮುಖ ಚಿತ್ರಕಾರರ ಚಿತ್ರ {Paintings} ಗಳನ್ನು ಮಾರುವ ಒಬ್ಬ ವ್ಯಕ್ತಿಯ ಹತ್ತಿರ ಹೋಗಿ ರವಿವರ್ಮ ಚಿತ್ರಿಸಿ ಕೊಟ್ಟ ಚಿತ್ರದ ಬೆಲೆ ಎಷ್ಟಿರಬಹುದು?? ಎಂದು ಕೇಳುತ್ತಾಳೆ... ಅವನೂ ಸಹ ರವಿವರ್ಮ ಹೇಳಿದ ಮಾತನ್ನೇ ಹೇಳುತ್ತಾನೆ.. ಕೋಟಿ ರೂಪಾಯಿಗೂ ಹೆಚ್ಚು ಎಂದು.!! ಆ ಚಿತ್ರದ ಬೆಲೆ ಕೇಳಿ ಯುವತಿಯ ಬಾಯಿಂದ ಮಾತೇ ಹೊರಡಲಿಲ್ಲ,, ಆ ತಕ್ಷಣವೇ ಮತ್ತೆ ರವಿವರ್ಮ ರನ್ನು ಭೇಟಿಯಾಗಲು ಹೊರಟಳು...*

*ರವಿವರ್ಮರನ್ನು ಭೇಟಿಯಾಗಿ... ನೀವು ಹತ್ತೇ ನಿಮಿಷದಲ್ಲಿ ಚಿತ್ರಿಸಿದ ಈ ಚಿತ್ರ ಇಷ್ಟೊಂದು ಬೆಲೆ ಬಾಳುವುದೆಂದು ಗೊತ್ತಿರಲಿಲ್ಲ.!! ನನಗೂ ಸಹ ಈ ಚಿತ್ರಕಲೆಯನ್ನು ಕಲಿಸಿಕೊಡಿ, ನಿಮ್ಮಂತೆ ಹತ್ತೇ ನಿಮಿಷದಲ್ಲಿ ಆಗದಿದ್ದರೂ.. ಹತ್ತು ದಿನಕ್ಕೆ ಒಂದು ಚಿತ್ರವನ್ನಾದರೂ ಬಿಡಿಸುವೆ ಎನ್ನುತ್ತಾಳೆ.!!*

*ರವಿವರ್ಮ ನಗುತ್ತಾ... ಸುಂದರಿ..!! ನಿನಗಾಗಿ ಹತ್ತೇ ನಿಮಿಷದಲ್ಲಿ ಚಿತ್ರವನ್ನು ಬಿಡಿಸಿ ಕೊಟ್ಟೆ.. ನಿಜ, ಆದರೆ ಅದರ ಹಿಂದೆ ನನ್ನ "ಮೂವತ್ತು ವರ್ಷಗಳ" ಕಠಿಣವಾದ ಪರಿಶ್ರಮವಿದೆ.!! ನೀನೂ ಸಹ "ನಿನ್ನ ಮೂವತ್ತು ವರ್ಷಗಳನ್ನು" ಈ ಕಲೆಗಾರಿಕೆಗೆ ತ್ಯಾಗ ಮಾಡಿದರೆ,, ನನಗಿಂತ ಎತ್ತರಕ್ಕೆ ಬೆಳೆಯ ಬಲ್ಲೆ.!!*

ರವಿವರ್ಮರ ಮಾತನ್ನು ಕೇಳಿ ಆ ಯುವತಿ "ಗರಬಡಿದಂತೆ" ನಿಂತು ಬಿಟ್ಟಳು...

ಅಂದರೆ,, *ಒಬ್ಬ ಮೇಷ್ಟ್ರು ಅಥವಾ ಉಪನ್ಯಾಸಕನ 45 ನಿಮಿಷದ ಪಾಠದ ಹಿಂದೆ ಕೂಡ ಅವನ ಜೀವನದ ಎಷ್ಟೋ ವರ್ಷಗಳ ಕಠಿಣ ಸಾಧನೆ ಇರುತ್ತದೆ.!!*

*ತಂದೆ ~ ತಾಯಿ ನಮಗಾಗಿ ನಮ್ಮ ಒಳಿತಿಗಾಗಿ ಹೇಳಿದ ಮಾತು, ನಿಮ್ಮ ಊಹೆಗೂ ನಿಲುಕದ ಅವರ "ಪ್ರೀತಿ ~ ತ್ಯಾಗ" ದ ಹಿಂದೆ ಸಾಕಷ್ಟು ವರ್ಷ ಕಳೆದ ಅನುಭವದ, ಕಷ್ಟದ ಸರಮಾಲೆಯೇ ಇರುತ್ತದೆ.!!*

ಹಾಗೆಯೇ,, *ಒಬ್ಬ "ಬ್ರಹ್ಮ ಜ್ಞಾನಿ"  ಅಥವಾ ಸದ್ಗುರು ಗಳ ಜೊತೆ ಕಳೆದ ಕೆಲವೇ ಕೆಲವು ಕ್ಷಣ... ನಿಮ್ಮ ಜೀವನ ವನ್ನು ಬದಲಾಯಿಸಬಹುದು.!!*

ನೀತಿ : *ಮೇಷ್ಟ್ರು ಅಥವಾ ಉಪನ್ಯಾಸಕರ ಪಾಠಗಳು, ತಂದೆ, ತಾಯಿಯರು ಕಲಿಸಿದ ಸಂಸ್ಕೃತಿ, ಸದ್ಗುರುಗಳ ಜ್ಞಾನ ಬೋಧನೆ ಕೂಡ, ರವಿವರ್ಮನ ಚಿತ್ರಗಳ ತರಹ ಊಹೆಗೂ ನಿಲುಕದಷ್ಟು ಬೆಲೆ ಬಾಳುವವು.!!*

ವಂದನೆಗಳೊಂದಿಗೆ

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World