SAVE NATURE, HEALTHY, WEALTHY & WISE. dgnsgreenworld Family
"ಸಾಧನೆಯ ಹಾದಿಗೆ ಆತ್ಮವಿಶ್ವಾಸವೇ ಮೆಟ್ಟಿಲು"
ಸೋಲನ್ನೇ ಅರಿಯದ ಸ್ಕಾಟ್ ಲ್ಯಾಂಡಿನ ದೊರೆ ರಾಬರ್ಟ ಬ್ರೂಸ್ ತನ್ನ ಸರಣಿ ಸೋಲುಗಳಿಂದ ಹಣ್ಣಾಗಿ ಒಮ್ಮೆ ಯುದ್ಧಭೂಮಿಯಿಂದ ಓಡಿಹೋಗಿ ಗುಹೆಯೊಂದರಲ್ಲಿ ಅವಿತಿದ್ದ.
ಅಲ್ಲಿದ್ದ ಜೇಡರ ಹುಳವೊಂದು ಗುಹೆಯ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಮುಟ್ಟುವ ಯತ್ನದಲ್ಲಿ ಕೆಳಗೆ ಬಿದ್ದರೂ ತನ್ನ ಪುಟ್ಟ ಬಲೆಗಳನ್ನು ನೇಯುತ್ತಾ ಏಳನೇ ಭಾರಿ ಯಶಸ್ವಿಯಾದದ್ದನ್ನು ಕಂಡು ತಾನೂ ಅಂತೆಯೇ ಆಗಬೇಕೆಂದು ನಿರ್ಧರಿಸಿ ಮತ್ತೆ ಯುದ್ಧದಲ್ಲಿ ಜಯಗಳಿಸಿದನು.
ಸೋಲಿನ ಮೆಟ್ಟಿಲುಗಳನ್ನು ಗೆಲುವಿನ ಸೋಪಾನವಾಗಿ ಪರಿಗಣಿಸಬೇಕು. ನಮ್ಮ ಪ್ರಯತ್ನ ಬಿಡಬಾರದು. ಇರುವೆಗಳು ತಮಗಿಂತಲೂ ಭಾರವಾದ ವಸ್ತುಗಳನ್ನು ಎಡಬಿಡದೆ ಹೊತ್ತೊಯ್ಯುವುದು ಸಫಲ ಪ್ರಯತ್ನವೇ ಅಲ್ಲವೇ....
ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಸಮುದ್ರ ಮಧ್ಯೆ ಇರುವ ಬಂಡೆಗೆ ಈಜಿಕೊಂಡು ಹೋಗಲು ಸಾಧ್ಯವಾದುದು ಈಜು ಬಲ್ಲೆ ಎಂಬ ಅವರ ಆತ್ಮವಿಶ್ವಾಸದಿಂದಲೇ. ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ...
ನಿಮ್ಮೊಳಗಿನ ಕಿಚ್ಚು ಹೊರಗಡೆ ಇರುವ ಬೆಂಕಿಗಿಂತ ಪ್ರಕಾಶಮಾನವಾಗಿದ್ದರೆ ಮಾತ್ರ ನೀವು ಯಶಸ್ಸನ್ನು ಪಡೆಯಬಲ್ಲಿರಿ. ಆತ್ಮವಿಶ್ವಾಸ, ಛಲ ಇದ್ದರೆ ಸೋಲು ಕೂಡ ಗೆಲುವಿಗೆ ಸ್ಪೂರ್ತಿಯಾಗುತ್ತದೆ.
ಹೌದು ನಮ್ಮ ಜೀವನದಲ್ಲೂ ಆತ್ಮವಿಶ್ವಾಸವಿರಬೇಕು ಇಲ್ಲವಾದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಗುರಿ ತಲುಪುವ ದಾರಿಯಲ್ಲಿ ಏನೇ ಬರಲಿ ನಾನು ಎದುರಿಸುತ್ತೇನೆ, ನನ್ನ ಸಾಧನೆಗೆ ಅಡ್ಡಿಯಾದುದ್ದನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇದ್ದರೆ ಒಂದಲ್ಲ ಒಂದು ದಿನ ಯಶಸ್ಸಿನೆಡೆಗೆ ಸಾಗುತ್ತೇವೆ..